ಅಮೆಜಾನ್ ಪ್ರೈಂ, ಜೀ 5, ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಈ ವಾರ ಭರಪೂರ ಮನರಂಜನೆ
ವೀಕೆಂಡ್ ಬಂತು ಅಂದರೆ, ಎಲ್ಲರ ಗಮನ ಒಟಿಟಿ ಕಡೆ ವಾಲುತ್ತೆ. ಅದರಲ್ಲೂ ಭಾರತದಲ್ಲಿ ಒಟಿಟಿ ನೀಡುತ್ತಿರುವ ಮನರಂಜನೆಗೆ ಜನರು ಹೆಚ್ಚು ಒತ್ತು ಒಕೊಡುತ್ತಿದ್ದಾರೆ. ಈ ಕಾರಣಕ್ಕೆ ಅಮೆಜಾನ್ ಪ್ರೈಂ, ಜೀ 5, ಡಿಸ್ನಿ+ಹಾಟ್‌ಸ್ಟಾರ್, ಸೋನಿ ಲೈವ್, ಆಹಾ ಸೇರಿದಂತೆ ದೊಡ್ಡ ದೊಡ್ಡ ಒಟಿಟಿ ಸಂಸ್ಥೆಗಳು ಪ್ರತಿ ವಾರ ಪೈಪೋಟಿಗೆ ಇಳಿಯುತ್ತವೆ. ಹೊಸ ಹೊಸ ವೆಬ್ ಸೀರಿಸ್ ಹಾಗೂ ಸಿನಿಮಾಗಳನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುತ್ತವೆ.
ಪ್ರತಿ ವಾರದಂತೆ ಈ ವೀಕೆಂಡ್‌ನಲ್ಲೂ ಒಟಿಟಿಗಳು ಕಾಂಪಿಟೇಷನ್‌ಗೆ ಬಿದ್ದಿವೆ. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಂ ಅಂತ ದೈತ್ಯ ಒಟಿಟಿ ಸಂಸ್ಥೆಗಳು ಅತೀ ಹೆಚ್ಚು ಕಂಟೆಂಟ್‌ಗಳನ್ನು ರೆಡಿ ಮಾಡಿಟ್ಟುಕೊಳ್ಳುತ್ತಿದೆ. ಇದರೊಂದಿಗೆ ಜೀ 5, ಡಿಸ್ನಿ+ಹಾಟ್‌ಸ್ಟಾರ್, ಸೋನಿ ಲೈವ್, ಆಹಾ ಕೂಡ ಇವುಗಳಿಗೆ ಖಡಕ್ ಪೈಪೋಟಿಯನ್ನೇ ನೀಡುತ್ತಿದೆ. ಹಾಗಿದ್ದರೆ, ಈ ವೀಕೆಂಡ್‌ನಲ್ಲಿ ಸಿನಿಪ್ರಿಯರು ನೋಡಬಹುದಾದ ವೆಬ್ ಸಿರೀಸ್ ಹಾಗೂ ಸಿನಿಮಾಗಳ ಪಟ್ಟಿ ಇಲ್ಲಿದೆ.

ರುದ್ರ
ಈ ವೀಕೆಂಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ವೆಬ್ ಸಿರೀಸ್ 'ರುದ್ರ'. ಅಜಯ್ ದೇವಗನ್ ಈ ವೆಬ್ ಸಿರೀಸ್‌ನ ಪ್ರಮುಖ ಆಕರ್ಷಣೆ. ಮಾರ್ಚ್ 4 ರಿಂದ ಈ ವೆಬ್ ಸಿರೀಸ್ ಪ್ರಿಮಿಯರ್ ಆಗುತ್ತಿದೆ. ಇದು ಬ್ರಿಟಿಷ್ ಕಿರುತೆರೆಯ ಪ್ರಸಿದ್ಧ ಸೈಕಾಲಜಿಕಲ್ ಕ್ರೈಂ ಥ್ರಿಲ್ಲರ್ 'ಲೂಥರ್' ಅನ್ನು ಆಧರಿಸಿದ ವೆಬ್ ಸಿರೀಸ್. ಅಜಯ್ ದೇವಗನ್ ಇಶಾ ಡಿಯೋಲ್, ರಾಶಿ ಖನ್ನಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬೈನಲ್ಲಿ ಅಡಗಿ ಕೂತಿರುವ ಚಾಣಾಕ್ಷ ಕ್ರಿಮಿನಲ್‌ಗಳನ್ನು ಹುಡುಕಿ ತೆಗೆಯುವ ಕಥೆಯೇ 'ರುದ್ರ' ವೆಬ್ ಸಿರೀಸ್‌ನ ಹೈಲೈಟ್. ಈ ವೀಕೆಂಡ್‌ಗೆ 'ರುದ್ರ' ಉತ್ತಮ ಆಯ್ಕೆ.

