Bheelma Nayak: 'RRR' ಟಕ್ಕರ್ ಕೊಡಲು ಒಂದು ದಿನ ಮುನ್ನವೇ 'ಭೀಮ್ಲಾ ನಾಯಕ್' ಒಟಿಟಿಗೆ ಲಗ್ಗೆ
ತೆಲುಗಿನ ಪವರ್‌ಸ್ಟಾರ್ ಪವನ್ ಕಲ್ಯಾಣ್ ಸಿನಿಮಾ 'ಭೀಮ್ಲಾ ನಾಯಕ್' ಥಿಯೇಟರ್‌ನಲ್ಲಿ ರಿಲೀಸ್ ಆಗಿದೆ. ಚಿತ್ರಮಂದಿರದಲ್ಲಿ 25 ದಿನಗಳನ್ನು ಮುಗಿಸಿದ್ದು, 26ನೇ ದಿನಕ್ಕೆ ಕಾಲಿಟ್ಟಿದೆ. ಬಾಕ್ಸಾಫೀಸ್‌ನಲ್ಲಿ ಸೂಪರ್ ಕಲೆಕ್ಷನ್ ಮಾಡಿರುವ ಈ ಸಿನಿಮಾ ಒಟಿಟಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿ ನಿಂತಿದೆ.
ಈ ವಾರ ಸಿನಿಮಾ ಪ್ರಿಯರಿಗೆ ಬಂಪರ್ ಆಫರ್ ಸಿಕ್ಕಿದೆ. ಒಂದ್ಕಡೆ ರಾಜಮೌಳಿ ನಿರ್ದೇಶನದ ಸಿನಿಮಾ RRR, ಇನ್ನೊಂದ್ಕಡೆ ಪವನ್ ಕಲ್ಯಾಣ್ ಅಭಿನಯದ 'ಭೀಮ್ಲಾ ನಾಯಕ್' ಈ ಎರಡೂ ಸಿನಿಮಾಗಳನ್ನು ಈ ವಾರ ನೋಡುವ ಅವಕಾಶ ಸಿನಿಪ್ರಿಯರಿಗೆ ಸಿಕ್ಕಿದೆ.
'ಭೀಮ್ಲಾ ನಾಯಕ್' ಈಗಾಗಲೇ ಮಾರ್ಚ್ 25ಕ್ಕೆ ಒಟಿಟಿಯಲ್ಲಿ ರಿಲೀಸ್ ಆಗುತ್ತೆ ಅಂತ ಡೇಟ್ ಅನೌನ್ಸ ಮಾಡಿತ್ತು. ಆದರೆ, ದಿಢೀರನೇ ಬಿಡುಗಡೆ ದಿನವನ್ನೇ ಬದಲಾವಣೆ ಮಾಡಿಕೊಂಡಿದೆ. ಅಂದುಕೊಂಡಿದ್ದಕ್ಕಿಂತಲೂ ಮುನ್ನವೇ ಈ ಸಿನಿಮಾ ರಿಲೀಸ್ ಆಗುತ್ತಿದೆ. ಅಷ್ಟಕ್ಕೂ ಈ ನಿರ್ಧಾರದ ಹಿಂದೆ ರಾಜಮೌಳಿ RRR ಸಿನಿಮಾ ಇರಬಹುದು ಎಂಬ ಗುಮಾನಿ ಮೂಡುತ್ತಿದೆ.

ಒಂದು ದಿನ ಮುನ್ನವೇ ಭೀಮ್ಲಾ ನಾಯಕ್ ರಿಲೀಸ್
'ಭೀಮ್ಲಾ ನಾಯಕ್' ಸಿನಿಮಾ ಇನ್ನೂ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿದೆ. ಪವನ್ ಕಲ್ಯಾಣ್ ಹಾಗೂ ರಾಣಾ ದಗ್ಗುಬಾಟಿ ಇದೇ ಮೊದಲ ಬಾರಿ ಮುಖಾಮುಖಿಯಾಗಿದ್ದು, ಇಬ್ಬರ ಅಭಿಮಾನಿಗಳಿಗೂ ಈ ಸಿನಿಮಾ ಸಖತ್ ಕಿಕ್ ಕೊಟ್ಟಿದೆ. ಆದರೆ, ಸಿನಿಮಾ ಬಿಡುಗಡೆಯಾಗಿ ಒಂದು ತಿಂಗಳು ಕಳೆಯುವುದರೊಳಗೆ 'ಭೀಮ್ಲಾ ನಾಯಕ್' ಒಟಿಟಿಗೆ ಲಗ್ಗೆಇಡುತ್ತಿದೆ. ಡಿಸ್ನಿ+ ಹಾಟ್ ಸ್ಟಾರ್‌ನಲ್ಲಿ 'ಭೀಮ್ಲಾ ನಾಯಕ್' ರಿಲೀಸ್ ಆಗುತ್ತಿದ್ದು, ಮೊದಲು ಮಾರ್ಚ್ 25ಕ್ಕೆ ಎನ್ನಲಾಗಿತ್ತು. ಆದ್ರೀಗ ಒಂದು ದಿನ ಮುನ್ನ ಅಂದರೆ, ಮಾರ್ಚ್ 24ಕ್ಕೆ ಬಿಡುಗಡೆಯಾಗುತ್ತಿದ್ದೆ. ಈ ನಿರ್ಧಾರಕ್ಕೆ ಕಾರಣ RRR ಎನ್ನಲಾಗಿದೆ.

