ಸೈಲೆಂಟ್ ಆಗಿಯೇ ವೆಬ್ ಸಿರೀಸ್ ಮುಗಿಸಿದ ಪವನ್ ಕುಮಾರ್; 'ಶೋಭ' ಶುರು.. ಎಲ್ಲಿ ನೋಡ್ಬಹುದು?
ಸ್ಯಾಂಡಲ್‌ವುಡ್‌ನ ನಿರ್ದೇಶಕ ಕಮ್ ನಟ ಪವನ್ ಕುಮಾರ್ 'ಧುಮಂ' ಸಿನಿಮಾ ಬಳಿಕ ಸುದ್ದಿಯೇ ಇರಲಿಲ್ಲ. ಹೊಸದಾಗಿ ಕೊಂಡುಕೊಂಡಿದ್ದ ತೋಟದಲ್ಲಿಯೇ ಹೆಚ್ಚಾಗಿ ಕಾಣ ಸಿಗುತ್ತಿದ್ದರು. ಅವರ ಸೋಶಿಯಲ್ ಮೀಡಿಯಾ ಖಾತೆಗಳಲ್ಲೂ ತೋಟದ ಫೋಟೊಗಳೇ ಹೆಚ್ಚು ಕಾಣಿಸುತ್ತಿದ್ದವು. ಜೊತೆಗೆ ಹೊಸ ಪ್ರಾಜೆಕ್ಟ್ ಬಗ್ಗೆ ಪವನ್ ಸುಳಿವನ್ನೂ ನೀಡಿರಲಿಲ್ಲ. ಆದ್ರೀಗ ಸದ್ದಿಲ್ಲದೆ ಒಂದು ವೆಬ್ ಸೀರಿಸ್ ಅನ್ನು ಮಾಡಿ ಮುಗಿಸಿದ್ದಾರೆ.
ಕೆಆರ್‌ಜಿ ಸ್ಟುಡಿಯೋದ ಕಾರ್ತಿಕ್ ಗೌಡ ಹಾಗೂ ಯೋಗಿಯವರ ನಿರ್ಮಾಣ ಸಂಸ್ಥೆ ಕಡಿಮೆ ಅವಧಿಯಲ್ಲಿಯೇ ಸಿನಿಮಾ ನಿರ್ಮಾಣ ಮಾಡಿ ಹೆಸರು ಮಾಡಿದೆ. ನಿರ್ಮಾಣ ಅಷ್ಟೇ ಅಲ್ಲದೆ, ಸಿನಿಮಾ ವಿತರಣೆ ವಿಭಾಗದಲ್ಲಿ ಹೆಸರು ಗಳಿಸಿಕೊಂಡಿದೆ. ಕನ್ನಡದಲ್ಲಿ ಇದೂವರೆಗೂ ಗುಣಮಟ್ಟದ ಸಿನಿಮಾಗಳನ್ನು ನಿರ್ಮಾಣ ಮಾಡಿ ಹೆಸರು ಮಾಡುತ್ತಿದೆ. ಇದರ ಹಿಂದೆನೇ ಕೆಆರ್‌ಜಿ ಸಂಸ್ಥೆ ಈಗ ಮತ್ತೊಂದು ಹೊಸ ಹೆಜ್ಜೆ ಇಟ್ಟಿದೆ.

ಕಾರ್ತಿಕ್ ಗೌಡ ಹಾಗೂ ಯೋಗಿ ಸಿನಿಮಾ ನಿರ್ಮಾಣ ಹಾಗೂ ವಿತರಣೆಯ ಜೊತೆ ಜೊತೆಗೆ ಕನ್ನಡದಲ್ಲೊಂದು ವೆಬ್ ಸಿರೀಸ್ ನಿರ್ಮಾಣ ಮಾಡಿದೆ. Zee 5 ಓಟಿಟಿ ಸಂಸ್ಥೆ ಜೊತೆ ಕೈ ಜೋಡಿಸಿದ್ದು, ಅದರಲ್ಲಿ ಪವನ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.ಈ ಮೂಲಕ ಕನ್ನಡ ಸಿನಿಪ್ರಿಯರಿಗೆ ವೆಬ್ ಸೀರಿಸ್ ಅನ್ನು ನೀಡುವ ತವಕದಲ್ಲಿದ್ದಾರೆ. ಈ ಪ್ರಯತ್ನದ ಮೊದಲ ಹೆಜ್ಜೆಯಾಗಿ 'ಶೋಧ' ಎಂಬ ವೆಬ್ ಸೀರಿಸ್ ಅನ್ನು ಕೆಆರ್‌ಜಿ ಸ್ಟುಡಿಯೋ ನಿರ್ಮಾಣವನ್ನು ಮಾಡಿದೆ.
