ಮದುವೆ ಬಳಿಕ ಓಟಿಟಿಗೆ ಎಂಟ್ರಿ ಕೊಟ್ಟ ಮಾನ್ವಿತಾ ಕಾಮತ್: 'ಹ್ಯಾಪಿಲಿ ಮ್ಯಾರೀಡ್' ಎಲ್ಲಿ? ಯಾವಾಗ ರಿಲೀಸ್?

ಟಗರು ಪುಟ್ಟಿ ಮಾನ್ವಿತಾ ಕಾಮತ್ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ಬಳಿಕ ಮಾನ್ವಿತಾ ಕಾಮತ್ ಚೊಚ್ಚಲ ಬಾರಿಗೆ ಓಟಿಟಿಗೆ ಎಂಟ್ರಿ ಕೊಡುತ್ತಿದ್ದಾರೆ. ಹೌದು 'ದಿಯಾ' ಖ್ಯಾತಿಯ ಪೃಥ್ವಿ ಅಂಬಾರ್‌ಗೆ ನಾಯಕಿಯಾಗಿ ನಟಿಸಿದ್ದ ಮಾನ್ವಿತಾ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಆ ಸಿನಿಮಾ ಯಾವುದು ಗೊತ್ತಾ? ಅದುವೇ 'ಹ್ಯಾಪಿಲಿ ಮ್ಯಾರೀಡ್'.

ಮೂರು ವರ್ಷಗಳ ಹಿಂದೆ ಪೃಥ್ವಿ ಅಂಬಾರ್ ಹಾಗೂ ಮಾನ್ವಿತಾ ಕಾಮತ್ 'ಹ್ಯಾಪಿಲಿ ಮ್ಯಾರೀಡ್' ಸಿನಿಮಾ ಲಾಂಚ್ ಆಗಿತ್ತು. ಕ್ರೇಜಿ ಸ್ಟಾರ್ ರವಿಚಂದ್ರನ್ ಈ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಅನ್ನು ರಿವೀಲ್ ಮಾಡಿದ್ದರು. ಅಲ್ಲಿಂದ ಮತ್ತೆ ಈ ಸಿನಿಮಾದ ಬಗ್ಗೆ ಸುದ್ದಿನೇ ಇರಲಿಲ್ಲ. ಬರೋಬ್ಬರಿ ಮೂರು ವರ್ಷಗಳ ಬಳಿಕ ಓಟಿಟಿಯಲ್ಲಿ ರಿಲೀಸ್ ಆಗಲಿದೆ.

Pruthvi Ambaar Manvitha Kamath movie Happily Married releasing these OTT platforms

'ಹ್ಯಾಪಿಲಿ ಮ್ಯಾರೀಡ್' ಇದು ಮಲಯಾಳಂ ಸಿನಿಮಾದ ರಿಮೇಕ್. 2020ರಲ್ಲಿ ತೆರೆಕಂಡಿದ್ದ ಮಲಯಾಳಂ ಥ್ರಿಲ್ಲರ್ ಸಿನಿಮಾ 'ಲವ್' ಸಿನಿಮಾದ ಕನ್ನಡ ಅವತರಣಿಕೆ. ಮಲಯಾಳಂ ಅವತರಣಿಕೆಯಲ್ಲಿ ಶೈನ್ ಟಾಮ್ ಚಾಕೋ ಹಾಗೂ ರಾಜಿಶಾ ವಿಜಯನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅದೇ ಸಿನಿಮಾವನ್ನು ಅರುಣ್ ಕುಮಾರ್ ಎಂ ಹಾಗೂ ಸಬು ಅಲೋಸಿಯಸ್ ಕನ್ನಡದಲ್ಲಿ ರೀಮೇಕ್ ಮಾಡಿದ್ದಾರೆ.

'ಹ್ಯಾಪಿಲಿ ಮ್ಯಾರೀಡ್' ಸಿನಿಮಾ ಯುವ ದಂಪತಿಯ ಕಥೆ. ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳು ಮುಂದುವರೆಯುತ್ತಾ ಹಿಂಸೆಗೆ ತಿರುಗುವುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಅಲ್ಲಿಂದ ಅವರ ಬದುಕಿನಲ್ಲಿ ಬಂದು ಸೇರಿಕೊಳ್ಳುವ ಬೇರೆ ಬೇರೆ ಪಾತ್ರಗಳು ಕಥೆಗೆ ಹೇಗೆ ತಿರುವು ಕೊಡುತ್ತವೆ ಅನ್ನೋದೇ ಕಥೆ. ಈ ಥ್ರಿಲ್ಲರ್ ಕಥೆಯನ್ನು ಇದೇ ಸೆಪ್ಟೆಂಬರ್ 28ರಂದು ಕೆಲವು ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ನೋಡಬಹುದಾಗಿದೆ.

ಪೃಥ್ವಿ ಅಂಬರ್ ಹಾಗೂ ಮಾನ್ವಿತಾ ಕಾಮತ್ ನಟಿಸಿರುವ 'ಹ್ಯಾಪಿಲಿ ಮ್ಯಾರೀಡ್' ಸಿನಿಮಾವನ್ನು ಆರು ಓಟಿಟಿ ವೇದಿಕೆಗಳಲ್ಲಿ ನೋಡುಬಹುದು. ಹಂಗಾಮ, ಟಾಟಾ ಪ್ಲೇ, ವಿಐ ಸಿನಿಮಾ &ಟಿವಿ, ಏರ್‌ಟೆಲ್ ಎಕ್ಸ್‌ಟ್ರೀಮ್ ಪ್ಲೇ, ಎಬಿಸಿ ಟಾಕೀಸ್ ಅಂತಹ ವೇದಿಕೆಯಲ್ಲಿ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ಮುಂದಾಗಿದೆ.

'ಹ್ಯಾಪಿಲಿ ಮ್ಯಾರೀಡ್' ಸಿನಿಮಾದಲ್ಲಿ ಪೃಥ್ವಿ ಅಂಬರ್, ಮಾನ್ವಿತಾ ಕಾಮತ್ ಜೊತೆ ಧರ್ಮಾ ಕಡೂರು, ಶ್ರೀಜಿತ್ ರವಿ ಕೂಡ ನಟಿಸಿದ್ದಾರೆ. ಮಾನ್ವಿತಾ ಕಾಮತ್‌ಗೆ ಇದು ಓಟಿಟಿಗೆ ಎಂಟ್ರಿ ಕೊಡುತ್ತಿರುವ ಅವರ ಚೊಚ್ಚಲ ಸಿನಿಮಾ ಆಗಿದ್ದರಿಂದ ವಿಶೇಷವಾಗಿದೆ. ಥ್ರಿಲ್ಲರ್ ಸಿನಿಮಾ ಪ್ರಿಯರಾಗಿದ್ದರೆ. ಇದೇ ತಿಂಗಳ ಕೊನೆಯಲ್ಲಿ ಒಂದೊಂದು ಸಿನಿಮಾ ನೋಡಬಹುದು. ಸೆಪ್ಟೆಂಬರ್ 28ರಿಂದ ಓಟಿಟಿಯಲ್ಲಿ ಲಭ್ಯವಿರಲಿದೆ.

More from Filmibeat

English summary
Pruthvi Ambaar, Manvitha Kamath movie Happily Married releasing these OTT platforms
Read more about: ott sandalwood filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X