Akhanda 2 OTT: ಓಟಿಟಿಗೆ ಸೇಲ್ ಆಯ್ತು 'ಅಖಂಡ 2'; ಬಾಲಕೃಷ್ಣ ಕರಿಯರ್‌ನಲ್ಲೇ ಬಿಗ್ ಡೀಲ್.. ಎಷ್ಟು ಕೋಟಿ ಗೊತ್ತೇ?

ಟಾಲಿವುಡ್‌ನ ಸೂಪರ್‌ಸ್ಟಾರ್‌ ನಂದಮೂರಿ ಬಾಲಕೃಷ್ಣ ಸಿನಿಮಾಗಳಿಗೆ ಇನ್ನೂ ಬೇಡಿಕೆ ಕಡಿಮೆ ಆಗಿಲ್ಲ. ಅದಕ್ಕೆ ಒಂದೊಳ್ಳೆ ಉದಾಹರಣೆ 'ಅಖಂಡ 2'. ಬೋಯಪಾಟಿ ಶ್ರೀನು ನಿರ್ದೇಶಿಸಿರುವ ಈ ಸಿನಿಮಾ ದಾಖಲೆ ಮೊತ್ತಕ್ಕೆ ಓಟಿಟಿಗೆ ಸೇಲ್ ಆಗಿದೆ ಎಂದು ತೆಲುಗು ಮಾಧ್ಯಮಗಳಲ್ಲಿ ವರದಿಯಾಗಿದೆ. ನಂದಮೂರಿ ಬಾಲಕೃಷ್ಣ ಮತ್ತು ಬೋಯಪಾಟಿ ಶ್ರೀನು ಅವರ ಕಾಂಬಿನೇಷನ್ ಬಗ್ಗೆ ಹೊಸದಾಗಿ ಏನೂ ಹೇಳಬೇಕಿಲ್ಲ. ಮಸ್ತ್ ಮಾಸ್ ಸೀನ್, ಡೈಲಾಗ್‌ಗಳನ್ನು ನಿರೀಕ್ಷೆ ಮಾಡಬಹುದು.

ಈಗಾಗಲೇ ನಂದಮೂರಿ ಬಾಲಕೃಷ್ಣ ಹಾಗೂ ಬೋಯಪಾಟಿ ಶ್ರೀನು ಕಾಂಬಿನೇಷನ್‌ನಲ್ಲಿ ಸೂಪರ್‌ ಹಿಟ್ ಸಿನಿಮಾಗಳು ಬಂದಿವೆ. 'ಸಿಂಹ', 'ಲೆಜೆಂಡ್' ಹಾಗೂ 'ಅಖಂಡ' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯನ್ನೇ ಬರೆದಿವೆ. ಅದರಲ್ಲೂ 'ಅಖಂಡ' ಬಾಲಕೃಷ್ಣ ವೃತ್ತಿ ಬದುಕಿಗೆ ಹೊಸ ತಿರುವು ಕೊಟ್ಟ ಸಿನಿಮಾ. ಇನ್ನೇ ಬಾಲಯ್ಯನ ಯುಗ ಮುಗೀತು ಎನ್ನುವಾಗಲೇ 'ಅಖಂಡ' ಇಬ್ಬರ ಕೈ ಹಿಡಿದಿತ್ತು. ಅಲ್ಲಿಂದ ಮತ್ತೆ ಬಾಲಕೃಷ್ಣ ಯಶಸ್ಸಿ ಹಾದಿಯನ್ನು ಹಿಡಿದಿದ್ದರು.

Netflix Acquires Nandamuri Balakrishna s Akhanda 2 OTT Rights Release Date and Details

ಇದೇ ಯಶಸ್ಸನ್ನು ಮುಂದುವರೆಸುವ ನಿಟ್ಟಿನಲ್ಲಿ ಈ ಜೋಡಿ ಮತ್ತೆ ಒಂದಾಗಿದ್ದು, 'ಅಖಂಡ 2' ಬಿಡುಗಡೆ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಸಿನಿಮಾವನ್ನು ಬಾಲಕೃಷ್ಣ ಅವರ ಕಿರಿಯ ಪುತ್ರಿ ನಂದಮೂರಿ ತೇಜಸ್ವಿನಿ ಅರ್ಪಿಸುತ್ತಿದ್ದರೆ, ರಾಮ್ ಅಚಂಟಾ ಮತ್ತು ಗೋಪೀಚಂದ್ ಅಚಂಟಾ 'ಅಖಂಡ 2' ಸಿನಿಮಾವನ್ನು ಭಾರೀ ಬಜೆಟ್‌ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಈಗ ಟಾಲಿವುಡ್‌ನಲ್ಲಿ ಈ ಸಿನಿಮಾದ ಓಟಿಟಿ ರೈಟ್ಸ್ ಬಗ್ಗೆ ಭಾರೀ ಸುದ್ದಿಯಾಗುತ್ತಿದೆ.

