World Streaming Day 2026: ಇಂತಹದ್ದೊಂದು ದಿನವಿದೆ ಗೊತ್ತೇ? ಈ ದಿನ ಜಿಯೋಹಾಟ್‌ಸ್ಟಾರ್‌ನಲ್ಲಿ ಈ 5 ಸಿನಿಮಾಗಳನ್ನು ನೋಡಿ
ವಿಶ್ವದಲ್ಲಿ ಪ್ರತಿ ದಿನ ಏನಾದರೂ ಒಂದು ದಿನವನ್ನಾಗಿ ಆಚರಣೆ ಮಾಡುತ್ತಲೇ ಇರುತ್ತಾರೆ. ಐತಿಹಾಸಿಕ ಘಟನೆಗಳು, ಕ್ಷಣಗಳನ್ನು ನೆನಪಿಸುವ ಸಲುವಾಗಿ ವರ್ಷದಲ್ಲಿ ಒಂದು ದಿನವನ್ನು ಆಚರಣೆ ಮಾಡುವುದು ಬಹಳ ಹಿಂದಿನಿಂದಲೂ ಬಂದಿರುವ ವಾಡಿಕೆ. ಇವುಗಳಲ್ಲಿ ಕೆಲವನ್ನು ವಿಶ್ವದ ಮೂಲೆ ಮೂಲೆಯಲ್ಲೂ ಆಚರಣೆ ಮಾಡುತ್ತಾರೆ. ಇನ್ನು ಕೆಲವು ಈಗೀಗ ಜನಪ್ರಿಯವಾಗುತ್ತಿದೆ. ಅದರಲ್ಲಿ ಒಂದು 'ವರ್ಲ್ಡ್ ಸ್ಟ್ರೀಮಿಂಗ್ ಡೇ' (World Streaming Day).
2014 ರಿಂದ 'ವರ್ಲ್ಡ್ ಸ್ಟ್ರೀಮಿಂಗ್ ಡೇ'ಯನ್ನು ಆಚರಣೆ ಮಾಡುತ್ತಾ ಬರುತ್ತಿದ್ದಾರೆ. ಭಾರತದಲ್ಲಿ ಓಟಿಟಿ ಟ್ರೆಂಡ್ ಪೀಕ್‌ಗೆ ಬಂದಿರುವ ಈ ಸಮಯದಲ್ಲಿ 'ವರ್ಲ್ಡ್ ಸ್ಟ್ರೀಮಿಂಗ್ ಡೇ'ಯನ್ನು ಆಚರಣೆ ಮಾಡಲಾಗುತ್ತಿದೆ. ಮೇ 20 ರಂದು ವಿಶ್ವದಲ್ಲಿ ಈ ದಿನವನ್ನು ಆಚರಣೆ ಮಾಡುತ್ತಾ ಬರುತ್ತಿದ್ದಾರೆ. ಈ ವಿಶೇಷ ದಿನದಂದು ಜಿಯೋಹಾಟ್‌ಸ್ಟಾರ್ ದಕ್ಷಿಣ ಭಾರತದ 5 ಸಿನಿಮಾಗಳನ್ನು ಸ್ಟ್ರೀಮಿಂಗ್ ಮಾಡುತ್ತಿದೆ.

