Tillu Square OTT: ಹಿಸ್ಟರಿ, ಮಿಸ್ಟರಿ, ಕೆಮಿಸ್ಟ್ರಿ.. 'ಟಿಲ್ಲು ಸ್ಕ್ವೇರ್‌' ಓಟಿಟಿಗೆ ಎಂಟ್ರಿ

ಟಾಲಿವುಡ್‌ನಲ್ಲಿ ಸೀಕ್ವೆಲ್ ಸಿನಿಮಾಗಳು ಹೆಚ್ಚಾಗುತ್ತಿವೆ. 'ಪುಷ್ಪ 2'ಗೂ ಮುನ್ನ ಮತ್ತೊಂದು ಸೀಕ್ವೆಲ್ ಸಿನಿಮಾ ರಿಲೀಸ್ ಆಗಿತ್ತು. ಅದುವೇ 'ಟಿಲ್ಲು ಸ್ಕ್ವೇರ್'. ಈ ಸಿನಿಮಾ ಟಾಲಿವುಡ್ ಬಾಕ್ಸಾಫೀಸ್ ಮಸ್ತ್ ಕಲೆಕ್ಷನ್ ಮಾಡಿದೆ. ಟೈಯರ್ 2 ಹೀರೊ ಗಲ್ಲಾ ಪೆಟ್ಟಿಯಲ್ಲಿ ಗುಲ್ಲೆಬ್ಬಿಸಿದ್ದು, ಈ ನಟನ ಬಗ್ಗೆ ಕ್ರೇಜ್ ಹೆಚ್ಚಾಗಿದೆ.

2022ರಲ್ಲಿ 'ಡಿಜೆ ಟಿಲ್ಲು' ಸಿನಿಮಾ ಟಾಲಿವುಡ್ ಮಂದಿಗೆ ಶಾಕ್ ಕೊಟ್ಟಿತ್ತು. 8 ಕೋಟಿ ರೂಪಾಯಿಯಲ್ಲಿ ನಿರ್ಮಾಣಗೊಂಡಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ 30 ಕೋಟಿ ರೂಪಾಯಿ ಲೂಟಿ ಮಾಡಿತ್ತು. ಈ ಸಿನಿಮಾಗೂ ಮುನ್ನ ಹೀರೊ ಸಿದ್ದು ಜೊನ್ನಗಡ್ಡ ಹಲವು ಸಿನಿಮಾಗಳಲ್ಲಿ ನಟಿಸಿದ್ದರೂ ಈ ಮಟ್ಟಿಗೆ ಸದ್ದು ಮಾಡಿರಲಿಲ್ಲ. ಹೀಗಾಗಿ 'ಡಿಜೆ ಟಿಲ್ಲು' ಸಕ್ಸಸ್ ಬೆನ್ನಲ್ಲೇ 'ಟಿಲ್ಲು ಸ್ಕ್ವೇರ್'ಗೆ ಕೈ ಹಾಕಿದ್ದರು.

Tillu Square releasing on Netflix

'ಟಿಲ್ಲು ಸ್ಕ್ವೇರ್' 2024, ಮಾರ್ಚ್ 29ರಂದು ರಿಲೀಸ್ ಆಗಿತ್ತು. ಮೊದಲ ದಿನವೇ ಪ್ರೇಕ್ಷಕರು ಮಸ್ತ್ ಆಗಿ ರಿವ್ಯೂ ಕೊಟ್ಟಿದ್ದರು. ಅಲ್ಲಿಂದ ಮತ್ತೆಂದೂ ಈ ಸಿನಿಮಾ ಕುಗ್ಗಿದ್ದೇ ಇಲ್ಲ. 'ಡಿಜೆ ಟಿಲ್ಲು' 30 ಕೋಟಿ ರೂಪಾಯಿ ಲೂಟಿ ಮಾಡಿದ್ದರೆ, 'ಟಿಲ್ಲು ಸ್ಕ್ವೇರ್' ಬಾಕ್ಸಾಫೀಸ್‌ನಲ್ಲಿ ಬರೋಬ್ಬರು 125 ಕೋಟಿ ರೂಪಾಯಿ ದೋಚಿದೆ. ಈ ವರ್ಷದ ಟಾಲಿವುಡ್‌ನ ಮೋಸ್ಟ್ ಸಕ್ಸಸ್‌ಫುಲ್ ಸಿನಿಮಾ ಎನಿಸಿಕೊಂಡಿದೆ.

