ಪವನ್ ಕಲ್ಯಾಣ್ 'ಉಸ್ತಾದ್ ಭಗತ್ ಸಿಂಗ್'ಗೆ ನೆಟ್‌ಫ್ಲಿಕ್ಸ್‌ನಿಂದ ಭರ್ಜರಿ ಆಫರ್; ಎಷ್ಟು ಕೋಟಿಗೆ ಡೀಲ್?

ಟಾಲಿವುಡ್ ಪವರ್‌ಸ್ಟಾರ್ ಪವನ್ ಕಲ್ಯಾಣ್ ಹಾಗೂ ಮಾಸ್ ಡೈರೆಕ್ಟರ್ ಹರೀಶ್ ಶಂಕರ್ ಕಾಂಬಿನೇಷನ್ ಅಂದರೆ, ತೆಲುಗು ಮಂದಿ ಆ ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿರುತ್ತಾರೆ. ಯಾಕಂದ್ರೆ ಇಬ್ಬರ ಕಾಂಬಿನೇಷನ್ ಸಿನಿಮಾ ಆ ಮಟ್ಟಿಗೆ ಸೌಂಡ್ ಮಾಡುತ್ತೆ. ಈಗ ಈ ಜೋಡಿ ಒಟ್ಟಿಗೆ ಕೆಲಸ ಮಾಡಿರೋ 'ಉಸ್ತಾದ್ ಭಗತ್ ಸಿಂಗ್' ರಿಲೀಸ್‌ಗೆ ರೆಡಿಯಾಗಿದೆ. ಅದಕ್ಕೆ ಈಗಿನಿಂದಲೇ ಓಟಿಟಿ ವೇದಿಕೆಗಳು ಈ ಸಿನಿಮಾದ ಹಿಂದೆ ಬಿದ್ದಿವೆ.

'ಗಬ್ಬರ್ ಸಿಂಗ್' ಸಿನಿಮಾ ಮೂಲಕ ಬ್ಲಾಕ್‌ಬಸ್ಟರ್ ನೀಡಿದ್ದ ಈ ಜೋಡಿ ಮತ್ತೆ ಒಂದಾಗಿದೆ. ಹೀಗಾಗಿ ಟಾಲಿವುಡ್‌ನಲ್ಲಿ ಈ ಜೋಡಿಯ ಸಿನಿಮಾ ಬಗ್ಗೆ ನಿರೀಕ್ಷೆ ದುಪ್ಪಟ್ಟಾಗಿದೆ. ಅಲ್ಲದೆ ಸಿನಿಮಾ ದಾಖಲೆಯ ಲೆವೆಲ್‌ನಲ್ಲಿ ವ್ಯಾಪಾರ ಆಗುತ್ತೆ ಎಂದು ಅಂದಾಜಿಸಲಾಗಿದೆ. ಸಿನಿಮಾದ ಡಿಜಿಟಲ್ ಹಕ್ಕುಗಳಿಗಾಗಿ ಓಟಿಟಿ ವೇದಿಕೆಗಳು ಕಾಂಪಿಟೇಷನ್‌ಗೆ ಬಿದ್ದಿದೆ ಎಂದು ಹೇಳಲಾಗುತ್ತಿದೆ.

Pawan Kalyan Harish Shankar combo film Ustaad Bhagat Singh Netflix offers Ott Deal for 80 crore

ಪವನ್ ಕಲ್ಯಾಣ್ ಈಗ ಆಂಧ್ರದ ಉಪ ಮುಖ್ಯಮಂತ್ರಿಯಾಗಿದ್ರೂ, ಸಂಪೂರ್ಣ ರಾಜಕೀಯದ ಕಡೆಗೆ ವಾಲಿದರೂ ಅವರಿಗೆ ಅಭಿಮಾನಿಗಳೇನು ಕಮ್ಮಿಯಾಗಿಲ್ಲ. ಹೀಗಾಗಿ ಓಟಿಟಿ ವೇದಿಕೆಗಳು ಈ ಸಿನಿಮಾವನ್ನು ಕೊಂಡುಕೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತಿವೆ. ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ, ಓಟಿಟಿಯ ದೈತ್ಯ ನೆಟ್‌ಫ್ಲಿಕ್ಸ್ ಈ ಸಿನಿಮಾಗೆ ಬಂಪರ್ ಆಫರ್ ನೀಡಿದೆ ಎಂದು ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಎಷ್ಟು ಕೋಟಿಗೆ ಆಫರ್ ಕೊಟ್ಟಿದೆ ಅನ್ನೋದನ್ನು ತಿಳಿಯೋಕೆ ಮುಂದೆ ಓದಿ..

