OTT Releases This Week: ಈ ವಾರ ಓಟಿಟಿಯಲ್ಲಿ ರಿಲೀಸ್ ಆಗುತ್ತಿರೋ ಸಿನಿಮಾ, ವೆಬ್‌ ಸೀರಿಸ್ ಪಟ್ಟಿ ಇಲ್ಲಿದೆ!

ಪ್ರತಿ ವಾರ ಓಟಿಟಿಯಲ್ಲಿ ಹೊಸ ಹೊಸ ವೆಬ್ ಸೀರಿಸ್ ಹಾಗೂ ಸಿನಿಮಾಗಳನ್ನು ರಿಲೀಸ್ ಆಗುತ್ತಲೇ ಇರುತ್ತೆ. ಓಟಿಟಿ ಪ್ರಿಯರಿಗಾಗಿ ಹೊಚ್ಚ ಕಂಟೆಂಟ್ ಅನ್ನು ಕೊಡುತ್ತವೆ. ದಿನದಿಂದ ದಿನಕ್ಕೆ ಓಟಿಟಿ ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಹೊಸ ಕಂಟೆಂಟ್‌ಗಳು ಬರುತ್ತಿವೆ.

ಭಾರತದಲ್ಲೂ ಓಟಿಟಿ ವೇದಿಕೆಗಳು ಗಟ್ಟಿಯಾಗಿ ನೆಲೆಯೂರುತ್ತಿವೆ. ಥಿಯೇಟರ್‌ಗಳಿಂದ ಬಂದು ಸಿನಿಮಾ ನೋಡುವುದಕ್ಕೆ ಜನರು ಮನಸ್ಸು ಮಾಡುತ್ತಿಲ್ಲ. ಇದನ್ನೇ ಬಳಸಿಕೊಳ್ಳುತ್ತಿರುವ ಓಟಿಟಿ ಸಂಸ್ಥೆಗಳು ವೀಕ್ಷಕರನ್ನು ಸೆಳೆಯುವುದಕ್ಕೆ ಹೊಸ ಸಿನಿಮಾ ಹಾಗೂ ವೆಬ್ ಸಿರೀಸ್‌ಗಳನ್ನು ರಿಲೀಸ್ ಮಾಡುತ್ತಿವೆ.

ಈ ವಾರ ಕೂಡ ನೆಟ್‌ಫ್ಲಿಕ್ಸ್, ಡಿಸ್ನಿ+ಹಾಟ್‌ಸ್ಟಾರ್, ಜೀ 5 ನಲ್ಲಿ ಹೊಸ ಸಿನಿಮಾ ಹಾಗೂ ವೆಬ್‌ ಸೀರಿಸ್ ರಿಲೀಸ್ ಆಗುತ್ತಿವೆ. ಹಾಗಿದ್ರೆ, ಸಿನಿಮಾಗಳು ಯಾವುದು? ವಿಶೇಷತೆಯೇನು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ..

OTT Releases This Week

'ದಿ ಟ್ರಯಲ್'-ಡಿಸ್ನಿ+ ಹಾಟ್‌ಸ್ಟಾರ್

ಬಾಲಿವುಡ್‌ ನಟಿ ಕಾಜೋಲ್ ಓಟಿಟಿಗೆ ಎಂಟ್ರಿ ಕೊಟ್ಟಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ನೆಟ್‌ಫ್ಲಿಕ್ಸ್‌ನಲ್ಲಿ ತೆರೆಕಂಡಿದ್ದ 'ಲಸ್ಟ್ ಸ್ಟೋರೀಸ್ 2'ನಲ್ಲಿ ಕಾಣಿಸಿಕೊಂಡಿದ್ದರು. ಈಗ 'ದಿ ಟ್ರಯಲ್' ಅನ್ನೋ ವೆಬ್ ಸೀರೀಸ್‌ನಲ್ಲಿ ನಟಿಸಿದ್ದಾರೆ.

'ದಿ ಟ್ರಯಲ್' ಅನ್ನೋ ವೆಬ್ ಸೀರಿಸ್‌ನಲ್ಲಿ ಕಾಜೋಲ್ ಗೃಹಿಣಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತನ್ನ ಪತಿ ಜೈಲಿ ಹೋದ ಬೆನ್ನಲ್ಲೇ 13 ವರ್ಷಗಳ ಬಳಿಕ ತನ್ನ ಕುಟುಂಬಕ್ಕಾಗಿ ಮತ್ತೆ ಕೆಲಸಕ್ಕೆ ಮರಳುತ್ತಾರೆ. ಅಲ್ಲಿಂದ ಆಕೆ ಬದುಕು ಹೇಗೆ ಬದಲಾಗುತ್ತೆ ಅನ್ನೋದು ವೆಬ್‌ ಸೀರಿಸ್ ಕಥೆ. ಇದು ಜನಪ್ರಿಯ 'ದಿ ಗುಡ್ ವೈಫ್' ಅನ್ನೋ ವೆಬ್ ಸೀರಿಸ್‌ನ ರೀಮೇಕ್. ಇದು ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಜುಲೈ 14ರಂದು ರಿಲೀಸ್ ಆಗಲಿದೆ.

