ಲೆಜೆಂಡ್ ಬಾಲಕೃಷ್ಣ ನಡೆಸಿಕೊಡುವ ಕೊನೆಯ ಟಾಕ್ ಶೋನಲ್ಲಿ ಸೂಪರ್‌ಸ್ಟಾರ್ ಮಹೇಶ್ ಬಾಬು

ತೆಲುಗಿನ ಹಿರಿಯ ನಟ ಬಾಲಕೃಷ್ಣ ಡಬಲ್ ಖುಷಿಯಲ್ಲಿದ್ದಾರೆ. ಈ ವರ್ಷ ಯಾರಿಗೆ ಯಾವ ನಟನಿಗೆ ಎಷ್ಟು ಯಶಸ್ಸು ಸಿಕ್ಕಿದೆಯೋ ಗೊತ್ತಿಲ್ಲ. ಆದರೆ, ಟಾಲಿವುಡ್ ಲೆಜೆಂಡ್ ಬಾಲಕೃಷ್ಣಗೆ 2021 ಯಶಸ್ಸು ಕೊಟ್ಟ ವರ್ಷ. ಇತ್ತ ಬಾಲಕೃಷ್ಣ ನಟಿಸಿದ ಸಿನಿಮಾನೂ ಬಾಕ್ಸಾಫೀಸ್‌ನಲ್ಲಿ ಗೆದ್ದಿದೆ. ಅತ್ತ ಓಟಿಟಿ ವೇದಿಕೆಯಲ್ಲಿ ನಡೆಸಿಕೊಡುವ ಟಾಕ್ ಶೋ ಕೂಡ ಸೂಪರ್‌ ಸಕ್ಸಸ್ ಕಂಡಿದೆ. ಈಗಾಗಿ ಬಾಲಕೃಷ್ಣ ಡಬಲ್ ಧಮಾಕ ಅಂತಲೇ ಹೇಳಬಹುದು.

ಬಾಲಕೃಷ್ಣ ನಟಿಸಿದ 'ಅಖಂಡ' ವರ್ಷದ ಕೊನೆಯಲ್ಲಿ ಬಾಕ್ಸಾಫೀಸ್ ಅನ್ನು ಚಿಂದಿ ಚಿತ್ರಾನ್ನ ಮಾಡಿದೆ. ಇನ್ನೊಂದು ಕಡೆ ಆಹಾ ಓಟಿಟಿಯಲ್ಲಿ ಬಾಲಯ್ಯ ನಡೆಸಿಕೊಡುವ ಟಾಕ್ ಶೋ ಅನ್‌ಸ್ಟಾಪಬಲ್ ಕೂಡ ಸೂಪರ್ ಸಕ್ಸಸ್ ಕಂಡಿದೆ. ಟಾಲಿವುಡ್‌ನ ದೊಡ್ಡ ದೊಡ್ಡ ಸ್ಟಾರ್‌ಗಳು ಈ ಟಾಕ್ ಶೋಗೆ ಬಂದು ಹೋಗಿದ್ದಾರೆ. ಈಗ ಕೊನೆಯ ಟಾಕ್‌ ಶೋ ಶೂಟ್ ಆಗಿದ್ದು, ಸೂಪರ್‌ಸ್ಟಾರ್ ಮಹೇಶ್ ಬಾಬು ಎಂಟ್ರಿಯಾಗಿದೆ.

ಬಾಲಯ್ಯನ ಜೊತೆ ಮಹೇಶ್ ಬಾಬು

ಬಾಲಯ್ಯನ ಜೊತೆ ಮಹೇಶ್ ಬಾಬು

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವಕಾಶ ಸಿಕ್ಕಾಗಲೆಲ್ಲಾ ತನ್ನ ಅಭಿಮಾನಿಗಳನ್ನು ರಂಜಿಸುತ್ತಲೇ ಇರುತ್ತಾರೆ. ಅದು ಸಿನಿಮಾದಲ್ಲಿ ಆಗಿರಬಹುದು. ಇಲ್ಲಾ ಕಿರುತೆರೆಯಲ್ಲಿ ಆಗಿರಬಹುದು. ತನ್ನ ಫ್ಯಾನ್ಸ್ ಜೊತೆ ಸದಾ ಸಂಪರ್ಕದಲ್ಲಿ ಇರುತ್ತಾರೆ. ಈಗ ಬಾಲಕೃಷ್ಣ ನಡೆಸಿಕೊಡುವ 'ಅನ್‌ಸ್ಟಾಪಬಲ್ ವಿಥ್ ಎನ್‌ಬಿಕೆ' ಟಾಕ್ ಶೋಗೆ ಸೂಪರ್‌ಸ್ಟಾರ್ ಮಹೇಶ್ ಬಾಬು ಎಂಟ್ರಿ ಕೊಟ್ಟಿದ್ದಾರೆ. ಬಹಳ ದಿನಗಳಿಂದ ಮಹೇಶ್ ಬಾಬು ಈ ಶೋನಲ್ಲಿ ಭಾಗವಹಿಸುತ್ತಾರೆ ಎಂಬ ಮಾತು ಕೇಳಿಬರುತ್ತಲೇ ಇತ್ತು. ಕೊನೆಗೂ ಬಾಲಕೃಷ್ಣ ಹಾಗೂ ಮಹೇಶ್ ಬಾಬು ಅಭಿಮಾನಿಗಳ ಆಸೆಯನ್ನು ಇಬ್ಬರೂ ನಟರೂ ಈಡೇರಿಸಿದ್ದಾರೆ.

