ಭಾರತದಲ್ಲಿ ಟ್ರೆಂಡಿಂಗ್‌ನಲ್ಲಿರೋ ಟಾಪ್ 10 ವೆಬ್ ಸೀರಿಸ್‌ಗಳು ಇವೇನೆ:ದಕ್ಷಿಣ ಭಾರತದ ಒಂದಕ್ಕೆ ಮಾತ್ರ ಸ್ಥಾನ
ಕೋವಿಡ್ ಕಾಲದಿಂದ ಭಾರತದಲ್ಲಿ ವೆಬ್ ಸೀರಿಸ್‌ಗೆ ಕ್ರೇಜ್ ಹೆಚ್ಚಾಗಿದೆ. ಭಾರತದ ಮೂಲೆ ಮೂಲೆಯಲ್ಲಿರೋ ಸಿನಿಪ್ರೇಮಿಗಳು ಸಿನಿಮಾಗಿಂತ ಹೆಚ್ಚಾಗಿ ವೆಬ್ ಸೀರಿಸ್ ಅನ್ನೇ ಹೆಚ್ಚು ಇಷ್ಟಪಡುತ್ತಿದ್ದಾರೆ. ಪ್ರತಿ ವೀಕೆಂಡ್‌ನಲ್ಲೂ ಒಂದಲ್ಲಾ ಒಂದು ಒರಿಜಿನಲ್ ಕಂಟೆಂಟ್ ಅನ್ನು ರಿಲೀಸ್ ಮಾಡುತ್ತಿದ್ದು, ಕ್ರೇಜ್ ಹೆಚ್ಚಾಗುವುದಕ್ಕೆ ಕಾರಣ.
ಓಟಿಟಿ ಸಂಸ್ಥೆಗಳಾದ ಅಮೆಜಾನ್ ಪ್ರೈಂ ವಿಡಿಯೋ, ನೆಟ್‌ಫ್ಲಿಕ್ಸ್, ಜೀ 5, ಡಿಸ್ನಿ+ಹಾಟ್‌ಸ್ಟಾರ್ ಪೈಪೋಟಿಗೆ ಬಿದ್ದು ವೆಬ್ ಸೀರಿಸ್‌ಗಳನ್ನು ರಿಲೀಸ್ ಮಾಡುತ್ತಿವೆ. ಇವುಗಳ ಮಧ್ಯೆನೇ ಕಾಂಪಿಟೇನ್ ಶುರುವಾಗಿದೆ.

ಕಳೆದ ವಾರ ಅಂದರೆ, ಮೇ 19 ರಿಂದ 25ರವರೆ ಭಾರತದಲ್ಲಿ ಟ್ರೆಂಡಿಂಗ್‌ನಲ್ಲಿ ಟಾಪ್ 10 ವೆಬ್ ಸೀರಿಸ್‌ಗಳನ್ನು ಪಟ್ಟಿಯನ್ನು ಓರ್ಮ್ಯಾಕ್ಸ್ ಸಂಸ್ಥೆ ರಿಲೀಸ್ ಮಾಡಿದೆ. ಇದರಲ್ಲಿ ದಕ್ಷಿಣ ಭಾರತದ ಮೂಲದ ಕೇವಲ ಒಂದೇ ಒಂದು ಸೀರಿಸ್ ಟಾಪ್ 10 ಪಟ್ಟಿಯಲ್ಲಿದೆ. ಹಾಗಿದ್ದರೆ, ಕಳೆದ ವಾರದ ಟಾಪ್ 10 ಪಟ್ಟಿಯಲ್ಲಿರೋ ವೆಬ್ ಸೀರಿಸ್‌ಗಳು ಯಾವುವು ಅನ್ನೋದನ್ನು ನೋಡೋಣ.
ಟಾಪ್ 10 ವೆಬ್ ಸೀರಿಸ್
ಓರ್ಮ್ಯಾಕ್ಸ್ ಸಂಸ್ಥೆ ಪ್ರತಿ ವಾರ ಟ್ರೆಂಡಿಂಗ್‌ನಲ್ಲಿ ಟಾಪ್ 10 ವೆಬ್ ಸೀರಿಸ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತೆ. ಈ ಬಾರಿ ಮೇ 19 ರಿಂದ 25ರವರೆಗೆ ಟಾಪ್ 10 ಓರಿಜಿನಲ್ಸ್ ಅನ್ನು ರಿಲೀಸ್ ಮಾಡಿದೆ. ಇದರಲ್ಲಿ ಕೆಲವು ವೆಬ್ ಸೀರಿಸ್‌ಗಳು ಇನ್ನೂ ರಿಲೀಸ್ ಆಗಬೇಕಿದೆ. ಆಗಲೇ ಅವುಗಳ ಬಗ್ಗೆ ಬಜ್ ಕ್ರಿಯೇಟ್ ಆಗಿದೆ. ಅವುಗಳನ್ನೂ ಇಲ್ಲಿ ಸೇರಿಸಲಾಗಿದೆ.

