'ಮಾರಿಗಲ್ಲು' ವೆಬ್ ಸೀರಿಸ್ ಟ್ರೈಲರ್‌ಗೆ ಸಖತ್ ರೆಸ್ಪಾನ್ಸ್; 24 ಗಂಟೆಯಲ್ಲಿ ಎಷ್ಟು ಮಿಲಿಯನ್ ವೀವ್ಸ್? ಸ್ಟ್ರೀಮಿಂಗ್ ಯಾವಾಗ?

ಕನ್ನಡಿಗರಿಗೆ ಕನ್ನಡದಲ್ಲಿ ವೆಬ್‌ ಸೀರಿಸ್‌ಗಳು ಬರೋದೇ ಇಲ್ಲ ಅನ್ನು ಕೊರಗಿತ್ತು. ಈಗೀಗ ಆ ಕೊರಗು ಕಮ್ಮಿಯಾಗುವ ಲಕ್ಷಣಗಳು ಕಾಣುತ್ತಿವೆ. ಜೀ 5 ಓಟಿಟಿ ವೇದಿಕೆ ಕನ್ನಡ ವೆಬ್ ಸೀರಿಸ್ ಮಾಡುವುದಕ್ಕೆ ಮುಂದಾಗಿತ್ತು. ಅದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈಗಾಗಲೇ 'ಅಯ್ಯನ ಮನೆ' ಹಾಗೂ 'ಶೋಧ' ಈ ಎರಡೂ ವೆಬ್ ಸೀರಿಸ್‌ಗಳು ಯಶಸ್ಸು ಕಂಡಿವೆ. ಈ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ವೆಬ್ ಸೀರಿಸ್ ಸ್ಟ್ರೀಮಿಂಗ್‌ಗೆ ರೆಡಿಯಾಗಿದೆ. ಅದುವೇ 'ಮಾರಿಗಲ್ಲು'.

Zee5 ಮತ್ತು 'ಪಿಆರ್‌ಕೆ ಪ್ರೊಡಕ್ಷನ್ಸ್‌' ಜಂಟಿಯಾಗಿ ನಿರ್ಮಿಸಿರುವ ಈ ವೆಬ್ ಸೀರೀಸ್ ಇದು. ಇತ್ತೀಚೆಗೆ 'ಮಾರಿಗಲ್ಲು' ಟ್ರೈಲರ್ ರಿಲೀಸ್ ಆಗಿದ್ದು, ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ವೆಬ್ ಸೀರಿಸ್‌ನಲ್ಲಿ ರಂಗಾಯಣ ರಘು, ಗೋಪಾಲ್ ಕೃಷ್ಣ ದೇಶಪಾಂಡೆ ವೆಬ್ ಸೀರಿಸ್‌‌ ಪ್ರಪಂಚಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕನ್ನಡ ಚಿತ್ರರಂಗ ಈ ಇಬ್ಬರೂ ದಿಗ್ಗಜರು ಒಂದೇ ವೆಬ್ ಸೀರಿಸ್‌ನಲ್ಲಿ ನಟಿಸಿರುವುದು ಇದೇ ಮೊದಲು.

PRK and Zee 5 Kannada web series Marigallu trailer reached 2 million views in 24 hours

ಇವರೊಂದಿಗೆ ಪ್ರಮುಖ ಪಾತ್ರದಲ್ಲಿ ಪ್ರವೀಣ್ ತೇಜ್, ಡ್ರಾಮಾ ಜೂನಿಯರ್ಸ್ ಖ್ಯಾತಿಯ ಎಎಸ್ ಸೂರಜ್, ನಟ ಪ್ರಶಾಂತ್ ಸಿದ್ದಿ ನಟಿಸಿದ್ದಾರೆ. ಇವರಿಬ್ಬರೂ ಮೂಲತಃ ಶಿರಸಿಯವರಾಗಿದ್ದು, 'ಮಾರಿಗಲ್ಲು' ಕಥೆ ಕೂಡ ಅದೇ ಭಾಗದ ಕಥೆಯಾಗಿದ್ದರಿಂದ ಇನ್ನಷ್ಟು ಕುತೂಹಲ ಹೆಚ್ಚಾಗಿದೆ. ಇನ್ನು ಇತ್ತೀಚೆಗೆ ಬಿಡುಗಡೆಯಾಗಿದ್ದ ಟ್ರೈಲರ್ ಕೂಡ ಮೆಚ್ಚುಗೆ ವ್ಯಕ್ತವಾಗಿದ್ದು, ರಿಲೀಸ್ ಆದ 24 ಗಂಟೆಯೊಳಗೆ 2 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.

