ಪ್ರಭಾಸ್ 'ಸಲಾರ್'.. ಒಂದು ವರ್ಷ ನಿರಂತರ ಟ್ರೆಂಡಿಂಗ್; ಥಿಯೇಟರ್‌ಗೆ ಬೀಗ.. ಓಟಿಟಿ ಜಾಗ?
ಒಂದು ಕಾಲದಲ್ಲಿ ಥಿಯೇಟರ್‌ಗಳಲ್ಲಿ ಒಂದು ವರ್ಷ ಪ್ರದರ್ಶನ ಕಂಡು ದಾಖಲೆ ಬರೆಯುತ್ತಿದ್ದವು. ಕನ್ನಡ ಚಿತ್ರರಂಗದಲ್ಲಿ ಇಂತಹ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಅಣ್ಣಾವ್ರು ನಟಿಸಿದ 'ಬಂಗಾರದ ಮನುಷ್ಯ', ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಮುಂಗಾರು ಮಳೆ', ಪುನೀತ್ ರಾಜ್‌ಕುಮಾರ್ ಸಿನಿಮಾ 'ಮಿಲನ' ಸೇರಿದಂತೆ ಕೆಲವು ಸಿನಿಮಾಗಳು ಥಿಯೇಟರ್‌ಗಳಲ್ಲಿ ಒಂದು ವರ್ಷ ಪ್ರದರ್ಶನ ಕಂಡಿದ್ದವು.
ಈಗ ಚಿತ್ರಮಂದಿರಗಳಲ್ಲಿ ಈ ಸಂಭ್ರಮವಿಲ್ಲ. ಇತ್ತೀಚೆಗೆ ಥಿಯೇಟರ್‌ನಲ್ಲಿ ಒಂದು ಪ್ರದರ್ಶನ ಕಂಡ ಸಿನಿಮಾ ಯಾವುದೂ ಇಲ್ಲ. ಕನಿಷ್ಠ ನೂರು ದಿನ ಸಿನಿಮಾ ಓಡಿದ ಉದಾಹರಣನೂ ಇಲ್ಲ. ಮೂರು ದಿನಕ್ಕೆ ಥಿಯೇಟರ್‌ನಿಂದ ಸಿನಿಮಾಗಳು ಎತ್ತಂಗಡಿಯಾಗುತ್ತಿದೆ. ಅದಕ್ಕೆ ಕಾರಣ ಓಟಿಟಿ ಅಂತ ಚಿತ್ರಮಂದಿರದ ಮಾಲೀಕರು ದೂರುತ್ತಲೇ ಬಂದಿದ್ದಾರೆ. ಇದಕ್ಕೆ ಸರಿಯಾಗಿ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಒಂದು ವರ್ಷ ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿದೆ.

'ಕೆಜಿಎಫ್ 2' ಬಳಿಕ ಪ್ರಭಾಸ್‌ಗಾಗಿ ಪ್ರಶಾಂತ್ ನೀಲ್ ನಿರ್ದೇಶಿಸಿದ ಸಿನಿಮಾ 'ಸಲಾರ್'. ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲೂ ಸದ್ದು ಮಾಡಿತ್ತು. ಹಾಗೇ ಈಗ ಓಟಿಟಿಯಲ್ಲಿ ನಿರಂತರವಾಗಿ ಒಂದು ವರ್ಷ ಟ್ರೆಂಡಿಂಗ್‌ನಲ್ಲಿದ್ದು ದಾಖಲೆ ಬರೆದಿದೆ. ಥಿಯೇಟರ್‌ಗಳಲ್ಲಿ ಒಂದು ವರ್ಷ ಪ್ರದರ್ಶನ ಕಾಣುತ್ತಿದ್ದ ಜಮಾನ ಮುಗಿದು, ಈಗ ಓಟಿಟಿಯಲ್ಲಿ ಪ್ರದರ್ಶನ ಕಾಣುವ ಜಮಾನ ಬಂದಿದೆ. ಇದಕ್ಕೆ ಸಾಕ್ಷಿ 'ಸಲಾರ್'.
ಪ್ರಭಾಸ್ ಜಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಬಂದಿದ್ದ 'ಸಲಾರ್' ಡಿಸೆಂಬರ್ 22, 2023ರಂದು ರಿಲೀಸ್ ಆಗಿತ್ತು. 'ಕೆಜಿಎಫ್ 2' ಬಳಿಕ ಪ್ರಶಾಂತ್ ನೀಲ್ ನಿರ್ದೇಶಿಸಿದ್ದ ಸಿನಿಮಾವಿದು. ಬಾಕ್ಸಾಫೀಸ್‌ನಲ್ಲಿ 700 ಕೋಟಿ ರೂಪಾಯಿ ಬಾಚಿಕೊಂಡಿ ಪ್ರಭಾಸ್‌ಗೆ ಮತ್ತೆ ಸಕ್ಸಸ್ ಕೊಟ್ಟಿತ್ತು. ಈ ಮಾಸ್ ಆಕ್ಷನ್ ಸಿನಿಮಾ ಥಿಯೇಟರ್‌ಗಳಲ್ಲಿ ಅಬ್ಬರಿಸಿದ ಬಳಿಕ ಓಟಿಟಿಗೆ ಲಗ್ಗೆ ಇಟ್ಟಿತ್ತು. ಎರಡು ಓಟಿಟಿ ವೇದಿಕೆಗಳಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಅದರಲ್ಲಿ 'ಸಲಾರ್' ಹಿಂದಿ ವರ್ಷನ್ ಇಂದಿನ ಜಿಯೋಹಾಟ್‌ಸ್ಟಾರ್‌ನಲ್ಲಿ (ಡಿಸ್ನಿ+ಹಾಟ್‌ಸ್ಟಾರ್) ಸ್ಟ್ರೀಮಿಂಗ್ ಆಗುತ್ತಿದೆ.
