"ಐಶ್ವರ್ಯಾ ರೈ ದೇವತೆ, ಮಾಧುರಿ ದೀಕ್ಷಿತ್ ಕುಷ್ಠ ರೋಗವಿರುವ ವೇಶ್ಯೆ" ನೆಟ್‌ಫ್ಲಿಕ್ಸ್ ವಿರುದ್ಧ ಲೀಗಲ್ ನೋಟಿಸ್
ಓಟಿಟಿ ದೈತ್ಯ ನೆಟ್‌ಫ್ಲಿಕ್ಸ್ ವಿವಾದಕ್ಕೆ ಸಿಲುಕಿದೆ. ರಾಜಕೀಯ ವಿಶ್ಷೇಷಕ ಮಿಥುನ್ ವಿಜಯ್ ಕುಮಾರ್ ಎಂಬುವವರು ನೆಟ್‌ಫ್ಲಿಕ್ಸ್ ವಿರುದ್ಧ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಇತ್ತೀಚೆಗೆ ರಿಲೀಸ್ ಮಾಡಿದ್ದ ಜನಪ್ರಿಯ 'ಬಿಗ್ ಬಾಂಗ್ ಥಿಯೇಟರ್'ಯ ಒಂದು ಸಂಚಿಕೆಯನ್ನು ತೆಗೆದು ಹಾಕುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಅಲ್ಲದೆ 'ಬಿಗ್ ಬ್ಯಾಂಗ್ ಥಿಯೇರಿ' ಲಿಂಗಭೇದ ಹಾಗೂ ಸ್ತ್ರೀದ್ವೇಷವನ್ನು ಬಿತ್ತರಿಸುತ್ತಿವೆ ಎಂದು ಆರೋಪ ಮಾಡಿದ್ದಾರೆ. ಈ ಜನಪ್ರಿಯ ಶೋದ ಎರಡನೇ ಸಂಚಿಕೆಯ ಮೊದಲ ಎಪಿಸೋಡ್ ವಿವಾದಕ್ಕೀಡಾಗಿದೆ. ಇದರಲ್ಲಿ ಶೆಲ್ಡನ್ ಕೂಪರ್ ಪಾತ್ರದಲ್ಲಿ ನಟಿಸಿರೋ ನಟ ಜಿಮ್ ಪಾರ್ಸನ್ಸ್ ಭಾರತದ ಇಬ್ಬರಾದ ಐಶ್ವರ್ಯಾ ರೈ ಬಚ್ಚನ್ ಹಾಗೂ ಮಾಧುರಿ ದೀಕ್ಷಿತ್ ನೇನೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

'ಬಿಗ್ ಬ್ಯಾಂಗ್ ಥಿಯೇರಿ' ಸೀಸನ್ 2ನ ಒಂದು ದೃಶ್ಯದಲ್ಲಿ ಜಿಮ್ ಪಾರ್ಸನ್ಸ್ "ಐಶ್ವರ್ಯಾ ರೈ ಬಡವರ ಪಾಲಿನ ಮಾಧುರಿ ದೀಕ್ಷಿತ್" ಎಂದು ಹೇಳುತ್ತಾರೆ. ಇದಕ್ಕೆ ರಾಜ್ ಕೂತ್ರಪ್ಪಲಿ ಪಾತ್ರದಲ್ಲಿ ನಟಿಸಿರೋ ಕುನಾಲ್ ನಾಯ್ಯರ್ " ಐಶ್ವರ್ಯಾ ರೈ ದೇವತೆ, ಮಾಧುರಿ ದೀಕ್ಷಿತ್ ಕುಷ್ಠ ರೋಗವಿರುವ ವೇಶ್ಯೆ" ಎಂದು ಹೇಳುತ್ತಾರೆ.
ನೆಟ್‌ಫ್ಲಿಕ್ಸ್‌ಗೆ ಲೀಗಲ್ ನೋಟಿಸ್
ಇದೇ ದೃಶ್ಯ ಈಗ ವಿವಾದಕ್ಕೆ ಸಿಲುಕಿಕೊಂಡಿದೆ. ಈ ಸಂಬಂಧ ರಾಜಕೀಯ ವಿಶ್ಲೇಷಕ ಮಿಥುನ್ ವಿಜಯ್ ಕುಮಾರ್ ನೆಟ್‌ಫ್ಲಿಕ್ಸ್‌ಗೆ ಲೀಗನ್ ನೋಟಿಸ್ ಕಳುಹಿಸಿದ್ದು, ಅದಕ್ಕೆ ಪ್ರತಿಕ್ರಿಯೆ ನೀಡಬೇಕು. ಒಂದು ವೇಳೆ ನೀಡದೇ ಹೋದಲ್ಲಿ ಹಾಗೂ ಡಿಮ್ಯಾಂಡ್ ಅನ್ನು ಪೂರೈಸದೇ ಹೋದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತೆ ಎಂದು ನೋಟಿಸ್‌ನಲ್ಲಿ ತಿಳಿಸಿದ್ದಾರೆ.
