Extraction 2: 9 ತಿಂಗಳ ಬಳಿಕ ಕೋಮದಿಂದ ಎದ್ದು ಬಂದ ಟೈಲರ್ ರೇಕ್.. ಇನ್ನು ಬರೀ ಆಕ್ಷನ್!
ಓಟಿಟಿ ಸಂಸ್ಥೆಗಳು ಪೈಪೋಟಿಗೆ ಬಿದ್ದು ಸಿನಿಮಾ ನಿರ್ಮಾಣ ಮಾಡುತ್ತಿವೆ. ಒಂದೆರಡಲ್ಲ ನೂರಾರು ಕೋಟಿ ರೂಪಾಯಿ ಸುರಿದು ದುಬಾರಿ ಮಾಸ್ ಆಕ್ಷನ್ ಸಿನಿಮಾಗಳನ್ನು ನಿರ್ಮಿಸಿ ವೀಕ್ಷಕರ ಮುಂದೆ ಇಡುತ್ತಿದೆ. ಇವುಗಳಲ್ಲಿ ಕೆಲವಕ್ಕೆ ಸಕ್ಸಸ್ ಸಿಕ್ಕಿದೆ. ಮತ್ತೆ ಕೆಲವು ಸೋಲುಂಡಿವೆ.
ಮೂರು ವರ್ಷದ ಹಿಂದೆ (2020) ನೆಟ್‌ಫ್ಲಿಕ್ಸ್ ಹೈವೆಲ್ ಮಾಸ್ ಆಕ್ಷನ್ ಸಿನಿಮಾವನ್ನು ನಿರ್ಮಾಣ ಮಾಡಿತ್ತು. ಅದುವೇ 'ಎಕ್ಸ್‌ಟ್ರಾಕ್ಷನ್'. ಈ ಸಿನಿಮಾವನ್ನು ತನ್ನದೇ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ರಿಲೀಸ್ ಮಾಡಿತ್ತು. ಆ ಸಿನಿಮಾ ಓಟಿಟಿಯಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಆ ಯಶಸ್ಸಿನ ಬೆನ್ನಲ್ಲೇ 'ಎಕ್ಸ್‌ಟ್ರಾಕ್ಷನ್' ಸೀರಿಸ್ ಮಾಡಲು ಮುಂದಾಗಿತ್ತು. ಅದೇ ಸಿನಿಮಾದ ಟೀಸರ್ ಟ್ರೈಲರ್ ರಿಲೀಸ್ ಆಗಿದೆ.

'ಎಕ್ಸ್‌ಟ್ರಾಕ್ಷನ್ 2' ಟೀಸರ್ ಟ್ರೈಲರ್ ರಿಲೀಸ್
ನೆಟ್‌ಫ್ಲಿಕ್ಸ್ 'ಎಕ್ಸ್‌ಟ್ರಾಕ್ಷನ್ 2' ಅಂತಹ ಬಿಗ್ ಬಜೆಟ್ ಒರಿಜಿನಲ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಚಾಪ್ಟರ್ 1ರಲ್ಲಿ ಭಾರತ ಹಾಗೂ ಬಾಂಗ್ಲಾದೇಶದ ಹಿನ್ನೆಲೆಯಲ್ಲಿ ಸೆಟ್ಟೇರಿತ್ತು. ಇದರಲ್ಲಿ ಹಾಲಿವುಡ್‌ನ ಸ್ಟಾರ್ ನಟ ಕ್ರಿಸ್ ಹ್ಯಾಮ್ಸ್‌ವರ್ತ್ ನಟಿಸಿದ್ದರು. ಹಾಗೇ ಬಾಲಿವುಡ್ ನಟರಾದ ರಣ್‌ದೀಪ್ ಹೂಡ ಮತ್ತು ಪಂಕಜ್ ತ್ರಿಪಾಠಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
ಹಾಲಿವುಡ್‌ನ ಸ್ಟಾರ್ ನಿರ್ದೇಶಕರು ಏನಿಸಿಕೊಂಡಿರೋ ರುಸೋ ಬ್ರದರ್ಸ್ 'ಎಕ್ಸ್‌ಟ್ರಾಕ್ಷನ್' ಸಿನಿಮಾ ಕಥೆ ಕೊಟ್ಟು ನಿರ್ಮಾಣ ಮಾಡಿದ್ದರು. ಸ್ಯಾಮ್ ಹಾರ್ಗ್ರೇವ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಮೊದಲ ಪಾರ್ಟ್‌ಗೆ ಸಿಕ್ಕ ಯಶಸ್ಸಿನ ಬೆನ್ನಲ್ಲೇ ಪಾರ್ಟ್ 2 ನಿರ್ಮಾಣ ಮಾಡಲಾಗಿದೆ. ನೆಟ್‌ಫ್ಲಿಕ್ಸ್ ಅದೇ 'ಎಕ್ಸ್‌ಟ್ರಾಕ್ಷನ್ 2' ಟೀಸರ್ ಟ್ರೈಲರ್ ಅನ್ನು ರಿಲೀಸ್ ಮಾಡಿದೆ.
'ಎಕ್ಸ್‌ಟ್ರಾಕ್ಷನ್ 2' ಹೈಲೈಟ್ ಏನು?
'ಎಕ್ಸ್‌ಟ್ರಾಕ್ಷನ್' ಚಾಪ್ಟರ್ 1ನಲ್ಲಿ ಬದುಕಿನ ಟೈಲರ್ ರೇಕ್ (ಕ್ರಿಸ್ ಹ್ಯಾಮ್ಸ್‌ವರ್ತ್) ಕೋಮಗೆ ಜಾರಿರುತ್ತಾರೆ. ಸುಮಾರು 9 ತಿಂಗಳ ಬಳಿಕ ಕೋಮದಿಂದ ಹೊರಬರುವ ಟೈಲರ್ ರೇಕ್ ಹೊಸ ಮಿಷನ್‌ಗೆ ಸೇರಿಕೊಳ್ಳುತ್ತಾರೆ. ಆಸ್ಟ್ರೇಲಿಯಾದ ಬ್ಲಾಕ್ ಆಪರೇಷನ್ ಟೀಮ್ ಜೊತೆ ಕೈ ಜೋಡಿಸಿ, ಭಯಾನಕ ಮಿಷನ್‌ನಲ್ಲಿ ಭಾಗಿಯಾಗುತ್ತಾರೆ.

