Thandel OTT:2ನೇ ಮದ್ವೆ ಬಳಿಕ ಖುಲಾಯಿಸಿದ ಲಕ್; 'ತಾಂಡೆಲ್' ಓಟಿಟಿ ರಿಲೀಸ್ ಯಾವಾಗ?
ತೆಲುಗು ನಟ ನಾಗಚೈತನ್ಯಗೆ ಎರಡನೇ ಮದುವೆ ಬಳಿಕ ಅದೃಷ್ಟ ಖುಲಾಯಿಸಿದಂತಿದೆ. ಶೋಭಿತಾ ಜೊತೆ ವಿವಾಹವಾದ ಬಳಿಕ ನಾಗ ಚೈತನ್ಯ ನಟಿಸಿದ ಸಿನಿಮಾ 'ತಾಂಡೆಲ್' ರಿಲೀಸ್ ಆಗಿತ್ತು. ಬಾಕ್ಸಾಫೀಸ್‌ನಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ್ದು, ನಾಗ ಚೈತನ್ಯ ವೃತ್ತಿ ಬದುಕಿನಲ್ಲೇ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಆಗಿದೆ. ಈ ಕಾರಣಕ್ಕೆ 'ತಾಂಡೆಲ್' ಸಿನಿಮಾ ಓಟಿಟಿ ರಿಲೀಸ್ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ.
'ತಾಂಡೆಲ್' ನೈಜ ಘಟನೆಯನ್ನು ಆಧರಿಸಿದ ಸಿನಿಮಾ. ಚಂದೂ ಮೊಂಡೆಟಿ ನಿರ್ದೇಶಿಸಿದ ಈ ಸಿನಿಮಾ ಮೀನುಗಾರರ ಕಥೆಯನ್ನು ತೆರೆಮೇಲೆ ಹೇಳಿತ್ತು. ನಾಗ ಚೈತನ್ಯಗೆ ಜೋಡಿಯಾಗಿ ಸಾಯಿ ಪಲ್ಲವಿ ನಟಿಸಿದ್ದರು. ಇವರಿಬ್ಬರ ಜೊತೆಯಾಗಿ ನಟಿಸಿದ ಮತ್ತೊಂದು ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಈ ಸಿನಿಮಾಗೆ ದೇವಿಶ್ರೀ ಪ್ರಸಾದ್ ಮ್ಯೂಸಿಕ್ ನೀಡಿದ್ದರು.

'ತಾಂಡೆಲ್' ಬಾಕ್ಸಾಫೀಸ್‌ನಲ್ಲಿ ಸೂಪರ್ ಸಕ್ಸಸ್ ಆಗುತ್ತಿದ್ದಂತೆ ಓಟಿಟಿ ರಿಲೀಸ್ ಬಗ್ಗೆ ಚರ್ಚೆಯಾಗುವುದಕ್ಕೆ ಶುರುವಾಗಿದೆ. ಥಿಯೇಟರ್‌ನಲ್ಲಿ ಮೋಡಿ ಮಾಡಿದ ಮೇಲೆ ಈ ರೊಮ್ಯಾಂಟಿಕ್ ಆಕ್ಷನ್ ಡ್ರಾಮ ಓಟಿಟಿಯಲ್ಲೂ ದಾಖಲೆ ಮಾಡಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಹಾಗಿದ್ದರೆ, ತಾಂಡೆಲ್ ಸಿನಿಮಾ ಕಥೆಯೇನು? ಓಟಿಟಿಯಲ್ಲಿ ಯಾವಾಗ ರಿಲೀಸ್ ಆಗುತ್ತೆ? ಯಾವ ವೇದಿಕೆಯಲ್ಲಿ ರಿಲೀಸ್ ಆಗುತ್ತೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಟಾಲಿವುಡ್ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡಿದ ಸಿನಿಮಾಗಳ ಲಿಸ್ಟ್‌ನಲ್ಲಿ 'ತಾಂಡೆಲ್' ಕೂಡ ಇದೆ. ಮೀನುಗಾರರನಾಗಿ ನಾಗ ಚೈತನ್ಯ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಇವರಿಗೆ ನಾಯಕಿಯಾಗಿ ಸಾಯಿ ಪಲ್ಲವಿ ಡಿ ಗ್ಲಾಮರ್ ರೋಲ್ಸ್‌ನಲ್ಲಿ ನಟಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಮತ್ತೊಂದು ಕ್ಲಿಕ್ ಆಗಿದ್ದು, ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಸಿನಿಮಾ ಖರೀದಿಗೆ ಪೈಪೋಟಿ ಮಾಡಿದ್ದವು ಅನ್ನೋ ಮೂಲಗಳಿಂದ ಬಂದಿರುವ ಸುದ್ದಿ.

