Radhika Apte:ಸಿನಿಮಾದಲ್ಲಿ ಬೆತ್ತಲೆಯಾಗಿ ನಟಿಸಿದ್ದ 'ಕಬಾಲಿ' ನಟಿ; ಓಟಿಟಿಯಲ್ಲಿ ಫುಲ್ ಟ್ರೆಂಡಿಂಗ್
ರಾಧಿಕಾ ಆಪ್ಟೆ ಬಾಲಿವುಡ್‌ನ ಸಕ್ಸಸ್‌ಫುಲ್ ನಟಿ. ವಿಶಿಷ್ಟ ಸಿನಿಮಾಗಳನ್ನು ಹುಡುಕುತ್ತಾ ತನ್ನದೇ ದಾರಿ ಹಿಡಿದು ಹೊರಟಿರೋ ರಾಧಿಕಾಗೆ ಒಳ್ಳೆಯ ಯಶಸ್ಸು ಸಿಕ್ಕಿದೆ. ಹೆಚ್ಚು ಕಡಿಮೆ ಬೋಲ್ಡ್ ಪಾತ್ರಗಳಲ್ಲಿಯೇ ಕಾಣಿಸಿಕೊಳ್ಳುವ ಈ ನಟಿ ಕಥೆಗೆ ಹೆಚ್ಚು ಒತ್ತು ನೀಡುತ್ತಾರೆ. ಹೀಗಾಗಿ ಸಿನಿಮಾದಲ್ಲಿ ಉದ್ದೇಶ ಪೂರ್ವಕವಾಗಿ ಎಕ್ಸ್‌ಪೋಸ್ ಮಾಡುವಂತಹ ನಟಿಯಲ್ಲ.
ಈ ಬಾಲಿವುಡ್ ನಟಿ ಇದ್ದಿದ್ದನ್ನು ಇದ್ದಂಗೆ ಹೇಳಿವ ನಟಿ. ಕೆಲವೊಮ್ಮೆ ಈ ನಟಿಯ ಪಾತ್ರಗಳಷ್ಟೇ ಬೋಲ್ಡ್ ಇರುತ್ತೆ ಅಂತಲ್ಲ. ಕೊಡುವ ಹೇಳಿಕೆಗಳು ಕೂಡ ಅಷ್ಟೇ ಬೋಲ್ಡ್ ಇರುತ್ತೆ. ಆ ಕಾರಣಕ್ಕೆ ಆಗಾಗ ವಿವಾದ ಕೇಂದ್ರ ಬಿಂದುವಾಗುತ್ತಾರೆ. ಹಿಂದಿ ಅಷ್ಟೇ ಭಾರತದ ಹಲವು ಸಿನಿಮಾಗಳಲ್ಲಿಯೂ ರಾಧಿಕಾ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕೆಲವೊಮ್ಮೆ ಇವರ ವಿವಾದಕ್ಕೂ ಸಿಕ್ಕಿಕೊಂಡಿದೆ. ಅದರಲ್ಲೊಂದು 'ದಿ ವೆಡ್ಡಿಂಗ್ ಗೆಸ್ಟ್'.

