ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಇನ್ನೂ 17 ಹೊಸ ಚಿತ್ರಗಳ ಬಿಡುಗಡೆ: ಇಲ್ಲಿದೆ ಸಿನಿಮಾಗಳ ಪಟ್ಟಿ
ಬಾಲಿವುಡ್ ಸೇರಿದಂತೆ ವಿವಿಧ ಭಾಷೆಗಳ ಚಿತ್ರರಂಗದ ನಿರ್ಮಾಪಕರು ಸಿನಿಮಾ ಬಿಡುಗಡೆಗೆ ಒಟಿಟಿ ಪ್ಲಾಟ್ ಫಾರ್ಮ್ ಮೊರೆ ಹೋಗುತ್ತಿದ್ದಾರೆ. ದೊಡ್ಡ ಬಜೆಟ್‌ನ ಚಿತ್ರಗಳ ಮಾತ್ರ ಚಿತ್ರಮಂದಿರ ತೆರೆಯುವವರೆಗೂ ಕಾಯುವುದಾಗಿ ತಿಳಿಸಿವೆ. ಬಾಲಿವುಡ್‌ನಲ್ಲಿ ಅಮಿತಾಬ್ ಬಚ್ಚನ್ ಮತ್ತು ಆಯುಷ್ಮಾನ್ ಖುರಾನಾ ನಟನೆಯ 'ಗುಲಾಬೋ ಸಿತಾಬೋ' ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾದ ಬಳಿಕ ಇನ್ನಷ್ಟು ಹೊಸ ಚಿತ್ರಗಳು ಆಪ್ ಮೂಲಕವೇ ಪ್ರದರ್ಶನ ಕಾಣಲು ಸಾಲುಗಟ್ಟಿ ನಿಂತಿವೆ.
Recommended Video
ಅಮೆಜಾನ್ ಪ್ರೈಮ್ ಈಗಾಗಲೇ ಅನೇಕ ಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಮತ್ತಷ್ಟು ಸರದಿಯಲ್ಲಿವೆ. ಡಿಸ್ನಿ ಹಾಟ್ ಸ್ಟಾರ್ ಪ್ಲಸ್ ಕೂಡ ಕೆಲವು ಚಿತ್ರಗಳನ್ನು ಬಿಡುಗಡೆಯನ್ನು ಘೋಷಿಸಿದೆ. ಈ ನಡುವೆ ನೆಟ್‌ಫ್ಲಿಕ್ಸ್ ಇಂಡಿಯಾ 17 ಸಿನಿಮಾಗಳ ಬಿಡುಗಡೆಯನ್ನು ಪ್ರಕಟಿಸಿದ್ದು, ಅದರಲ್ಲಿ 12 ಹಿಂದಿ ಚಿತ್ರಗಳಿವೆ. ಮುಂದೆ ಓದಿ...

ಪ್ರಮುಖ ಕಲಾವಿದರ ಚಿತ್ರಗಳು
ಅಭಿಷೇಕ್ ಬಚ್ಚನ್, ರಾಜ್ ಕುಮಾರ್ ರಾವ್, ಆದಿತ್ಯ ರಾಯ್ ಕಪೂರ್, ಫಾತಿಮಾ ಸನಾ ಶೇಖ್, ಸಾನ್ಯಾ ಮಲ್ಹೋತ್ರಾ, ಪಂಕಜ್ ತ್ರಿಪಾಠಿ ಮತ್ತು ಪರ್ಲ್ ಮಾನೀ ನಟನೆಯ 'ಲುಡೋ' ಚಿತ್ರ, ಸಂಜಯ್ ದತ್ ನಟನೆಯ 'ತೊರ್ಬಾಜ್', ರಾಧಿಕಾ ಆಪ್ಟೆ, ನವಾಜುದ್ದಿನ್ ಸಿದ್ದಿಕಿ ಅಭಿನಯದ 'ರಾತ್ ಅಕೇಲಿ ಹೈ', ಕೊಂಕಣಾ ಸೇನ್ ಶರ್ಮಾ, ಭೂಮಿ ಪೆಡ್ನೇಕರ್ ನಟನೆಯ 'ಡಾಲಿ ಕಿಟ್ಟಿ ಔರ್ ವೋ ಚಮಕ್ತೆ ಸಿತಾರೆ', ಯಾಮಿ ಗೌತಮ್ ಮತ್ತು ವಿಕ್ರಾಂತ್ ಮಾಸಿ ನಟನೆಯ 'ಗಿನ್ನಿ ವೆಡ್ಸ್ ಸನ್ನಿ ಹಾಗೂ ಪ್ರಶಸ್ತಿ ಪುರಸ್ಕೃತ ಅನಿಮೇಟೆಡ್ ಚಿತ್ರ 'ಬಾಂಬೆ ರೋಸ್' ಬಿಡುಗಡೆಯಾಗಲಿವೆ.

