ಥಿಯೇಟರ್‌ನಲ್ಲಿ ಸೋತ ಮೋಹನ್‌ಲಾಲ್ ಸಿನಿಮಾ ಓಟಿಟಿಯಲ್ಲಿ ಗೆಲ್ಲುತ್ತಾ? ಯಾವ ಸಿನಿಮಾ? ಎಲ್ಲಿ ರಿಲೀಸ್?

ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್‌ಗೆ ವಿಶ್ವದಾದ್ಯಂತ ಅಭಿಮಾನಿಗಳು ಇದ್ದಾರೆ. ವಿಭಿನ್ನವಾದ ಸಿನಿಮಾಗಳಲ್ಲಿ ನಟಿಸಿದ ಜನರನ್ನು ರಂಜಿಸುತ್ತಿರುವ ಸ್ಟಾರ್ ನಟ. ಕೇವಲ ಮಲಯಾಳಂ ಅಷ್ಟೇ ಅಲ್ಲ. ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ಮೋಹನ್‌ಲಾಲ್‌ಗೆ ಅಭಿಮಾನಿಗಳು ಇದ್ದಾರೆ. ಹಾಗಂತ ಇವರ ಸಿನಿಮಾಗಳಿಗೆ ಥಿಯೇಟರ್‌ನಲ್ಲಷ್ಟೇ ಅಲ್ಲ. ಓಟಿಟಿಯಲ್ಲೂ ಸಿಕ್ಕಾಪಟ್ಟೆ ಬೇಡಿಕೆ ಇದೆ.

ಇತ್ತೀಚೆಗೆ ಮೋಹನ್‌ಲಾಲ್ ನಟಿಸಿದ್ದ ಸಿನಿಮಾ 'ಮಲೈಕೊಟ್ಟೈ ವಾಲಿಬನ್' ಓಟಿಟಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ. ಇದು ಪಕ್ಕಾ ಆಕ್ಷನ್, ಫ್ಯಾಂಟಸಿ, ಐತಿಹಾಸಿಕ ಸಿನಿಮಾ ಆಗಿದ್ದು, ಮೋಹನ್‌ಲಾಲ್ ನಿಭಾಯಿಸಿದ ವಾಲಿಬನ್ ಅನ್ನುವ ಯೋಧನ ಪಾತ್ರದ ಸುತ್ತಮುತ್ತ ಹುಟ್ಟಿಕೊಂಡಿರುವ ಕಥೆಯಾಗಿದೆ. ರಂಗಪಟ್ಟಿನಂ ರಂಗಾಚಾರಿ ಹಾಗೂ ನಿಗೂಢ ವ್ಯಕ್ತಿ ಛಮತಕನ್ ಜೊತೆಗಿನ ವಾಲಿಬನ್ ಯುದ್ಧವೇ 'ಮಲೈಕೊಟ್ಟೈ ವಾಲಿಬನ್' ಸಿನಿಮಾದ ಹೈಲೈಟ್.

Mohanlal Movie Malaikottai Vaaliban OTT Release Date Confirmed

'ಮಲೈಕೊಟ್ಟೈ ವಾಲಿಬನ್' ಸಿನಿಮಾಗೆ ಲಿಜೋ ಜೋಸ್ ಪೆಲ್ಲಿಸ್ಸೆರಿ ಆಕ್ಷನ್ ಕಟ್ ಹೇಳಿದ್ದಾರೆ. ಹಾಗೇ ಪಿ ಎಸ್ ರಫೀಕ್ ಕಥೆ ಬರೆದಿದ್ದಾರೆ. ಮೋಹನ್‌ಲಾಲ್,ಸೋನಾಲಿ ಕುಲ್ಕರ್ಣಿ, ಹರೀಶ್ ಪೆರಡಿ ಹಾಗೂ ದ್ಯಾನಿಶ್ ಸೇಠ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಮಧು ನೀಲಕಂಠನ್ ಛಾಯಾಗ್ರಹಣ ಹಾಗೂ ಪ್ರಶಾಂತ್ ಪಿಳ್ಳೈ ಸಂಗೀತ ಕಿಕ್ ಗಮನ ಸೆಳೆಯುತ್ತಿದೆ. ಸುಮಾರು 65 ಕೋಟಿ ರೂಪಾಯಿ ವೆಚ್ಚದಲ್ಲಿ 'ಮಲೈಕೊಟ್ಟೈ ವಾಲಿಬನ್' ನಿರ್ಮಾಣಗೊಂಡಿದೆ. ಸದ್ಯ ಈ ಸಿನಿಮಾ ಓಟಿಟಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ.

'ಮಲೈಕೊಟ್ಟೈ ವಾಲಿಬನ್'ಗೆ ಹೇಗಿತ್ತು ರೆಸ್ಪಾನ್ಸ್?

