Vidyapati OTT: ಓಟಿಟಿಗೆ ಒಂದೇ ಬಿಡ್ತು ಕನ್ನಡ ಸಿನಿಮಾ 'ವಿದ್ಯಾಪತಿ'; ಎಲ್ಲಿ ನೋಡಬಹುದು?
ಡಾಲಿ ಧನಂಜಯ್ ನಿರ್ಮಿಸಿದ ನಾಲ್ಕನೇ ಸಿನಿಮಾ 'ವಿದ್ಯಾಪತಿ'. ಈ ಸಿನಿಮಾದಲ್ಲಿ ನಾಗಭೂಷಣ್ ಹಾಗೂ ಮಲೈಕಾ ವಸುಪಾಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಜೊತೆಗ ಡಾಲಿ ಧನಂಜಯ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಹುತೇಕ ಥಿಯೇಟರ್‌ಗಳಲ್ಲಿ ತನ್ನ ಪ್ರದರ್ಶನ ಮುಗಿಸಿದ ಬಳಿಕ ಓಟಿಟಿಯಲ್ಲಿ ಗ್ರ್ಯಾಂಡ್ ಆಗಿ ಎಂಟ್ರಿಕೊಟ್ಟಿದೆ.
'ವಿದ್ಯಾಪತಿ' ಸಿನಿಮಾ ಏಪ್ರಿಲ್ 10, 2025ರಂದು ಅದ್ಧೂರಿಯಾಗಿ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿತ್ತು. ಡಾಲಿ ಧನಂಜಯ್ ತನ್ನ ಆತ್ಮೀಯ ಗೆಳೆಯನಿಗಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಹಾಸ್ಯ ಪಾತ್ರಗಳಲ್ಲಿ ರಂಜಿಸುತ್ತಿದ್ದ ನಾಗಭೂಷಣ್ ಹೀರೊ ಆಗಿ ಮೋಡಿ ಮಾಡಿದ್ದರು. ಇವರಿಗೆ ನಾಯಕಿಯಾಗಿ 'ಹಿಟ್ಲಲ್ ಕಲ್ಯಾಣ' ಧಾರಾವಾಹಿ ಹಾಗೂ 'ಉಪಾಧ್ಯಕ್ಷ' ಸಿನಿಮಾದ ಮಲೈಕಾ ವಸುಪಾಲ್ ನಟಿಸಿದ್ದಾರೆ. ಖಳನಾಯಕನ ಪಾತ್ರದಲ್ಲಿ ಗರುಡ ರಾಮ್ ನಟಿಸಿದ್ದಾರೆ.

ಈ ಕಾಮಿಡಿ, ರೊಮ್ಯಾಂಟಿಕ್ ಆಕ್ಷನ್ ಸಿನಿಮಾ ಇಂದು (ಮೇ 3) ಓಟಿಟಿಗೆ ಲಗ್ಗೆ ಇಟ್ಟಿದೆ. ಇಂದಿನಿಂದ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ 'ವಿದ್ಯಾಪತಿ' ಅಬ್ಬರಿಸುವುದಕ್ಕೆ ಶುರು ಮಾಡಿದೆ. ಅಂದ್ಹಾಗೆ, ಡಾಲಿ ಧನಂಜಯ್, ನಾಗಭೂಷಣ್ ಹಾಗೂ ಮಲೈಕಾ ವಸುಪಾಲ್ ನಟಿಸಿರುವ 'ವಿದ್ಯಾಪತಿ' ಸಿನಿಮಾವನ್ನು ಯಾವ ಒಟಿಟಿ ವೇದಿಕೆಯಲ್ಲಿ ನೋಡಬಹುದು? ಥಿಯೇಟರ್‌ನಲ್ಲಿ ಈ ಸಿನಿಮಾ ಪರ್ಫಾಮೆನ್ಸ್ ಹೇಗಿತ್ತು? ಅನ್ನೋದನ್ನು ತಿಳಿಯಲು ಮುಂದೆ ಓದಿ.
'ವಿದ್ಯಾಪತಿ' ಸಿನಿಮಾವನ್ನು ಇಶಾಂ ಹಾಗೂ ಹಸೀಂ ಖಾನ್ ಇಬ್ಬರು ಸೇರಿ ನಿರ್ದೇಶನ ಮಾಡಿದ್ದಾರೆ. 'ವಿದ್ಯಾ' ಎಂಬ ಸ್ಟಾರ್ ನಾಯಕಿಯ ಹಿಂದೆ ಬೀಳುವ ನಾಯಕ ಅವಳನ್ನು ಹೇಗೆ ಬುಟ್ಟಿಗೆ ಬೀಳಿಸಿಕೊಂಡು ಮದುವೆ ಆಗುತ್ತಾನೆ. ಆ ನಂತರ ಆಕೆಯ ಹಣದಲ್ಲಿ ಹೇಗೆಲ್ಲ ಮಜಾ ಮಾಡುತ್ತಾನೆ. ಒಂದು ದಿನ ಆತ ಸುಳ್ಳು ಹೇಳಿ ಮದುವೆ ಆಗಿದ್ದಾನೆ ಅನ್ನೋದು ಗೊತ್ತಾಗುತ್ತಿದ್ದಂತೆ ಆತನ ಜೀವನದಲ್ಲಿ ಏನೆಲ್ಲ ಬದಲಾವಣೆಯಾಗುತ್ತೆ. ಗರುಡ ರಾಮ್ ಅಂತಹ ದೈತ್ಯ ಖಳನಾಯಕನನ್ನು ನಾಗಭೂಷಣ್ ಸಿನಿಮಾದಲ್ಲಿ ಹೇಗೆ ಎದುರಿಸುತ್ತಾರೆ ಎನ್ನುವುದೇ ಕತೆ.
