18 ವರ್ಷಗಳ ಬಳಿಕ ಒಂದೇ ಸಿನಿಮಾದಲ್ಲಿ ಮಮ್ಮುಟ್ಟಿ-ಮೋಹನ್ ಲಾಲ್; 'ಪೇಟ್ರಿಯಾಟ್' ಓಟಿಟಿಗೆ ಎಂಟ್ರಿ

ಮಮ್ಮುಟ್ಟಿ ಹಾಗೂ ಮೋಹನ್‌ಲಾಲ್ ಇಬ್ಬರೂ ಮಲಯಾಳಂ ಸೂಪರ್‌ಸ್ಟಾರ್‌ಗಳು. ಇಬ್ಬರಲ್ಲಿ ವೃತ್ತಿಪರವಾದ ಪೈಪೋಟಿ ಇದ್ದರೂ, ಅಸೂಯೆ ಇಲ್ಲ. ಬೇರೆ ಚಿತ್ರರಂಗದಂತೆ ಬಹಿರಂಗವಾಗಿ ಕಿತ್ತಾಡಿಕೊಂಡಿಲ್ಲ. ಒಬ್ಬರ ಸಿನಿಮಾ ಇನ್ನೊಬ್ಬರು ನಟಿಸಬಾರದು ಅನ್ನೋ ಅಹಂ ಬೆಳೆಸಿಕೊಂಡಿಲ್ಲ. ಒಂದೇ ಸಿನಿಮಾದಲ್ಲಿ ಇಬ್ಬರು ನಟಿಸಿದ್ದು ಕಡಿಮೆ ಇದ್ದರೂ, ಸಿನಿಮಾದಿಂದ ಆಚೆಗೆ ಇಬ್ಬರೂ ಉತ್ತಮ ಸ್ನೇಹಿತರು.

ಮೋಹನ್‌ಲಾಲ್ ಹಾಗೂ ಮಮ್ಮುಟ್ಟಿ ಈ ಇಬ್ಬರು ದಿಗ್ಗಜರು ಬೇರೆ ಚಿತ್ರರಂಗದ ಸೂಪರ್‌ಸ್ಟಾರ್‌ಗಳಿಗೆ ಮಾದರಿ. ಒಂದೇ ಚಿತ್ರರಂಗದ ಇಬ್ಬರು ಸೂಪರ್‌ಸ್ಟಾರ್‌ಗಳು ಪೈಪೋಟಿಯ ಹೊರತಾಗಿ ಆತ್ಮೀಯವಾಗಿ ಹೇಗೆ ಇರಬಹುದು ಎಂದು ತೋರಿಸಿಕೊಟ್ಟವರು. ಸಿನಿಮಾ ಅಂತ ಬಂದಾಗ ಇಬ್ಬರೂ ಸ್ಟಾರ್‌ಡಮ್ ಅನ್ನು ಪಕ್ಕಕ್ಕೆ ಇಟ್ಟು ನಟಿಸಿದ್ದಾರೆ. ಇತ್ತೀಚೆಗೆ ಇವರಿಬ್ಬರೂ ಒಟ್ಟಿಗೆ ನಟಿಸಿದ್ದ ಮಲಯಾಳಂ ಸಿನಿಮಾ 'ಪೆಟ್ರಿಯಾಟ್' ಥಿಯೇಟರ್‌ಗಳಲ್ಲಿ ಜೋರಾಗಿಯೇ ಸದ್ದು ಮಾಡಿತ್ತು. ಇದೇ ಸಿನಿಮಾವೀಗ ಓಟಿಟಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ.

Mammootty and Mohanlal starrer Patriot Malayalam Movie streaming on June 5th in Zee 5


ಮಲಯಾಳಂ ಚಿತ್ರರಂಗದ ಈ ಇಬ್ಬರು ಸೂಪರ್‌ಸ್ಟಾರ್‌ಗಳು 18 ವರ್ಷದ ಬಳಿಕ ಒಟ್ಟಿಗೆ ನಟಿಸಿದ್ದಾರೆ. ಮಮ್ಮುಟ್ಟಿ ಮತ್ತು ಮೋಹನ್ ಲಾಲ್ ಒಟ್ಟಿಗೆ ನಟಿಸಿದ ಈ ಸ್ಪೈ ಥ್ರಿಲ್ಲರ್ ಸಿನಿಮಾ ಇದೇ ವರ್ಷ ಮೇ ತಿಂಗಳ 1 ರಂದು‌ ಅದ್ಧೂರಿಯಾಗಿ ಬಿಡುಗಡೆಯಾಗಿತ್ತು. ಇಬ್ಬರು ದಿಗ್ಗಜರನ್ನು ಒಟ್ಟಿಗೆ ತೆರೆಮೇಲೆ ನೋಡುವುದಕ್ಕೆ ಕೇರಳಿಗರು ಕೂಡ ತುದಿಗಾಲಲ್ಲಿ ನಿಂತಿದ್ದರು. ನಿರೀಕ್ಷೆಯಂತೆ ಥಿಯೇಟರ್‌ನಲ್ಲಿ ಉತ್ತಮ ಪ್ರದರ್ಶನ ಕಂಡಿದ್ದ ಈ ಸಿನಿಮಾ ಒಟಿಟಿಗೆ ಎಂಟ್ರಿ ಕೊಡುತ್ತಿದೆ. ಎಲ್ಲಿ? ಯಾವಾಗ? ಅನ್ನೋದನ್ನು ನೋಡೋಣ.

