2023ರಲ್ಲಿ ಅತೀ ಹೆಚ್ಚು ಗಂಟೆಗಳ ಕಾಲ ವೀಕ್ಷಿಸಲ್ಪಟ್ಟ ನೆಟ್‌ಫ್ಲಿಕ್ಸ್‌ನ ಟಾಪ್ 10 ಶೋಗಳ ಲಿಸ್ಟ್ ಇಲ್ಲಿದೆ

ವಿಶ್ವದ ಜನಪ್ರಿಯ ಓಟಿಟಿ ಸಂಸ್ಥೆ ನೆಟ್‌ಫ್ಲಿಕ್ಸ್ ಪ್ರತಿವರ್ಷ ಅತ್ಯುತ್ತಮ ಕಂಟೆಂಟ್ ಅನ್ನು ವೀಕ್ಷಕರ ಮುಂದೆ ತರುತ್ತಿದೆ. ನೆಟ್‌ಫ್ಲಿಕ್ಸ್ ಉತ್ಕೃಷ್ಠ ಮಟ್ಟದ ಸಿನಿಮಾ, ರಿಯಾಲಿಟಿ ಶೋಗಳನ್ನು ಓಟಿಟಿ ಪ್ರಿಯರಿಗಾಗಿ ತರುತ್ತಿದೆ. ಇದೂವರೆಗೂ ತನ್ನ ವೇದಿಕೆಯಲ್ಲಿ ಯಾವ ಸಿನಿಮಾ ಹಾಗೂ ಶೋಗಳು ಯಾವ ಮಟ್ಟಿಗೆ ಪ್ರದರ್ಶನ ಕಂಡಿವೆ ಅನ್ನೋ ಮಾಹಿತಿಯನ್ನು ಬಿಟ್ಟುಕೊಟ್ಟಿರಲಿಲ್ಲ.

ಈಗ ಇದೇ ಮೊದಲ ಬಾರಿಗೆ 2023ರಲ್ಲಿ ತನ್ನ ವೇದಿಕೆಯಲ್ಲಿ ಅತೀ ಹೆಚ್ಚು ವೀವ್ಸ್ ಪಡೆದ ಶೋಗಳನ್ನು ಪಟ್ಟಿ ಮಾಡಿದೆ. ನೆಟ್‌ಫ್ಲಿಕ್ಸ್ ತನ್ನ ವೇದಿಕೆಯ ಟಾಪ್ 10 ಶೋಗಳನ್ನು ಪಟ್ಟಿ ಮಾಡಿ ಜನರ ಮುಂದೆ ಇಟ್ಟಿದೆ.

ಶೋ, ವೆಬ್ ಸೀರಿಸ್ ಹಾಗೂ ಸಿನಿಮಾ ಸೇರಿ ಸುಮಾರು 18 ಸಾವಿರ ಟೈಟಲ್‌ಗಳನ್ನು ಇಟ್ಟುಕೊಂಡು ಟಾಪ್ 10 ಶೋಗಳನ್ನು ನೆಟ್‌ಫ್ಲಿಕ್ಸ್ ಪಟ್ಟಿ ಮಾಡಿದೆ. ಈ ವರ್ಷ 100 ಬಿಲಿಯನ್ ಹತ್ತಿರ ಶೋಗಳು ಪ್ರದರ್ಶನ ಕಂಡಿವೆ ಎಂದು ನೆಟ್‌ಪ್ಲಿಕ್ಸ್ ಹೇಳಿಕೊಂಡಿದೆ.

OTT platform Netflixs top 10 most-viewed shows in the year 2023

'ಫುಬಾರ್' ಸೀಸನ್ 1

ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ನಟನೆಯ 'ಫುಬಾರ್' ಸೀಸನ್ 1 ಅನ್ನು ನೆಟ್‌ಫಿಕ್ಸ್ ಪ್ರಸಾರ ಮಾಡಿತ್ತು. 2023, ಮೇ 25ರಂದು ಪ್ರಸಾರ ಆರಂಭಿಸಿದ್ದ 266.2 ಮಿಲಿಯನ್ ಗಂಟೆಗಳಷ್ಟು ವೀವ್ಸ್ ಪಡೆದುಕೊಂಡಿದೆ.

