Thandel OTT:ನೆಟ್‌ಫ್ಲಿಕ್ಸ್‌ಗೆ 'ತಾಂಡೆಲ್' ಸೋಲ್ಡ್; ನಾಗಚೈತನ್ಯ ಕರಿಯರ್‌ನಲ್ಲೇ ಬಂಪರ್ ಬ್ಯುಸಿನೆಸ್!

ಅಕ್ಕಿನೇನಿ ಕುಟುಂಬದ ಕುಡಿ ನಾಗ ಚೈತನ್ಯ ಸಿನಿಮಾ ಬಂಪರ್ ಬ್ಯುಸಿನೆಸ್ ಮಾಡಿದೆ. ನಾಚೈತನ್ಯ ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕು ಎರಡೂ ಅಷ್ಟಾಗಿ ಉತ್ತಮವಾಗಿಲ್ಲ. ದಕ್ಷಿಣ ಭಾರತದ ಸ್ಟಾರ್ ನಟಿ ಸಮಂತಾ ವಿವಾಹವಾಗಿ ಕೆಲವೇ ವರ್ಷಗಳಲ್ಲಿ ವಿಚ್ಛೇದನ ನೀಡಿದ್ದಾರೆ. ಹೀಗಾಗಿ ಸಂಸಾರಿಕ ಬದುಕು ಹಾದಿ ತಪ್ಪಿದೆ. ಇನ್ನೊಂದು ವೃತ್ತಿ ಬದುಕಿನಲ್ಲಿ ಮೆಗಾ ಹಿಟ್ ಅಂತ ಅನಿಸಿಕೊಳ್ಳುವ ಸಿನಿಮಾ ನೀಡಿಲ್ಲ.

ಸದ್ಯ ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ಜೊತೆಯಾಗಿ ನಟಿಸುತ್ತಿರುವ ಸಿನಿಮಾ ಬಗ್ಗೆ ಚಿಕ್ಕದಾಗಿ ಟಾಕ್ ಶುರುವಾಗಿದೆ. ಅದುವೇ 'ತಾಂಡೆಲ್'. ಚಂದೂ ಮಾಂಡೆಟಿ ನಿರ್ದೇಶಿಸುತ್ತಿರುವ ಈ ಆಕ್ಷನ್ ಡ್ರಾಮಾಗೆ ಓಟಿಟಿಯಲ್ಲಿ ಒಳ್ಳೆ ಮೊತ್ತ ಸಿಕ್ಕಿದೆ. ಇದು ನಾಗ ಚೈತನ್ಯ ಕರಿಯರ್‌ನಲ್ಲೇ ಸಿಕ್ಕಿರೋ ಅತೀ ದೊಡ್ಡ ಮೊತ್ತವೆಂದು ಟಾಲಿವುಡ್ ಮಂದಿ ಚರ್ಚೆ ಮಾಡುತ್ತಿದ್ದಾರೆ.

Naga Chaitanya Sai Pallavi movie Thandel sold for whopping price for Netflix

'ತಾಂಡೆಲ್' ಸಿನಿಮಾದ ಶೂಟಿಂಗ್ ಇನ್ನೂ ನಡೆಯುತ್ತಿದೆ. ಅಷ್ಟರಲ್ಲೇ ಓಟಿಟಿ ರೈಟ್ಸ್ ಸೇಲ್ ಮಾಡಲಾಗಿದೆ. ಪ್ರತಿಷ್ಠಿತ ಓಟಿಟಿ ಸಂಸ್ಥೆ ನೆಟ್‌ಫ್ಲಿಕ್ಸ್ ತಾಂಡೆಲ್ ಸಿನಿಮಾವನ್ನು ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ಜೋಡಿಯ 'ತಾಂಡೇಲ್' ಸಿನಿಮಾ ಎಷ್ಟು ಮೊತ್ತಕ್ಕೆ ಸೇಲ್ ಆಗಿದೆ? ಅಷ್ಟೊಂದು ದೊಡ್ಡ ಮೊತ್ತ ಕೊಟ್ಟು ಖರೀದಿ ಮಾಡುವುದಕ್ಕೆ ಏನು ಕಾರಣ? ತಿಳಿಯಲು ಮುಂದೆ ಓದಿ..

