ಗರ್ಭಿಣಿ ಮಹಿಳೆ ಕೊಲೆಯ ಸುತ್ತ..'ಸುಮತಿ ಒಲವು'; ಕನ್ನಡದಲ್ಲೇ ನೋಡಿ.. ಯಾವಾಗ? ಎಲ್ಲಿ ನೋಡ್ಬಹುದು?
ಕಳೆದ ಕೆಲವು ವರ್ಷಗಳಿಂದ ಮಲಯಾಳಂ ಸಿನಿಮಾ ಥಿಯೇಟರ್ ಹಾಗೂ ಓಟಿಟಿ ಎರಡೂ ಸದ್ದು ಮಾಡುತ್ತಿವೆ. ಈ ವರ್ಷ ಕೂಡ ಮಲಯಾಳಂ ಚಿತ್ರರಂಗದ ಸಕ್ಸಸ್ ರೇಟ್ ಅದ್ಭುತವಾಗಿದೆ. ಇತ್ತೀಚೆಗೆ ಮಲಯಾಳಂ ಹಾರರ್-ಕಾಮಿಡಿ ಸಿನಿಮಾ 'ಸುಮತಿ ಒಲವು' ಥಿಯೇಟರ್‌ಗಳಲ್ಲಿ ತುಂಬಿದ ಪ್ರದರ್ಶನ ಕಂಡಿತ್ತು. ಬಾಕ್ಸಾಫೀಸ್‌ನಲ್ಲಿ ಯಶಸ್ಸು ಕಂಡಿದ್ದ ಈ ಸಿನಿಮಾವೀಗ ಓಟಿಟಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ.
ಥ್ರಿಲ್ಲರ್ ಹಾಗೂ ಕಾಮಿಡಿ ಎರಡನ್ನೂ ಮಿಕ್ಸ್ ಮಾಡಿ ಕಥೆ ಹೆಣೆಯಲಾಗಿತ್ತು. ಇದು ಮಲಯಾಳಿಗಳಿಗೆ ಸಿಕ್ಕಾಪಟ್ಟೆ ಇಷ್ಟ ಆಗಿತ್ತು. ಥಿಯೇಟರ್‌ಗೆ ನುಗ್ಗಿ ಸಿನಿಮಾ ನೋಡಿ ಎಂಜಾಯ್ ಮಾಡಿದ್ದರು. ಈ ಸಿನಿಮಾವೀಗ ಬೇರೆ ಬೇರೆ ಭಾಷೆಯ ಜನರನ್ನು ತಲುಪುವುದಕ್ಕೆ ವೇದಿಕೆಗಳನ್ನು ರೆಡಿ ಮಾಡಿಕೊಳ್ಳುತ್ತಿದೆ.

ದೆವ್ವಗಳೇ ತುಂಬಿರುವ 'ಸುಮತಿ ಒಲವು' ಎಂಬ ಭಯಾನಕ ನಿಗೂಢ ಸ್ಥಳದಲ್ಲಿ ಯುವಕನೊಬ್ಬ ಸಿಲುಕಿಕೊಂಡಾಗ ಅವನ ಜೀವನ ಅನಿರೀಕ್ಷಿತ ತಿರುವುಗಳನ್ನು ಪಡೆಯುತ್ತಾ ಮುಂದಕ್ಕೆ ಸಾಗುತ್ತೆ. ಅವನ ಜೀವನದಲ್ಲಿ ಸೆಟಲ್ ಆಗದೆ ಉಳಿದಿರುವ ಕೆಲವು ರಹಸ್ಯಗಳು ಎದುರಿಸುತ್ತಾ ಹೇಗೆ ಮುಂದೆ ಸಾಗುತ್ತಾನೆ ಅನ್ನೋದು ಕಥೆ. ಇದರಲ್ಲಿ ಥ್ರಿಲ್ಲಿಂಗ್ ಎಲಿಮೆಂಟ್ಸ್ ಜೊತೆ ಕಾಮಿಡಿ ಕೂಡ ಇದೆ. ಹೀಗಾಗಿ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಈ ಸಿನಿಮಾವೀಗೆ ಓಟಿಟಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ. ಅಷ್ಟಕ್ಕೂ ಎಲ್ಲಿ? ಯಾವಾಗ? ಸ್ಟ್ರೀಮಿಂಗ್ ಆಗುತ್ತೆ ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಸಿನಿಮಾದಲ್ಲಿ ಯಾರೆಲ್ಲ ಇದ್ದಾರೆ?
