ಭೂಗತ ಪಾತಕಿ ದಾವೂದ್‌ಗೆ ವಿಷ ಪ್ರಾಶನ: ನೆಟ್‌ಫ್ಲಿಕ್ಸ್‌ನಲ್ಲಿದೆ ಡಾನ್‌ನ 'ಮುಂಬೈ ಮಾಫಿಯಾ'

ಭೂಗತ ಪಾತಕಿ, ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ನಿಧನ ಸುದ್ದಿ ಆಗಾಗ ಸಂಚಲನ ಸೃಷ್ಟಿಸುತ್ತಲೇ ಇರುತ್ತೆ. ಕಳೆದೆರಡು ದಿನಗಳಿಂದ ಈ ಅಂಡರ್‌ವರ್ಲ್ಡ್ ಡಾನ್‌ಗೆ ಯಾರೋ ವಿಷ ಉಣಿಸಿರುವ ಬಗ್ಗೆನೂ ಸುದ್ದಿ ಹರಿದಾಡುತ್ತಿದೆ. ಆತನ ಸ್ಥಿತಿ ಗಂಭೀರವಾಗಿದೆ ಅಂತೆಲ್ಲ ಸುದ್ದಿಯಾಗಿದೆ.

ದಾವೂದ್ ಇಬ್ರಾಹಿಂಗೆ ಯಾರೋ ವಿಷ ಹಾಕಿದ್ದಾರೆ. ಹೀಗಾಗಿ ಆತನ ಸ್ಥಿತಿ ಗಂಭೀರವಾಗಿದ್ದು, ಕರಾಚಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸುದ್ದಿ ಓಡಾಡುತ್ತಿತ್ತು. ಹಾಗೇ ದಾವೂದ್ ಇಬ್ರಾಹಿಂ ಆರೋಗ್ಯ ಸ್ಥಿತಿ ಗಂಭೀರ ಅಂತ ಕೆಲವೆಡೆ ವರದಿಯಾಗಿದೆ. ಅದೇ ಇನ್ನೊಂದು ಕಡೆ ದಾವೂದ್ ಇಬ್ರಾಹಿಂ ಸತ್ತೇ ಹೋದ ಅಂತಲೂ ವದಂತಿ ಹಬ್ಬಿದೆ.

 Netflixs documentary Mumbai Mafia on underworld don Dawood Ibrahim

ಆದರೆ, ದಾವೂದ್ ಇಬ್ರಾಹಿಂ ಸತ್ತಿದ್ದಾನೋ, ಇಲ್ಲ ಬದುಕಿದ್ದಾನೋ ಅನ್ನೋ ಬಗ್ಗೆ ಯಾರಿಗೂ ಖಚಿತ ಮಾಹಿತಿಯಿಲ್ಲ. ಆದ್ರೀಗ ಈ ಬಗ್ಗೆ ದಾವೂದ್‌ನ ಕಟ್ಟಾ ವೈರಿ ಛೋಟಾ ಶಕೀಲ್ ಸುಳ್ಳು ಎಂದು ಹೇಳಿದ್ದಾನೆಂಬ ಬಗ್ಗೆ ನ್ಯೂಸ್ 18 ವರದಿ ಮಾಡಿದೆ. ಸದ್ಯ ದಾವೂದ್ ಇಬ್ರಾಹಿಂ ಸಾವಿನ ಸುದ್ದಿ ಮತ್ತೆ ಸದ್ದು ಮಾಡುತ್ತಿರೋದೇನೋ ನಿಜ. ಆದರೆ, ದಾವೂದ್ ಇಬ್ರಾಹಿಂ ಬಗ್ಗೆ ನೆಟ್‌ಫ್ಲಿಕ್ಸ್ ಇದೇ ವರ್ಷ ಒಂದು ಡ್ಯಾಕ್ಯೂಮೆಂಟರಿಯನ್ನು ರಿಲೀಸ್ ಮಾಡಿತ್ತು. ಈ ಸಂದರ್ಭದಲ್ಲಿ ಆ ಡ್ಯಾಕ್ಯೂಮೆಂಟರಿ ಹೆಚ್ಚು ಸದ್ದು ಮಾಡುವುದಕ್ಕೆ ಶುರು ಮಾಡಿದೆ.