ಈ ಲೈಟ್ ಹಾರ್ಟೆಡ್ ಸಿನಿಮಾಗೆ ಕಾಮಿಡಿ, ಆಕ್ಷನ್ ಹಾಗೂ ಸೆಂಟಿಮೆಂಟ್ ಟಚ್ ಕೊಡಲಾಗಿದೆ. ನಾಗಭೂಷಣ್‌ಗೆ ನಾಯಕಿಯಾಗಿ ನಟಿಸಿದ ಬಳಿಕ ಮಲೈಕಾ ವಸುಪಾಲ್ ಹುಡುಗರ ಫೇವರಿಟ್ ನಟಿಯಾಗಿದ್ದಾರೆ. 'ಉಪಾಧ್ಯಕ್ಷ' ಸಿನಿಮಾದಲ್ಲಿ ಗಮನ ಸೆಳೆದಿದ್ದ ನಟಿ ತನ್ನ ಎರಡನೇ ಸಿನಿಮಾದಲ್ಲೂ ಮೆಚ್ಚುಗೆ ಗಳಿಸಿದ್ದಾರೆ. ನಾಗಭೂಷಣ್-ಮಲೈಕಾ ಜೊತೆಗೆ ಚಿತ್ರದಲ್ಲಿ ರಂಗಾಯಣ ರಘು ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ಈ ಸಿನಿಮಾ ರಿಲೀಸ್ ಆದಾ ಐಪಿಎಲ್ ಪಂದ್ಯಗಳು ಆರಂಭ ಆಗಿದ್ದವು. ಹೀಗಾಗಿ ಬಹಳಷ್ಟು ಮಂದಿ 'ವಿದ್ಯಾಪತಿ' ನೋಡುವುದನ್ನು ಮಿಸ್ ಮಾಡಿಕೊಂಡಿರಬಹುದು. ಅಂತಹವರು 'ವಿದ್ಯಾಪತಿ'ಯನ್ನು ಅಮೆಜಾನ್ ಪ್ರೈಂ ವಿಡಿಯೋದಲ್ಲಿ ನೋಡಬಹುದು. ಇಂದಿನಿಂದ (ಮೇ 3) ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ವೀಕೆಂಡ್‌ನಲ್ಲಿ ಮನೆಯಲ್ಲಿ ಫ್ಯಾಮಿಲಿ ಜೊತೆ ಕೂತು ಈ ಸಿನಿಮಾವನ್ನು ನೋಡಿ ಎಂಜಾಯ್ ಮಾಡಬಹುದಾಗಿದೆ.
ಡಾಲಿ ಧನಂಜಯ್ ಅವರ 'ಡಾಲಿ ಪಿಕ್ಚರ್ಸ್' ಬ್ಯಾನರ್‌ನಲ್ಲಿ ವಿದ್ಯಾಪತಿ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. 'ವಿದ್ಯಾಪತಿ'ಗೆ ಇಶಾಂ ಹಾಗೂ ಹಸೀಂ ಖಾನ್ ನಿರ್ದೇಶನವಿದ್ದರೆ, ಲವಿತ್ ಅವರ ಕ್ಯಾಮರಾ ವರ್ಕ್ ಇದೆ. ಡಾಸ್ಮೋಡ್ ಸಂಗೀತ ನಿರ್ದೇಶನ ಮಾಡಿದ್ದಾರೆ. 'ವಿದ್ಯಾಪತಿ' ಬಾಕ್ಸಾಫೀಸ್‌ನಲ್ಲಿ ಅವರೇಜ್ ಕಲೆಕ್ಷನ್ ಮಾಡಿತ್ತು. 15 ದಿನಗಳಲ್ಲಿ ಈ ಸಿನಿಮಾ ಒಂದು ಕೋಟಿಗೂ ಅಧಿಕ ಕಲೆಕ್ಷನ್ ಆಗಿದೆ ಎಂದು ಸಿನಿಮಾ ಮಂದಿ ಹೇಳುತ್ತಿದ್ದಾರೆ. ಅದೇನೇ ಇದ್ದರೂ, ಓಟಿಟಿಯಲ್ಲಿ ಈ ಸಿನಿಮಾ ಲಭ್ಯವಿದ್ದು, ಸಿನಿಮಾ ಪ್ರಿಯರು ವೀಕೆಂಡ್‌ನಲ್ಲಿ ಎಂಜಾಯ್ ಮಾಡಬಹುದಾಗಿದೆ.


Click it and Unblock the Notifications











