ಮೋಹನ್‌ಲಾಲ್ 'ದೃಶ್ಯಂ 3' ವಿರುದ್ಧ ಪ್ರೈಂ ವಿಡಿಯೋ ಬಹಿರಂಗ ನೋಟೀಸ್; ಏನಿದು SVOD, TVOD, AVOD ರೈಟ್ಸ್?
ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಮೋಹನ್‌ಲಾಲ್ ನಟನೆಯ 'ದೃಶ್ಯಂ 3' ಕೂಡ ಇದೆ. ಈಗಾಗಲೇ 'ದೃಶ್ಯಂ' ಹಾಗೂ 'ದೃಶ್ಯಂ 3' ಮೂಲಕ ಪ್ರೇಕ್ಷಕರಲ್ಲಿ ಕುತೂಹಲವನ್ನು ಕೆರಳಿಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಕೇವಲ ಮಲಯಾಳಿಗಳಷ್ಟೇ ಅಲ್ಲ. ಇದೇ ದೇಶವೇ 3ನೇ ಸೀಕ್ವೆಲ್‌ಗಾಗಿ ಎದುರು ನೋಡುತ್ತಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಏಪ್ರಿಲ್ 2ರಂದು ಈ ಸಿನಿಮಾ ರಿಲೀಸ್ ಆಗಬೇಕಿತ್ತು.
ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ 'ದೃಶ್ಯಂ 3' ಬಿಡುಗಡೆಯನ್ನು ಮೇ 21ಕ್ಕೆ ಮುಂದೂಡಲಾಗಿದೆ. ಈ ಬೆನ್ನಲ್ಲೇ ಅಮೆಜಾನ್ ಪ್ರೈಂ ವಿಡಿಯೋ ಪಬ್ಲಿಕ್ ನೋಟೀಸ್ ಅನ್ನು ಹೊರಡಿಸಿದೆ. ಈ ಮೂಲಕ ಸಾರ್ವಜನಿಕರು ಹಾಗೂ ಸಿನಿಮಾ ಮಂದಿಗೆ ಎಚ್ಚರಿಕೆಯನ್ನು ನೀಡಿದೆ. ಅಮೆಜಾನ್ ಪ್ರೈಂ ವಿಡಿಯೋ ಈ ಸಿನಿಮಾ ಡಿಜಿಟಲ್ ಹಕ್ಕುಗಳನ್ನು ಹೊಂದಿದ್ದು, ಯಾರೇ ಯಾವುದೇ ರೀತಿಯ ಹಕ್ಕುಗಳ ಕುರಿತು ಅಗ್ರಿಮೆಂಟ್ ಮಾಡಿಕೊಳ್ಳುವಂತಿಲ್ಲ ಎಂದು ಹೇಳಿಕೊಂಡಿದೆ.