OTT Releases This Week

'ಕೊಹ್ರಾ'-ನೆಟ್‌ಫ್ಲಿಕ್ಸ್

ನೆಟ್‌ಫ್ಲಿಕ್ಸ್‌ನಲ್ಲಿ 'ಕೊಹ್ರಾ' ಅನ್ನೋ ಹೊಸ ವೆಬ್ ಸೀರಿಸ್ ಜುಲೈ 15ರಂದು ಪ್ರೀಮಿಯರ್ ಆಗಲಿದೆ. ಮದುವೆ ಒಂದು ದಿನ ಮುನ್ನ ನ್‌ಆರ್‌ಐ ವರ ಸಾವನ್ನಪ್ಪುತ್ತಾನೆ. ಆತನ ಸಾವಿನ ತನಿಖೆ ಮಾಡುವ ಇಬ್ಬರು ಪೊಲೀಸ್ ಅಧಿಕಾರಿಗಳ ಕಥೆಯನ್ನು ಈ ವೆಬ್‌ ಸೀರಿಸ್‌ನಲ್ಲಿ ತೋರಿಸಲಾಗಿದೆ.

ಈ ವೆಬ್ ಸೀರಿಸ್‌ನಲ್ಲಿ ಬರುನ್ ಸೋಬ್ಟಿ, ಸುವಿಂದರ್ ವಿಕ್ಕಿ, ಹರ್ಲೀನ್ ಸೇತಿ, ಮನೀಶ್ ಚೌಧರಿ, ವರುಣ್ ಬಡೊಲಾ ಹಾಗೂ ರಾಚೆಲ್ ಶೆಲ್ಲಿ ನಟಿಸಿದ್ದಾರೆ. 'ಕೊಹ್ರಾ' ವೆಬ್ ಸೀರಿಸ್ ವೀಕ್ಷಕರಿಗೆ ಸಖತ್ ಇಂಟ್ರೆಸ್ಟಿಂಗ್ ಅಂತ ಅನಿಸಿದೆ.

OTT Releases This Week

'ಮಾಯಾ ಬಜಾರ್ ಫಾರ್ ಸೇಲ್'-ಜೀ 5

ಜೀ 5ನಲ್ಲಿ 'ಮಾಯಾ ಬಜಾರ್ ಫಾರ್ ಸೇಲ್' ಅನ್ನೋ ವಿಡಂಬನಾತ್ಮಕ ವೆಬ್ ಸೀರಿಸ್ ರಿಲೀಸ್ ಆಗುತ್ತಿದೆ. ಹೈ ಎಂಡ್ ಗೇಟೆಡ್ ಕಮ್ಯೂಟಿಯಲ್ಲಿರುವ ಕುಟುಂಬಗಳನ್ನು ಮುಖ್ಯ ವಿಷಯವನ್ನಾಗಿಟ್ಟುಕೊಂಡು ಈ ವೆಬ್ ಸೀರಿಸ್ ಅನ್ನು ನಿರ್ಮಾಣ ಮಾಡಲಾಗಿದೆ. ಇದು ಜುಲೈ 14ರಂದು ರಿಲೀಸ್ ಆಗಲಿದೆ. ಇದರಲ್ಲಿ ನವ್‌ದೀಪ್ ಅಲ್ಲಪೊಲು, ಈಶಾ ರೆಬ್ಬಾ, ನರೇಶ್ ವಿಜಯ ಕೃಷ್ಣ, ಹರಿತೇಜಾ, ಜಾನ್ಸಿ ಲಕ್ಷ್ಮಿ, ಕೋಟ ಶ್ರೀನಿವಾಸ ರಾವ್ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

OTT Releases This Week

'ಬರ್ಡ್ ಬಾಕ್ಸ್ ಬಾರ್ಸಿಲೋನಾ'-ನೆಟ್‌ಫ್ಲಿಕ್ಸ್

2018ರಲ್ಲಿ ತೆರೆಕಂಡಿದ್ದ 'ಬರ್ಡ್ ಬಾಕ್ಸ್' ಅನ್ನೋ ಸಿನಿಮಾ ರಿಲೀಸ್ ಆಗಿತ್ತು. ಇದರ ಸೀಕ್ವೆಲ್ 'ಬರ್ಡ್ ಬಾಕ್ಸ್ ಬಾರ್ಸಿಲೋನಾ' ಪ್ರೀಮಿಯರ್ ಆಗಲಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಇದೇ ಜುಲೈ 14ರಂದು ಪ್ರೀಮಿಯರ್ ಆಗಲಿದೆ. ತಂದೆ ಹಾಗೂ ಮಗಳು ಇಬ್ಬರೂ ಭಯಾನಕ ಭವಿಷ್ಯದ ಒಳಗೆ ಹೋಗುತ್ತಾರೆ. ಅಲ್ಲಿ ಭಯಾನಕ ಸಾವುಗಳನ್ನು ಕಾಣುವ ಕಥೆಯಾಗಿದೆ.

More from Filmibeat

English summary
OTT Releases This Week: The trial, Kohrra, Maya Baazar For Sale, Bird Box Barcelona, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X