'ಗಿನ್ನಿ & ಜಾರ್ಜಿಯಾ' ಸೀಸನ್ 1

ನೆಟ್‌ಫ್ಲಿಕ್ಸ್‌ನಲ್ಲಿ 'ಗಿನ್ನಿ & ಜಾರ್ಜಿಯಾ' ಫೆಬ್ರವರಿ 24, 2021ರಲ್ಲಿ ರಿಲೀಸ್ ಆಗಿತ್ತು. ಈ ಸೀರಿಸ್ ಈ ವರ್ಷವೂ ಅತೀ ಹೆಚ್ಚು ಗಂಟೆಗಳ ಕಾಲ ವೀಕ್ಷಿಸಲ್ಪಟ್ಟ ಶೋಗಳ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಈ ವರ್ಷ 'ಗಿನ್ನಿ & ಜಾರ್ಜಿಯಾ' ಸೀಸನ್ 1 ಅನ್ನು 302.1 ಮಿಲಿಯನ್ ಗಂಟೆಗಳ ಕಾಲ ವೀಕ್ಷಿಸಲ್ಪಟ್ಟಿದೆ.

'ಔಟರ್ ಬ್ಯಾಂಕ್ಸ್' ಸೀಸನ್ 3

ನಿಧಿಯನ್ನು ಹುಡುಕಿಕೊಂಡು ಹೋಗುವವರ ಸುತ್ತ ಸಾಗುವ 'ಔಟರ್ ಬ್ಯಾಂಕ್ಸ್' ಸೀಸನ್ 3 ಫೆಬ್ರವರಿ 23, 2023 ರಿಲೀಸ್ ಆಗಿತ್ತು. ಇದು ನೆಟ್‌ಫ್ಲಿಕ್ಸ್‌ನ 8ನೇ ಸ್ಥಾನದಲ್ಲಿದೆ. ಇದೂವರೆಗೂ 402.5 ಮಿಲಿಯನ್ ಗಂಟೆಗಳ ಕಾಲ ವೀಕ್ಷಣೆ ಕಂಡಿದೆ.

'ಲಾ ರೀನಾ ಡೆಲ್ ಸುರ್' ಸೀಸನ್ 3

ಡ್ರಗ್ಸ್ ಟ್ರಾಫಿಕ್ ಸುತ್ತ ಸಾಗುವ ಈ 'ಲಾ ರೀನಾ ಡೆಲ್ ಸುರ್' ಮೂರನೇ ಸೀಸನ್ ನೆಟ್‌ಫಿಕ್ಸ್‌ನಲ್ಲಿ ತೆರೆಕಂಡು ಜನಪ್ರಿಯತೆ ಕಂಡಿತ್ತು. ಡಿಸೆಂಬರ್, 30, 2022ರಂದು ತೆರೆಕಂಡಿದ್ದ ಈ ಸೀರಿಸ್ 429.6 ಮಿಲಿಯನ್ ಗಂಟೆಗಳ ಕಾಲ ವೀಕ್ಷಣೆ ಕಂಡಿದೆ.

'ಯು' ಸೀಸನ್ 4

ಫೆಬ್ರವರಿ 9, 2023ಯಲ್ಲಿ ನೆಟ್‌ಫ್ಲಿಕ್ಸ್ 'ಯು' ಅನ್ನೋ ವೆಬ್ ಸೀರಿಸ್‌ನ ನಾಲ್ಕನೇ ಸೀಸನ್ ಅನ್ನು ಸ್ಟ್ರೀಮಿಂಗ್ ಮಾಡಿತ್ತು. ಈ ವೆಬ್‌ ಸೀರಿಸ್‌ಗೆ ವೀಕ್ಷಕರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಇದೂವರೆಗೂ ಈ ವೆಬ್‌ ಸೀರಿಸ್ 440.6 ಮಿಲಿಯನ್ ವೀವ್ಸ್ ಕಂಡಿದೆ.

OTT platform Netflixs top 10 most-viewed shows in the year 2023

'ಕ್ವೀನ್ ಷಾರ್ಲೆಟ್: ಎ ಬ್ರಿಡ್ಜರ್ಟನ್ ಸ್ಟೋರಿ'

ನೆಟ್‌ಫ್ಲಿಕ್ಸ್‌ನ ಜನಪ್ರಿಯ ಶೋಗಳಲ್ಲಿ 'ಕ್ವೀನ್ ಷಾರ್ಲೆಟ್: ಎ ಬ್ರಿಡ್ಜರ್ಟನ್ ಸ್ಟೋರಿ' ಕೂಡ ಒಂದು. ಇದಕ್ಕೂ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಮೇ 4, 2023ರಲ್ಲಿ ತೆರೆಕಂಡಿದ್ದ ಈ ಶೋ ಇದೂವರೆಗೂ 503 ಮಿಲಿಯನ್ ಗಂಟೆಗಳ ಕಾಲ ವೀಕ್ಷಣೆ ಕಂಡಿದೆ.