ತೆಲುಗು ಮಾಧ್ಯಮಗಳಲ್ಲಿ ವರದಿಯಾಗಿರುವ ಪ್ರಕಾರ, ನೆಟ್‌ಫ್ಲಿಕ್ಸ್ 'ತಾಂಡೆಲ್' ಸಿನಿಮಾವನ್ನು ಈಗಾಗಲೇ ಖರೀದಿ ಮಾಡಿದೆ. ದಕ್ಷಿಣ ಭಾರತ ಎಲ್ಲಾ ಭಾಷೆ ಹಾಗೂ ಹಿಂದಿಯನ್ನು ಸೇರಿ ಹಕ್ಕುಗಳನ್ನು ಕೊಂಡುಕೊಂಡಿದೆ. ಇದು ನಾಗಚೈತನ್ಯ ವೃತ್ತಿ ಬದುಕಿನಲ್ಲೇ ಅತೀ ದೊಡ್ಡ ಡಿಜಿಟಲ್ ಡೀಲ್ ಎಂದು ತೆಲುಗು ಮಾಧ್ಯಮಗಳು ವರದಿಯಾಗಿದೆ.

ಈಗಾಗಲೇ ವರದಿಯಾಗಿರುವ ಪ್ರಕಾರ, 'ತಾಂಡೆಲ್' ಸಿನಿಮಾವನ್ನು ನೆಟ್‌ಫ್ಲಿಕ್ಸ್ ಸುಮಾರು 40 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿದೆ ಎನ್ನಲಾಗಿದೆ. ಹೀಗಾಗಿ ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ಸಿನಿಮಾ 'ತಾಂಡೆಲ್' ಬಗ್ಗೆ ಕ್ರೇಜ್ ಹೆಚ್ಚಾಗಿದೆ. ಟಾಲಿವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಗೀತಾ ಆರ್ಟ್ಸ್ ಬ್ಯಾನರ್‌ನಲ್ಲಿ ಸಿನಿಮಾ ರೆಡಿಯಾಗುತ್ತಿದೆ. ಹೀಗಾಗಿ ಓಟಿಟಿಯಲ್ಲಿ ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ ಅನ್ನೋದು ಟಾಲಿವುಡ್ ಮಂದಿಯ ಲೆಕ್ಕಾಚಾರ.

Naga Chaitanya Sai Pallavi movie Thandel sold for whopping price for Netflix

ಇನ್ನು 'ತಾಂಡೆಲ್' ಸಿನಿಮಾವನ್ನು ನಿರ್ದೇಶಿಸುತ್ತಿರುವ ಚಂದೂ ಮಾಂಡೇಟಿ ಈ ಹಿಂದೆ 'ಕಾರ್ತಿಕೇಯಾ 2' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ದೊಡ್ಡದಾಗಿ ಸದ್ದು ಮಾಡಿತ್ತು. ಇವೆಲ್ಲವೂ ನೆಟ್‌ಫ್ಲಿಕ್ಸ್ ಇಷ್ಟು ದೊಡ್ಡ ಮೊತ್ತ ಕೊಟ್ಟು ಖರೀದಿ ಮಾಡುವುದರಲ್ಲಿ ಬಹು ಮುಖ್ಯ ಪಾತ್ರವಹಿಸಿದೆ ಎನ್ನಲಾಗಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಸಾಯಿ ಪಲ್ಲವಿ ಈ ಸಿನಿಮಾ ನಾಯಕಿ. ಟಾಲಿವುಡ್‌ನ ಸ್ಟಾರ್ ನಿರ್ಮಾಪಕ ಅಲ್ಲು ಅರವಿಂದ್ ಈ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿದ್ದಾರೆ. ಹಾಗೇ ಟಾಲಿವುಡ್‌ನ ರಾಕ್‌ಸ್ಟಾರ್ ದೇವಿ ಶ್ರೀ ಪ್ರಸಾದ್ ಟ್ಯೂನ್ ಹಾಕುತ್ತಿದ್ದಾರೆ. ಇವು ಸಿನಿಮಾದ ಹೈಲೈಟ್. ಹೀಗಾಗಿ ನೆಟ್‌ಫ್ಲಿಕ್ಸ್ ದೊಡ್ಡ ಮೊತ್ತಕ್ಕೆ ಖರೀದಿ ಮಾಡಿ ಎಂದು ಟಾಲಿವುಡ್‌ನಲ್ಲಿ ಚರ್ಚೆ. ಆದರೆ, ಚಿತ್ರತಂಡ ಈ ಬಗ್ಗೆ ಇನ್ನೂ ಅಧಿಕೃತವಾಗಿ ಹೇಳಬೇಕಿದೆ.

More from Filmibeat

English summary
Netflix begged Thandel digital rights for whopping price
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X