" ನೆಟ್‌ಫ್ಲಿಕ್ಸ್ ಅಂತಹ ಕಂಪನಿಗಳು ತಾವು ಮಾಡುತ್ತಿರುವ ಕೆಲಸ ಅಲ್ಲಿನ ಸಮುದಾಯದ ಸಾಂಸ್ಕೃತಿಕ ಮೌಲ್ಯಗಳು ಹಾಗೂ ಭಾವನೆಗಳನ್ನು ಸೂಕ್ಷ್ಮವಾಗಿ ಗಮನಿಸಿವೆಂದು ಖಚಿತ ಪಡಿಸಿಕೊಳ್ಳಬೇಕು. ಅದು ಅವರ ಜವಾಬ್ದಾರಿ ಕೂಡ ಹೌದು. ತಾವು ನೀಡಿವ ಕಂಟೆಂಟ್ ಅನ್ನು ಎಚ್ಚರಿಕೆಯಿಂದ ಕ್ಯೂರೇಟ್ ಮಾಡಬೇಕಿದೆ." ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಆಘಾತವನ್ನುಂಟು ಮಾಡಿದೆ
"ಅವರ ಕಂಟೆಂಟ್‌ನಲ್ಲಿ ಅವಹೇಳನಕಾರಿ ವಿಷಯ, ಆಕ್ಷೇಪಾರ್ಹ ಅಥವಾ ಮಾನಹಾನಿ ಮಾಡುವಂತಹ ವಿಷಯಗಳು ಇಲ್ಲವೆಂದು ಖಚಿತಪಡಿಸಿಕೊಳ್ಳಬೇಕಿದೆ. ಇದು ಅವರ ಕರ್ತವ್ಯ ಕೂಡ ಹೌದು. ನೆಟ್‌ಫ್ಲಿಕ್ಸ್‌ನ ಬಿಗ್ ಬ್ಯಾಂಗ್ ಥಿಯರಿಯ ಒಂದು ಸಂಚಿಕೆಯಲ್ಲಿ ಅವಹೇಳನಕಾರಿ ಪದವನ್ನು ಬಳಸಿರುವುದರಿಂದ ನಾನು ತುಂಬಾ ಕುಗ್ಗಿದ್ದೇನೆ. ಈ ಪದವನ್ನು ಮೆಚ್ಚುಗೆ ಪಡೆದ ನಟಿ ಮಾಧುರಿ ದೀಕ್ಷಿತ್ ಬಗ್ಗೆ ಅವಹೇಳನಕಾರಿಯಾಗಿ ಉಲ್ಲೇಖ ಮಾಡಿದ್ದು ನೋವುಂಡು ಮಾಡಿದೆ. ಅಲ್ಲದೆ ನಟಿ ಘನತೆ ಹಾಗೂ ಗೌರವಕ್ಕೆ ಧಕ್ಕೆ ತರವಾಗಿದೆ. ಎಂದು ಹೇಳಲಾಗಿದೆ.
ರಾಜಕೀಯ ವಿಶ್ಲೇಷಕ ಮಿಥುನ್ ವಿಜಯ್ ಕುಮಾರ್ ಟ್ವಿಟರ್‌ನಲ್ಲಿ ಈ ವಿಷಯವನ್ನು ಶೇರ್ ಮಾಡಿಕೊಂಡಿದ್ದು, ಈ ಎರಡು ಪಾತ್ರಗಳ ಬಗ್ಗೆ ಶೋನಲ್ಲಿ ನೋಡಿ ತುಂಬಾನೇ ಆಘಾತ ಆಗಿದೆ. ಬಾಲ್ಯದಿಂದಲೂ ನಾನು ದೇವದಾಸ್ ನಟಿಯರ ಅಭಿಮಾನಿಯಾಗಿದ್ದೇನೆ ಎಂದಿದ್ದಾರೆ. " ಬಾಲ್ಯದಿಂದಲೂ ಮಾಧುರಿ ದೀಕ್ಷಿತ್ ಅಭಿಮಾನಿಯಾಗಿದ್ದು, ಈ ಡೈಲಾಗ್‌ನಿಂದ ಆಘಾತಕ್ಕೆ ಒಳಗಾಗಿದ್ದೇನೆ ಎಂದಿದ್ದಾರೆ.
ಎಪಿಸೋಡ್ ತೆಗೆಯುವಂತೆ ಬೇಡಿಕೆ
'ಬಿಗ್ ಬ್ಯಾಂಗ್ ಥಿಯೇರಿ' ನೋಡಿದ ಬಳಿಕ ಮಿಥುನ್ ವಿಜಯ್ ಕುಮಾರ್ ತಮ್ಮ ವಕೀಲ ಮೂಲಕ ಲೀಗಲ್ ನೋಟಿಸ್ ಕಳುಹಿಸಿಕೊಟ್ಟಿದ್ದಾರೆ. ಈ ಮೂಲಕ ಮೊದಲ ಸಂಚಿಕೆಯನ್ನು ತೆಗೆಯುವಂತೆ ಮನವಿ ಮಾಡಿಕೊಳ್ಳಲಾಗಿದೆ. ಒಂದು ವೇಳೆ ತೆಗೆಯದೇ ಹೋದರೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆಯನ್ನೂ ನೋಡಿದ್ದಾರೆ.
'ದಿ ಬಿಗ್ ಬ್ಯಾಂಗ್ ಥಿಯೇರಿ' ಅಮೆರಿಕದ ಜನಪ್ರಿಯ ಶೋ. 2007 ರಿಂದ 2019ರವರೆಗೆ ಈ ಎಪಿಸೋಡ್‌ಗಳನ್ನು ಪ್ರಸಾರ ಮಾಡಲಾಗಿತ್ತು. ಈ ಶೋನಲ್ಲಿ ಜಾನಿ ಗಲೆಕಿ, ಜಿಮ್ ಪಾರ್ಸನ್ಸ್, ಕುನಾಲ್ ನಾಯರ್, ಸೈಮನ್ ಹೆಲ್ಬರ್ಗ್, ಕೇಲಿ ಕ್ಯುಕೊ ಸ್ವೀಟಿಂಗ್, ಮಯಿಮ್ ಬಿಯಾಲಿಕ್ ಮತ್ತು ಮೆಲಿಸ್ಸಾ ರೌಚ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