'ಸುಮತಿ ಒಲವು' ಸಿನಿಮಾವನ್ನು ವಿಷ್ಣು ಶಶಿಕಾಂತ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಅರ್ಜುನ್ ಅಶೋಕನ್, ಗೋಕುಲ್ ಸುರೇಶ್, ಸೈಜು ಕುರುಪ್, ಬಾಲು ವರ್ಗೀಸ್, ಮಾಳವಿಕಾ ಮನೋಜ್ ಹಾಗೂ ಶಿವಡ ಸೇರಿದಂತೆ ಮಲಯಾಳಂ ಚಿತ್ರರಂಗದ ಜನಪ್ರಿಯರ ಕಲಾವಿದರು ನಟಿಸಿದ್ದಾರೆ. ಸುಮತಿ ಎಂಬ ಗರ್ಭಿಣಿ ಕೊಲೆ ಬಳಿಕ ನಡೆಯುವ ಸನ್ನಿವೇಶಗಳಿಂದ ಸಿನಿಮಾ ಹಾರರ್ ಜೊತೆ ಕಾಮಿಡಿ ಟಚ್ ಕೊಡುತ್ತಾ ಮುಂದಕ್ಕೆ ಸಾಗುತ್ತೆ.

ಎಲ್ಲಿ-ಯಾವಾಗ ರಿಲೀಸ್?
ಮಲಯಾಳಂನ ಈ ಹಿಟ್ ಸಿನಿಮಾ ಈಗ ಓಟಿಟಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ. ಭಾರತದ ಸ್ವದೇಶಿ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ Zee 5ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಮತ್ತೊಂದು ವಿಶಿಷ್ಟ ಕಥೆಯೊಂದಿಗೆ ವೀಕ್ಷಕರಿಗೆ ಮನರಂಜನೆ ನೀಡುವುದಕ್ಕೆ ಸಜ್ಜಾಗಿದೆ. 'ಸುಮತಿ ಒಲವು' ಇದೇ ತಿಂಗಳು ಸೆಪ್ಟೆಂಬರ್ 26 ರಿಂದ ಸ್ಟ್ರೀಮಿಂಗ್ ಆಗುತ್ತಿದೆ. ತಿಂಗಳ ಕೊನೆಯಲ್ಲಿ ಕಾಸು ಖರ್ಚಾಗಿದ್ದರೆ, ಮನೆಯಲ್ಲಿಯೇ ಕೂತು ನೋಡುವುದಕ್ಕೆ ಒಂದೊಳ್ಳೆ ಸಿನಿಮಾ ಸಿಗುತ್ತೆ.