'ಪೇಟ್ರಿಯಾಟ್' ಓಟಿಟಿಗೆ ಯಾವಾಗ?

'ಪೇಟ್ರಿಯಾಟ್' ಸ್ಟಾರ್‌ಕಾಸ್ಟ್‌ನಿಂದಲೇ ಗಮನ ಸೆಳೆದ ಸಿನಿಮಾ. ಮಹೇಶ್ ನಾರಾಯಣನ್ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಮಮ್ಮುಟ್ಟಿ, ಮೋಹನ್‌ಲಾಲ್, ಫಹಾದ್ ಫಾಸಿಲ್, ಕುಂಚಾಕೊ ಬಾಬನ್, ನಯನತಾರಾ, ರೇವತಿ ಸೇರಿದಂತೆ ದಿಗ್ಗಜರೇ ನಟಿಸಿದ್ದರು. ಈ ಸಿನಿಮಾ ನಿರೀಕ್ಷೆ ಮಾಡಿದಂತೆ ಉತ್ತಮ ಓಪನಿಂಗ್ ಪಡೆದುಕೊಂಡಿದ್ದರೂ, ಗಳಿಕೆಯಲ್ಲಿ ಕೊಂಚ ಮಟ್ಟಿಗೆ ಹಿಂದೆ ಬಿದ್ದಿತ್ತು. ಈಗ ಸಿನಿಮಾ ಸರಿಯಾಗಿ ನಾಲ್ಕು ವಾರಗಳ ಬಳಿಕ ಓಟಿಟಿಗೆ ಲಗ್ಗೆ ಇಡುತ್ತಿದೆ. 'ಪೇಟ್ರಿಯಾಟ್' ಜೂನ್ 5ರಂದು Zee5 ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

Also Read
ಅಮೆಜಾನ್ ಪ್ರೈಮ್‌ನಲ್ಲಿ 'ಸುಖಮನೋ ಸುಖಮನ್' ಅಬ್ಬರ ; ಈ ವಾರ ಮಿಸ್ ಮಾಡ್ಬೇಡಿ ಈ ಫ್ಯಾಂಟಸಿ ಮ್ಯಾಜಿಕ್!
ಅಮೆಜಾನ್ ಪ್ರೈಮ್‌ನಲ್ಲಿ 'ಸುಖಮನೋ ಸುಖಮನ್' ಅಬ್ಬರ ; ಈ ವಾರ ಮಿಸ್ ಮಾಡ್ಬೇಡಿ ಈ ಫ್ಯಾಂಟಸಿ ಮ್ಯಾಜಿಕ್!

ಐದು ಭಾಷೆಗಳಲ್ಲಿ ಲಭ್ಯ

'ಪೇಟ್ರಿಯಾಟ್' ಸಿನಿಮಾವನ್ನು ಐದು ಭಾಷೆಗಳಿಗೆ ಡಬ್ ಮಾಡಲಾಗಿದೆ. ಮಲಯಾಳಂ ಜೊತೆಗೆ ಕನ್ನಡ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಜೀ 5 ಸ್ಟ್ರೀಮಿಂಗ್ ಮಾಡುತ್ತಿದೆ. ಮಹೇಶ್ ನಾರಾಯಣ್ ನಿರ್ದೇಶಿಸಿದ್ದ ಈ ಸಿನಿಮಾದಲ್ಲಿ ಮೋಹನ್‌ಲಾಲ್, ಮಮ್ಮುಟ್ಟಿ ಜೊತೆಗೆ ಫಾಸಿಲ್, ಕುಂಚಾಕೊ ಬೋಬನ್ ಮತ್ತು ನಯನತಾರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಿರ್ದೇಶಕ ಮಹೇಶ್ ನಾರಾಯಣನ್ ರಾಜಕೀಯ ಕಥಾಹಂದರವನ್ನು ಸ್ಟಾರ್‌ಪವರ್‌ ಜೊತೆಗೆ ಹೇಳುವುದಕ್ಕೆ ಮುಂದಾಗಿದ್ದರು.

