7 ಆಸ್ಕರ್ ಗೆದ್ದ 'ಓಪನ್‌ಹೈಮರ್' ಸಿನಿಮಾ ಇನ್ನೂ ನೋಡಿಲ್ವಾ? ಈ ಓಟಿಟಿಯಲ್ಲಿ ನೋಡಿ!

ಕಳೆದ ವರ್ಷ ವಿಶ್ವದಾದ್ಯಂತ ಅತೀ ಹೆಚ್ಚು ಸದ್ದು ಮಾಡಿದ್ದ ಹಾಲಿವುಡ್ ಸಿನಿಮಾ 'ಓಪನ್‌ಹೈಮರ್'. ಇದೆ ಸಿನಿಮಾ ಕೆಲವು ದಿನಗಳ ಹಿಂದಷ್ಟೇ ಮತ್ತೆ ಭಾರಿ ಸದ್ದು ಮಾಡಿತ್ತು. ಇತ್ತೀಚೆಗೆ ನಡೆದ 96ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ 'ಓಪನ್‌ಹೈಮರ್' ಸಿನಿಮಾ ಬರೋಬ್ಬರಿ ಏಳು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು.

ಹಾಲಿವುಡ್ ಸಿನಿಮಾ ಆಗಿದ್ದರೂ, ಭಾರತದಲ್ಲೂ ಈ ಬಯೋಗ್ರಫಿಕಲ್ ಥ್ರಿಲ್ಲರ್ ಸಿನಿಮಾ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ವಿಶ್ವದ ಜನಪ್ರಿಯ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಈ ಸಿನಿಮಾವನ್ನು ನಿರ್ದೇಶಿಸಿದ್ದು, ಸಿಲಿಯನ್ ಮರ್ಫಿ, ಎಮಿಲಿ ಬ್ಲಂಟ್, ರಾಬರ್ಟ್ ಡೌನಿ ಜೂ., ಮ್ಯಾಟ್ ಡ್ಯಾಮನ್, ಫ್ಲಾರೆನ್ಸ್ ಪಗ್ ಸೇರಿದಂತೆ ದಿಗ್ಗಜರೇ ಈ ಸಿನಿಮಾದಲ್ಲಿ ನಟಿಸಿದ್ದಾರೆ.

Oppenheimer top-grossing film at the 96th Oscar is streaming at Jio Cinema

ಈ ಸಿನಿಮಾ ಕಳೆದ ವರ್ಷ ಭಾರತದಲ್ಲಿ ಜುಲೈ 21, 2023 ರಂದು ತೆರೆಕಂಡಿತ್ತು. ಭಾರತದಲ್ಲೂ ಈ ಸಿನಿಮಾಗೆ ಅಭೂತಪೂರ್ವ ಯಶಸ್ಸು ಸಿಕ್ಕಿತ್ತು. ಭಾರತೀಯರು ಕೂಡ ಈ ಸಿನಿಮಾ ಮೆಚ್ಚಿಕೊಂಡಿದ್ದರು. ಭಾರತದ ಬಾಕ್ಸಾಫೀಸ್‌ನಲ್ಲೇ ಈ ಸಿನಿಮಾ ಸುಮಾರು 150 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಹಾಗೇ ವಿಶ್ವದಾದ್ಯಂತ ಈ ಸಿನಿಮಾ ಸುಮಾರು 5,534 ಕೋಟಿ ರೂಪಾಯಿ ಗಳಿಕೆ ಕಂಡಿದೆ ಎಂದು ವರದಿಯಾಗಿವೆ.

ಹಾಲಿವುಡ್‌ನ ಯುನಿವರ್ಸಲ್ ಪಿಕ್ಚರ್ಸ್ ನಿರ್ಮಿಸಿದ್ದ ಈ ಸಿನಿಮಾ ಕೇವಲ ಬಾಕ್ಸಾಫೀಸ್‌ನಲ್ಲಿ ಅಷ್ಟೇ ಅಲ್ಲದೆ, ವಿಮರ್ಶಕರಿಂದಲೂ ಮೆಚ್ಚುಗೆ ಗಳಿಸಿತ್ತು. ಸುಮಾರು 821 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭಾರೀ ಲಾಭ ಮಾಡಿದೆ. ಇದರೊಂದಿಗೆ ಇತ್ತೀಚೆಗೆ ನಡೆದ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ಬಾಚಿಕೊಂಡಿದೆ.

Oppenheimer top-grossing film at the 96th Oscar is streaming at Jio Cinema

96ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಈ ಸಿನಿಮಾ ಸುಮಾರು 13 ಕ್ಯಾಟಗರಿಯಲ್ಲಿ ನಾಮನಿರ್ದೇಶನಗೊಂಡಿತ್ತು. ಈ ಸಮಾರಂಭದಲ್ಲಿ ದೊಡ್ಡ ಕೆಟಗರಿಯ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ಅತ್ಯುತ್ತಮ ಪೋಷಕ ನಟ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ಅಣುಬಾಂಬ್ ಕಂಡು ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಮೆರಿಕದ ಮೇಧಾವಿ ಭೌತಶಾಸ್ತ್ರಜ್ಞ ಜೆ ರಾಬರ್ಟ್ ಓಪನ್‌ಹೈಮರ್ ಜೀವನ ಕುರಿತಾದ ಸಿನಿಮಾ ಇದಾಗಿದೆ. 'ಅಣುಬಾಂಬ್ ಪಿತಾಮಹಾ' ಎಂದು ಕರೆಯಲಾಗುವ ಓಪನ್‌ಹೈಮರ್ ಅವರ ಅಸಾಧಾರಣ ಲೈಫ್ ಜರ್ನಿಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಓಪನ್‌ಹೈಮರ್ ಪಾತ್ರದಲ್ಲಿ ಸಿಲಿಯನ್ ಮರ್ಫಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಜಗತ್ತಿನಾದ್ಯಂತ ಜನಪ್ರಿಯತೆಯನ್ನು ಗಳಿಸಿಕೊಂಡ 'ಓಪನ್‌ಹೈಮರ್' ಸಿನಿಮಾ ಈಗ ಓಟಿಟಿಯಲ್ಲಿ ಪ್ರದರ್ಶನ ಆಗುತ್ತಿದೆ. ಇದೂವರೆಗೂ ನೋಡಲು ಸಾಧ್ಯವಾಗದೇ ಇದ್ದವರು ಜಿಯೋ ಸಿನಿಮಾದಲ್ಲಿ ನೋಡಬಹುದಾಗಿದೆ. ನಾಳೆಯಿಂದ (ಮಾರ್ಚ್ 21) 'ಓಪನ್‌ಹೈಮರ್' ಸಿನಿಮಾ ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಪ್ರಸಾರ ಆಗಲಿದೆ.

More from Filmibeat

English summary
96th oscar award winning movie Oppenheimer at jio cinema
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X