'ಪುಟ್ಟಕ್ಕನ ಮಕ್ಕಳು' ನಟಿ ಸಂಜನಾ ಬುರ್ಲಿಗೆ 'ಕಾಟೇರ' ತಂಡದಿಂದ ಗಿಫ್ಟ್; ದರ್ಶನ್ ಬಗ್ಗೆ ಏನಂದ್ರು ನಟಿ?
ಸ್ಯಾಂಡಲ್‌ವುಡ್ ಸೂಪರ್‌ಸ್ಟಾರ್ ದರ್ಶನ್ ಸಿನಿಮಾ 'ಕಾಟೇರ' ಬಾಕ್ಸಾಫೀಸ್‌ನಲ್ಲಿ ಹವಾ ಎಬ್ಬಿಸಿದ್ದು ಗೊತ್ತೇ ಇದೆ. ರಿಲೀಸ್ ಆದ ಒಂದು ವಾರದಲ್ಲಿಯೇ 'ಕಾಟೇರ' ಬಾಕ್ಸಾಫೀಸ್‌ನಲ್ಲಿ 100 ಕೋಟಿ ರೂಪಾಯಿ ಹತ್ತಿರ ಕಲೆಕ್ಷನ್ ಮಾಡಿತ್ತು ಎಂದು ಚಿತ್ರತಂಡಕ್ಕೆ ಹತ್ತಿರವಿರುವ ಆಪ್ತರೇ ಹೇಳಿಕೊಂಡಿದ್ದಾರೆ. ರಾಜ್ಯದ ಮೂಲೆ ಮೂಲೆಯಲ್ಲಿರೋ ದರ್ಶನ್ ಅಭಿಮಾನಿಗಳು 'ಕಾಟೇರ' ನೋಡಿ ಮೆಚ್ಚುಗೆ ಸೂಚಿಸಿದ್ದರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೊಸ ಅಧ್ಯಾಯವನ್ನೇ ಬರೆದಿದ್ದಾರೆ. ಕೇವಲ ಕನ್ನಡದಲ್ಲಿಯೇ ತೆರೆಕಂಡ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಇನ್ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಅನ್ನೋದು ಹರಿದಾಡುತ್ತಿರುವ ಸುದ್ದಿ. ಸದ್ಯ ಈ ಬಗ್ಗೆ ನಿರ್ಮಾಪಕರು ಅಧಿಕೃತ ಮಾಹಿತಿ ಎಲ್ಲೂ ಕೊಟ್ಟಿಲ್ಲ. ಹೀಗಾಗಿ ಸದ್ಯ ಒಬ್ಬೊಬ್ಬರಿಂದ ಒಂದು ಲೆಕ್ಕ ಹೊರಬೀಳುತ್ತಿದೆ.

ಆದರೆ, ಲೆಕ್ಕ ಏನೇ ಬಂದರೂ 'ಕಾಟೇರ' ಬಾಕ್ಸಾಫೀಸ್ ಮೆಗಾ ಹಿಟ್ ಅಂತ ಸಾಬೀತಾಗಿದ್ದು ಮಾತ್ರ ಅಷ್ಟೇ ಸತ್ಯ. ಈಗ ಜೀ 5ನಲ್ಲಿ ಇದೇ ಮೆಗಾ ಸಿನಿಮಾ 'ಕಾಟೇರ' ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಸ್ನೇಹ ಪಾತ್ರದಲ್ಲಿ ನಟಿಸುತ್ತಿರುವ ನಟಿ ಸಂಜನಾ ಬುರ್ಲಿಗೆ 'ಕಾಟೇರ' ತಂಡದಿಂದ ಗಿಫ್ಟ್ ಸಿಕ್ಕಿದೆ. ಈ ಉಡುಗೊರೆಯ ಬಗ್ಗೆ ಸಂಜನಾ ಬುರ್ಲಿ ಏನು ಹೇಳಿದ್ದಾರೆ? ತಿಳಿಯಲು ಮುಂದೆ ಓದಿ..
