ಪುನೀತ್ ರಾಜ್‌ಕುಮಾರ್ ಟ್ರೈಲರ್ ನೋಡಿ ಹಿರಿ ಹಿರಿ ಹಿಗ್ಗಿದ ಫ್ಯಾನ್ಸ್; 3 ಕ್ಯಾಟಗರಿಯಲ್ಲಿ ಏನೇನು ಸಿಗುತ್ತೆ?
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ನಾಲ್ಕು ವರ್ಷಗಳೇ ಆಗಿವೆ. ಅಭಿಮಾನಿಗಳು, ಆಪ್ತರು ಇನ್ನೂ ಅವರದ್ದೇ ಗುಂಗಿನಲ್ಲಿ ಇನ್ನೂ ಇದ್ದಾರೆ. ಇಂತಹ ಡೈಹಾರ್ಡ್ ಅಭಿಮಾನಿಗಳಿಗಾಗಿ, ಸಿನಿಮಾ ಪ್ರೇಮಿಗಳಿಗಾಗಿ ಒಂದು ವಿಶಿಷ್ಟವಾಗಿ ಶ್ರಮಿಸುತ್ತಲೇ ಇತ್ತು. ಅಶ್ವಿನಿ ಪುನೀತ್ ರಾಜ್‌ಕುಮಾರ್ ಇದರ ಮುಂದಾಳತ್ವ ವಹಿಸಿದ್ದರು. ಅಂದುಕೊಂಡಂತೆ ಎಲ್ಲವೂ ಆಗಿದೆ. ಅದುವೇ ಪಿಆರ್‌ಕೆ ಆಪ್.
ಕೆಲವೇ ದಿನಗಳ ಹಿಂದಷ್ಟೇ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ಪಿಆರ್‌ಕೆ ಆಪ್‌ನ ಟ್ರೈಲರ್ ಕುರಿತು ಮಾಹಿತಿ ಹಂಚಿಕೊಂಡಿದ್ದರು. ಅಕ್ಟೋಬರ್ 18ರಂದು ಪಿಆರ್‌ಕೆ ಆಪ್ ಲಾಂಚ್ ಆಗುತ್ತೆ ಅಂತ ಹೇಳಿದ್ದರು. ನುಡಿದಂತೆ ಅಪ್ಪು ಅಭಿಮಾನಿಗಳು ಕಾದು ಕೂತಿದ್ದ ಪಿಆರ್‌ಕೆ ಆಪ್‌ನ ಟ್ರೈಲರ್ ರಿಲೀಸ್ ಆಗಿದೆ. ಕಿಚ್ಚ ಸುದೀಪ್ ಧ್ವನಿ ಕೊಟ್ಟಿದ್ದು, ಪುನೀತ್ ಗುಣಗಾನ ಮಾಡಿದ್ದಾರೆ.

ಪಿಆರ್‌ಕೆ ಆಪ್ ಟ್ರೈಲರ್‌ನಲ್ಲಿ ಪುನೀತ್ ರಾಜ್‌ಕುಮಾರ್ ಜನನದಿಂದ ಶುರುವಾಗಿ ಅವರು ಅಗಲುವ ತನಕ. ಅವರ ನಗುವಿನಿಂದ ಶುರುವಾಗಿ ಅವರ ಕನಸಿನವರೆಗೂ ಕಿಚ್ಚ ಸುದೀಪ್ ಮಾತನಾಡಿದ್ದು ವಿಶೇಷ. ಎಐ ತಂತ್ರಜ್ಙಾನವನ್ನು ಬಳಸಿ ಈ ಟ್ರೈಲರ್ ಅನ್ನು ಸುಂದರವಾಗಿ ಹೆಣೆಯಲಾಗಿದೆ. ಅಭಿಮಾನಿಗಳು ಪಿಆರ್‌ಕೆ ಆಪ್ ಟ್ರೈಲರ್‌ಗೆ ಬಹುಪರಾಕ್ ಹೇಳಿದ್ದಾರೆ. ಹಾಗಿದ್ದರೆ, ಈ ಆಪ್‌ನಲ್ಲಿ ಏನೇನು ನೋಡಬಹುದು? ಉದ್ದೇಶವೇನು? ತಿಳಿಯುವುದಕ್ಕೆ ಮುಂದೆ ಓದಿ.
ಅಪ್ಪುವಿನ 'ಪಿಆರ್‌ಕೆ ಟ್ರೈಲರ್' ಉದ್ದೇಶವೇನು?
ಅಪ್ಪು ಅಗಲಿದ ಬಳಿಕ ಅವರ ಅಭಿಮಾನಿಗಳು ಅವರನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದರು. ಹೀಗಾಗಿ ಅವರ ಅಭಿಮಾನಿಗಳಿಗೆ, ಆಪ್ತರಿಗೆ ಅಪ್ಪು ನೆನಪುಗಳನ್ನು ಮಾಡುವ ಉದ್ದೇಶ. ಹಾಗೇ ಪುನೀತ್ ರಾಜ್‌ಕುಮಾರ್ ನೆನಪಾದಾಗಲೆಲ್ಲ ಅವರೊಂದಿಗೆ ಕನೆಕ್ಟ್ ಆಗುವುದಕ್ಕೆ ಈ ಆಪ್ ಅನ್ನು ಸಿದ್ಧಪಡಿಸಲಾಗಿದೆ. ಈ ಆಪ್ ಅಕ್ಟೋಬರ್ 25ರಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಲಾಂಚ್ ಮಾಡುತ್ತಿದ್ದಾರೆ. ಇದರಲ್ಲಿ ಏನೇನಿರುತ್ತೆ? ಎಂದು ನೋಡುವುದಾರೇ.
ಮೊದಲನೆಯದೇ 'ಡಾ.ಪುನೀತ್ ರಾಜ್‌ಕುಮಾರ್'
ಪಿಆರ್‌ಕೆ ಆಪ್‌ನಲ್ಲಿ ಮೂರು ಸೆಕ್ಷನ್‌ಗಳು ಇರುತ್ತವೆ. ಅದರಲ್ಲಿ ಮೊದಲನೆಯದು ಡಾ.ಪುನೀತ್ ರಾಜ್‌ಕುಮಾರ್. ಇದರಲ್ಲಿ ಸಂಪೂರ್ಣವಾಗಿ ಅಪ್ಪುಗೆ ಸಂಬಂಧಿಸಿದ ವಿಷಯಗಳು ಇರುತ್ತವೆ. ಪುನೀತ್ ರಾಜ್‌ಕುಮಾರ್ ಸಂಬಂಧಿಸಿದ ಪಾಡ್‌ಕಾಸ್ಟ್‌ಗಳು ಇರುತ್ತವೆ. ಹಾಗೇ ಛೋಟಾ ಅಪ್ಪು ಅನ್ನೋ ಪರಿಕಲ್ಪನೆಯಲ್ಲಿ ಚಿಕ್ಕ ಮಕ್ಕಳೊಂದಿಗೆ ಕನೆಕ್ಟ್ ಮಾಡುವುದಕ್ಕೆ ಕೆಲವು ಕಂಟೆಂಟ್‌ಗಳು ಇರುತ್ತವೆ. ವಾಲ್‌ಪೇರ್ ಇರುತ್ತೆ. ಪುನೀತ್ ನಟಿಸಬೇಕು ಅಂತಿದ್ದ ಸಿನಿಮಾಗಳ ತುಣುಕುಗಳನ್ನು ಎಐ ತಂತ್ರಜ್ಞಾನದಿಂದ ಸೃಷ್ಟಿಸಿ ಶಾರ್ಟ್ಸ್ ಮಾಡಲಾಗುತ್ತಿದೆ.

2ನೇಯದು 'ಸ್ಯಾಂಡಲ್‌ವುಡ್'
ಇನ್ನು ಎರಡನೇ ಸೆಕ್ಷನ್ ಸ್ಯಾಂಡಲ್‌ವುಡ್. ಇದರಲ್ಲಿ ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದ ಅಪ್‌ಡೇಟ್ಸ್, ನ್ಯೂಸ್‌ಗಳು ಇರುತ್ತವೆ. ಇನ್ನೊಂದು ಕಡೆಗೆ ಚಿತ್ರರಂಗದ ಮಾಹಿತಿಯನ್ನು ಒಳಗೊಂಡ ಮಾಹಿತಿಯನ್ನು ಒಳಗೊಂಡ ಡೇಟಾ ಬೇಸ್ ಕೂಡ ಇರುತ್ತೆ.
3ನೇಯದು 'ಕನಕ್ಟ್'
ಈ ಸೆಕ್ಷನ್ ಅನ್ನು ಕೂಡ ಸಿನಿಮಾ ಮಂದಿಗಾಗಿಯೇ ಮೀಸಲಿಡಲಾಗಿದೆ. ಇಲ್ಲಿ ಚಿತ್ರರಂಗದ ಹಲವು ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವವರು ತಮ್ಮ ಪ್ರೊಫೈಲ್‌ಗಳನ್ನು ಸೃಷ್ಟಿಸಿಕೊಳ್ಳಬಹುದು. ಹೀರೋ, ಹೀರೊಯಿನ್, ಕಲಾವಿದರು, ಟೆಕ್ನಿಷಿಯನ್ಸ್ ಸೇರಿದಂತೆ ಎಲ್ಲರೂ ಈ ಸೆಕ್ಷನ್‌ನಲ್ಲಿ ಪ್ರೊಫೈಲ್ ಸೃಷ್ಟಿ ಮಾಡಿಕೊಳ್ಳಬಹುದು. ಅಕ್ಟೋಬರ್ 25ರಂದು ಈ ಆಪ್ ಲಾಂಚ್ ಆಗಲಿದ್ದು, ಅಕ್ಟೋಬರ್ 29ರಂದು ಕಾರ್ಯಾರಂಭ ಮಾಡಲಿದೆ.


Click it and Unblock the Notifications