ಸಿದ್ದು ಜೊನ್ನಲಗಡ್ಡ ಹಾಗೂ ಅನುಪಮಾ ಪರಮೇಶ್ವರನ್ ಕಾಂಬಿನೇಷನ್‌ನಲ್ಲಿ ನಟಿಸಿರುವ ಈ ಸಿನಿಮಾ ಸಕಸ್ಸ್ ಟಾಲಿವುಡ್ ಮಂದಿಗೆ ಅಚ್ಚರಿ ಮೂಡಿಸಿದೆ. ಎರಡನೇ ದರ್ಜೆಯ ಹೀರೋ ಸಿನಿಮಾ 100 ಕೋಟಿ ಕ್ಲಬ್ ಸೇರಿದ್ದು, ಸ್ಟಾರ್ ಪಟ್ಟಕ್ಕೆ ಬಡ್ತಿ ಪಡೆದಂತೆ ಆಗಿದೆ. ಈ ಮಟ್ಟಿಗೆ ಸದ್ದು ಮಾಡಿದ ಸಿನಿಮಾ ಓಟಿಟಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ.

ಈಗಾಗಲೇ ತೆಲುಗು ಮಂದಿ 'ಟಿಲ್ಲು ಸ್ಕ್ವೇರ್' ಸಿನಿಮಾವನ್ನು ಚಿತ್ರಮಂದಿರದಲ್ಲಿ ವೀಕ್ಷಣೆ ಮಾಡಿದ್ದಾರೆ. ಆದರೂ ಓಟಿಟಿಯಲ್ಲಿ ಮತ್ತೊಮ್ಮೆ ಸಿನಿಮಾವನ್ನು ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಮಹೇಶ್ ಬಾಬು ಸಿನಿಮಾ 'ಗುಂಟೂರು ಖಾರಂ' ಹಾಗೂ ಪ್ರಭಾಸ್ ಸಿನಿಮಾ 'ಸಲಾರ್'ಗೆ ಥಿಯೇಟರ್ ಹಾಗೂ ಓಟಿಟಿ ಎರಡರಲ್ಲೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಹೀಗಾಗಿ 'ಟಿಲ್ಲು ಸ್ಕ್ವೇರ್'ಗೂ ಪ್ರತಿಕ್ರಿಯೆ ಚೆನ್ನಾಗಿರುತ್ತೆ ಎಂದೇ ಭಾವಿಸಲಾಗಿದೆ.

ಓಟಿಟಿ ವೇದಿಕೆ ನೆಟ್‌ಫ್ಲಿಕ್ಸ್ 'ಟಿಲ್ಲು ಸ್ಕ್ವೇರ್' ಸಿನಿಮಾ ಖರೀದಿ ಮಾಡಿದೆ. ತನ್ನ ಅಫಿಶಿಯಲ್ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಏಪ್ರಿಲ್ 26ಕ್ಕೆ 'ಟಿಲ್ಲು ಸ್ಕ್ವೇರ್' ರಿಲೀಸ್ ಆಗುವುದಾಗಿ ಅನೌನ್ಸ್ ಮಾಡಿದೆ. ಈ ಸಿನಿಮಾ, ತೆಲುಗು ಸೇರಿದಂತೆ ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ.

'ಟಿಲ್ಲು ಸ್ಕ್ವೇರ್' ಸಿನಿಮಾ ಕ್ರೈಂ ಹಾಗೂ ಕಾಮಿಡಿಯ ಕಾಂಬಿನೇಷನ್. ಹೀಗಾಗಿ ಪ್ರೇಕ್ಷಕರಿಗೆ ಥ್ರಿಲ್ ಹಾಗೂ ಮನರಂಜನೆ ಎರಡೂ ಸಿಗಲಿದೆ. ಟಿಲ್ಲು ಪಾತ್ರದಲ್ಲಿ ಸಿದ್ದು ಜೊನ್ನಲಗಡ್ಡ ನಟಿಸಿದ್ದರೆ, ಲಿಲ್ಲಿ ಪಾತ್ರದಲ್ಲಿ ಅನುಪಮಾ ಪರಮೇಶ್ವರನ್ ಕಾಣಿಸಿಕೊಂಡಿದ್ದಾರೆ. ಇವರ ಪಾತ್ರಕ್ಕೂ ಪ್ರೇಕ್ಷಕರು ಭೇಷ್ ಎಂದಿದ್ದಾರೆ. ಇವರೊಂದಿಗೆ ನೇಹಾ ಶೆಟ್ಟಿ, ಮುರಳಿಧರ್ ಗೌಡ್, ಮುರಳಿ ಶರ್ಮಾ ಸೇರಿದಂತೆ ಹಲವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Netflix announced Siddhu Jonnalagadda Anupama Parameswaran movie Tillu Square release date
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X