ನಾಗಚೈತನ್ಯ ಹಾಗೂ ಸಾಯಿ ಪಲ್ಲವಿಯ ಸಿನಿಮಾ 'ತಾಂಡೆಲ್' ಇದೇ ಮಾರ್ಚ್ 7ರಂದು ಗ್ರ್ಯಾಂಡ್ ಆಗಿ ಸ್ಟ್ರೀಮಿಂಗ್ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಆದರೆ, ಈ ಬಗ್ಗೆ ಚಿತ್ರತಂಡ, ಸಿನಿಮಾದ ಸ್ಟಾರ್‌ಕಾಸ್ಟ್ ಯಾರೂ ಈ ಬಗ್ಗೆ ಇದೂವರೆಗೂ ಮಾಹಿತಿಯನ್ನು ನೀಡಿಲ್ಲ. ಈ ಸಿನಿಮಾದ ಸದ್ಯ ಕೆಲವೇ ಕೆಲವು ಥಿಯೇಟರ್‌ಗಳಲ್ಲಿ ಇದೆ. ಹೀಗಾಗಿ ಮಾರ್ಚ್ ಮೊದಲ ಬಾರಿ ಓಟಿಟಿಗೆ ಗ್ರ್ಯಾಂಡ್ ಎಂಟ್ರಿ ಕೊಡಬಹುದು ಎಂದು ಅಂದಾಜು ಮಾಡಲಾಗುತ್ತಿದೆ.
'ತಾಂಡೆಲ್' ಸಿನಿಮಾ ಡಿಜಿಟಲ್ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಪಾಲಾಗಿದೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಈ ಸಿನಿಮಾವನ್ನು ಬನ್ನಿ ವಾಸ್ ನಿರ್ಮಾಣ ಮಾಡಿದ್ದರೆ, ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಅವರ ಗೀತಾ ಆರ್ಟ್ಸ್ ಬ್ಯಾನರ್ ಬೆಂಬಲಕ್ಕೆ ನಿಂತಿತ್ತು. ಹೀಗಾಗಿ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡಿತ್ತು. ಈ ಸಿನಿಮಾದಲ್ಲಿ ಕನ್ನಡದ ನಟ ಪ್ರಕಾಶ್ ಬೆಳವಾಡಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ನಾಗಚೈತನ್ಯ ಸಿನಿಮಾ ರಿಲೀಸ್ ಆಗಿ 19 ದಿನಗಳಾಗಿವೆ. ಇನ್ನು 9 ದಿನಗಳಲ್ಲಿ ಈ ಸಿನಿಮಾ ಓಟಿಟಿಗೆ ಬರುತ್ತೆ ಅನ್ನೋದು ನಿರೀಕ್ಷೆ. ಆದರೆ, ಅಧಿಕೃತ ಮಾಹಿತಿ ನೆಟ್‌ಫ್ಲಿಕ್ಸ್ ಕಡೆಯಿಂದ ಬರಬೇಕಿದೆ. ಇನ್ನೊಂದು ಕಡೆ ಸಿನಿಮಾ ಯಶಸ್ಸು ಕಂಡ ಬೆನ್ನಲ್ಲೇ ವಿತರಕರಿಗೆ ತಂಡ ಪಾರ್ಟಿಯನ್ನು ಆಯೋಜಿಸಿ ಸಂಭ್ರಮಿಸಿದೆ ಅನ್ನೋದು ಸದ್ಯಕ್ಕೆ ಸಿಕ್ಕಿರುವ ಮಾಹಿತಿ.


Click it and Unblock the Notifications