'ಮಲೈಕೊಟ್ಟೈ ವಾಲಿಬನ್' ಸಿನಿಮಾ 2024, ಜನವರಿ 25ರಂದು ಥಿಯೇಟರ್‌ಗೆ ಲಗ್ಗೆ ಇಟ್ಟಿತ್ತು. ಆದರೆ, ಸಿನಿಮಾ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ, ವಿಮರ್ಶಕರಿಂದ ಛಾಯಾಗ್ರಹಣಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಸಿನಿಮಾದಲ್ಲಿ ಸಾಕಷ್ಟು ನ್ಯೂನ್ಯತೆಗಳನ್ನು ಹುಡುಕಲಾಗಿತ್ತು. ಸಿನಿಮಾ ಅಗತ್ಯಕ್ಕಿಂತ ದೊಡ್ಡದಿದೆ. ಸ್ಕ್ರೀನ್ ಪ್ಲೇ ನಿಧಾನಗತಿಯಲ್ಲಿತ್ತು, ಹಾಗೇ ಕಮರ್ಷಿಯಲ್ ಆಗಿ ನಿರಾಸೆ ಮೂಡಿಸಿದೆ ಎಂದು ವಿಮರ್ಶಕರು ಹೇಳಿದ್ದರು.

Mohanlal Movie Malaikottai Vaaliban OTT Release Date Confirmed

ಬಾಕ್ಸಾಫೀಸ್ ಕಲೆಕ್ಷನ್ ಹೇಗಿತ್ತು?

ಮೋಹನ್‌ಲಾಲ್ ಸಿನಿಮಾ 'ಮಲೈಕೊಟ್ಟೈ ವಾಲಿಬನ್' ಬಾಕ್ಸಾಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಮೋಡಿ ಮಾಡಿಲ್ಲ. 65 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕೇವಲ 29 ಕೋಟಿ ರೂಪಾಯಿಗಳನ್ನಷ್ಟೇ ಗಳಿಸಿತ್ತು. ಹೀಗಾಗಿ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋಲುಂಡಿತ್ತು. ಥಿಯೇಟರ್‌ನಲ್ಲಿ ಸೋತ ಸಿನಿಮಾ ಓಟಿಟಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ.

ಓಟಿಟಿಯಲ್ಲಿ ರಿಲೀಸ್ ಯಾವಾಗ?

ಸಾಮಾನ್ಯವಾಗಿ ಥಿಯೇಟರ್‌ನಲ್ಲಿ ಸೋತ ಸಿನಿಮಾಗಳು ಓಟಿಟಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತವೆ. ಇತ್ತೀಚೆಗೆ ತೆರೆಕಂಡಿರೋ ಕೆಲವು ಸಿನಿಮಾಗಳಿಗೆ ಇಂತಹ ಪ್ರತಿಕ್ರಿಯೆ ಸಿಕ್ಕಿದೆ. ಈಗ 'ಮಲೈಕೊಟ್ಟೈ ವಾಲಿಬನ್' ಸಿನಿಮಾಗೂ ಇದೇ ರೀತಿ ರೆಸ್ಪಾನ್ಸ್ ಸಿಗಬಹುದಾ? ಅನ್ನೋ ನಿರೀಕ್ಷೆಯಿದೆ. ಇದೇ ಫೆಬ್ರವರಿ 23ರಂದು ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಪ್ರಸಾರ ಆಗಲಿದೆ. ಮಲಯಾಳಂನಲ್ಲಿ ನಿರ್ಮಾಣಗೊಂಡ ಸಿನಿಮಾ ತೆಲುಗು, ತಮಿಳು ಹಾಗೂ ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗಲಿದೆ.

ಮೋಹಲ್‌ಲಾಲ್ ಅಭಿಮಾನಿಗಳಿಗೆ ಹಬ್ಬ

ಈ ಸಿನಿಮಾ ಮೋಹನ್‌ಲಾಲ್ ಅಭಿಮಾನಿಗಳಿಗೆ ಮನರಂಜನೆ ನೀಡಬಹುದು. ಛಾಯಾಗ್ರಹಣ, ಮ್ಯೂಸಿಕ್ ಹಾಗೂ ಆಕ್ಷನ್ ಸನ್ನಿವೇಶಗಳು ಥ್ರಿಲ್ ಕೊಡಬಹುದು. ಅಲ್ಲದೆ ಐದು ಭಾಷೆಗಳಲ್ಲಿ ಸಿನಿಮಾ ಪ್ರಸಾರ ಆಗುತ್ತಿರುವುದರಿಂದ ಯಾವ್ಯಾವ ಭಾಷೆಯ ಸಿನಿ ಪ್ರೇಮಿಗಳಿಗೆ ಸಿನಿಮಾ ಇಷ್ಟ ಆಗಬಹುದು ಅನ್ನೋ ಕುತೂಹಲವಿದೆ. ಮೋಹನ್‌ಲಾಲ್ ನಟನೆಯ 'ಮಲೈಕೊಟ್ಟೈ ವಾಲಿಬನ್' ಸಿನಿಮಾ ಓಟಿಟಿಗೆ ಬರುತ್ತಿರೋದು ಅವರ ಫ್ಯಾನ್ಸ್‌ಗೆ ಕಿಕ್ ಕೊಟ್ಟಿದೆ.

More from Filmibeat

English summary
Malaikottai Vaaliban OTT Release Date: Do you know where to watch
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X