"ಅದೊಂದು ಭೀಕರ ಯುದ್ಧದಂತಿತ್ತು..'ಬಾಹುಬಲಿ' ಸೋತಿದ್ದರೆ, ನಿರ್ಮಾಪಕರು, ರಾಜಮೌಳಿ ಬೀದಿಗೆ ಬರ್ತಿದ್ರು" ಪ್ರಭಾಸ್
ಭಾರತೀಯ ಚಿತ್ರರಂಗದ ಇತಿಹಾಸವನ್ನೇ ಬದಲಿಸಿದ ಸಿನಿಮಾ 'ಬಾಹುಬಲಿ'. ರಾಜಮೌಳಿಯ ಈ ದುಬಾರಿ ಕಲ್ಪನೆಯನ್ನು ತೆರೆಮೇಲೆ ತರುವುದಕ್ಕೆ ಮುಂದೆ ಬಂದ ನಿರ್ಮಾಪಕರ ಧೈರ್ಯ ಇಂದಿಗೂ ಅಚ್ಚರಿಯನ್ನು ಮೂಡಿಸುತ್ತೆ. ಈ ದೃಶ್ಯವೈಭವ ಸೃಷ್ಟಿಸಿದ ಜಾಗತಿಕ ದಾಖಲೆಗಳು ಅಷ್ಟೇ ಅಲ್ಲ. ಇಡೀ ಸಿನಿಮಾದ ಜರ್ನಿಯೇ ಒಂದು ರೋಚಕ ಕಥೆ.
'ಬಾಹುಬಲಿ' ಸಿನಿಮಾ ಪ್ರೇಕ್ಷಕರ ಕಣ್ಣುಗಳಿಗೆ ಹಬ್ಬದಂತಿತ್ತು. ಚಿತ್ರರಂಗಕ್ಕೆ ಹೊಸ ಮೈಲಿಗಲ್ಲು ಆಯ್ತು. ಆದರೆ, ಆದರೆ, ಇದರ ಹಿಂದಿದ್ದ ಕಠಿಣ ಪರಿಶ್ರಮ ಮತ್ತು ಆತಂಕದ ಕಥೆಗಳು ಅಷ್ಟಿಷ್ಟಲ್ಲ. ಇಡೀ ದಕ್ಷಿಣ ಭಾರತದಲ್ಲಿಯೇ ಇಂತಹ ದುಬಾರಿ ಬಜೆಟ್‌ನ ಸಿನಿಮಾ ನಿರ್ಮಾಣ ಮಾಡಿರಲಿಲ್ಲ. ನಿಜಕ್ಕೂ ಇದೊಂದು ಸಾಹಸವೇ ಆಗಿತ್ತು.

ಇತ್ತೀಚೆಗೆ ನಡೆದ 'Baahubali The Torchbearer' ಎಂಬ ವಿಶೇಷ ಕಾರ್ಯಕ್ರಮದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಭಾಗವಹಿಸಿದ್ದರು. 'ಬಾಹುಬಲಿ' ಸಿನಿಮಾ ನಿರ್ಮಾಣ ಮಾಡುವಾಗಿನ ಆ ಕಠಿಣ ಜರ್ನಿಯನ್ನು ನೆನೆದು ಅತ್ಯಂತ ಭಾವುಕರಾಗಿದ್ದಾರೆ. "ಆ ಇಡೀ ಪ್ರಯಾಣ ತಮಗೊಂದು ಭೀಕರ ಯುದ್ಧದಂತೆ ಅನಿಸಿತ್ತು" ಎಂದು ಪ್ರಭಾಸ್ 'ಬಾಹುಬಲಿ' ಚಿತ್ರೀಕರಣದ ವೇಳೆಯ ತಮ್ಮ ಕೆಲವು ಘಟನೆಗಳನ್ನು ಮೆಲುಕು ಹಾಕಿದ್ದಾರೆ.
"ಸಿನಿಮಾ ಸೋತಿದ್ದರೆ ಅವರು ಬೀದಿಗೆ ಬರಬೇಕಿತ್ತು"
'ಬಾಹುಬಲಿ' ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ನೆಗೆಟಿವ್ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದು ಇಡೀ ಚಿತ್ರತಂಡವನ್ನು ಆತಂಕಕ್ಕೆ ತಳ್ಳಿತ್ತು. ಆದರೆ, ಆ ವೇಳೆ ಇಡೀ ಚಿತ್ರತಂಡ ಎದುರಿಸಿದ ಅತಿ ದೊಡ್ಡ ರಿಸ್ಕ್ ಬಗ್ಗೆ ಪ್ರಭಾಸ್ ಶೇರ್ ಮಾಡಿದ್ದಾರೆ. 'ಬಾಹುಬಲಿ' ಸಿನಿಮಾಗಾಗಿ ನಿರ್ಮಾಪಕರು ತಮ್ಮ ಇಡೀ ಜೀವನವನ್ನೇ ಪಣಕ್ಕಿಟ್ಟಿದ್ದರು. ನಿರ್ಮಾಪಕರಾದ ಶೋಬು ಯರ್ಲಗಡ್ಡ ಮತ್ತು ಪ್ರಸಾದ್ ದೇವಿನೇನಿ ತಮ್ಮ ಇಡೀ ಬದುಕಿನ ಸಂಪಾದನೆಯನ್ನು ಈ ಸಿನಿಮಾ ಮೇಲೆ ಸುರಿದಿದ್ದರು.