ಜೀ ಕನ್ನಡದ ಟಾಪ್ ಧಾರಾವಾಹಿ 'ಪುಟ್ಟಕ್ಕನ ಮಕ್ಕಳು'. ಇದೇ ಧಾರಾವಾಹಿಯಲ್ಲಿ ನಟಿಸುತ್ತಿರುವ ನಟಿ ಸಂಜನಾ ಬುರ್ಲಿ 'ಕಾಟೇರ' ತಂಡದಿಂದ ಬಂದಿರುವ ಗಿಫ್ಟ್ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಗಿಫ್ಟ್ ಬಾಕ್ಸ್ ಓಪನ್ ಮಾಡಿ ಅದರೊಳಗೆ ಏನೇನಿದೆ? ಅನ್ನೋದನ್ನು ತೋರಿಸಿದ್ದಾರೆ. ಅಲ್ಲದೆ ವಿಡಿಯೋ ಮಾಡಿ, ಕಾಟೇರ ಬಗ್ಗೆ, ದರ್ಶನ್ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
"ಎಲ್ಲರಿಗೂ ನಮಸ್ಕಾರ ನಾನು ನಿಮ್ಮ ಸ್ನೇಹ ಅಂದರೆ, ಸಂಜನಾ ಬುರ್ಲಿ ಮಾತಾಡುತ್ತಿರೋದು. ನಾನೇನು ಈಗ ಸಡನ್ ಆಗಿ ಬಂದೆ ಅಂತ ಯೋಚನೆ ಮಾಡುತ್ತಿದ್ದೀರಾ? ಕಾಟೇರ ಟೀಮ್‌ನವರು ಬ್ಯೂಟಿಫುಲ್ ಆಗಿರೋ ಗಿಫ್ಟ್ ಅನ್ನು ಕಳಿಸಿದ್ದಾರೆ. ಎಷ್ಟು ಚೆನ್ನಾಗಿದೆ ಅಲ್ವಾ ನೋಡುವುದಕ್ಕೆ. ಇದರಲ್ಲಿ ಟೀಮ್ ಕಾಟೇರದಿಂದ ಒಂದು ಮೆಸೇಜ್ ಇದೆ. ರೈತರ ಮೇಲಿನ ಶೋಷಣೆ ಹಾಗೂ ಜೀತದಾಳಿನ ಪದ್ಧತಿಯ ವಿರುದ್ಧ ಹೋರಾಡಿ ಗೆದ್ದ ಕಾಟೇರ ಚಿತ್ರಕ್ಕೆ ಬೆಂಬಲ ನೀಡಿದ ನಿಮಗೆ ಜೀ 5 ಕನ್ನಡ ವತಿಯಿಂದ ಧನ್ಯವಾದಗಳು." ಎಂದು ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ನಟಿ ಸಂಜನಾ ಬುರ್ಲಿ ಹೇಳಿದ್ದಾರೆ.
ಇದೇ ವಿಡಿಯೋದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ನಟಿ ಸಂಜನಾ ಬುರ್ಲಿ ಹೀಗಂದಿದ್ದಾರೆ. "ನಮ್ಮ ಡಿ ಬಾಸ್ ಕೊಟ್ಟ ಸೂಪರ್ ಡೂಪರ್ ಹಿಟ್ ಸಿನಿಮಾವನ್ನು ಸಪೂರ್ಟ್ ಮಾಡಲಿಲ್ಲ ಅಂದ್ರೆ ಹೇಗೆ ಹೇಳಿ? ಈ ಸಿನಿಮಾ ಜೀ 5 ಓಟಿಟಿಯಲ್ಲಿ ರಿಲೀಸ್ ಆಗುತ್ತಿದ್ದಂತೆ ಇತರ ಭಾಷೆಯ ಸಿನಿಮಾಗಳನ್ನು ಹಿಂದೆ ಹಾಕಿ ನಂಬರ್ 1 ಪೋಸಿಷನ್ ತೆಗೆದುಕೊಂಡಿದೆ ಅಂತ ನಾನು ಓದಿದೆ. ಕಾಟೇರ ತಂಡಕ್ಕೆ ಅಭಿನಂದನೆಗಳು. ಥ್ಯಾಂಕ್ಸ್ ಟು ಟೀಮ್ ಕಾಟೇರ. ಈ ಸಿನಿಮಾ ನೋಡುವುದನ್ನು ಮಿಸ್ ಮಾಡಿದ್ರೆ, ಜೀ 5ನಲ್ಲಿ ಸಿನಿಮಾ ನೋಡುವುದನ್ನು ಮರೆಯಬೇಡಿ." ಎಂದು ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ನಟಿ ಸಂಜನಾ ಬುರ್ಲಿ ಹೇಳಿದ್ದಾರೆ.
'ಕಾಟೇರ' ಸ್ಯಾಂಡಲ್‌ವುಡ್‌ನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿ ಸೇರಿದೆ. ಚಿತ್ರಮಂದಿರಗಳಲ್ಲಿ ದಾಖಲೆಗಳನ್ನು ಬರೆದು ಈಗ ಓಟಿಟಿಗೆ ಲಗ್ಗೆ ಇಟ್ಟಿದೆ. ಈಗ ಓಟಿಟಿಯಲ್ಲಿ ದರ್ಶನ್ ಸಿನಿಮಾ ಇನ್ನೇನು ದಾಖಲೆ ಮಾಡುತ್ತೆ? ಅನ್ನೋದನ್ನು ಡಿ ಬಾಸ್ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.


Click it and Unblock the Notifications











