Dhurandhar 2 On Netflix: ನೆಟ್‌ಫ್ಲಿಕ್ಸ್‌ನಲ್ಲಿ ಕತ್ತರಿ ಹಾಕದ 'ಧುರಂಧರ್ 2'.. ಎಷ್ಟೋತ್ತು ಸಿನಿಮಾ ನೋಡ್ಬೇಕು?
ರಣ್‌ವೀರ್ ಸಿಂಗ್ ಹಾಗೂ ಆದಿತ್ಯ ಧರ್ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ 'ಧುರಂಧರ್ 2' ಸಿನಿಮಾವನ್ನು ಪ್ರೇಕ್ಷಕರು ಥಿಯೇಟರ್‌ನಲ್ಲಿ ಮುಗಿಬಿದ್ದು ನೋಡಿದ್ದರು. ಬಾಕ್ಸಾಫೀಸ್‌ನಲ್ಲಿ ಸಿನಿಮಾ ಸಾವಿರಾರು ಕೋಟಿ ಲೂಟಿ ಮಾಡಿ, ಈಗ ಓಟಿಟಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿ ನಿಂತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಓಟಿಟಿಯಲ್ಲಿ ಮತ್ತೆ ಸಿನಿಮಾ ನೋಡಿ ಎಂಜಾಯ್ ಮಾಡಬಹುದು.
ಬಹುತೇಕ ಮಂದಿ ಈಗಾಗಲೇ 'ಧುರಂಧರ್ 2' ಅನ್ನು ಥಿಯೇಟರ್‌ಗಳಲ್ಲಿ ನೋಡಿ ಎಂಜಾಯ್ ಮಾಡಿದ್ದಾರೆ. ಹೀಗಿದ್ಮೇಲೆ ಓಟಿಟಿಯಲ್ಲಿ ಮತ್ಯಾಕೆ ನೋಡಬೇಕು? ಅದಕ್ಕೆ ಸಿನಿಮಾ ಟೀಮ್ ಹಾಗೂ ನೆಟ್‌ಫ್ಲಿಕ್ಸ್ ಜಂಟಿಯಾಗಿ ಮಾಸ್ಟರ್ ಪ್ಲಾನ್ ಮಾಡಿದೆ. ವೀಕ್ಷಕರಿಗೆ ಸರ್ಪ್ರೈಸ್ ಕೊಡುವುದಕ್ಕೆ ಮುಂದಾಗಿದೆ. ಓಟಿಟಿಯಲ್ಲಿ 'ಧುರಂಧರ್ 2' ನೋಡುವರಿಗೆ ಅನ್‌ಕಟ್ ವರ್ಷನ್ ಇರುತ್ತೆ ಅಂತ ನೆಟ್‌ಫ್ಲಿಕ್ಸ್ ಹೇಳಿಕೊಂಡಿದೆ.