'ಸುಮತಿ ಒಲವು' ಕನ್ನಡದಲ್ಲೂ ಸ್ಟ್ರೀಮಿಂಗ್
'ಸುಮತಿ ಒಲವು' ಸಿನಿಮಾ ಕೇವಲ ಮಲಯಾಳಂ ಭಾಷೆಯಲ್ಲಷ್ಟೇ ಅಲ್ಲ. ಕನ್ನಡದಲ್ಲೂ ಡಬ್ಬಿಂಗ್ ಆಗಿ ಸ್ಟ್ರೀಮಿಂಗ್ ಆಗುತ್ತಿದೆ. ಹೀಗಾಗಿ ಮಲಯಾಳಂ ಅರ್ಥ ಆಗದವರು ಕನ್ನಡ ಅಷ್ಟೇ ಅಲ್ಲ, ತೆಲುಗು ,ತಮಿಳು ಹಾಗೂ ಹಿಂದಿ ಭಾಷೆಯಲ್ಲಿಯೂ ಸಿನಿಮಾವನ್ನು ವೀಕ್ಷಣೆ ಮಾಡಬಹುದು. ಈ ಸಿನಿಮಾದ ನಿರ್ದೇಶಕ ವಿಷ್ಣು ಶಶಿಶಂಕರ್ ಸಂತಸ ಹಂಚಿಕೊಂಡಿದ್ದಾರೆ. "ಸುಮತಿ ಒಲವು ಸಿನಿಮಾ ಕೇರಳದ ಜಾನಪದದಲ್ಲಿ ಬೇರೂರಿದ್ದು, ಅದನ್ನು ಇಂದಿನ ಸಮಕಾಲೀನ ಪ್ರೇಕ್ಷಕರಿಗಾಗಿ ರಚಿಸಲಾಗಿದೆ. ಇದು ಕೇವಲ ಭಯವನ್ನು ಒಳಗೊಂಡಿರದೇ ಮಾನವನ ಭಾವನೆ ಬಗ್ಗೆ ರೂಪಿಸಲಾಗಿದೆ. ಸಿನಿಮಾ ಪುರಾಣ, ನೆನಪು ಹಾಗೂ ನಿಗೂಢತೆಯ ಸುತ್ತ ಸಾಗುತ್ತದೆ." ಎಂದು ಹೇಳಿದ್ದಾರೆ.
ಸ್ಟಾರ್ ಕಾಸ್ಟ್ ಏನು ಹೇಳುತ್ತೆ?
'ಸುಮತಿ ಒಲವು' ಸಿನಿಮಾದ ಸ್ಟಾರ್ ಕಾಸ್ಟ್ ಓಟಿಟಿತಲ್ಲಿ ಸ್ಟ್ರೀಮಿಂಗ್ ಆಗುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ನಟಿಸಿರುವ ನಟ ಅರ್ಜುನ್ ಅಶೋಕನ್ ಶೂಟಿಂಗ್ ಸಮಯದಲ್ಲಿ ತಮಗೆ ಆದ ಅನುಭವ ಹಂಚಿಕೊಂಡಿದ್ದಾರೆ. "zee5 ವಿವಿಧ ಭಾಷೆಗಳ ಪ್ರೇಕ್ಷಕರಿಗೆ ಸಮತಿ ಒಲವು ಸಿನಿಮಾ ಪ್ರದರ್ಶಿಸುತ್ತಿರುವುದು ಸಂತಸ" ಎಂದು ಹೇಳಿದ್ದರೆ, ನಟಿ ಮಾಳವಿಕಾ ಮನೋಜ್ "ಸುಮತಿ ಒಲವು ಸಿನಿಮಾ ಕೇರಳದ ಸಂಸ್ಕೃತಿ ಜೊತೆಗೆ ಸಸ್ಪೆನ್ಸ್ ತುಂಬಿರುವ ಸಿನಿಮಾ. ಈ ಸಿನಿಮಾದ ಭಾಗವಾಗಿರುವುದು ಖುಷಿಯಾಗಿದೆ. ಈ ತಂಡದ ಜೊತೆ ನಟಿಸಿರುವುದು ಅದ್ಭುತ ಅನುಭ. Zee5ನಲ್ಲಿ ಸಿನಿಮಾ ನೋಡಿ ವೀಕ್ಷಕರ ನೀಡುವ ಪ್ರತಿಕ್ರಿಯೆಗೆ ಎದುರು ನೋಡುತ್ತಿದ್ದೇನೆ" ಎಂದು ಹೇಳಿದ್ದಾರೆ.


Click it and Unblock the Notifications











