'ವಡಾ ಪಾವ್ ಗರ್ಲ್' ಟ್ಯಾಟೂ ಹಾಕಿಕೊಂಡು ಕೆಂಗಣ್ಣಿಗೆ ಗುರಿಯಾದ್ದೇಕೆ ಈ ಭೂಪ? ಅಷ್ಟಕ್ಕೂ ಯಾರೀಕೆ?

ಸೋಶಿಯಲ್ ಮೀಡಿಯಾ ರಾತ್ರೋ ರಾತ್ರಿ ಅದೆಷ್ಟೋ ಮಂದಿಯನ್ನು ಫೇಮಸ್ ಮಾಡಿದೆ. ಪ್ರತಿಭೆ ಇದ್ದವರು ಬೆಳೆದಿದ್ದಾರೆ. ಕೆಲವರು ಉದ್ಯಮವನ್ನೇ ಕಟ್ಟಿಕೊಂಡಿದ್ದಾರೆ. ಮತ್ತೆ ಕೆಲವರು ರಿಯಾಲಿಟಿ ಶೋಗೂ ಎಂಟ್ರಿ ಕೊಟ್ಟಿದ್ದಾರೆ. ಅಂಥವರ ಸಾಲಿನಲ್ಲಿ ಈ 'ವಡಾ ಪಾವ್ ಗರ್ಲ್' ಕೂಡ ಸೇರಿಕೊಳ್ಳುತ್ತಾರೆ. ಅಷ್ಟಕ್ಕೂ ಸೋಶಿಯಲ್ ಮೀಡಿಯಾದಲ್ಲಿ 'ವಡಾ ಪಾವ್ ಗರ್ಲ್' ಅಂತಲೇ ಫೇಮಸ್ ಆಗಿರುವ ಈಕೆಯ ಅಸಲಿ ಹೆಸರೇನು ಗೊತ್ತೇ?

ದೆಹಲಿಯ ಬೀದಿ ಬದಿಯಲ್ಲಿ ವಡಾ ಪಾವ್ ಮಾಡುವ ಮಹಿಳೆ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದರು. ವಿಡಿಯೋ ನೋಡಿ ಆಕೆಯನ್ನು ನೆಟ್ಟಿಗರು 'ವಡಾ ಪಾವ್ ಗರ್ಲ್' ಕರೆಯುವುದಕ್ಕೆ ಶುರು ಮಾಡಿದ್ದರು. ಅಂದ್ಹಾಗೆ ಈಕೆಯ ಅಸಲಿ ಹೆಸರು ಚಂದ್ರಿಕಾ ಗೆರಾ ದೀಕ್ಷಿತ್. ಆದರೆ, ಈಕೆಯ ವಿಡಿಯೋ ವೈರಲ್ ಆದ ದಿನದಿಂದ ದೆಹಲಿ ಮಂದಿ 'ವಡಾ ಪಾವ್ ಗರ್ಲ್' ಅಂತಲೇ ಗುರುತಿಸುವುದಕ್ಕೆ ಶುರು ಮಾಡಿದ್ದಾರೆ.

Man faces backlash for tattoo of Vada Pav Girl aka Chandrika Gera Dixit know Bigg Boss OTT 3

ಈಗ ನವಿ ಮುಂಬೈನ ವ್ಯಕ್ತಿಯೊಬ್ಬ ಈ 'ವಡಾ ಪಾವ್ ಗರ್ಲ್' ಟ್ಯೂಟೂ ಹಾಕಿಸಿಕೊಂಡಿದ್ದಾನೆ. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ವಿವಾದ ಭುಗಿಲೆದ್ದಿದೆ. ಅಷ್ಟಕ್ಕೂ 'ವಡಾ ಪಾವ್ ಗರ್ಲ್' ಟ್ಯಾಟೂ ಹಾಕಿಸಿಕೊಂಡಿದ್ದೇಕೆ? ನೆಟ್ಟಿಗರ ಆಕ್ರೋಶಕ್ಕೆ ಕಾರಣ ಆಗಿದ್ದೇಕೆ? 'ವಡಾ ಪಾವ್ ಗರ್ಲ್' ಬಿಗ್‌ಬಾಸ್‌ಗೆ ಹೋಗಿದ್ದೇಕೆ? ತಿಳಿಯಲು ಮುಂದೆ ಓದಿ.

ದೆಹಲಿಯ ಚಂದ್ರಿಕಾ ಗೆರಾ ದೀಕ್ಷಿತ್ ಉರ್ಫ್ 'ವಡಾ ಪಾವ್ ಗರ್ಲ್' ಈಗ ಬಿಗ್‌ಬಾಸ್‌ ಓಟಿಟಿ 3ಯ ಸ್ಪರ್ಧಿ. ಈ ಜನಪ್ರಿಯ ರಿಯಾಲಿಟಿ ಶೋಗೆ ಹೋಗುವುದಕ್ಕೂ ಮುನ್ನ ಈಕೆ ಫೇಮಸ್ ಆಗಿದ್ದೇಗೆ? ಅನ್ನೋದು ಒಂದು ರೋಚಕ ಸಂಗತಿ. ಸ್ಟ್ರೀಟ್ ಫುಡ್‌ ಬಗ್ಗೆ ವಿಡಿಯೋ ಮಾಡುವ ಯೂಟ್ಯೂಬರ್ ಒಬ್ಬ ಈಕೆಯ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ. ಇಲ್ಲಿಂದ ಈಕೆಯ ಬಗ್ಗೆ ಹಲವರು ವಿಡಿಯೋ ಮಾಡಿದ್ದರು.