'ಮಾರಿಗಲ್ಲು' 1990ರ ದಶಕದ ಕಥೆ. ಕದಂಬರ ಕಾಲಘಟ್ಟದ ಹಿನ್ನೆಲೆಯನ್ನಿಟ್ಟುಕೊಂಡು ಕಥೆಯನ್ನು ಹೆಣೆಯಾಗಿದೆ. ಶಿರಸಿ ಬಳಿಯ ಮಾರಿಗಲ್ಲು ಎಂಬ ಕಾಲ್ಪನಿಕ ಹಳ್ಳಿಯೊಂದರಲ್ಲಿ ನಡೆದ ಕಥೆಯನ್ನು ಈ ವೆಬ್ ಸೀರಿಸ್‌ನಲ್ಲಿ ರೋಚಕವಾಗಿ ಕಟ್ಟಿಕೊಡಲಾಗಿದೆ. ಕದಂಬರ ರಾಜಧಾನಿಯಾಗಿರುವ ಬನವಾಸಿಗೆ ತನ್ನದೇ ಆದ ಪರಂಪರೆ ಹಾಗೂ ಇತಿಹಾಸವಿದೆ. ಕದಂಬರ ಕಾಲದ ನಿಧಿಯನ್ನು ಹುಡುಕಲು ಹೊರಟ ಶಿರಸಿ ಯುವಕರ ಕಹಾನಿಯನ್ನು ಇಲ್ಲಿ ತೋರಿಸಲಾಗಿದೆ. ಈ ಮೂಲಕ ನಮ್ಮ ಮಣ್ಣಿನ ಕಥೆಯನ್ನು zee5 ಹಾಗೂ PRK ಪ್ರೊಡಕ್ಷನ್ ಹೇಳೋದಿಕ್ಕೆ ಹೊರಟಿದೆ.

ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರ್ಮಾಣ ಮಾಡಿರುವ ಈ ವೆಬ್ ಸೀರಿಸ್‌ಗೆ ಕಥೆ ಬರೆದು ನಿರ್ದೇಶನ ಮಾಡಿರೋದು ದೇವರಾಜ್ ಪೂಜಾರಿ. "ಮಾರಿಗಲ್ಲು ಕರ್ನಾಟಕದ ಮಣ್ಣಿನಲ್ಲಿ ಆಳವಾಗಿ ಬೇರೂರಿರುವ ಕಥೆಯಾಗಿದೆ. ಇದು ನಂಬಿಕೆ, ದುರಾಸೆ ಮತ್ತು ಮಾನವ ಹಣೆಬರಹವನ್ನು ರೂಪಿಸುವ ಕಾಣದ ಶಕ್ತಿಗಳ ಬಗ್ಗೆ ಇದೆ. ಅಲ್ಲದೇ ಶಿರಸಿಯ ಸಾಂಸ್ಕೃತಿಕ ಆಚರಣೆ, ಬೇಡರ ವೇಷ, ಹುಟ್ಟು,ಹಿನ್ನೆಲೆಯಲ್ಲಿ ಸಾಗುವ ವೆಬ್ ಸೀರಿಸ್‌ನಲ್ಲಿ ನಾಲ್ಕು ಜನ ಹುಡುಗರು ಸೊಗಸಾಗಿ ನಟಿಸಿದ್ದಾರೆ. ಕಾಡು, ಜಾನಪದ ಮತ್ತು ನಂಬಿಕೆ ಎಲ್ಲವೂ ಒಟ್ಟಿಗೆ ಜೀವಂತವಾಗಿರುವ ನೈಜ ಆದರೆ ಅತೀಂದ್ರಿಯತೆಯನ್ನು ಅನುಭವಿಸುವ ಕಥೆಯನ್ನು ರಚಿಸಲು ನಾನು ಬಯಸಿದ್ದೆ. ಪ್ರತಿಯೊಂದು ಫ್ರೇಮ್ ಭಕ್ತಿ ಮತ್ತು ಭಯದ ಭಾವನೆಯನ್ನು ಹೊಂದಿದೆ. ನಮ್ಮ ಸಂಸ್ಕೃತಿಯನ್ನು ನಿಗೂಢತೆಯ ಮೂಲಕ ಆಚರಿಸುವ ಕಥೆಯಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ಪಿಆರ್‌ಕೆ ಪ್ರೊಡಕ್ಷನ್ಸ್ ಮತ್ತು ZEE5ಗೆ ನಾನು ಕೃತಜ್ಞನಾಗಿದ್ದೇನೆ" ಎಂದು ನಿರ್ದೇಶಕ ದೇವರಾಜ್ ಪೂಜಾರಿ ಹೇಳಿದ್ದಾರೆ.