ಪವನ್ ಕಲ್ಯಾಣ್ ಈ ಸಿನಿಮಾದಲ್ಲಿ ಪವರ್‌ಫುಲ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪವನ್ ಕಲ್ಯಾಣ್‌ಗೆ ಶ್ರೀಲೀಲಾ ಹಾಗೂ ರಾಶಿ ಖನ್ನಾ ಇಬ್ಬರೂ ನಾಯಕಿಯರಾಗಿದ್ದಾರೆ. ಇವರೊಂದಿಗೆ ಪಾರ್ಥಿಬನ್, ಕೆ.ಎಸ್. ರವಿ ಕುಮಾರ್, ಎಲ್‌ಬಿ ಶ್ರೀರಾಮ್, ರಾವ್ ರಮೇಶ್, ರಾಮ್‌ಕಿ, ಕೆಜಿಎಫ್ ಅವಿನಾಶ್ ತೆಲುಗು ಚಿತ್ರರಂಗದ ದಿಗ್ಗಜರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ನಲ್ಲಿ ನವೀನ್ ಯೆರ್ನೇನಿ ಮತ್ತು ರವಿ ಶಂಕರ್ ಯಲಮಂಚಿಲಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಪವನ್ ಕಲ್ಯಾಣ್ ಹಾಗೂ ಹರೀಶ್ ಶಂಕರ್ ಕಾಂಬಿನೇಷನ್ ಸಿನಿಮಾ 'ಉಸ್ತಾದ್ ಭಗತ್ ಸಿಂಗ್' ಮಾರ್ಚ್ 26ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ. ಈಗಾಗಲೇ ರಿಲೀಸ್ ಆಗಿರುವ ಹಾಡು "ಆರಾ ಆಫ್ ಉಸ್ತಾದ್.." ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು ಮಾರ್ಚ್ ಎರಡನೇ ವಾರದಲ್ಲಿ ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗುವುದರ ಜೊತೆಗೆ ಎರಡು ಹಾಡುಗಳು ರಿಲೀಸ್ ಆಗಲಿವೆ.

ಇನ್ನು 'ಉಸ್ತಾದ್ ಭಗತ್ ಸಿಂಗ್' ಬಿಡುಗಡೆಗೂ ಮುನ್ನವೇ ₹140 ಕೋಟಿ ವರೆಗೆ ಥಿಯೇಟ್ರಿಕಲ್ ಮತ್ತು ನಾನ್-ಥಿಯೇಟ್ರಿಕಲ್ ರೈಟ್ಸ್ ಮಾರಾಟ ಆಗುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಇನ್ನು ಓವರ್‌ಸೀಸ್ ರೈಟ್ಸ್ ಕೂಡ ದೊಡ್ಡ ಮೊತ್ತಕ್ಕೆ ಸೇಲ್ ಆಗಲಿದೆ ಎಂದು ಟಾಲಿವುಡ್ ಮಂದಿ ಮಾತಾಡಿಕೊಳ್ತಿದ್ದಾರೆ. ಇನ್ನು ಆಂಧ್ರ ಪ್ರದೇಶದ ಥಿಯೇಟ್ರಿಕಲ್ ಹಕ್ಕುಗಳಿಗೆ ₹70 ಕೋಟಿ ಬೇಡಿಕೆಯಿದೆ ಎನ್ನಲಾಗಿದೆ. ಇನ್ನು ಕರ್ನಾಟಕದಲ್ಲಿ ಹೊಂಬಾಳೆ ಫಿಲಂಸ್ (Hombale Films) ವಿತರಣೆ ಮಾಡಲಿದೆ ಅನ್ನೋ ಮಾತಿದೆ. ಪವನ್ ಕಲ್ಯಾಣ್ ಕ್ರೇಜ್ ಮತ್ತು ಹರೀಶ್ ಶಂಕರ್ ಕಾಂಬಿನೇಷನ್ ಈ ಹೈಪ್‌ಗೆ ಕಾರಣ ಎನ್ನಲಾಗಿದೆ.

ಟಾಲಿವುಡ್ ಮಂದಿಯ ಪ್ರಕಾರ, ನೆಟ್‌ಫ್ಲಿಕ್ಸ್ ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ₹80 ಕೋಟಿಗೆ ಪಡೆದುಕೊಂಡಿದೆ ಎಂದು ಸುದ್ದಿ ಹಬ್ಬಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಎನ್ನಲಾಗಿದೆ. ಒಂದು ವೇಳೆ ಇದು ನಿಜವಾದರೆ, ಟಾಲಿವುಡ್ ಇತಿಹಾಸದ ಅತಿ ದೊಡ್ಡ ಓಟಿಟಿ ಒಪ್ಪಂದಗಳಲ್ಲಿ ಒಂದು ಎನ್ನಲಾಗಿದೆ. ಹಿಂದೆ ಪವನ್ ನಟಿಸಿದ್ದ 'ಓಜಿ' (OG) ಸಿನಿಮಾಗೆ ನೆಟ್‌ಫ್ಲಿಕ್ಸ್ ದೊಡ್ಡ ಮೊತ್ತ ಪಾವತಿಸಿತ್ತು. ಆ ಚಿತ್ರ ಬಾಕ್ಸಾಫೀಸ್ ಹಾಗೂ ಓಟಿಟಿಯಲ್ಲೂ ಯಶಸ್ಸು ಕಂಡಿತ್ತು. ಇದೇ ಯಶಸ್ವಿನ ಮೇಲೆ 'ಉಸ್ತಾದ್ ಭಗತ್ ಸಿಂಗ್' ಖರೀದಿ ಮಾಡಿದೆ ಎನ್ನಲಾಗಿದೆ.

More from Filmibeat

English summary
Pawan Kalyan Harish Shankar combo film Ustaad Bhagat Singh Netflix offers Ott Deal for 80 crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X