ಪ್ರೈಂ ವಿಡಿಯೋ ಅಧಿಕೃತ ನೋಟೀಸ್ ಪ್ರಕಾರ, 'ದೃಶ್ಯಂ 3' ನಿರ್ಮಾಣ ಸಂಸ್ಥೆ ಆಶೀರ್ವಾದ್ ಸಿನಿಮಾಸ್‌ನಿಂದ ಡಿಜಿಟಲ್ ಹಕ್ಕುಗಳನ್ನು ಪಡೆದಿದೆ. ಈ ಮೂಲಕ ನಿರ್ಮಾಣ ಸಂಸ್ಥೆ ಡಿಜಿಟಲ್ ಹಕ್ಕುಗಳನ್ನು ಮಾರುವ, ಲೈಸೆನ್ಸ್ ಕೊಡುವ ಹಕ್ಕುಗಳನ್ನು ಕಳೆದು ಕೊಂಡಿದೆ ಎಂದು ಹೇಳಿದೆ. ಪ್ರೈಂ ವಿಡಿಯೋ ಖರೀದಿಸಿರುವ ಈ ಹಕ್ಕುಗಳನ್ನು ಯಾವುದೇ ವ್ಯಕ್ತಿ, ಇಲ್ಲವೇ ಸಂಸ್ಥೆ ಉಲ್ಲಂಘಿಸಿದರೇ ಅಥವಾ ಯಾವುದೇ ರೀತಿಯ ವ್ಯವಹಾರ ಮಾಡಿದರೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಿದೆ.
ಅಮೆಜಾನ್ ಸೆಲ್ಲರ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್‌ನ ಅಧಿಕೃತ ನೋಟೀಸ್‌ನಲ್ಲಿ 'ದೃಶ್ಯಂ 3' ಸಿನಿಮಾದ ಎಲ್ಲಾ ರೀತಿಯ ಡಿಜಿಟಲ್ ಹಕ್ಕುಗಳು ತನ್ನದೇ ಎಂದು ಹೇಳಿದೆ. ಅದರಲ್ಲಿ SVOD, TVOD, AVOD, FVOD, and EST ಹಕ್ಕುಗಳು ಸೇರಿಕೊಂಡಿವೆ. ಇದರ ಪ್ರಕಾರ ಯಾವುದೇ ವ್ಯಕ್ತಿ ಅಥವಾ ನಿರ್ಮಾಣ ಸಂಸ್ಥೆ ಆಶೀರ್ವಾದ್ ಸಿನಿಮಾಸ್‌ಗೆ ಡಿಜಿಟಲ್ ಹಕ್ಕುಗಳ ಕಮರ್ಷಿಯಲ್ ಡೀಲ್‌ಗೆ ಅವಕಾಶವಿಲ್ಲ ಎಂದು ಹೇಳಿದೆ. ಹಾಗಿದ್ದರೆ, SVOD, TVOD, AVOD, FVOD, and EST ಹಕ್ಕು ಅಂದರೆ ಏನು? ಇಲ್ಲಿದೆ ಡಿಟೈಲ್ಸ್.
SVOD ಅಂದರೆ ಏನು?
ಅಮೆಜಾನ್ ಪ್ರೈಂ ವಿಡಿಯೋ ಈ ಹಕ್ಕುಗಳು ಬಗ್ಗೆ ಗೊತ್ತಿಲ್ಲದಿದ್ದರೆ, SVOD ಅಂದರೆ Subscription Video on Demand ಎಂದು ಹೇಳಲಾಗುತ್ತೆ. ಅಂದರೆ, ವೀಕ್ಷಕರು ಮಾಸಿಕ ಇಲ್ಲವೇ ವಾರ್ಷಿಕವಾಗಿ ಹಣವನ್ನು ನೀಡಿ ತಮ್ಮ ಪ್ಲಾಪ್ ಫಾರ್ಮ್‌ನಲ್ಲಿರುವ ಯಾವುದೇ ಸಿನಿಮಾವನ್ನು ನೋಡುಬಹುದು.
TVOD ಅಂದರೆ ಏನು?
TVOD ಅಂದರೆ, Transactional Video on Demand ಎಂದರ್ಥ. ವೀಕ್ಷಕರು ಮಾಸಿಕ ಅಥವಾ ವಾರ್ಷಿಕ ಚಂದಾದಾರರಾಗಿದ್ದರೂ, ಕೆಲವು ಸಿನಿಮಾಗಳನ್ನು ಹಣ ಕೊಟ್ಟು ನೋಡಬೇಕಾಗುತ್ತೆ. ಆ ಹಕ್ಕುಗಳು ಅಮೆಜಾನ್ ಬಳಿಯೇ ಇರುತ್ತೆ.

AVOD ಅಂದರೆ ಏನು?
AVOD ಅಂದರೆ, Ad-supported Video on Demand. ಅಂದರೆ, ವೀಕ್ಷಕರಿಗೆ ಸಿನಿಮಾ ನೋಡುವುದಕ್ಕೆ ಹಣ ಕೇಳದೆ ಇರಬಹುದು. ಆದರೆ, ಸಿನಿಮಾ ರನ್ ಟೈಮ್‌ನಲ್ಲಿ ಜಾಹೀರಾತನ್ನು ಪ್ರದರ್ಶಿಸಬಹುದು ಎಂಬುವುದಾಗಿದೆ.
FVOD ಅಂದರೆ ಏನು?
FVOD ಅಂದರೆ Free Video on Demand ಎಂದು ಹೇಳಲಾಗುತ್ತೆ. ಅಂದರೆ, ವೀಕ್ಷಕರು ಈ ಸಿನಿಮಾವನ್ನು ಚಂದಾದಾರರಾಗದೇ ನೋಡಬಹುದು. ಇದರಲ್ಲಿ ಜಾಹೀರಾತು ಸೇರಿಸುವುದು ಅಥವಾ ಬಿಡುವುದು ಪ್ರೈಂ ವಿಡಿಯೋಗೆ ಸೇರಿರುತ್ತೆ.
EST ಅಂದರೆ ಏನು?
EST ಅಂದರೆ Electronic Sell-Through ಎಂದು ಹೇಳಲಾಗುತ್ತೆ. ವೀಕ್ಷಕರು ಈ ಸಿನಿಮಾವನ್ನು ಪ್ರೈಂ ವಿಡಿಯೋ ಹಣ ನೀಡಿ ಬಾಡಿಗೆ ಪಡೆಯಬಹುದು. ಇದು ಯಾವುದೇ ರೀತಿಯ ನಿಗದಿತ ಅವಧಿಯ ನಿರ್ಬಂಧವಿರುವುದಿಲ್ಲ.


Click it and Unblock the Notifications