"ಮಾರಿಗಲ್ಲು ನಮಗೆ ತುಂಬಾನೇ ವಿಶೇಷ. ಏಕೆಂದರೆ, ಇದು ಕರ್ನಾಟಕದಲ್ಲಿ ಬೇರೂರಿರುವ ಕಥೆಗಳನ್ನು ಪ್ರೇಕ್ಷಕರ ಮುಂದೆ ಕೊಂಡೊಯ್ಯುವ ಪಿಆರ್‌ಕೆ ಪ್ರೊಡಕ್ಷನ್‌ನ ದೃಷ್ಟಿಕೋನವನ್ನು ಬಲಪಡಿಸಿದೆ. ಇದು ಸಂಸ್ಕೃತಿ, ನಂಬಿಕೆ ಮತ್ತು ಮಾನವ ಭಾವನೆಗಳನ್ನು ಸಾಂಪ್ರದಾಯಿಕ ಮತ್ತು ಸಮಕಾಲೀನ ರೀತಿಯಲ್ಲಿ ಬೆರೆಸುವ ವೆಬ್ ಸೀರಿಸ್. ಈ ಯೋಜನೆಯಲ್ಲಿ ZEE5 ನೊಂದಿಗೆ ಕೆಲಸ ಮಾಡಿರುವುದು ತೃಪ್ತಿಕರವಾಗಿದೆ. ಒಟ್ಟಾಗಿ ನಾವು ನಮ್ಮ ನೆಲದ ಹೃದಯ ಮತ್ತು ಚೈತನ್ಯವನ್ನು ಪ್ರತಿಬಿಂಬಿಸುವ ಕಥೆಯನ್ನು ಪ್ರಸ್ತುತಪಡಿಸುತ್ತಿದ್ದೇವೆ" ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೇಳಿದ್ದಾರೆ.

ZEE5 ಕನ್ನಡದ ಬ್ಯುಸಿನೆಸ್ ಹೆಡ್ ದೀಪಕ್ ಶ್ರೀರಾಮುಲು, "ಮಾರಿಗಲ್ಲು 'ನಮ್ಮ ಭಾಷೆ, ನಮ್ಮ ಕಥೆಗಳು' ಎಂಬ ಅಂಶವನ್ನು ಸಂಪೂರ್ಣವಾಗಿ ಹಿಡಿದಿಡುತ್ತೆ. ಇದು ಕರ್ನಾಟಕದ ಸ್ಥಳೀಯ ಕಥೆ ಹೇಳುವ ಸಂಪ್ರದಾಯ ದೈವಿಕ ಜಾನಪದ ಥ್ರಿಲ್ಲರ್. ಹಾಗೇ ಹಾಸ್ಯದೊಂದಿಗೆ ಅಲೌಕಿಕ ಕುತೂಹಲವನ್ನು ಸಂಯೋಜಿಸುವ ಅಸಾಧಾರಣ ಕಥೆಯಾಗಿದೆ. ಎಂದು ಅಭಿಪ್ರಾಯ ಪಟ್ಟಿದ್ದಾರೆ.

More from Filmibeat

English summary
PRK and Zee 5 Kannada web series Marigallu trailer reached 2 million views in 24 hours.
Read more about: web series kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X