'ಸಿರ್ಫ್ ಏಕ್ ಬಂದಾ ಕಾಫೀ ಹೇ'-ಟಾಪ್ 10
ಮನೋಜ್ ಬಾಜಪೇಯಿ ಓಟಿಟಿಯ ಶಾರುಖ್ ಖಾನ್ ಎಂದೇ ಜನಪ್ರಿಯ. ಇವರ 'ಸಿರ್ಫ್ ಏಕ್ ಬಂದಾ ಕಾಫೀ ಹೇ' ಟಾಪ್ 10 ಸ್ಥಾನದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಮೇ 23ರಂದು ಜೀ5ನಲ್ಲಿ ಈ ಸಿನಿಮಾ ರಿಲೀಸ್ ಆಗಿದೆ.
'ಯೂಟರ್ನ್'-ಟಾಪ್ 9
ಈ ವೆಬ್ ಸೀರಿಸ್‌ಗಳ ಮಧ್ಯೆ ಒಂದು ಸಿನಿಮಾ ಸೇರಿಕೊಂಡಿದೆ. 2016ರಲ್ಲಿ ತೆರೆಕಂಡಿದ್ದ 'ಯೂಟರ್ನ್' ಸಿನಿಮಾ ಹಿಂದಿ ರಿಮೇಕ್ ಟಾಪ್ 9ನಲ್ಲಿದೆ. ಏಪ್ರಿಲ್ 28ರಂದು ಈ ಸಿನಿಮಾ ಜೀ 5ನಲ್ಲಿ ರಿಲೀಸ್ ಆಗಿದೆ. ಇದು ಟಾಪ್ 9ನಲ್ಲಿದೆ.
'ರಾಣಾ ನಾಯ್ಡು'-ಟಾಪ್ 8
ದಕ್ಷಿಣ ಭಾರತದ ಇಬ್ಬರು ಸ್ಟಾರ್ ನಟರು ನಟಿಸಿರುವ ವೆಬ್ ಸಿರೀಸ್ 'ರಾಣಾ ನಾಯ್ಡು'. ವೆಂಕಟೇಶ್ ಹಾಗೂ ರಾಣಾ ನಾಯ್ಡು ಈ ವೆಬ್ ಸೀರಿಸ್‌ನಲ್ಲಿ ಕಾಣಿಸಿಕೊಂಡಿದ್ದು, ಮಾರ್ಚ್ 10ರಂದು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಿತ್ತು. ಮೇ ಮೂರನೇ ವಾರ ಟಾಪ್ 8ನಲ್ಲಿದ್ದು, ಟಾಪ್ ಪಟ್ಟಿಯಲ್ಲಿರೋ ದಕ್ಷಿಣ ಭಾರತ ನಟರಿರುವ ಏಕೈಕ ವೆಬ್ ಸೀರಿಸ್.
'ತಾಜ್ ರಿಗೈನ್ ಆಫ್ ರಿವೇಂಜ್ 2'-ಟಾಪ್ 7
'ತಾಜ್ ರಿಗೈನ್ ಆಫ್ ರಿವೇಂಜ್ 2' ವೆಬ್ ಸೀರಿಸ್ ಜೂನ್ 2ರಂದು ಜೀ 5ನಲ್ಲಿ ಬಿಡುಗಡೆಯಾಗಲಿದೆ. ನಾಸಿರುದ್ದೀನ್ ಶಾ, ಅದಿತಿ ರಾವ್ ಹೈದರಿ, ರಾಹುಲ್ ಬೋಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದು ಮೇ ಮೂರನೇ ವಾರ ಟಾಪ್ 7ನಲ್ಲಿದೆ.
'ಯೇ ಮೇರಿ ಫ್ಯಾಮಿಲಿ 2'-ಟಾಪ್ 6
ಅಮೆಜಾನ್ ಮಿನಿ ಟಿವಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ 'ಯೇ ಮೇರಿ ಫ್ಯಾಮಿಲಿ ಸೀಸನ್ 2' ಟಾಪ್ 6ನಲ್ಲಿದೆ. ಅವಸ್ಥಿ ಫ್ಯಾಮಿಲಿ ಜೊತೆ 15 ರಿತಿಕಾಳ ತೊಳಲಾಟವೇ ಈ ಸೀರಿಸ್ ಕಥಾವಸ್ತು.
