ಮೂರು ಪ್ರೀತಿ.. ಎರಡು ಬ್ರೇಕಪ್; ಸಿಂಬು ಜೊತೆಗಿನ ಪ್ರೀತಿ ಮುರಿದು ಬಿದ್ದ ಬಗ್ಗೆ ನಯನತಾರಾ ಮೊದಲ ಪ್ರತಿಕ್ರಿಯೆ

ಲೇಡಿ ಸೂಪರ್‌ಸ್ಟಾರ್ ನಯನತಾರಾ ಅವರ ಕುರಿತ ನೆಟ್‌ಫ್ಲಿಕ್ಸ್ ಡಾಕ್ಯೂಮೆಂಟರಿ ಚರ್ಚೆಯಲ್ಲಿದೆ. ಕಳೆದ ಕೆಲವು ದಿನಗಳಿಂದ ಇದೇ ವಿಚಾರವಾಗಿ ನಯನತಾರಾ ಹಾಗೂ ಧನುಷ್ ಕಿತ್ತಾಡಿಕೊಳ್ಳುತ್ತಿದ್ದಾರೆ. ಅದು ಚರ್ಚೆಯಲ್ಲಿ ಇರುವಾಗಲೇ ಅದೇ ಡಾಕ್ಯೂಮೆಂಟರಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುವುದಕ್ಕೆ ಶುರುವಾಗಿದೆ. ಈ ಸಾಕ್ಷ್ಯ ಚಿತ್ರದಲ್ಲಿ ನಯನತಾರಾ ಇದೇ ಮೊದಲ ಬಾರಿಗೆ ತಮ್ಮ ಲವ್ ಸ್ಟೋರಿ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ.

ಒಂದು ಕಡೆ ಧನುಷ್ ಹಾಗೂ ನಯನತಾರಾ ನಡುವಿನ ಕಿತ್ತಾಟ ಮಾಧ್ಯಮಗಳಲ್ಲಿ ಚರ್ಚೆಯ ವಿಷಯವಾಗಿದೆ. ಅದೇ ವೇಳೆ ಅವರ 'ನಯನತಾರಾ ಬಿಯಾಂಡ್ ದಿ ಫೇರಿ ಟೇಲ್' ನೆಟ್‌ಫ್ಲಿಕ್ಸ್ ಡಾಕ್ಯೂಮೆಂಟರಿಯಲ್ಲಿ ನಯನತಾರಾ ಖುದ್ದಾಗಿ ತಮ್ಮ ಅಫೇರ್‌ಗಳ ಬಗ್ಗೆನೂ ಮಾತಾಡಿದ್ದಾರೆ. ಇದು ಸದ್ಯಕ್ಕೀಗ ಚರ್ಚೆಯ ವಿಷಯವಾಗಿದೆ.

Nayanthara Beyond the Fairy Tale actress opened up about her relationship with Simbu

ನಯನತಾರಾ ಸಿನಿಮಾರಂಗದಲ್ಲಿ ಬೆಳೆದು ಬಂದಿದ್ದೇ ಒಂದು ಸಾಹಸ ಕಥೆ. ಇನ್ನು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಲೇಡಿ ಸೂಪರ್‌ಸ್ಟಾರ್ ಆಗುವ ಮಟ್ಟಕ್ಕೆ ಬೆಳೆದು ನಿಂತಿದ್ದು ಕೂಡ ಅಷ್ಟೇ ದೊಡ್ಡ ಅಡ್ವೆಂಚರ್. ನಾಯಕಿಯಾಗಿ ಎಂಟ್ರಿ ಕೊಟ್ಟು ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ಆಗುವವರೆಗಿನ ಸುಧೀರ್ಘ ಜರ್ನಿಯಲ್ಲಿ ಮೂರು ಲವ್ ಸ್ಟೋರಿ.. ಎರಡು ಬ್ರೇಕಪ್ ಕೂಡ ಆಗಿದೆ. ಅದರಲ್ಲಿ ಮೊದಲನೇ ಬ್ರೇಕಪ್ ಬಗ್ಗೆ ಮಾತಾಡಿದ್ದಾರೆ. ಅದೇನು ಅಂತ ತಿಳಿಯುವುದಕ್ಕೆ ಮುಂದೆ ಓದಿ.

ನಯನತಾರಾ ಮೂಲತ: ಕೇರಳದವರು. ಈಕೆ ಮೊದಲು ನಟಿಸಿದ್ದು ಮಲಯಾಳಂ ಸಿನಿಮಾದಲ್ಲಿಯೇ. ಅಲ್ಲಿಂದ ನಟನಾ ಪಯಣ ಶುರುವಾಗಿತ್ತು. ಬಳಿಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದ ನಟಿ ಹಂತ ಹಂತವಾಗಿ ಬೆಳೆದು ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಇದರ ಜೊತೆಗೆ ತೆಲುಗು, ಕನ್ನಡ, ಹಿಂದಿ ಭಾಷೆಯ ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗ ನಯನತಾರಾಗೆ ಚಿತ್ರರಂಗದಲ್ಲಿ ತನ್ನದೇ ಒಂದು ಅಸ್ಥಿತ್ವವಿದೆ.