ಬಾಲಯ್ಯ ಟಾಕ್‌ ಶೋಗೆ ಪ್ರಿನ್ಸ್ ಎಂಟ್ರಿ

ಮಹೇಶ್ ಬಾಬು ಸಿನಿಮಾಗಳಲ್ಲಿ ಸದಾ ಬ್ಯುಸಿಯಾಗಿರುತ್ತಾರೆ. ಸಿನಿಮಾ ಬಿಟ್ಟರೆ, ಆಡಿಯೋ ಲಾಂಚ್ ಸೇರಿದಂತೆ ಸಿನಿಮಾ ಪ್ರಚಾರಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಆದರೆ, ಟಾಕ್ ಶೋಗಳಲ್ಲಿ ಭಾಗವಹಿಸುವುದು ತೀರಾ ವಿರಳ. ಆದರೆ ಈ ವರ್ಷ ಸೂಪರ್‌ಸ್ಟಾರ್ ಮಹೇಶ್ ಬಾಬು ಟಾಕ್ ಶೋನಲ್ಲಿಯೂ ಭಾಗವಹಿಸಿದ್ದಾರೆ. ಬಾಲಕೃಷ್ಣ ನಡೆಸಿಕೊಡುತ್ತಿರುವ 'ಅನ್‌ಸ್ಟಾಪಬಲ್' ಟಾಕ್‌ ಶೋ ಗೆ ಇದೇ ಮೊದಲ ಬಾರಿಗೆ ಮಹೇಶ್ ಬಾಬು ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಈ ಶೋ ನೋಡುವುದಕ್ಕೆ ಅಭಿಮಾನಿಗಳು ಕಾದು ಕೂತಿದ್ದಾರೆ.

ಕೊನೆಯ ಎಪಿಸೋಡ್‌ನಲ್ಲಿ ಮಹೇಶ್ ಬಾಬು

ಕೊನೆಯ ಎಪಿಸೋಡ್‌ನಲ್ಲಿ ಮಹೇಶ್ ಬಾಬು

ಆಹಾ ಓಟಿಟಿಯಲ್ಲಿ 'ಅನ್‌ಸ್ಟಾಪಬಲ್ ವಿಥ್ ಎನ್‌ಬಿಕೆ' ಕೊನೆಯ ಎಪಿಸೋಡ್ ಪ್ರಸಾರ ಆಗಲಿದೆ ಎಂದು ಕ್ರಿಯೇಟಿವ್ ಟೀಮ್ ಹೇಳಿದೆ. ಮೊದಲ ಸೀಸನ್ ಅದ್ಭುತ ಯಶಸ್ಸು ಕಂಡಿದೆ. ಹೀಗಾಗಿ ಕೊನೆಯ ಎಪಿಸೋಡ್‌ನಲ್ಲಿ ಪ್ರಿನ್ಸ್ ಮಹೇಶ್ ಬಾಬು ಭಾಗವಹಿಸಲಿದ್ದು, ಈಗಾಗಲೇ ಶೂಟಿಂಗ್ ಕೂಡ ನಡೆದಿದೆ. ಬಾಲಯ್ಯ ಹಾಗೂ ಮಹೇಶ್ ಬಾಬು ಇಬ್ಬರೂ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡ ಫೋಟೊ ವೈರಲ್ ಆಗುತ್ತಿದೆ.

ಬಾಲಯ್ಯ ಶೋನಲ್ಲಿ ಬಂದ ದಿಗ್ಗಜರು

ಬಾಲಯ್ಯ ಶೋನಲ್ಲಿ ಬಂದ ದಿಗ್ಗಜರು

ಬಾಲಕೃಷ್ಣ ಶೋಗೆ ಈಗಾಗಲೇ ಟಾಲಿವುಡ್‌ನ ದಿಗ್ಗಜರ ತಂಡವೇ ಆಗಮಿಸಿದೆ. ಮೋಹನ್ ಬಾಬು, ಮಂಜು ವಿಷ್ಣು, ಮಂಚು ಲಕ್ಷ್ಮಿ, ನಾಣಿ, ರವಿತೇಜಾ ಸೇರಿದಂತೆ ದಿಗ್ಗಜರು ಆಗಮಿಸಿದ್ದಾರೆ. ಆಹಾ ಓಟಿಟಿ ಪ್ರಕಾರ, ಅನ್‌ಸ್ಟಾಪಬಲ್ ಟಾಕ್‌ ಶೋ ಭರ್ಜರಿಯಾಗಿ ಯಶಸ್ಸು ಕಂಡಿದೆ. ಹೀಗಾಗಿ ಕೊನೆಯ ಎಪಿಸೋಡ್‌ ಅನ್ನು ಸೂಪರ್‌ಸ್ಟಾರ್ ಜೊತೆ ನಡೆಸಲಾಗಿದೆ. ಇತ್ತೀಚೆಗೆ ಮಹೇಶ್ ಬಾಬು ತೆಲುಗಿನ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಜೂ.ಎನ್‌ಟಿಆರ್ ಜೊತೆ ಕಾಣಿಸಿಕೊಂಡಿದ್ದರು.

More from Filmibeat

English summary
Mahesh Babu will soon appear in Nandamuri Balakrishna’s recently launched OTT talk show Unstoppable with NBK. Mahesh Babu has already shot for the talk show and it will be last episode of the talk show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X