Mammootty and Mohanlal starrer Patriot Malayalam Movie streaming on June 5th in Zee 5

ಏನಂತಾರೆ ಮಮ್ಮುಟ್ಟಿ?

'ಪೇಟ್ರಿಯಾಟ್'ನ ಪ್ರಮುಖ ಪಾತ್ರದಲ್ಲಿ ನಟಿಸಿರುವ ಮಮ್ಮುಟ್ಟಿ ಸಿನಿಮಾ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಪೇಟ್ರಿಯಾಟ್ ಸಿನಿಮಾವನ್ನು ಸೆಳೆಯುವಂತೆ ಮಾಡಿರುವ ಅಂಶವೆಂದರೆ, ರಾಜಕೀಯ ಒತ್ತಡ. ಸಿನಿಮಾ ಅಂತಿಮವಾಗಿ ಆತ್ಮಸಾಕ್ಷಿ, ಜವಾಬ್ದಾರಿ ಮತ್ತು ಧೈರ್ಯದ ಬಗ್ಗೆ ಮನುಷ್ಯನ ಬಲವನ್ನು ಪರೀಕ್ಷಿಸುವ ಕಥೆಯಾಗಿದೆ. ಈ ಸಿನಿಮಾ ಭಾವನಾತ್ಮಕವಾಗಿ ನೆಲೆಗೊಂಡಿರುವ ಕೆಲವು ಕಷ್ಟಕರವಾದ ಪ್ರಶ್ನೆಗಳನ್ನು ಕೇಳುತ್ತದೆ. ಅದನ್ನು ಮಲಯಾಳಂ ZEE5 ನಲ್ಲಿ ಪ್ರೇಕ್ಷಕರು ಕಂಡುಕೊಳ್ಳುವುದನ್ನು ನಾನು ಎದುರು ನೋಡುತ್ತಿದ್ದೇನೆ" ಎಂದು ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ ಹೇಳಿದ್ದಾರೆ.

ನಿರ್ದೇಶಕರು ಏನಂತಾರೆ?

'ಪೇಟ್ರಿಯಾಟ್' ಸಿನಿಮಾ ಒಟಿಟಿ ಎಂಟ್ರಿ ಕೊಡುತ್ತಿರುವ ಬಗ್ಗೆ ನಿರ್ದೇಶಕ ಮಹೇಶ್ ನಾರಾಯಣನ್ ಪ್ರತಿಕ್ರಿಯಿಸಿದ್ದಾರೆ. "ಇದು ಇಂದು ನಾವೀರುವ ಕಾಲದ ಆತಂಕಗಳನ್ನು ಪ್ರತಿಬಿಂಬಿಸುವ ಕಥೆಯಾಗಿದೆ. ಅಲ್ಲಿ ಜನರನ್ನು ರಕ್ಷಿಸಲು ಬಳಸಲಾಗುವ ತಂತ್ರಜ್ಞಾನವು ಭಯ ಹಾಗೂ ನಿಯಂತ್ರಿಸಲ್ಪಡುವ ಸಾಧನವಾಗಬಹುದು. ಈ ಸಿನಿಮಾ ತಾನು ಸಂಪೂರ್ಣವಾಗಿ ನಂಬಿದ್ದ ಯಾವುದೋ ಒಂದು ವಿಷಯದ ಪರಿಣಾಮಗಳನ್ನು ಎದುರಿಸಲು ಒತ್ತಾಯಿಸಲ್ಪಡುವ ಒಬ್ಬ ವ್ಯಕ್ತಿಯ ಭಾವನಾತ್ಮಕ ಸಂಘರ್ಷ. ದೇಶಾದ್ಯಂತದ ಪ್ರೇಕ್ಷಕರು ಮಲಯಾಳಂ ZEE5 ನಲ್ಲಿ ಪೇಟ್ರಿಯಾಟ್ ಸಿನಿಮಾವನ್ನು ಅನುಭವಿಸುವುದನ್ನು ನೋಡಲು ನಾನು ಉತ್ಸುಕನಾಗಿದ್ದೇನೆ" ಎಂದಿದ್ದಾರೆ ನಿರ್ದೇಶಕರು.

English summary
Mammootty and Mohanlal starrer Patriot Malayalam Movie streaming on June 5th in Zee 5. Mammootty and Mohanlal came together after 18 years.
Read more about: mohanlal mammootty
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X