'ಸಾಸ್ ಬಹು ಔರ್ ಫ್ಲೆಮಿಂಗೋ'-ಟಾಪ್ 5
ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಮೆ 5ರಂದು 'ಸಾಸ್ ಬಹು ಔರ್ ಫ್ಲೆಮಿಂಗೋ' ರಿಲೀಸ್ ಆಗಿದೆ. ಡಿಂಪಲ್ ಕಪಾಡಿಯಾ, ರಾಧಿಕಾ ಮದಾನ್, ಇಶಾ ತಲ್ವಾರ್, ನಾಸಿರುದ್ದೀನ್ ಶಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಇದು ಟಾಪ್ 5ನಲ್ಲಿದೆ.
'ಕಥಲ್ ಎ ಜಾಕ್‌ಫ್ರೂಟ್ ಮಿಸ್ಟರಿ'-ಟಾಪ್ 4
ಸ್ಥಳೀಯ ರಾಜಕೀಯ ವ್ಯಕ್ತಿಯ ಮನೆಯಲ್ಲಿರೋ ಹಸಿಹಣ್ಣು ಕಾಣೆಯಾಗುತ್ತೆ. ಅದರ ತನಿಖೆ ಮಾಡುವ ಲೇಡಿ ಪೊಲೀಸ್ ಆಫೀಸರ್ ಕಥೆಯೇ 'ಕಥಲ್ ಎ ಜಾಕ್‌ಫ್ರೂಟ್ ಮಿಸ್ಟರಿ' ಇದು ಟಾಪ್ 4ನಲ್ಲಿದೆ.
'ಫರ್ಜಿ'-ಟಾಪ್ 3
ಫ್ಯಾಮಿಲಿಮ್ಯಾನ್ ಖ್ಯಾತಿಯ ರಾಜ್ ಅಂಡ್ ಡಿಕೆ ನಿರ್ದೇಶಿಸಿ, ನಿರ್ಮಿಸಿರುವ 'ಫರ್ಜಿ' ಟಾಪ್ 3ರಲ್ಲಿದೆ. ಶಾಹಿದ್ ಕಪೂರ್ ಹಾಗೂ ವಿಜಯ್ ಸೇತುಪತಿ,ರಾಶಿ ಮೆನನ್ ನಟಿಸಿರುವ ಈ ವೆಬ್ ಸೀರಿಸ್ ಇನ್ನೂ ಟ್ರೆಂಡಿಂಗ್‌ನಲ್ಲಿದೆ.
'ಸಿಟಾಡೆಲ್'-ಟಾಪ್ 2
ಪ್ರಿಯಾಂಕಾ ಚೋಪ್ರಾ ಜೋನಾಸ್ ಹಾಗೂ ರಿಚರ್ಡ್ ಮ್ಯಾಡೆನ್ ನಟಿಸಿರುವ 'ಸಿಟಾಡೆಲ್' ವೆಬ್ ಸೀರಿಸ್ ಟಾಪ್ 2ನಲ್ಲಿದೆ. ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಈ ವೆಬ್ ಸಿರೀಸ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
'ದಹಾಡ್'-ಟಾಪ್ 1
ರೀಮಾ ಕಾಗ್ಟಿ ನಿರ್ದೇಶಿಸಿರುವ ಕ್ರೈಂ, ಮಿಸ್ಟರಿ ಥ್ರಿಲ್ಲರ್ ವೆಬ್ ಸೀರಿಸ್ 'ದಹಾಡ್' ಟಾಪ್ 1 ಸ್ಥಾನದಲ್ಲಿದೆ. ಸೋನಾಕ್ಷಿ ಸಿನ್ಹ, ಗುಲ್ಷನ್ ದೇವಯ್ಯ, ಸೋಹಮ್ ಶಾ ಹಾಗೂ ವಿಜಯ್ ವರ್ಮಾ ನಟಿಸಿರುವ ಈ ವೆಬ್ ಸಿರೀಸ್ ಅಮೆಜಾನ್ ಪ್ರೈಂನಲ್ಲಿ ಮೇ 12ರಂದು ರಿಲೀಸ್ ಆಗಿದ್ದು, ಮೇ ಮೂರನೇ ವಾರ ಟಾಪ್ ಸ್ಥಾನದಲ್ಲಿದೆ.


Click it and Unblock the Notifications