ಜೈಲಿನಲ್ಲಿರೋ ಜಾರ್ಜಿಯಾದ ದರೋಡೆಕೋರರಿಂದ ಹಲ್ಲೆಗೊಳಗಾದ ಕುಟುಂಬವನ್ನು ರಕ್ಷಿಸಲು ಮುಂದಾಗುತ್ತಾರೆ. ಇದು ಕೂಡ ಗ್ರಾಫಿಕ್ ನಾವೆಲ್ 'ಸಿಯುಡಾಡ್' ಅನ್ನೇ ಆಧರಿಸಿದೆ. ಈ ಕಾರಣಕ್ಕೆ 'ಎಕ್ಸ್‌ಟ್ರಾಕ್ಷನ್ 2' ಟೀಸರ್ ಟ್ರೈಲರ್ ಸಾಕಷ್ಟು ಕುತೂಹಲವನ್ನು ಕೆರಳಿಸುತ್ತಿದೆ. ಇನ್ನೂ ಬಿಡುಗಡೆ ಸಮಯದಲ್ಲಿ ಟೀಸರ್, ಟ್ರೈಲರ್ ರಿಲೀಸ್ ಆಗುವ ಸಾಧ್ಯತೆಯಿದೆ.
'ಎಕ್ಸ್‌ಟ್ರಾಕ್ಷನ್ 2' ರಿಲೀಸ್
'ಎಕ್ಸ್‌ಟ್ರಾಕ್ಷನ್ 2' ಟೀಸರ್ ಟ್ರೈಲರ್‌ನಲ್ಲಿ ಪವರ್ ಪ್ಯಾಕ್ ಆಕ್ಷನ್ ಸೀಕ್ವೆನ್ಸ್ ಹೇಗಿರುತ್ತೆ? ಅನ್ನೋದ ಝಲಕ್ ತೋರಿಸಲಾಗಿದೆ. ಕ್ರಿಸ್ ಹ್ಯಾಮ್ಸ್‌ವರ್ತ್ ಜೈಲಿನಲ್ಲಿ ಫೈಟ್ ಮಾಡುವ ದೃಶ್ಯಗಳು ಕಿಕ್ ಕೊಡುತ್ತಿವೆ. ಮೇಲ್ನೋಟಕ್ಕೆ ನೆಟ್‌ಫ್ಲಿಕ್ಸ್ ಪಕ್ಕಾ ಆಕ್ಷನ್ ಥ್ರಿಲ್ಲರ್ ರುಚಿಯನ್ನು ಈ ಸಿನಿಮಾದ ಮೂಲಕ ವೀಕ್ಷಕರಿಗೆ ತೋರಿಸಲು ಸಜ್ಜಾಗಿದೆ.
ಮೋಸ್ಟ್ ಎಕ್ಸ್‌ಪೆಕ್ಟೆಡ್ 'ಎಕ್ಸ್‌ಟ್ರಾಕ್ಷನ್ 2' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಜೂನ್ 16ರಂದು ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಕ್ರಿಸ್ ಹ್ಯಾಮ್ಸ್‌ವರ್ತ್ ಜೊತೆ ಆಡಮ್ ಬೆಸ್ಸಾ, ಓಲ್ಗಾ ಕುರಿಲೆಂಕೊ, ಡೇನಿಯಲ್ ಬರ್ನ್‌ಹಾರ್ಡ್ ಹಾಗೂ ಟಿನಾಟಿನ್ ದಲಕಿಶ್ವಿಲಿ ನಟಿಸಿದ್ದಾರೆ. ಇಂಗ್ಲಿಷ್, ಹಿಂದಿ, ತೆಲುಗು ,ತಮಿಳು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ.


Click it and Unblock the Notifications