ದಾವೂದ್ ಇಬ್ರಾಹಿಂ ಬಗ್ಗೆ ಬಾಲಿವುಡ್ ಮಂದಿ ಈಗಾಗಲೇ ಹಲವು ಸಿನಿಮಾಗಳನ್ನು ಮಾಡಿದ್ದಾರೆ. 'ಕಂಪನಿ', 'ಡಿ', 'ಶೂಟ್‌ಔಟ್ ಅಟ್ ಲೋಕಂಡ್‌ವಾಲ', 'ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ' ಅಂತಹ ಸಿನಿಮಾಗಳು ದಾವೂದ್ ಇಬ್ರಾಹಿಂ ಕಥೆಯನ್ನೇ ತೆರೆಮೇಲೆ ತಂದಿದ್ದವು. ಆದರೆ, ಪಾತಕಿಯ ಕಥೆಗೆ ಸಿನಿಮ್ಯಾಟಿಕ್ ಟಚ್ ಕೊಡಲಾಗಿತ್ತು.

ಆದರೆ, ನೆಟ್‌ಫ್ಲಿಕ್ಸ್ 2023, ಜನವರಿ 6ರಂದು 'ಮುಂಬೈ ಮಾಫಿಯಾ: ಪೊಲೀಸ್ Vs ದಿ ಅಂಡರ್‌ವರ್ಲ್ಡ್' ಅನ್ನು ರಿಲೀಸ್ ಮಾಡಿತ್ತು. ಇದರಲ್ಲಿ ದಾವೂದ್ ಇಬ್ರಾಹಿಂ ಹಿನ್ನೆಲೆ, ಕ್ರೈಂಗಳು, ವಿವಾದಗಳು, ಕೃತ್ಯಗಳನ್ನು ಅನಾವರಣ ಮಾಡಿತ್ತು. ಈ ಡಾಕ್ಯೂಮೆಂಟರಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ಅವನ ಸಹಚರರಾದ ಅಬು ಸಲೀಂ ಸೇರಿದಂತೆ ಹಲವರನ್ನು ಮುಂಬೈ ಪೊಲೀಸರು ಚೇಸಿಂಗ್ ಅನ್ನು ತೆರೆಮೇಲೆ ತರಲಾಗಿತ್ತು. ಈ ಡಾಕ್ಯೂಮೆಂಟರಿ ಮತ್ತೆ ಸದ್ದು ಮಾಡುತ್ತಿದೆ.

1993ರ ಬಾಂಬೆ ಬ್ಲಾಸ್ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂ ಅನ್ನು ಭಾರತ ಹಾಗೂ ಅಮೆರಿಕಾ ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಲಾಗಿದೆ. ಆದರೆ, ದಾವೂದ್ ಇಬ್ರಾಹಿಂ ಎಲ್ಲಿದ್ದಾನೆ? ಏನು ಮಾಡುತ್ತಿದ್ದಾನೆ? ಅನ್ನೋದು ಯಾರಿಗೂ ಸರಿಯಾಗಿ ಗೊತ್ತಿಲ್ಲ. ಇತ್ತೀಚೆಗೆ ಪಾಕಿಸ್ತಾನದ ಕರಾಚಿಯಲ್ಲಿ ದಾವೂದ್ ಇಬ್ರಾಹಿಂ ಇದ್ದಾನೆಂದು ವರದಿಯಾಗಿತ್ತು.

ದಾವೂದ್ ಕ್ರಿಮಿನಲ್ ಜರ್ನಿ ಬಹಳ ಬೇಗನೇ ಶುರುವಾಗಿತ್ತು. ಚಿಕ್ಕ ಪುಟ್ಟ ಮೋಸ ಹಾಗೂ ಕಳ್ಳತನದಿಂದ ಶುರುವಾಗಿತ್ತು. ಆ ಬಳಿಕ ಸ್ಥಳೀಯ ಗ್ಯಾಂಗ್‌ಸ್ಟರ್ ಬಾಶು ದಾದಾ ಜೊತೆ ಕೆಲಸ ಮಾಡುವುದಕ್ಕೆ ಶುರು ಮಾಡಿದ್ದ. 1970ರಲ್ಲಿ ಈ ಗುಂಪಿನಿಂದ ಹೊರಬಂದಿದ್ದ ದಾವೂದ್ ಅಲ್ಲಿಂದ ಅಪರಾಧ ಜಗತ್ತಿನಲ್ಲಿ ತನ್ನದೇ ಒಂದು ಗುಂಪನ್ನು ಕಟ್ಟಿಕೊಂಡಿದ್ದ. ತನ್ನ ಸಹೋದರನೊಂದಿಗೆ ಸೇರಿ ಗ್ಯಾಂಗ್ ಕಟ್ಟಿಕೊಂಡ. ಆದರೆ, ಇದು ಹೆಚ್ಚು ದಿನ ಉಳಿಯಲಿಲ್ಲ.