RRR ರಿಲೀಸ್‌ಗೂ ಮುನ್ನವೇ 'ಭೀಮ್ಲಾ ನಾಯಕ್'
ರಾಜಮೌಳಿಯ ಮೆಗಾ ಸಿನಿಮಾ RRR. ಹಲವು ಬಾರಿ ಸಿನಿಮಾ ರಿಲೀಸ್ ಡೇಟ್ ಅನ್ನು ಪೋಸ್ಟ್ ಪೋನ್ ಮಾಡುತ್ತಲೇ ಬಂದಿತ್ತು. ಕೊನೆಗೂ ಮಾರ್ಚ್ 25ರಂದು ಈ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಈ ದುಬಾರಿ ಸಿನಿಮಾದ ಮುಂದೆ ಬೇರಾವುದೇ ಸಿನಿಮಾನೂ ನೆನಪಲ್ಲಿ ಇರಲ್ಲ. ಇದೇ ಕಾರಣಕ್ಕೆ 'ಭೀಮ್ಲಾ ನಾಯಕ್. ಒಂದು ದಿನ ಮುನ್ನವೇ ಬಿಡುಗಡೆಯಾಗುತ್ತಿದೆ. ಒಟಿಟಿಯಲ್ಲಿ ಪ್ರೀಮಿಯರ್ ಆಗುವ ಎಲ್ಲಾ ಸಿನಿಮಾಗಳಿಗೂ ಮೊದಲ ದಿನ ತುಂಬಾನೇ ಮುಖ್ಯ. ಅಲ್ಲದೆ ಎಲ್ಲರ ಗಮನ RRR ಸಿನಿಮಾ ಮೇಲಿರುತ್ತೆ ವಿನ: ಅಂದು ಒಟಿಟಿಯಲ್ಲಿ ರಿಲೀಸ್ ಆದ ಸಿನಿಮಾಗಳನ್ನೂ ತಿರುಗಿ ನೋಡುವುದೂ ಕೂಡ ಅನುಮಾನ. ಈ ಕಾರಣಕ್ಕೆ ಒಂದು ದಿನ ಮುನ್ನವೇ ಬಿಡುಗಡೆ ಮಾಡಲಾಗುತ್ತಿದೆ.

ಎರಡು ಒಟಿಟಿಯಲ್ಲಿ ಸಿನಿಮಾ ರಿಲೀಸ್
ದಕ್ಷಿಣ ಭಾರತದಲ್ಲಿ ಒಟಿಟಿ ವೇದಿಕೆಗಳು ಹೊಸ ಪ್ರಯತ್ನಕ್ಕೆ ಕೈಹಾಕಿವೆ. ಒಂದೇ ಸಿನಿಮಾವನ್ನು ಎರಡು ವೇದಿಕೆಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಪವನ್ ಕಲ್ಯಾಣ್ ಅಭಿನಯದ ಈ ಸಿನಿಮಾ ಡಿಸ್ನಿ+ ಹಾಟ್‌ಸ್ಟಾರ್ ಹಾಗೂ 'ಆಹಾ' ಎರಡೂ ಒಟಿಟಿ ವೇದಿಕೆಯಲ್ಲೂ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ. ದಕ್ಷಿಣ ಭಾರತದಲ್ಲಿ ಈ ಪ್ರಯತ್ನ ಇದೇ ಮೊದಲು. ಬಾಲಿವುಡ್ ಸಿನಿಮಾ '83' ಈಗಾಗಲೇ ಈ ಪ್ರಯತ್ನ ಮಾಡಿದೆ. ನೆಟ್‌ಫ್ಲಿಕ್ಸ್ ಹಾಗೂ ಡಿಸ್ನಿ+ಹಾಟ್‌ಸ್ಟಾರ್ ಎರಡರಲ್ಲೂ ರಿಲೀಸ್ ಆಗಿದೆ.

ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?
'ಭೀಮ್ಲಾ ನಾಯಕ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡಿತ್ತು. ಆದರೆ, 25ನೇ ದಿನ ಹೊತ್ತಿಗೆ ಗಳಿಕೆಯಲ್ಲಿ ಇಳಿಕೆ ಕಂಡಿದೆ. 25 ದಿನಗಳಲ್ಲಿ 'ಭೀಮ್ಲಾ ನಾಯಕ್' ಆಂಧ್ರ ಹಾಗೂ ತೆಲಂಗಾಣದಲ್ಲಿ 117 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಕರ್ನಾಟಕದಲ್ಲಿ 8.24 ಕೋಟಿ, ಬೇರೆ ರಾಜ್ಯಗಳಲ್ಲಿ 12 ಕೋಟಿ ಗಳಿಕೆ ಕಂಡಿದೆ. ವಿಶ್ವದಾದ್ಯಂತ 'ಭೀಮ್ಲಾ ನಾಯಕ್' ಒಟ್ಟು 159 ಕೋಟಿ ಗಳಿಕೆ ಕಂಡಿದೆ.


Click it and Unblock the Notifications