'ವೆಡ್‌ನೆಸ್ಡೆ' ಸೀಸನ್ 1

2022 ನವೆಂಬರ್ 23ರಂದು 'ವೆಡ್‌ನೆಸ್ಡೆ' ಸೀಸನ್ 1 ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಿತ್ತು. ಇದು ಸೀರಿಸ್‌ಗೂ ವೀಕ್ಷಕರಿಂದ ತುಂಬಾನೇ ಪ್ರಶಂಸೆ ವ್ಯಕ್ತವಾಗಿತ್ತು. ಈ ಸೀಸನ್ ಕೂಡ ಸುಮಾರು 507.7 ಮಿಲಿಯನ್ ಗಂಟೆಗಳ ಕಾಲ ವೀಕ್ಷಣೆ ಕಂಡಿದೆ.

'ದಿ ಗ್ಲೋರಿ' ಸೀಸನ್ 1

ನೆಟ್‌ಫ್ಲಿಕ್ಸ್ ಟಾಪ್‌ 3 ಸ್ಥಾನದಲ್ಲಿರೋ ಸಿರೀಸ್ 'ದಿ ಗ್ಲೋರಿ' ಸೀಸನ್ 1. ಇದರ ಸ್ಟ್ರೀಮಿಂಗ್ ಡಿಸೆಂಬರ್ 30, 2022ರಲ್ಲಿ ಶುರುವಾಗಿತ್ತು. ಈ ಕೊರಿಯನ್ ಸೀರಿಸ್‌ಗೆ ವಿಶ್ವದಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಇದೂವರೆಗೂ ಸುಮಾರು 622.8 ಮಿಲಿಯನ್ ಗಂಟೆಗಳ ಕಾಲ ವೀಕ್ಷಣೆ ಕಂಡಿದೆ.

'ಗಿನ್ನಿ & ಜಾರ್ಜಿಯಾ' ಸೀಸನ್ 2

ತಾಯಿನೇ ಕೊಲೆಗಾರ್ತಿ ಅನ್ನೋದನ್ನು ಗೊತ್ತಿದ್ದರೂ, ಅವರೊಂದಿಗೆ ಹೇಗೆ ಬದುಕುವುದು? ಅನ್ನೋದನ್ನು ಕಂಡುಕೊಳ್ಳುವುದೇ 'ಗಿನ್ನಿ & ಜಾರ್ಜಿಯಾ' ಸೀಸನ್ 2 ಒಂದೆಳೆ ಕಥೆ. ಈ ಸೀರಿಸ್‌ಗೆ ವೀಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಜನವರಿ 5, 2023ರಲ್ಲಿ ಸ್ಟ್ರೀಮಿಂಗ್ ಆರಂಭ ಆಗಿದ್ದ ಈ ಸೀರಿಸ್ 665.1 ಮಿಲಿಯನ್ ಗಂಟೆಗಳ ಕಾಲ ಸ್ಟ್ರೀಮಿಂಗ್ ಆಗಿತ್ತು. ಇದು ನೆಟ್‌ಫ್ಲಿಕ್ಸ್‌ನಲ್ಲಿ 2ನೇ ಸ್ಥಾನದಲ್ಲಿದೆ.

'ದಿ ನೈಟ್ ಏಜೆಂಟ್' ಸೀಸನ್ 1

ನೆಟ್‌ಫ್ಲಿಕ್ಸ್‌ನ ಟಾಪ್‌ನಲ್ಲಿ 'ದಿ ನೈಟ್ ಏಜೆಂಟ್' ಇದೆ. ಈ ಸೀರಿಸ್‌ಗೆ ವಿಶ್ವದ ಮೂಲೆ ಮೂಲೆಯಿಂದ ಪ್ರಶಂಸೆ ವ್ಯಕ್ತವಾಗಿದೆ. ಮಾರ್ಚ್ 3, 2023ರಂದು ಪ್ರಸಾರ ಆರಂಭ ಆಗಿತ್ತು. ಅಲ್ಲಿಂದ ಇಲ್ಲಿವರೆಗೂ ಸುಮಾರು 812.1 ಮಿಲಿಯನ್ ಗಂಟೆಗಳ ಕಾಲ ವೀಕ್ಷಣೆ ಮಾಡಲಾಗಿದೆ.

More from Filmibeat

English summary
Netflix's top 10 most-viewed shows in 2023:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X