ದಾವೂದ್ ಸಹೋದರನನ್ನು ತನ್ನ ವೈರಿ ಪಠಾಣ್ ಗುಂಪಿನವರು ಹತ್ಯೆ ಮಾಡಿದ್ದರು. ಹೀಗಾಗಿ ದಾವೂದ್ ಇಬ್ರಾಹಿಂ ಮತ್ತೆ ಒಂಟಿಯಾಗಿದ್ದ. ಇದೇ ವೇಳೆ ಡಿ ಕಂಪನಿಯನ್ನು ಆರಂಭಿಸಿದ್ದ. ಈ ಕಂಪನಿಯಿಂದಲೇ ದಾವೂದ್ ಇಬ್ರಾಹಿಂ ಸಾಲು ಸಾಲು ಅಪರಾಧಗಳನ್ನು ಮಾಡುವುದಕ್ಕೆ ಶುರು ಮಾಡಿದ್ದ. ಚಿನ್ನ ಕಳ್ಳಸಾಗಾಣಿಕೆ, ಸುಲಿಗೆ ಹಾಗೂ ಮಾದಕ ವಸ್ತು ಕಳ್ಳಸಾಗಣಿಕೆಯನ್ನು ಮಾಡುವುದಕ್ಕೆ ಶುರು ಮಾಡಿದ್ದ.

ಇಲ್ಲಿವರೆಗೂ ದಾವೂದ್ ಇಬ್ರಾಹಿಂ ಕ್ರೈಂ ಹಿಂದೆ ಪೊಲೀಸರು ಬಿದ್ದಿರಲಿಲ್ಲ. ಆದರೆ, ಸಮದ್ ಖಾನ್ ಕೊಲೆ ಪ್ರಕರಣದಲ್ಲಿ ಮುಂಬೈ ಪೊಲೀಸರ ಕಣ್ಣಿಗೆ ದಾವೂದ್ ಇಬ್ರಾಹಿಂ ಬಿದ್ದಿದ್ದ. ಆ ಬಳಿಕ ತನ್ನ ವ್ಯಾಪಾರವನ್ನು ವೃದ್ಧಿ ಮಾಡುವುದಕ್ಕೆ ದುಬೈಗೆ ಹಾರಿದ್ದ. ಅಂದು ದಾವೂದ್‌ಗೆ ಸಹಚರನಾಗಿದ್ದ ಛೋಟಾ ರಾಜನ್ ಜೊತೆ ಸೇರಿ ಗ್ಯಾಂಗ್ ಕಟ್ಟಿದ. ಆ ಬಳಿಕವೇ 1993ರ ಬಾಂಬೆ ಸ್ಟೋಟದ ಬಳಿಕ ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಪಟ್ಟಿ ಸೇರಿದ್ದಾನೆ.

ಅಲ್ಲಿಂದ ದಾವೂದ್ ಇಬ್ರಾಹಿಂ ಯಾರ ಕಣ್ಣಿಗೂ ಬಿದ್ದಿಲ್ಲ. ದಾವೂದ್ ಎಲ್ಲಿದ್ದಾನೆ. ಕರಾಚಿಯಲ್ಲಿ ಇದ್ದಾನಾ, ಯುಎಇಯಲ್ಲಿ ಇದ್ದಾನಾ? ಅನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆಗಾಗ ದಾವೂದ್ ಇಬ್ರಾಹಿಂ ಬಗ್ಗೆ ಏನಾದರೂ ಒಂದು ಸುದ್ದಿ ಮಾತ್ರ ಹರಿದಾಡುತ್ತಲೇ ಇರುತ್ತೆ. ಈ ಬಗ್ಗೆನೇ ನೆಟ್‌ಫ್ಲಿಕ್ಸ್ ಡಾಕ್ಯೂಮೆಂಟರಿ ಮುಂಬೈ ಮಾಫಿಯಾ: ಪೊಲೀಸ್ vs ದಿ ಅಂಡರ್‌ವರ್ಲ್ಡ್ ಬೆಳಕು ಚೆಲ್ಲಲಿದೆ.

More from Filmibeat

English summary
Netflix's documentary Mumbai Mafia police Vs underworld don about Dawood Ibrahim
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X