ಅನ್‌ದೇಖಿ
ಸೋನಿ ಲೈವ್ ಒಟಿಟಿಯಲ್ಲಿ ಅತೀ ಯಶಸ್ಸು ಕಂಡ ವೆಬ್ ಸಿರೀಸ್ 'ಅನ್‌ದೇಖಿ'. ಮೊದಲ ಸೀಸನ್ ಸೂಪರ್ ಡೂಪರ್ ಹಿಟ್ ಆಗಿತ್ತು. ಈಗ ಸೆಕೆಂಡ್ ಸೀಸನ್ ರಿಲೀಸ್ ಆಗಿದೆ. ಸಿದ್ಧಾರ್ಥ್ ಸೇನ್‌ಗುಪ್ತಾ ಅವರ ಫೇಮಸ್ ಥ್ರಿಲ್ಲರ್ ಡ್ರಾಮದಲ್ಲಿ ಡಿಬ್ಯೆಂದು ಭಟ್ಟಾಚಾರ್ಯ, ಸೂರ್ಯ ಶರ್ಮಾ, ಹರ್ಷ್ ಛಾಯಾ ಹಾಗೂ ಅಂಕೂರ್ ರಾಥೆ ನಟಿಸಿದ್ದಾರೆ. ನೈಜ ಘಟನೆಗಳನ್ನು ಆಧರಿಸಿದ ಈ ಸಿರೀಸ್ ಅನ್ನು ನಿರ್ಮಾಣ ಮಾಡಲಾಗಿದೆ. ಥ್ರಿಲ್ಲರ್ ಸ್ಟೋರಿ ಇಷ್ಟ ಪಡುವವರಿಗೆ ಈ ವೆಬ್ ಸಿರೀಸ್ ಸಖತ್ ಮನರಂಜನೆ ನೀಡಬಹುದು.

ಸುಟ್ಲಿಯಾನ್
'ಸುಟ್ಲಿಯಾನ್' ಜೀ 5ನಲ್ಲಿ ಮಾರ್ಚ್ 4ರಂದು ರಿಲೀಸ್ ಆಗಿದೆ. ಇದು ಹಾರ್ಟ್ ಟಚ್ಚಿಂಗ್ ಸನ್ನಿವೇಶಗಳನ್ನು ಇಟ್ಟುಕೊಂಡು ಕಟ್ಟಿರುವ ಕಥೆ. ವೈಯಕ್ತಿಕ ವಿಚಾರಗಳು, ಫ್ಯಾಮಿಲಿ ಸಮಸ್ಯೆಗಳನ್ನು ಇದರಲ್ಲಿ ಬಿಂಬಿಸಲಾಗಿದೆ. ಇದರೊಂದಿಗೆ ಕಾಮಿಡಿ ಸನ್ನಿವೇಶಗಳು ಕೂಡ ಇವೆ. ಕುಟುಂಬದ ಸದಸ್ಯರು ದೀಪಾವಳಿ ಹಬ್ಬಕ್ಕೆ ಬಾಲ್ಯ ಕಳೆದ ಮನೆಯೊಂದರಲ್ಲಿ ಒಂದಾಗುತ್ತಾರೆ. ಅಲ್ಲಿಂದ ಕಥೆ ಮುಂದೆ ಸಾಗುತ್ತೆ. ಆಯೇಷಾ, ಶಿವ್ ಪಂಡಿತ್, ವಿವಾನ್ ಶಾ ನಟಿಸಿದ್ದಾರೆ.
'ನೋ ಟೈಮ್ ಟು ಡೈ'
ಅಮೆಜಾನ್ ಪ್ರೈಂನಲ್ಲಿ ಈ ವಾರ ವೆಬ್ ಸಿರೀಸ್‌ಗಳು ರಿಲೀಸ್ ಆಗುತ್ತಿಲ್ಲ. ಬದಲಾಗಿದೆ ಕಳೆದ ವರ್ಷ ರಿಲೀಸ್ ಆಗಿದ್ದ ಬಾಂಡ್ ಸಿನಿಮಾ 'ನೋ ಟೈಮ್ ಟು ಡೈ' ಬಿಡುಗಡೆಯಾಗಿದೆ. ಇದು ಜೇಮ್ಸ್ ಬಾಂಡ್ ಸಿರೀಸ್‌ನ 25ನೇ ಸಿನಿಮಾ. 2021ರಲ್ಲಿ ತೆರೆಕಂಡು 700 ಮಿಲಿಯನ್ ಡಾಲರ್ ಹಣವನ್ನು ಕಲೆಹಾಕಿತ್ತು.

ಜೀ 5 'ಒಬ್ಬ'
ತಮಿಳು ನಟ ವಿಶಾಲ್ ನಟಿಸಿದ 'ವೀರಮೆ ವಾಗೈ ಸೂಡುಂ' ತಮಿಳು ಸಿನಿಮಾ ನೇರವಾಗಿ ಜೀ 5 ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಇದೇ ಸಿನಿಮಾ ಕನ್ನಡಕ್ಕೆ ಡಬ್ ಆಗಿ 'ಒಬ್ಬ' ಎಂಬ ಟೈಟಲ್‌ನಲ್ಲಿ ರಿಲೀಸ್ ಆಗುತ್ತಿದೆ. ಹಾಗೇ ತೆಲುಗಿನಲ್ಲಿ 'ಸಾಮಾನ್ಯುಡು' ಎಬ ಶೀರ್ಷಿಕೆಯಲ್ಲಿ ರಿಲೀಸ್ ಆಗುತ್ತಿದೆ.


Click it and Unblock the Notifications