ಮುಂದೆ ಓದಿ

ಬಾಲಕೃಷ್ಣ ನಟನೆಯ 'ಅಖಂಡ 2' ದಾಖಲೆ ಮೊತ್ತಕ್ಕೆ ಸೇಲ್
ಬಾಲಕೃಷ್ಣ-ಬೋಯಪಾಟಿ ಶ್ರೀನು ಮತ್ತೊಂದು ಕಾಂಬಿನೇಷನ್
ಓಟಿಟಿಯಲ್ಲಿ ಭಾರೀ ಬ್ಯುಸಿನೆಸ್ ಮಾಡಿದ 'ಅಖಂಡ 2'
'ಅಖಂಡ 2' ಸಿನಿಮಾವನ್ನು ಭಾರೀ ಮೊತ್ತಕ್ಕೆ ಖರೀದಿಸಿದ ನೆಟ್‌ಫ್ಲಿಕ್ಸ್

'ಅಖಂಡ 2' ಈ ವರ್ಷದ ಟಾಲಿವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ. ಇದೇ ದಸರಾ ಹಬ್ಬಕ್ಕೆ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ಹೊರಟಿತ್ತು. ಆದರೆ, ಅದೇ ದಿನ ಪವನ್‌ ಕಲ್ಯಾಣ್ ನಟನೆಯ 'ಓಜಿ' ಸಿನಿಮಾ ರಿಲೀಸ್ ಆಗುತ್ತಿದ್ದರಿಂದ ಬಿಡುಗಡೆಯನ್ನು ಮುಂದೂಡಲಾಗಿದೆ. ಡಿಸೆಂಬರ್‌ನಲ್ಲಿ ಬಾಲಕೃಷ್ಣ ಸಿನಿಮಾ ಅಖಾಡಕ್ಕೆ ಇಳಿಯುತ್ತಿದೆ. ಎಸ್. ಥಮನ್ ಸಂಗೀತ ಸಂಯೋಜನೆ ಮಾಡಿರುವ ಈ ಸಿನಿಮಾ ಮೇಲೆ ನಿರೀಕ್ಷೆಯಿದೆ. ಈ ಸಿನಿಮಾದಲ್ಲಿ ಬಾಲಕೃಷ್ಣ ಜೊತೆ ಪ್ರಗ್ಯಾ ಜೈಸ್ವಾಲ್ ಮತ್ತು ಸಂಯುಕ್ತ ಮೆನನ್ ನಾಯಕಿಯರಾಗಿದ್ದರೆ, ಆದಿ ಪಿನ್ನಿಶೆಟ್ಟಿ ಮತ್ತು ಬಾಲಿವುಡ್ ನಟ ಸಂಜಯ್ ದತ್ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಾರೆಂಬ ಸುದ್ದಿಯಿದೆ.

Netflix Acquires Nandamuri Balakrishna s Akhanda 2 OTT Rights Release Date and Details

'ಅಖಂಡ 2' ಹೆಚ್ಚಿದ ಬೇಡಿಕೆ

ಬಾಲಕೃಷ್ಣ ಹಾಗೂ ಬೋಯಪಾಟಿ ಶ್ರೀನು ಕಾಂಬಿನೇಷನ್‌ನಲ್ಲಿ ಬಂದಿದ್ದ 'ಅಖಂಡ' ಸೂಪರ್‌ ಹಿಟ್ ಆಗಿತ್ತು. ವಿತರಕರಿಗೆ ಈ ಸಿನಿಮಾ ಒಳ್ಳೆಯ ಲಾಭವನ್ನೇ ತಂದುಕೊಟ್ಟಿತ್ತು. ಹೀಗಾಗಿ 'ಅಖಂಡ 2' ಮೇಲೆ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಹೀಗಾಗಿ ಸಿನಿಮಾ ಅನೌನ್ಸ್ ಆಗುವಾಗಲೇ ಪ್ರಿ-ರಿಲೀಸ್ ವ್ಯಾಪಾರದಲ್ಲಿ ಮಾಡುವುದಕ್ಕೆ ಶುರು ಮಾಡಿತ್ತು. ಸಿನಿಮಾದ ಥಿಯೇಟ್ರಿಕಲ್, ಸ್ಯಾಟಲೈಟ್ ಹಾಗೂ ಓಟಿಟಿ ಹಕ್ಕುಗಳನ್ನು ಪಡೆಯಲು ದೊಡ್ಡ ಸಂಸ್ಥೆಗಳು ಸಾಲುಗಟ್ಟಿ ನಿಂತಿದ್ದು, ದೊಡ್ಡ ಮೊತ್ತಕ್ಕೆ ವ್ಯಾಪಾರ ಮಾತುಕತೆ ನಡೆಯುತ್ತಿದೆ ಎನ್ನಲಾಗುತ್ತಿದೆ.

'ಅಖಂಡ 2' ಓಟಿಟಿ ರೈಟ್ಸ್

ಇನ್ನು 'ಅಖಂಡ 2' ಖರೀದಿಗೆ ಓಟಿಟಿ ಸಂಸ್ಥೆಗಳು ಕೂಡ ಭಾರೀ ಪೈಪೋಟಿ ನಡೆಸಿದ್ದವು. ಅದರಲ್ಲಿ ನೆಟ್‌ಫ್ಲಿಕ್ಸ್ 'ಅಖಂಡ 2' ಸಿನಿಮಾವನ್ನು ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದೆ ಎಂದು ಹೇಳಲಾಗಿದೆ. ಸುಮಾರು ₹80 ಕೋಟಿಗೆ ಡೀಲ್ ಫೈನಲ್ ಮಾಡಿದೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಬಾಲಕೃಷ್ಣ ನಟಿಸಿದ ಈ ಸಿನಿಮಾ ಬಗ್ಗೆ ಕ್ರೇಜ್ ಇರುವುದರಿಂದ ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾ ಬಾಲಕೃಷ್ಣ ಅವರ ವೃತ್ತಿ ಜೀವನದಲ್ಲಿ ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿದ್ದು ಇದೇ ಮೊದಲು ಎನ್ನಲಾಗುತ್ತಿದೆ. ಇನ್ನು ಚಿತ್ರಮಂದಿರದಲ್ಲಿ ಹೇಗೆ ಸದ್ದು ಮಾಡುತ್ತೆ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

More from Filmibeat

English summary
Netflix has officially acquired the OTT rights of Nandamuri Balakrishna’s much-awaited film Akhanda 2. Here’s the expected OTT release date, streaming details.
Read more about: balakrishna telugu movie akhanda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X