ಕೆಆರ್‌ಜಿ ಸ್ಟುಡಿಯೋಸ್ ನಿರ್ಮಿಸಿ, ಪ್ರೆಸೆಂಟ್ ಮಾಡುತ್ತಿರುವ 'ಶೋಧ' ವೆಬ್ ಸೀರಿಸ್ ಈಗಾಗಲೇ ಕುತೂಹಲವನ್ನು ಕೆರಳಿಸಿದೆ. ಕನ್ನಡದಲ್ಲಿ ವೆಬ್ ಸೀರಿಸ್ ನಿರ್ಮಾಣ ಆಗಿದ್ದು ಕಡಿಮೆ. ಇತ್ತೀಚೆಗೆ ಜಿ 5ನಲ್ಲಿ ತೆರೆಕಂಡಿದ್ದ 'ಅಯ್ಯನ ಮನೆ' ವೆಬ್ ಸೀರಿಸ್ ಅನ್ನು ವೀಕ್ಷಕರು ಇಷ್ಟ ಪಟ್ಟಿದ್ದರು. ಈಗ ಕೆಆರ್‌ಜಿ ಸ್ಟುಡಿಯೋ ನಿರ್ಮಾಣದ 'ಶೋಧ' ಕೂಡ ಪ್ರೇಕ್ಷಕರಿಗೆ ಇಷ್ಟ ಆಗುತ್ತಾ? ಎಂದು ನೋಡಬೇಕಿದೆ.
'ಶೋಧ' ವೆಬ್ ಸೀರಿಸ್‌ಗೆ ಸುನಿಲ್ ಮೈಸೂರು ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಸಸ್ಪೆನ್ಸ್ ಕಮ್ ಥ್ರಿಲ್ಲರ್ ವೆಬ್ ಸೀರಿಸ್. ಓಟಿಟಿಯಲ್ಲಿ ಈ ಶೈಲಿಯ ವೆಬ್ ಸೀರಿಸ್‌ಗಳಿಗೆ ಹೆಚ್ಚು ಬೇಡಿಕೆ ಇದೆ. 'ಮನಸಾರೆ', 'ಪಂಚರಂಗಿ', 'ಲೈಫು ಇಷ್ಟೇನೆ' ಮತ್ತು ಕಲ್ಟ್ ಸೈಕಲಾಜಿಕಲ್ ಥ್ರಿಲ್ಲರ್ 'ಲೂಸಿಯಾ' ಸಿನಿಮಾಗಳ ಮೂಲಕ ನಟನೆ ಹಾಗೂ ನಿರ್ದೇಶನದಲ್ಲಿ ಹೆಸರು ಮಾಡಿರುವ ಪವನ್ ಕುಮಾರ್ 'ಶೋಧ' ವೆಬ್ ಸೀರಿಸ್‌ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಲುಕ್ ಅನ್ನು ಈಗಾಗಲೇ ರಿವೀಲ್ ಮಾಡಲಾಗಿದೆ.
ಶೋಧ ವೆಬ್ ಸರಣಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಪವನ್ ಕುಮಾರ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ. "ಶೋಧದಲ್ಲಿ ನಟಿಸುವುದು ನನಗೆ ಸಂಪೂರ್ಣವಾಗಿ ಹೊಸ ಪ್ರಯಾಣ ಆಗಿತ್ತು. ಬರವಣಿಗೆ ಮತ್ತು ನಿರ್ದೇಶನದಿಂದ ಬಂದ ನನಗೆ ಕ್ಯಾಮೆರಾ ಮುಂದೆ ಹೆಜ್ಜೆ ಹಾಕುವುದು, ಭಾವನೆಗಳನ್ನು ಹೊಸ ರೀತಿಯಲ್ಲಿ ಅನ್ವೇಷಣೆ ಮಾಡುವುದ್ಕೆ ಸವಾಲು ಹಾಕಿದಂತಿದೆ" ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಜೀ 5ನಲ್ಲಿ 'ಅಯ್ಯನ ಮನೆ' ಸೂಪರ್ ಸಕ್ಸಸ್ ಆಗಿತ್ತು. ಈ ಮೂಲಕ ಕನ್ನಡದಲ್ಲೂ ವೆಬ್ ಸೀರಿಸ್ ನಿರ್ಮಾಣ ಮಾಡಬಹುದೆಂದು ಸಾಬೀತಾಗಿತ್ತು. ಈಗ Zee5 ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದೆ. ಕೆಆರ್‌ಜಿ ಸ್ಟುಡಿಯೋಸ್ ನಿರ್ಮಾಣದ 'ಶೋಧ' ಆಗಸ್ಟ್ 22ರಂದು Z 5ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈಗಾಗಲೇ 'ಅಯ್ಯನ ಮನೆ' ವೆಬ್ ಸೀರಿಸ್‌ಗೆ ಸಿಕ್ಕಾಪಟ್ಟೆ ಮೆಚ್ಚುಗೆ ಸಿಕ್ಕಿದ್ದು, ಈಗ 'ಶೋಧ' ವೆಬ್ ಸೀರಿಸ್ ಅನ್ನು ಸಿನಿಮಾ ಮಂದಿ ಎದುರು ನೋಡುತ್ತಿದ್ದಾರೆ. ಒಂದು ವೇಳೆ ಇದೂ ಗೆದ್ದರೆ ಓಟಿಟಿಯಲ್ಲಿ ಕನ್ನಡ ವೆಬ್ ಸೀರಿಸ್‌ಗಳ ಶೋಧ ಆರಂಭ ಆಗುತ್ತೆ.


Click it and Unblock the Notifications