ಯಾವಾಗ ಜಿಯೋ ಹಾಟ್‌ಸ್ಟಾರ್‌ನಲ್ಲಿ 'ಸಲಾರ್' ಸ್ಟ್ರೀಮಿಂಗ್ ಆಗುವುದಕ್ಕೆ ಶುರುವಾಯ್ತೋ, ಅಲ್ಲಿಂದ ಈ ಓಟಿಟಿ ವೇದಿಕೆಯಲ್ಲಿ ನಂಬರ್ 1 ಸ್ಥಾನದಲ್ಲಿದೆ. ಸುಮಾರು 366 ದಿನಗಳ ಕಾಲ ಜಿಯೋ ಹಾಟ್‌ಸ್ಟಾರ್ ಓಟಿಟಿ ವೇದಿಕೆಯಲ್ಲಿ ಈ ಸಿನಿಮಾ ಟ್ರೆಂಡಿಂಗ್‌ನಲ್ಲಿದೆ. ಓಟಿಟಿಯಲ್ಲಿ ಒಂದು ವರ್ಷದಿಂದ ಸದ್ದು ಮಾಡುತ್ತಿರುವ ಖುಷಿಯ ವಿಷಯವನ್ನು ಹೊಂಬಾಳೆ ಫಿಲ್ಮ್ಸ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ.
'ಸಲಾರ್' ಥಿಯೇಟರ್‌ನಲ್ಲಿ ವಿಶ್ವದಾದ್ಯಂತ 700 ಕೋಟಿ ರೂಪಾಯಿ ಬಾಚಿಕೊಂಡಿತ್ತಷ್ಟೆ. ಆದರೆ, ಹೀಗೆ ವರ್ಷಗಳ ಕಾಲ ಥಿಯೇಟರ್‌ನಲ್ಲಿ ಆರ್ಭಟ ಮಾಡಲಿಲ್ಲ. ಆದರೆ, ಓಟಿಟಿಯಲ್ಲಿ ಒಂದು ವರ್ಷ ಟ್ರೆಂಡಿಂಗ್‌ನಲ್ಲಿದ್ದು ದಾಖಲೆ ಬರೆದಿದೆ. ಹಾಗೇ 'ಸಲಾರ್' ಹಿಂದಿ ವರ್ಷನ್ ಟಿವಿಯಲ್ಲಿಯೂ ಪ್ರಸಾರ ಕಂಡಿತ್ತು. ಆಗಲೂ ಸುಮಾರು 30 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದರು. ಇದೆಲ್ಲವನ್ನು ನೋಡಿದರೆ, ಥಿಯೇಟರ್ ಬಂದು ಸಿನಿಮಾ ನೋಡುವುದಕ್ಕೆ ಜನರು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ ಅಂತ ಹೇಳಬಹುದು. ಇತ್ತೀಚೆಗೆ ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳು ಪ್ರದರ್ಶನ ರದ್ದು ಮಾಡಿ ವಾರಗಳ ಕಾಲ ಬಂದ್ ಮಾಡುತ್ತಿವೆ.
ಕನ್ನಡ ಚಿತ್ರರಂಗ ಪಾಳಕ್ಕೆ ಕುಸಿದಿದೆ. ಥಿಯೇಟರ್‌ಗಳಿಗೆ ಜನರು ಬಂದು ಸಿನಿಮಾ ನೋಡುತ್ತಿಲ್ಲ. 2025 ರಿಂದ ಒಂದು ಸಿನಿಮಾ ಮೂರು ದಿನಗಳು ಪ್ರದರ್ಶನ ಕಾಣುವುದಕ್ಕೂ ಪರದಾಡುತ್ತಿದೆ. ಈಗಾಗಲೇ ಹಲವು ಚಿತ್ರಮಂದಿರಗಳು ತಾತ್ಕಾಲಿಕವಾಗಿ ಮುಚ್ಚಿವೆ. ಇದು ಕೇವಲ ಕನ್ನಡ ಚಿತ್ರರಂಗದಲ್ಲಿ ಅಷ್ಟೇ ಅಲ್ಲ. ದಕ್ಷಿಣ ಭಾರತದ ಬಹುತೇಕ ಚಿತ್ರಮಂದಿರಗಳ ಪರಿಸ್ಥಿತಿ ಕೂಡ ಹೀಗೆ ಇದೆ. ಇದೆಲ್ಲವನ್ನೂ ನೋಡಿದರೆ, ಓಟಿಟಿ ಟೇಕ್ ಓವರ್ ಮಾಡಿರೋದು ಗಮನಕ್ಕೆ ಬರುತ್ತಿದೆ.


Click it and Unblock the Notifications