ಜಿಯೋಹಾಟ್‌ಸ್ಟಾರ್‌ನ ಆ ಐದು ಸಿನಿಮಾಗಳನ್ನು ನೋಡುವುದಕ್ಕೂ ಮುನ್ನ 'ವರ್ಲ್ಡ್ ಸ್ಟ್ರೀಮಿಂಗ್ ಡೇ' ಉಗಮ ಹೇಗಾಯ್ತು ಅನ್ನೋ ಕುತೂಹಲ ಇದ್ದೇ ಇರುತ್ತೆ. ಮೇ 20, 2008ರಲ್ಲಿ ರೊಕು ಅನ್ನೋ ಅಮೆರಿಕದ ಕಂಪನಿ ತನ್ನ ಸ್ಮಾರ್ಟ್ ಟಿವಿಗಳಲ್ಲಿ ಡಿಜಿಟಲ್ ಮೀಡಿಯಾ ಪ್ಲೇಯರ್ ಅನ್ನು ಮೊದಲ ಬಾರಿಗೆ ಪರಿಚಯಿಸುತ್ತೆ. ಇದಾದ 6 ವರ್ಷಗಳ ಬಳಿಕ ಅದರ ನೆನಪಿಗಾಗಿ 'ನ್ಯಾಷನಲ್ ಸ್ಟ್ರೀಮಿಂಗ್ ಡೇ' ಅನ್ನು ಎಂದು ಆಚರಣೆ ಮಾಡುವುದಕ್ಕೆ ಶುರು ಮಾಡುತ್ತೆ. ಅದೇ ಈಗ 'ವರ್ಲ್ಡ್ ಸ್ಟ್ರೀಮಿಂಗ್ ಡೇ' ಆಗಿ ಗುರುತಿಸಲಾಗುತ್ತಿದೆ. ಈ ರೊಕು ಕಂಪನಿ 2024ರ ಹೊತ್ತಿಗೆ ಅಮೆರಿಕದಲ್ಲಿ ಸ್ಟ್ರೀಮಿಂಗ್ ವಿಡಿಯೋ ಡಿಸ್ಟ್ರಿಬ್ಯೂಷನ್‌ನಲ್ಲಿ ಸುಮಾರು 145 ಮಿಲಿಯನ್ ಜನರನ್ನು ತಲುಪಿದೆ. ಈಗ ಓಟಿಟಿ ಪ್ಲಾಟ್‌ಫಾರ್ಮ್‌ಗಳು 'ವರ್ಲ್ಡ್ ಸ್ಟ್ರೀಮಿಂಗ್ ಡೇ' ಆಗಿ ಆಚರಣೆ ಮಾಡಲಾಗುತ್ತಿವೆ. ಹಾಗಿದ್ದರೆ, ಜಿಯೋಹಾಟ್‌ಸ್ಟಾರ್ ಸ್ಟ್ರೀಮಿಂಗ್ ಮಾಡುತ್ತಿರುವ ಆ 5 ಸಿನಿಮಾಗಳು ಹೀಗಿವೆ.
ವಾಳ 2: ಬಿಯೋಪಿಕ್ ಆಪ್ ಎ ಬಿಲಿಯನ್ ಬ್ರೋಸ್
2024ರಲ್ಲಿ ತೆರೆಕಂಡಿದ್ದ ಮಲಯಾಳಂ ಸಿನಿಮಾ 'ವಾಳ'ದ ಸೀಕ್ವೆಲ್ 'ವಾಳ 2'. ಈ ಕಾಮಿಡಿ ಡ್ರಾಮಾವನ್ನು ಸವಿನ್ ಎಸ್‌ಎ ನಿರ್ದೇಶನ ಮಾಡಿದ್ದು, 2026ರಲ್ಲಿ ತೆರೆಕಂಡ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಎನಿಸಿಕೊಂಡಿದೆ. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದು, ಬರೋಬ್ಬರು 121 ಕೋಟಿ ರೂಪಾಯಿ. ಇದು ಯುವಕರ ಗುಂಪಿನ ಹಿನ್ನೆಲೆಯನ್ನು ಇಟ್ಟುಕೊಂಡು ಕಥೆಯನ್ನು ಹೆಣೆಯಲಾಗಿದೆ. ಈ ಸಿನಿಮಾದಲ್ಲಿ ಕಾಮಿಡಿ ಜೊತೆಗೆ ಹೃದಯ ಕಲುಕುವ ದೃಶ್ಯಗಳಿವೆ. ಮನರಂಜನೆ ಹಾಗೂ ಭಾವನಾತ್ಮಕ ಸನ್ನಿವೇಶಗಳಿವೆ.