Nayanthara Beyond the Fairy Tale actress opened up about her relationship with Simbu

ತಮಿಳಿನ ಸ್ಟಾರ್‌ ನಟರೊಂದಿಗೆ ನಯನತಾರಾ ನಟಿಸಿ ಸೈ ಎನಿಸಿಕೊಂಡಿದ್ದರು. ರಜನಿಕಾಂತ್, ವಿಜಯ್, ಅಜಿತ್, ಧನುಷ್, ಸಿಂಬು ಸೇರಿದಂತೆ ದಿಗ್ಗಜರ ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಬಹುಬೇಗನೇ ಯಶಸ್ಸನ್ನು ಗಿಟ್ಟಿಸಿಕೊಂಡರು. ಆದರೆ, ಆರಂಭದಲ್ಲಿ ನಯನತಾರಾ ಹೆಚ್ಚಾಗಿ ಸಿಂಬು ಜೊತೆ ಕಾಣಿಸಿಕೊಂಡಿದ್ದರು. ಸಿಂಬು ಪ್ರೀತಿಯಲ್ಲಿ ಬಿದ್ದಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ಕೆಲವು ಫೋಟೊಗಳು ಕೂಡ ಹರಿದಾಡಿದ್ದವು.

ಅಲ್ಲಿಂದ ಸಿಂಬು ಹಾಗೂ ನಯನತಾರಾ ಪ್ರೀತಿ ಗಾಢ ಬೆಳೆಯುತ್ತಾ ಹೋಗಿತ್ತು. ಇನ್ನೇನು ಈ ಜೋಡಿ ಮದುವೆ ಆಗಿಯೇ ಬಿಡುತ್ತಾರೆ ಎಂಬು ಸುದ್ದಿ ಕಾಲಿವುಡ್‌ನಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. 'ವಲ್ಲವನ್' ಅನ್ನುವ ಸಿನಿಮಾದ ಶೂಟಿಂಗ್ ವೇಳೆ ನಯನತಾರಾ ಹಾಗೂ ಸಿಂಬು ನಡುವೆ ಪ್ರೀತಿ ಹುಟ್ಟಿತ್ತು. ಅದು ಜಗತ್ತಿಗೆ ಗೊತ್ತಾಗಿ ಈ ಜೋಡಿ ಮದುವೆ ತಯಾರಿ ನಡೆಸುತ್ತಿರುವ ಬಗ್ಗೆನೂ ಸುದ್ದಿಯಾಗಿತ್ತು. ಆಗ ಸಿಂಬು ತಂದೆ ಡಿ. ರಾಜೇಂದರ್ ಇವರಿಬ್ಬರಿಗಾಗಿ ಕೋಟಿ ಬೆಲೆ ಬಾಳುವ ಬಂಗಲೆಯನ್ನು ಖರೀದಿ ಮಾಡಿದ್ದರು. ಅಷ್ಟರಲ್ಲೇ ಇಬ್ಬರ ಬ್ರೇಕಪ್ ಸ್ಟೋರಿನೂ ಅಷ್ಟೇ ವೇಗವಾಗಿ ಹಬ್ಬಿತ್ತು.

ನಯನತಾರಾ ಇಂದು (ನವೆಂಬರ್ 18) 40ನೇ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ. ಇದೇ ವೇಳೆ 'ನಯನತಾರಾ ಬಿಯಾಂಡ್ ದಿ ಫೇರಿ ಟೇಲ್' ನೆಟ್‌ಫ್ಲಿಕ್ಸ್ ಡಾಕ್ಯೂಮೆಂಟರಿ ಕೂಡ ರಿಲೀಸ್ ಆಗಿದೆ. ಇದರಲ್ಲಿ ಸಿಂಬು ಜೊತೆ ಯಾಕೆ ಬ್ರೇಕಪ್ ಆಯ್ತು ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ನನ್ನ ಮೊದಲ ಪ್ರೀತಿ ನಮ್ಮಿಬ್ಬರ ನಂಬಿಕೆಯ ಮೇಲೆ ನಿಂತಿತ್ತು. ಪ್ರೀತಿಯಲ್ಲಿ ನಂಬಿಕೆ ಇರಬೇಕು. ಬಾಂಧವ್ಯದಲ್ಲಿ ಪರಸ್ಪರ ನಂಬಿಕೆ ಇಟ್ಟುಕೊಳ್ಳಬೇಕು. ನಾನು ಹಾಗೇ ಪ್ರೀತಿಯಲ್ಲಿ ದೇ ನಂಬಿಕೆಯನ್ನು ಇಟ್ಟುಕೊಂಡಿದ್ದೆ." ಎಂದು ತಮಗೆ ಪ್ರೀತಿಯಲ್ಲಾದ ಮೋಸದ ಬಗ್ಗೆ ಹೇಳಿಕೊಂಡಿದ್ದಾರೆ.

More from Filmibeat

English summary
Nayanthara Beyond the Fairy Tale actress opened up about her relationship with Simbu
Read more about: nayanthara simbu filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X