ಜಾಹ್ನವಿ ಕಪೂರ್ ನಟನೆ ಚಿತ್ರ
ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್, ತ್ರಿಭಂಗ-ತೇದಿ ಮೇದಿ ಕ್ರೇಜಿ, ಕಾಲಿ ಕುಹಿ, ಸೀರಿಯಸ್ ಮೆನ್, ಕ್ಲಾಸ್ ಆಫ್ 83, ಎಕೆ ವರ್ಸಸ್ ಎಕೆ ಚಿತ್ರಗಳು ತೆರೆ ಕಾಣಲಿವೆ. ನೈಜ ಕಥೆಯಾಧರಿಸಿದ ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್' ಚಿತ್ರವನ್ನು ಶರಣ್ ಶರ್ಮಾ ನಿರ್ದೇಶಿಸಿದ್ದು, ವಾಯುಪಡೆ ಅಧಿಕಾರಿಯ ಪಾತ್ರದಲ್ಲಿ ಜಾಹ್ನವಿ ಕಪೂರ್ ಕಾಣಿಸಿಕೊಳ್ಳಲಿದ್ದಾರೆ.

ಡ್ರಾಮಾ ಸೀರೀಸ್ ಬಿಡುಗಡೆ
12 ಚಿತ್ರಗಳಲ್ಲದೆ ಐದು ಡ್ರಾಮಾ ಸೀರೀಸ್‌ಗಳು ಪ್ರಸಾರವಾಗಲಿವೆ. ಅದರಲ್ಲಿ ತಬು ಮತ್ತು ಇಶಾನ್ ಖಟ್ಟರ್ ನಟನೆಯ 'ಎ ಸೂಟಬಲ್ ಬಾಯ್' ಸೇರಿದೆ. 'ಮಸಾಬಾ ಮಸಾಬಾ', 'ಭಾಗ್ ಬೀನೀ ಭಾಗ್', 'ಬಾಂಬೆ ಬೇಗಮ್ಸ್' ಮತ್ತು 'ಮಿಸ್ ಮ್ಯಾಚ್ಡ್' ಉಳಿದ ನಾಲ್ಕು ಸೀರೀಸ್‌ಗಳಾಗಿವೆ.

ಡಿಸ್ನಿ ಪ್ಲಸ್ ಹಾಟ್‌ಸ್ಟಾರ್
ಈ ಚಿತ್ರಗಳ ಬಿಡುಗಡೆಯ ದಿನಾಂಕವನ್ನು ಇನ್ನೂ ಬಹಿರಂಗಪಡಿಸಿಲ್ಲ. ಇತ್ತೀಚೆಗೆ ಡಿಸ್ಲ್ನಿ ಪ್ಲಸ್ ಹಾಟ್‌ಸ್ಟಾರ್ ಏಳು ಚಿತ್ರಗಳ ಬಿಡುಗಡೆಯ ದಿನಾಂಕವನ್ನು ಪ್ರಕಟಿಸಿತ್ತು. ಅದರಲ್ಲಿ ಅಕ್ಷಯ್ ಕುಮಾರ್ ಅಭಿನಯದ 'ಲಕ್ಷ್ಮಿ ಬಾಂಬ್', ಆಲಿಯಾ ಭಟ್, ಸಂಜಯ್ ದತ್ ನಟನೆಯ 'ಸಡಕ್ 2' ಸೇರಿವೆ. ಸುಶಾಂತ್ ಸಿಂಗ್ ರಜಪೂತ್ ನಟಿಸಿದ ಕೊನೆಯ ಚಿತ್ರ 'ದಿಲ್ ಬೇಚಾರಾ' ಕೂಡ ಡಿಸ್ನಿಯಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications











