James Vs KGF 2: 'ಕೆಜಿಎಫ್ 2' ಜೊತೆ OTTಗೆ ಲಗ್ಗೆ ಇಡ್ತಿದೆ ಅಪ್ಪು ಕೊನೆ ಸಿನಿಮಾ 'ಜೇಮ್ಸ್': ಇಲ್ಲಿದೆ ಡಿಟೈಲ್ಸ್

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಸಿನಿಮಾ 'ಜೇಮ್ಸ್' ಎರಡನೇ ವಾರ ಅಭಿಮಾನಿಗಳನ್ನು ರಂಜಿಸುತ್ತಿದೆ. ರಾಜಮೌಳಿಯ RRR ಹಾಗೂ 'ದಿ ಕಾಶ್ಮೀರ್ ಫೈಲ್ಸ್' ಅಬ್ಬರದ ನಡುವೆಯೂ ಜೇಮ್ಸ್ ಸದ್ದು ಮಾಡುತ್ತಿದೆ. ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಲೂಟಿದೆ.

'ಜೇಮ್ಸ್' ಅಪ್ಪು ಅಭಿನಯದ ಕೊನೆಯ ಕಮರ್ಷಿಯಲ್ ಸಿನಿಮಾ ಆಗಿರುವುದರಿಂದ ಅಭಿಮಾನಿಗಳು ಹಬ್ಬದಂತೆ ಸಂಭ್ರಮಿಸಿದ್ದರು. ಕರ್ನಾಟಕದಾದ್ಯಂತ 'ಜೇಮ್ಸ್' ಜಾತ್ರೆಯನ್ನೇ ಮಾಡಿದ್ದರು. ಅಪ್ಪು ಮೇಲಿನ ಅಭಿಮಾನಕ್ಕೆ ಹುಟ್ಟುಹಬ್ಬದ ಜೊತೆ ಜೊತೆಗೆ 'ಜೇಮ್ಸ್' ಸಿನಿಮಾ ನೋಡಿ ಸಂಭ್ರಮಿಸಿದ್ದರು. ಈಗ ಅದೇ ಸಿನಿಮಾ ಒಟಿಟಿಗೂ ಲಗ್ಗೆಇಡುತ್ತಿದೆ.

'ಜೇಮ್ಸ್' ಸಿನಿಮಾ ಇನ್ನೂ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿದೆ ಆಗಲೇ ಒಟಿಟಿಯಲ್ಲಿ ಬಿಡುಗಡೆ ಬಗ್ಗೆ ಮಾಹಿತಿ ಹೊರಬಿದ್ದಿದೆ. ಅದೂ 'ಕೆಜಿಎಫ್ 2' ಸಿನಿಮಾ ರಿಲೀಸ್ ಆಗುತ್ತಿರುವ ದಿನವೇ ಗ್ರ್ಯಾಂಡ್ ಪ್ರೀಮಿಯರ್ ಕಾಣಲು ಸಜ್ಜಾಗಿದೆ. 'ಜೇಮ್ಸ್' ಯಾವಾಗ? ಎಲ್ಲಿ? ಹೇಗೆ? ಬಿಡುಗಡೆಯಾಗುತ್ತೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.

James Vs KGF 2

James Vs KGF 2

ಏಪ್ರಿಲ್ 14 ಕನ್ನಡ ಸಿನಿಪ್ರಿಯರಿಗೆ ಹಬ್ಬವೋ ಹಬ್ಬ. ಒಂದು ಕಡೆ ಮೋಸ್ಟ್ ಎಕ್ಸ್‌ಪೆಕ್ಟೆಡ್ ಪ್ಯಾನ್ ಇಂಡಿಯನ್ ಸಿನಿಮಾ 'ಕೆಜಿಎಫ್ 2' ಬಿಡುಗಡೆಯಾಗುತ್ತಿದೆ. ಇನ್ನೊಂದು ಕಡೆ ಅಪ್ಪು ಅಭಿನಯದ ಕೊನೆಯ ಕಮರ್ಷಿಯಲ್ ಸಿನಿಮಾ 'ಜೇಮ್ಸ್' ಒಟಿಟಿಗೆ ಲಗ್ಗೆ ಇಡುತ್ತಿದೆ. ಕನ್ನಡಿಗರು ಸೇರಿದಂತೆ ವಿಶ್ವದಾದ್ಯಂತ ಇರುವ ಸಿನಿಪ್ರಿಯರು ಈ ಎರಡೂ ಸಿನಿಮಾಗಳನ್ನು ಕಣ್ತುಂಬಿಕೊಳ್ಳಬಹುದು. ಅದರಲ್ಲೂ ಅಪ್ಪು ಅಭಿಮಾನಿಗಳಿಗೆ ಮತ್ತೊಮ್ಮೆ 'ಜೇಮ್ಸ್' ನೋಡುವ ಭಾಗ್ಯ ಸಿಗಲಿದೆ.

ಐದೂ ಭಾಷೆಯಲ್ಲಿ 'ಜೇಮ್ಸ್' ರಿಲೀಸ್

'ಜೇಮ್ಸ್' ಸಿನಿಮಾ ಐದೂ ಭಾಷೆಗಳಲ್ಲೂ ಏಕಕಾಲಕ್ಕೆ ಒಟಿಟಿಯಲ್ಲಿ ಪ್ರೀಮಿಯರ್ ಕಾಣಲಿದೆ. ಸೋನಿ ಲೈವ್‌ ಒಟಿಟಿ ವೇದಿಕೆ ಇದೇ ಮೊದಲ ಬಾರಿಗೆ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡುತ್ತಿದೆ. ಈ ವಿಷಯವನ್ನು ಸೋನಿ ಲೈವ್ ಸಂಸ್ಥೆ ಟ್ವಿಟರ್‌ನಲ್ಲಿ ಗ್ರ್ಯಾಂಡ್ ಆಗಿ ಅನೌನ್ಸ್ ಮಾಡಿದೆ. "ಕರ್ನಾಟಕದ ರಾಜರತ್ನ ಡಾ.ಪುನೀತ್ ರಾಜ್ ಕುಮಾರ್ ಅಭಿನಯದ ಪವರ್ ಪ್ಯಾಕ್ಡ್ ಆಕ್ಷನ್ ಎಂಟರ್ಟೈನರ್ 'ಜೇಮ್ಸ್' ಅತೀ ಶೀಘ್ರದಲ್ಲಿ SonyLIV ನಲ್ಲಿ ಬರಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಏಪ್ರಿಲ್ 14ಕ್ಕೆ ಎಕ್ಸ್‌ಕ್ಲೂಸಿವ್ ಆಗಿ ಸೋನಿ ಲವ್‌ನಲ್ಲಿ." ಎಂದು ಟ್ವಿಟರ್‌ನಲ್ಲಿ ಮಾಹಿತಿ ನೀಡಿದೆ.

'ಕೆಜಿಎಫ್ 2' ದಿನವೇ ಯಾಕೆ ರಿಲೀಸ್?

'ಕೆಜಿಎಫ್ 2' ದಿನವೇ ಯಾಕೆ ರಿಲೀಸ್?

'ಕೆಜಿಎಫ್ 2' ಸಿನಿಮಾ ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಎಲ್ಲರ ಮೂಡು ಆ ಸಿನಿಮಾ ಮೇಲೆನೇ ಇರುತ್ತೆ. ಇಂತಹ ಸಂದರ್ಭದಲ್ಲಿ ಅಪ್ಪು 'ಜೇಮ್ಸ್' ಸಿನಿಮಾ ಬಿಡುಗಡೆ ಮಾಡುತ್ತಿರುವುದು ಯಾಕೆ? ಎಂಬ ಪ್ರಶ್ನೆ ಎದ್ದಿದೆ. ಆದರೆ, ಏಪ್ರಿಲ್ 14ರಂದು ಬ್ಯಾಕ್ ಟು ಬ್ಯಾಕ್ ರಜೆಗಳಿವೆ. ಜನರಿಗೆ ರಜೆಗಳಿರುವುದರಿಂದ ಒಟಿಟಿಯಲ್ಲಿ ಬಿಡುಗಡೆಯಾಗುವ ಸಿನಿಮಾಗಳನ್ನು ನೋಡುತ್ತಾರೆ ಎಂಬ ಲೆಕ್ಕಾಚಾರವನ್ನು ಸೋನಿ ಲೈವ್ ಹಾಕಿದೆ.

120 ಕೋಟಿಗೂ ಅಧಿಕ ಗಳಿಸಿದ 'ಜೇಮ್ಸ್'

120 ಕೋಟಿಗೂ ಅಧಿಕ ಗಳಿಸಿದ 'ಜೇಮ್ಸ್'

ಪುನೀತ್ ರಾಜ್‌ಕುಮಾರ್ ಕೊನೆಯ ಸಿನಿಮಾ 'ಜೇಮ್ಸ್' ಮಾರ್ಚ್ 17ರಂದು ಬಿಡುಗಡೆಯಾಗಿತ್ತು. ಮೊದಲ ದಿನವೇ ಸುಮಾರು 4 ಸಾವಿರ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿದೆ. ಮೊದಲ ವಾರ ನಾಲ್ಕು ದಿನಗಳಲ್ಲಿ 'ಜೇಮ್ಸ್' ಭರ್ಜರಿ ಕಲೆಕ್ಷನ್ ಮಾಡಿತ್ತು. ಸುಮಾರು 112 ಕೋಟಿಗೂ ಅಧಿಕ ಗಳಿಕೆ ಕಂಡಿತ್ತು. ವಿತರಕರೊಬ್ಬರ ಪ್ರಕಾರ, 'ಜೇಮ್ಸ್' ಇಲ್ಲಿವರೆಗೂ 120 ಕೋಟಿ ಗಳಿಕೆ ಕಂಡಿರಬಹುದು ಎಂದು ಹೇಳುತ್ತಿದ್ದಾರೆ. ಇನ್ನು ಥಿಯೇಟರ್‌ನಲ್ಲಿ ಸಿನಿಮಾ ನೋಡದವರು ಒಟಿಟಿಯಲ್ಲಿ ವೀಕ್ಷಿಸಬಹುದು.

More from Filmibeat

English summary
Puneeth Rajkumar Last movie James releasing on sony liv ott on April. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X