ಸಿನಿಮಾ ಸೋತಿದ್ದರೆ?: "ಒಂದೊಮ್ಮೆ ಅಂದು ಏನಾದರೂ ಹೆಚ್ಚುಕಮ್ಮಿ ಆಗಿ ಸಿನಿಮಾ ಸೋತಿದ್ದರೆ, ನಿರ್ಮಾಪಕರಾದ ಶೋಬು ಯರ್ಲಗಡ್ಡ, ಪ್ರಸಾದ್ ದೇವಿನೇನಿ ಹಾಗೂ ನಿರ್ದೇಶಕ ರಾಜಮೌಳಿ ಬೀದಿಗೆ ಬರಬೇಕಾಗುತ್ತಿತ್ತು. ಅವರ ಇಡೀ ಜೀವನವೇ ತಲೆಕೆಳಗಾಗುತ್ತಿತ್ತು" ಎಂದು 'ಬಾಹುಬಲಿ' ಸಿನಿಮಾಗಾಗಿ ಅವರು ಮಾಡಿದ ಅಪ್ರತಿಮ ಸಾಹಸವನ್ನು ಪ್ರಭಾಸ್ ಸ್ಮರಿಸಿದ್ದಾರೆ.
"ಜಪಾನ್ ಈಗ ನನ್ನ ಎರಡನೇ ಮನೆ"
'ಬಾಹುಬಲಿ' ಸಿನಿಮಾ ಕೇವಲ ಭಾರತದಲ್ಲಿ ಅಷ್ಟೇ ಅಲ್ಲ, ವಿಶ್ವದಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಅದರಲ್ಲೂ ಜಪಾನ್ ದೇಶದಲ್ಲಿ ಅಭೂತಪೂರ್ವ ಯಶಸ್ಸು ಸಿಕ್ಕಿತ್ತು. ಅಲ್ಲಿನ ಪ್ರೇಕ್ಷಕರು ತಮ್ಮ ಮೇಲೆ ತೋರಿದ ಪ್ರೀತಿಯನ್ನು ಪ್ರಭಾಸ್ ಕೊಂಡಾಡಿದ್ದಾರೆ. "ಜಪಾನ್ ಜನರು ಒಳ್ಳೆಯವರು.. ಅಪಾರ ಹೃದಯವಂತರು. ಅವರು ಬಾಹುಬಲಿ ಸಿನಿಮಾವನ್ನು ಬರಮಾಡಿಕೊಂಡ ರೀತಿ, ನನಗೆ ನೀಡಿದ ಅದ್ಭುತ ಗೌರವವನ್ನು ಮರೆಯಲು ಸಾಧ್ಯವಿಲ್ಲ. ಆ ಪ್ರೀತಿಯಿಂದಾಗಿ ಜಪಾನ್ ದೇಶ ಈಗ ನನಗೆ 2ನೇ ಮನೆಯಂತೆ ಭಾಸವಾಗುತ್ತದೆ" ಎಂದು ಪ್ರಭಾಸ್ ಹೇಳಿದ್ದಾರೆ.
ಯಶಸ್ಸಿನ ಬಳಿಕ 'ಮಾನಸಿಕ ಒತ್ತಡ'
'ಬಾಹುಬಲಿ' ಸಿನಿಮಾದ ಸಕ್ಸಸ್ ಬಳಿಕ ಪ್ರಭಾಸ್ ಅನುಭವಿಸಿದ ಮಾನಸಿಕ ಒತ್ತಡದ ಬಗ್ಗೆಯೂ ಮನಬಿಚ್ಚಿ ಮಾತನಾಡಿದ್ದಾರೆ. ಹಿಮಾಲಯದಂಥ ದೈತ್ಯ ಯಶಸ್ಸಿನ ಬಳಿಕ ಮುಂದಿನ ಹೆಜ್ಜೆ ಹೇಗಿರಬೇಕು? ಯಾವ ರೀತಿಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ದೊಡ್ಡ ಗೊಂದಲ ಮೂಡಿತ್ತು ಎಂದು ಹೇಳಿಕೊಂಡಿದ್ದಾರೆ. 'ಬಾಹುಬಲಿ' ಮುಗಿದ ನಂತರದ ದಿನಗಳು ತಮ್ಮ ಮಾನಸಿಕ ಸ್ಥಿತಿ ಹೇಗಿತ್ತು ಎಂದು ಹಂಚಿಕೊಂಡಿದ್ದಾರೆ.
ರಾಜಮೌಳಿ ನಿರ್ದೇಶಿಸಿದ 'ಬಾಹುಬಲಿ' ಸಿನಿಮಾ ಕೇವಲ ಬಾಕ್ಸ್ ಆಫೀಸ್ ಲೂಟಿ ಮಾಡಲಿಲ್ಲ, ಬದಲಿಗೆ ಆ ಸಿನಿಮಾಗಾಗಿ ಕೆಲಸ ಮಾಡಿದ ಪ್ರತಿಯೊಬ್ಬರ ಜೀವನವನ್ನೇ ಬದಲಾಯಿಸಿತ್ತು. ರಾಜಮೌಳಿ, ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ ಸೇರಿದಂತೆ ಎಲ್ಲಾ ಬದುಕು ಬದಲಾಗಿತ್ತು.


Click it and Unblock the Notifications