'ಧುರಂಧರ್ 2' ರಿಲೀಸ್ ಆಗಿ ಎಂಟು ವಾರಗಳು ಕಳೆದಿವೆ. ಹೀಗಾಗಿ ಓಟಿಟಿ ಪ್ಲಾಟ್‌ಫಾರ್ಮ್‌ಗಳು ಸಿನಿಮಾವನ್ನು ಸ್ಟ್ರೀಮಿಂಗ್ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿವೆ. ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾ ಮೇ 14 ರಿಂದ ಸ್ಟ್ರೀಮಿಂಗ್ ಆಗುತ್ತಿದೆ. ಆದರೆ, ಇಲ್ಲೊಂದು ಟ್ವಿಸ್ಟ್ ಇದೆ. ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುವ 'ಧುರಂಧರ್ 2' ಅಂತರಾಷ್ಟ್ರೀಯ ಆಡಿಯನ್ಸ್‌ಗಷ್ಟೇ ಲಭ್ಯ. ಭಾರತೀಯರಿಗೆ ಸಿನಿಮಾ ನೋಡುವುದಕ್ಕೆ ಅವಕಾಶವಿಲ್ಲ. ಹಾಗಿದ್ದರೆ, ಏನಿದು ಗೊಂದಲ? ತಿಳಿಯಲು ಮುಂದೆ ಓದಿ.
ಭಾರತದಲ್ಲಿ ಯಾಕಿಲ್ಲ?
ಹೌದು, 'ಧುರಂಧರ್ 2' ಮೇ 14ಕ್ಕೆ ರಿಲೀಸ್ ಆಗೋದು ಕನ್ಫರ್ಮ್ ಆಗಿದೆ. ನೆಟ್‌ಫ್ಲಿಕ್ಸ್ ಅಧಿಕೃತವಾಗಿ ಈ ವಿಷಯವನ್ನು ರಿವೀಲ್ ಮಾಡಿದೆ. ಆದರೆ, ಭಾರತವನ್ನು ಹೊರತು ಪಡಿಸಿ, ವಿದೇಶಗಳಲ್ಲಿ ಸ್ಟ್ರೀಮಿಂಗ್ ಆಗಲಿದೆ. ಕೆಲವು ದೇಶಗಳಲ್ಲಿ ಮೇ 14ರಿಂದಲೇ ಸಿನಿಮಾ ನೋಡುವುದಕ್ಕೆ ಸಿಕ್ಕರೆ, ಇನ್ನು ಕೆಲವು ದೇಶಗಳಲ್ಲಿ ಮೇ 15 ರಿಂದ ಸಿನಿಮಾ ನೋಡಬಹುದಾಗಿದೆ.
"Raw and Undekha" ವರ್ಷನ್
ನೆಟ್‌ಫ್ಲಿಕ್ಸ್ ಈಗಾಗಲೇ "Raw and Undekha" ವರ್ಷನ್ ಎಂದು ಘೋಷಣೆ ಮಾಡಿದೆ. ಹೀಗಾಗಿ ವಿದೇಶಿ ಆಡಿಯನ್ಸ್‌ಗೆ 'ರಾ' ವರ್ಷನ್ ಎಷ್ಟರ ಮಟ್ಟಿಗೆ ಇಷ್ಟ ಆಗುತ್ತೆ ಅನ್ನೋದು ನೋಡಬೇಕಿದೆ. ಥಿಯೇಟರ್‌ನಲ್ಲೂ ನೋಡಿರದ ದೃಶ್ಯಗಳನ್ನು ಇಲ್ಲಿ ಸೇರಿಸಲಾಗಿದೆ. ಥಿಯೇಟರ್ ವರ್ಷನ್ ರನ್ ಟೈಮ್ ಸುಮಾರು 3.42 ಗಂಟೆ ಇತ್ತು. ಆದರೆ, ಓಟಿಟಿ ವರ್ಷನ್ ಸುಮಾರು 3.52 ಗಂಟೆ ಇರಲಿದೆ ಎಂದು ಹೇಳಲಾಗುತ್ತಿದೆ. ಅಂದರೆ, ಇನ್ನೂ 3 ನಿಮಿಷಗಳು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಹೀಗಾಗಿ ಸಿನಿಮಾ ಮತ್ತೂ ದೊಡ್ಡದಾಗಿದೆ.

ಜಿಯೋಹಾಟ್ ಸ್ಟಾರ್‌ನಲ್ಲೂ 'ಧುರಂಧರ್ 2'?
ಇದರೊಂದಿಗೆ ಇನ್ನೊಂದು ಸುದ್ದಿ ಕೂಡ ಓಡಾಡುತ್ತಿದೆ. 'ಧುರಂಧರ್ 2' ಅನ್ನು ನೆಟ್fಫ್ಲಿಕ್ಸ್ ವಿದೇಶದಲ್ಲಿ ಸ್ಟ್ರೀಮಿಂಗ್ ಮಾಡಿದರೆ, ಭಾರತದಲ್ಲಿ ಜಿಯೋ ಹಾಟ್‌ಸ್ಟಾರ್ ಸ್ಟ್ರೀಮಿಂಗ್ ಮಾಡುತ್ತಿದೆ ಅನ್ನೋ ಸುದ್ದಿನೂ ಓಡಾಡುತ್ತಿದೆ. ಆದರೆ, ಸಿನಿಮಾ ಟೀಮ್ ಅಧಿಕೃತವಾಗಿ ಎಲ್ಲೂ ಹೇಳಿಕೆಯನ್ನು ಕೊಟ್ಟಿಲ್ಲ. ಹೀಗಾಗಿ ಭಾರತದಲ್ಲಿ ಓಟಿಟಿ ರಿಲೀಸ್ ಬಗ್ಗೆ ಅಧಿಕೃತ ದಿನ ಇನ್ನೂ ಗೊತ್ತಾಗಿಲ್ಲ.
'ಧುರಂಧರ್ 2' ಹೈಲೈಟ್ಸ್
'ಧುರಂಧರ್ 2' ಸಿನಿಮಾದಲ್ಲಿ ರಣ್‌ವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ರೆ, ಇವರೊಂದಿಗೆ ಸಾರಾ ಅರ್ಜುನ್, ಅರ್ಜುನ್ ರಾಮ್‌ಪಾಲ್, ಆರ್.ಮಾಧವನ್, ಸಂಜಯ್ ದತ್ ಸೇರಿದಂತೆ ದೊಡ್ಡ ಸ್ಟಾರ್‌ಕಾಸ್ಟ್ ಈ ಸಿನಿಮಾದಲ್ಲಿ ಇದೆ. ಇದೊಂದು ಸ್ಪೈ, ಥ್ರಿಲ್ಲರ್ ಆಕ್ಷನ್ ಸಿನಿಮಾ ಆಗಿದ್ದು ಥಿಯೇಟರ್‌ನಲ್ಲಿ ಪ್ರೇಕ್ಷಕರು ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ.


Click it and Unblock the Notifications