ಸೋಶಿಯಲ್ ಮೀಡಿಯಾದಲ್ಲಿ 'ವಡಾ ಪಾವ್ ಗರ್ಲ್' ವಿಡಿಯೋಗಳು ಹೆಚ್ಚು ಹರಿದಾಡುವುದಕ್ಕೆ ಶುರುವಾಗುತ್ತಿದ್ದಂತೆ ನೆಟ್ಟಿಗರ ಫೇವರಿಟ್ ಆಗಿಬಿಟ್ಟರು. ಇಲ್ಲಿಂದ ಈಕೆಯ ಸ್ಟಾಲ್ ಮುಂದೆ ಜನರು ಕಿಕ್ಕಿರಿದು ಸೇರುವುದಕ್ಕೆ ಶುರು ಮಾಡಿದ್ದರು. ಈಕೆಯನ್ನು ಸ್ಪೂರ್ತಿಯಾಗಿ ಪಡೆದ ಮುಂಬೈನ ವ್ಯಕ್ತಿಯೊಬ್ಬ ಈಕೆಯ ಟ್ಯೂಟೂ ಹಾಕಿಸಿಕೊಂಡಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಕೆಂಗಣ್ಣಿಗೂ ಗುರಿಯಾಗಿದ್ದಾನೆ.

ಮುಂಬೈನ ಟ್ಯಾಟೂ ಸ್ಟುಡಿಯೋ ಮಾಲೀಕ ಟ್ಯಾಟೂ ಹಾಕಿಸಿಕೊಳ್ಳುತ್ತಿರುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಅದನ್ನು ನೋಡುತ್ತಿದ್ದಂತೆ ಟ್ಯಾಟೂ ಹಾಕಿಸಿಕೊಂಡವನಿಗೆ ಉಗಿದು ಉಪ್ಪಿನಕಾಯಿ ಹಾಕಿದ್ದಾರೆ. ಕೆಲವರು "ಇದು ಅತಿ ಆಯ್ತು" ಅಂತ ಕಾಮೆಂಟ್ ಮಾಡಿದ್ದರೆ, ಮತ್ತೆ ಕೆಲವರು "ಇದೆಲ್ಲ ಬೇಕಿರಲಿಲ್ಲ" ಎಂದಿದ್ದಾರೆ. ಇನ್ನು ಕೆಲವರು "ಇದರಲ್ಲಿ ಏನೋ ಸಮಸ್ಯೆ" ಯಿದೆ ಎಂದು ಹೇಳಿದ್ದಾರೆ.

ಟ್ಯಾಟೂ ಮಾಲೀಕ ಮಾಧ್ಯಮಗಳಿಗೆ ಮಾಹಿತಿ ಕೊಟ್ಟಿರುವ ಪ್ರಕಾರ, ಆ ವ್ಯಕ್ತಿಗೆ 'ವಡಾ ಪಾವ್ ಗರ್ಲ್' ಸ್ಪೂರ್ತಿ. ಆರು ತಿಂಗಳು ಕೆಲಸವಿಲ್ಲದೆ ಮನೆಯಲ್ಲಿಯೇ ಇದ್ದ. ಈ ವೇಳೆ ವಿಡಿಯೋ ನೋಡಿ ತಾನೂ ಜೀವನದಲ್ಲಿ ಮುಂದೆ ಬರಬೇಕು ಎಂದು ನಿರ್ಧರಿಸಿದ್ದಾರೆ. ಈಗ ಬಿಗ್‌ಬಾಸ್‌ ಹಿಂದಿ ಓಟಿಟಿ 3ರ ಸ್ಪರ್ಧಿಯಾಗಿರೋ 'ವಡಾ ಪಾವ್ ಗರ್ಲ್' ಗೆದ್ದೇ ಗೆಲ್ಲುತ್ತಾಳೆ ಅನ್ನೋ ನಂಬಿಕೆಯಲ್ಲಿಯೇ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ಅಲ್ಲದೆ ತನ್ನೇ ವಡಾ ಪಾವ್ ಸ್ಟಾಲ್‌ ಅನ್ನೂ ಶುರು ಮಾಡಿದ್ದಾನೆ ಎಂದು ಹೇಳಿಕೊಂಡಿದ್ದಾರೆ. ಏನೇ ಇದ್ದರೂ ನೆಟ್ಟಿಗರಿಗೆ ಮಾತ್ರ ಇದ್ಯಾಕೋ ಸರಿ ಕಾಣುತ್ತಿಲ್ಲ.

More from Filmibeat

English summary
Man faces backlash for tattoo of Vada Pav Girl. Know More
Read more about: viral ott ವೈರಲ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X