ಕಾಟ್ಟಾನ್
'ಕಾಟ್ಟಾನ್' ಇದು ತಮಿಳಿನ ಗ್ರಾಮೀಣ ಪ್ರದೇಶದ ಕ್ರೈಂ ಥ್ರಿಲ್ಲರ್ ವೆಬ್ ಸೀರಿಸ್. ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಇನ್ವೆಸ್ಟಿಗೇಟಿವ್ ಸ್ಟೋರಿಯಲ್ಲಿ ವಿಜಯ್ ಸೇತುಪತಿ 'ಮುತ್ತು' ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ವಿಶೇಷ ಅಂದರೆ, ಈ ಸಿರೀಸ್‌ನಲ್ಲಿ ವಿಜಯ್ ಸೇತುಪತಿ ಹೀರೋ, ವಿಲನ್ ಹಾಗೂ ಕಟ್ಟುಕಥೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ವಿಶಿಷ್ಠವಾದ ವೆಬ್ ಸೀರಿಸ್ ಎಂದೇ ಹೇಳಬಹುದು.

ಥಾಯ್ ಕಿಳವಿ
ತಮಿಳಿನ ಹಿರಿಯ ನಟ ರಾಧಿಕಾ ಶರತ್‌ಕುಮಾರ್ ನಟಿಸಿರುವ ಸಿನಿಮಾ 'ಥಾಯ್ ಕಿಳವಿ'. ಕೇವಲ 9 ಕೋಟಿ ರೂಪಾಯಿಯಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಬರೋಬ್ಬರಿ 80 ಕೋಟಿ ರೂಪಾಯಿ ಲೂಟಿ ಮಾಡಿತ್ತು. ತಮಿಳುನಾಡಿನ ಹಳ್ಳಿಯೊಂದರ ಹಿರಿಯ ಜೀವ ಪವುನುತಾಯಿ(ರಾಧಿಕಾ ಶರತ್‌ಕುಮಾರ್) ಸಿಕ್ಕಾಪಟ್ಟೆ ಘಾಟಿ. ಊರಿನವರಿಗೆ ಸಾಲು ಕೊಟ್ಟು ಬಡ್ಡಿ ವಸೂಲಿ ಮಾಡುವಷ್ಟು ಗಟ್ಟಿಗಿತ್ತಿ. ಊರಿನಲ್ಲಿ ಈಕೆಯ ಖದರ್‌ಗೆ ಹೆದರಿಕೊಂಡು ಜನರು ಜೀವನ ಸಾಗಿಸುವಂತಹ ಪರಿಸ್ಥಿತಿ. ಇಂತಹ ಗಟ್ಟಿಗಿತ್ತಿ ಪವುನುತಾಯಿ ಪಾರ್ಶವಾಯು ಬಂದು ಹಾಸಿಗೆ ಹಿಡಿಯುತ್ತಾಳೆ. ಆಗ ಊರಿನ ಜನ ಪ್ರತಿಕ್ರಿಯೆ ಹೇಗಿರುತ್ತದೆ? ಅನ್ನೋದೇ ಸಿನಿಮಾ.
ದಿ ರಾಜಾ ಸಾಬ್
ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ನಟನೆಯ ಹಾರರ್ ಫ್ಯಾಂಟಸಿ ಸಿನಿಮಾ 'ದಿ ರಾಜಾ ಸಾಬ್'. ಆಕ್ಷನ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಪ್ರಭಾಸ್ ಹಾರರ್-ಕಾಮಿಡಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಷ್ಟೊಂದು ಜಾದು ಮಾಡದೇ ಹೋದರೂ, ಓಟಿಟಿಯಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಪ್ರತಿಚಾಯ
'ವರ್ಲ್ಡ್ ಸ್ಟ್ರೀಮಿಂಗ್ ಡೇ'ಯಂದು ಜಿಯೋಹಾಟ್‌ಸ್ಟಾರ್‌ನಲ್ಲಿ ನೋಡಬಹುದಾದ ಮತ್ತೊಂದು ಸಿನಿಮಾ 'ಪ್ರತಿಚಾಯ'. ಇದೊಂದು ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ. ನಿವೀನ್ ಪೌಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಿ ಉನ್ನಿಕೃಷ್ಣನ್ ನಿರ್ದೇಶನ ಮಾಡಿರುವ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಓಟಿಟಿಯಲ್ಲಿ ಮೆಚ್ಚುಗೆ ಗಳಿಸಿದೆ.


Click it and Unblock the Notifications
