ರಾಗಿಣಿ ದ್ವಿವೇದಿ ನಟಿಸಿದ ಚೊಚ್ಚಲ ಹಿಂದಿ ವೆಬ್ ಸೀರಿಸ್ ರಿಲೀಸ್‌ಗೆ ಮುಹೂರ್ತ ಫಿಕ್ಸ್: ಯಾವುದದು? ಎಲ್ಲಿ ರಿಲೀಸ್?
ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಇತ್ತೀಚೆಗೆ ಕನ್ನಡಕ್ಕಿಂತ ಹೆಚ್ಚಾಗಿ ಪರಭಾಷೆಯ ಚಿತ್ರರಂಗದಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಬಂದಿದ್ದ ನಟಿಯೀಗ ಬಾಲಿವುಡ್ ಕಡೆ ಮುಖ ಮಾಡಿದ್ದಾರೆ. ರಾಗಿಣಿ ಇದೇ ಮೊದಲ ಬಾರಿಗೆ ನಟಿಸಿದ ವೆಬ್ ಸೀರಿಸ್ ಸ್ಟ್ರೀಮಿಂಗ್‌ಗೆ ರೆಡಿಯಾಗಿದೆ. ಥ್ರಿಲ್ಲರ್ ವೆಬ್ ಸೀರಿಸ್ ಮೂಲಕ ರಾಗಿಣಿ ವೆಬ್ ಸೀರಿಸ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ರಾಗಿಣಿ ದ್ವಿವೇದಿ ಚೊಚ್ಚಲ ಹಿಂದಿ ವೆಬ್ ಸೀರಿಸ್ ಹೆಸರು 'ಛಲ್ ