OTTಯಲ್ಲಿ ಈ ವಾರನೂ ಹೊಸ ವೆಬ್ ಸಿರೀಸ್,ಸಿನಿಮಾಗಳಿಗೇನು ಬರವಿಲ್ಲ: ವೀಕೆಂಡ್‌ನಲ್ಲಿ ಮಸ್ತ್ ಮನರಂಜನೆ ಗ್ಯಾರಂಟಿ
ಕೋವಿಡ್ ಬಳಿಕ ಜನರ ಅಭಿರುಚಿ ಬದಲಾಗಿದೆ. ಅದೆಷ್ಟು ದೊಡ್ಡ ಸಿನಿಮಾ ಥಿಯೇಟರ್‌ಗೆ ಗ್ರ್ಯಾಂಡ್ ಆಗಿ ಲಗ್ಗೆ ಇಟ್ಟರೂ, ಓಟಿಟಿಯೊಳಗೆ ಕಣ್ಣಾಯಿಸುವುದನ್ನು ಜನ ಮರೆಯೋದಿಲ್ಲ. ಓಟಿಟಿಯಲ್ಲಿ ರಿಲೀಸ್ ಆಗಿರೋ ಹೊಸ ಹೊಸ ವೆಬ್ ಸಿರೀಸ್, ಸಿನಿಮಾಗಳನ್ನೊಮ್ಮೆ ನೋಡಲೇಬೇಕು.
ಸದ್ಯ ಸಿನಿಪ್ರಿಯರ ಮನಸ್ಥಿತಿ ಹೀಗಿದೆ. ಅದಕ್ಕೆ ತಕ್ಕಂತೆ ಓಟಿಟಿ ವೇದಿಕೆಗಳು ಕೂಡ ಸುಮ್ಮನೆ ಕೂತಿಲ್ಲ. ಪ್ರತಿವಾರ ಥಿಯೇಟರ್‌ಗಳಿಗೆ ಕಾಂಪಿಟೇಷನ್ ಕೊಡುವುದಕ್ಕೆ ಹೊಸ ವೆಬ್ ಸಿರೀಸ್‌ಗಳನ್ನು ರಿಲೀಸ್ ಮಾಡುತ್ತಲೇ ಇರುತ್ತವೆ. ಈ ವಾರ ಸಿನಿಮಾಗಳು ಕೂಡ ಸೇರಿಕೊಂಡಿರೋದು ವಿಶೇಷ.

ಓಟಿಟಿ ದೈತ್ಯಗಳೆನಿಸಿಕೊಂಡಿರುವ ನೆಟ್‌ಫ್ಲಿಕ್ಸ್,ಅಮೆಜಾನ್ ಪ್ರೈಂ, ಡಿಜ್ನಿ ಹಾಟ್‌ಸ್ಟಾರ್, ಆಹಾ, ಜೀ 5ನಲ್ಲಿ ಹೊಸ ಹೊಸ ಕಂಟೆಂಟ್ ನೋಡುವುದಕ್ಕೆ ಸಿಗುತ್ತಿದೆ. ಹಾಗಿದ್ದರೆ, ಯಾವ್ಯಾವ ವೇದಿಕೆಯಲ್ಲಿ ಹೊಸ ಕಂಟೆಂಟ್ ಯಾವುದು ರಿಲೀಸ್ ಆಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಮಾರ್ಚ್ 24-ನೆಟ್‌ಫ್ಲಿಕ್ಸ್
ಓಟಿಟಿಯಲ್ಲಿ ಕ್ಯಾಲಿಟಿ ಕಂಟೆಂಡ್ ಕೊಡುತ್ತಿರುವುದರಲ್ಲಿ ನೆಟ್‌ಫ್ಲಿಕ್ಸ್ ಮುಂಚೂಣಿಯಲ್ಲಿದೆ. ಮಾರ್ಚ್ 24ರಂದು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗುತ್ತಿರುವ ವೆಬ್ ಸಿರೀಸ್ ಹಾಗೂ ಸಿನಿಮಾಗಳ ಪಟ್ಟಿ ಹೀಗಿದೆ.
ಚೋರ್ ನಿಕಲ್ ಕೆ ಭಾಗ (ಸಿನಿಮಾ)-ಹಿಂದಿ
ಹು ವರ್ ವಿ ರನ್ನಿಂಗ್ ಫ್ರಮ್? ಸೀಸನ್ 1 (ವೆಬ್ ಸಿರೀಸ್)-ಇಂಗ್ಲಿಷ್
ಐ ಯಾಮ್ ಜಾರ್ಜಿನ ಸೀಸನ್ 2 (ರಿಯಾಲಿಟಿ ಟಿವಿ)-ಇಂಗ್ಲಿಷ್
ಲವ್ ಇಸ್ ಬ್ಲೈಂಡ್ ಸೀಸನ್ 4 (ಟಿವಿ ಶೋ)-ಇಂಗ್ಲಿಷ್

ಅಮೆಜಾನ್ ಪ್ರೈಂ ವಿಡಿಯೋ
ಅಮೆಜಾನ್ ಪ್ರೈಂ ಕೂಡ ಕೆಲವು ಇಂಟ್ರೆಸ್ಟಿಂಗ್ ಕಂಟೆಂಟ್‌ಗಳನ್ನು ಸ್ಟ್ರೀಮಿಂಗ್ ಮಾಡುತ್ತಿದೆ. ಅದರ ಪಟ್ಟಿ ಇಲ್ಲಿದೆ.
ಪರ್ಫೆಕ್ಟ್ ಅಡಿಕ್ಷನ್ (ಸಿನಿಮಾ)-ಇಂಗ್ಲಿಷ್
ಕಚೇರ್ ಮನುಶ್ (ಸಿನಿಮಾ)-ಬೆಂಗಾಲಿ
ರೆಗ್ಗಿ (ಡಾಕ್ಯೂಮೆಂಟರಿ)-ಇಂಗ್ಲಿಷ್
ಡೊಮ್,ಹ್ಯಾಪಿ ಫ್ಯಾಮಿಲಿ: ಕಂಡಿಷನ್ ಅಪ್ಲೈ-ಹೊಸ ಸಂಚಿಕೆಗಳು
ಡೈಸಿ ಜೋನಸ್ & ದಿ ಸಿಕ್ಸ್, ಸ್ಟಾರ್ ಟ್ರೆಕ್: ಪಿಕರ್ಡ್-ಹೊಸ ಸಂಚಿಕೆಗಳು
ಡಿಸ್ನಿ+ಹಾಟ್‌ಸ್ಟಾರ್
ಇನ್ನು ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಈ ವಾರ ಎರಡು ಸೀರಿಸ್‌ಗಳು ರಿಲೀಸ್ ಆಗಿವೆ.
ಆಶಿಕಾನಾ - ಹೊಸ ಸಂಚಿಕೆ
ಡಿಯರ್ ಇಶ್ಕ್ - ಹೊಸ ಸಂಚಿಕೆ
ಜೀ 5
ಇನ್ನು ಜೀ 5ನಲ್ಲೂ ಈ ವಾರ ಸಾಕಷ್ಟು ಫ್ರೆಶ್ ಕಂಟೆಂಟ್ ವೀಕ್ಷಕರಿಗೆ ಸಿಗಲಿದೆ.
ಕಂಜೂಸ್ ಮಖಿಚೂಸ್ (ಸಿನಿಮಾ)- ಹಿಂದಿ
ಪೂವನ್ (ಸಿನಿಮಾ) - ಮಲಯಾಳಂ
ದೇ ದಕ್ಕ 2(ಸಿನಿಮಾ) ಮರಾಠಿ
ಸೆಂಗಲಂ ಸೀಸನ್ 2 - ತಮಿಳು, ತೆಲುಗು
ಆಹಾ
ಇನ್ನು ಆಹಾದಲ್ಲಿ ಈ ಬಾರಿ ಒಂದೇ ಒಂದು ತೆಲುಗು ಸಿರೀಸ್ ರಿಲೀಸ್ ಆಗಿದೆ. ಅದುವೇ 'ಡಿಸೆಂಡಂಟ್ಸ್ ಆಫ್ ದಿ ಸನ್ ಸೀಸನ್ 1'- ತೆಲುಗು. ಈ ವಾರ, ಹಿಂದಿ, ಇಂಗ್ಲಿಷ್,ತಮಿಳು,ತೆಲುಗು,ಮಲಯಾಳಂ ಭಾಷೆಯ ಸಿನಿಪ್ರಿಯರಿಗೆ ಹಬ್ಬ ಅಂತಲೇ ಹೇಳಬಹುದು.
ನೆಟ್‌ಫ್ಲಿಕ್ಸ್,ಅಮೆಜಾನ್ ಪ್ರೈಂ ವಿಡಿಯೋ, ಜೀ 5, ಡಿಜ್ನಿ ಹಾಟ್‌ಸ್ಟಾರ್ ಬಿಟ್ಟು ಸೋನಿ ಲೈವ್, ವೂಟ್,ಉಲ್ಲು, ಆಲ್ಟ್ ಬಾಲಾಜಿ, ಓಹೊ ಗುಜರಾತಿ ಓಟಿಟಿ ವೇದಿಕೆಗಳಲ್ಲಿ ಉತ್ತಮ ಕಂಟೆಂಟ್ ಇರುವ ಸಿನಿಮಾ ಹಾಗೂ ವೆಬ್ ಸಿರೀಸ್‌ಗಳು ರಿಲೀಸ್ ಆಗಿವೆ.


Click it and Unblock the Notifications