ಬ್ರಿಟಿಷ್ ನಿರ್ದೇಶಕ ಮೈಕೆಲ್ ವಿಂಟರ್‌ಬಾಟಮ್ 'ದಿ ವೆಡ್ಡಿಂಗ್ ಗೆಸ್ಟ್' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. 2018ರಲ್ಲಿ ಟೊರೆಂಟೋ ಫಿಲ್ಮ್ ಫೆಸ್ಟಿವಲ್‌ನಲ್ಲಿ ಈ ಸಿನಿಮಾ ಪ್ರದರ್ಶನ ಕಂಡಿತ್ತು. 2019ರಲ್ಲಿ ಅಮೆರಿಕ ಹಾಗೂ ಇಂಗ್ಲೆಡ್‌ನಲ್ಲಿ ತೆರೆಕಂಡಿತ್ತು. ಆದರೆ, ಭಾರತದಲ್ಲಿ ಈ ಸಿನಿಮಾ ಬಿಡುಗಡೆಯಾಗಿರಲಿಲ್ಲ. ಅದಕ್ಕೊಂದು ಬಲವಾದ ಕಾರಣವಿದೆ.
'ದಿ ವೆಡ್ಡಿಂಗ್ ಗೆಸ್ಟ್' ಸಿನಿಮಾ ರಾಧಿಕಾ ಆಫ್ಟೆ ಬೆತ್ತಲೆ ದೃಶ್ಯವಿತ್ತು. ಹೀಗಾಗಿ ಭಾರತದಲ್ಲಿ ಈ ಸಿನಿಮಾ ರಿಲೀಸ್ ಆಗಿರಲಿಲ್ಲ. ಆದ್ರೀಗ ಕೆಲವು ದಿನಗಳ ಹಿಂದಷ್ಟೇ ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾ ಪ್ರದರ್ಶನವಾಗುತ್ತಿದೆ ಎನ್ನಲಾಗಿದೆ. ಸಿನಿಮಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಎರಡನೇ ಸ್ಥಾನದಲ್ಲಿದೆ.
ರಾಧಿಕಾ ಆಪ್ಟೆ ಹಾಗೂ 'ಸ್ಲಮ್ ಡಾಗ್ ಮಿಲಿಯನೇರ್' ಸಿನಿಮಾದ ದೇವ್ ಪಟೇಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪಾಕಿಸ್ತಾನದ ಯುವತಿ ಸಮೀರಾ (ರಾಧಿಕಾ ಆಪ್ಟೆ) ಯನ್ನು ಭಾರತದಲ್ಲಿರುವ ತನ್ನ ಲವರ್ ಬಳಿ ಸೇರಿಸುವುದು ಜೈ(ದೇವ್ ಪಟೇಲ್) ಕೆಲಸ ಆಗಿರುತ್ತೆ. ಈ ಕೆಲಸಕ್ಕೆ ಭಾರತದಲ್ಲಿರುವ ಲವ್ವರ್ ಹಣ ಕೊಟ್ಟಿರುತ್ತಾನೆ. ಹೀಗಾಗಿ ಪಾಕಿಸ್ತಾನಕ್ಕೆ ಬಂದು, ಸಮೀರಾಳನ್ನು ಕಿಡ್ನಾಪ್ ಮಾಡಿ, ಭಾರತಕ್ಕೆ ಮುಟ್ಟಿಸುವುದು ಬ್ರಿಟನ್‌ನಿಂದ ಬಂದಿರೋ ಜೈ ಕೆಲಸ ಆಗಿರುತ್ತೆ. ಈ ಮಧ್ಯೆ ಏನಲ್ಲಾ ಆಗುತ್ತೆ? ಅನ್ನೋದು ಸಿನಿಮಾದ ಕಥೆ.

ಎರಡು ವರ್ಷಗಳ ಹಿಂದಷ್ಟೇ ರಾಧಿಕಾ ಆಪ್ಟೆ ಇದೇ ಸಿನಿಮಾದಲ್ಲಿ ಬೆತ್ತಲೆಯಾಗಿ ನಟಿಸಿದ್ದ ದೃಶ್ಯ ಲೀಕ್ ಆಗಿತ್ತು. ಆಗ ರಾಧಿಕಾ ಆಪ್ಟೆ ಉರಿದು ಬಿದ್ದಿದ್ದರು. "ಇದು ಈ ಸಮಾಜದಲ್ಲಿರುವ ಕೆಲವು ವ್ಯಕ್ತಿಗಳ ಮನೋವಿಕೃತಿ. ಆ ದೃಶ್ಯದಲ್ಲಿ ನಷ್ಟೇ ಹೊತ್ತು ದೇವ್ ಪಟೇಲ್ ಕೂಡ ಕಾಣಿಸಿಕೊಳ್ಳುತ್ತಾರೆ. ಆದರೆ, ಅವರ ಹೆಸರಿನಲ್ಲಿ ಯಾಕೆ ಲೀಕ್ ಮಾಡಿಲ್ಲ." ಎಂದು ರಾಧಿಕಾ ಆಪ್ಟೆ ಕಿಡಿಕಾರಿದ್ದರು.
ಈ ವಿವಾದಾತ್ಮಕ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದ್ದಂತೆ ಭಾರತೀಯರು ಮುಗಿಬಿದ್ದು ಸಿನಿಮಾ ನೋಡಿದ್ದಾರೆ. ಹೀಗಾಗಿ ನೆಟ್‌ಫ್ಲಿಕ್ಸ್‌ನಲ್ಲಿ 'ದಿ ವೆಡ್ಡಿಂಗ್ ಗೆಸ್ಟ್' ನಂ 3 ಸ್ಥಾನದಲ್ಲಿ ಟ್ರೆಂಡಿಂಗ್‌ನಲ್ಲಿದೆ.


Click it and Unblock the Notifications











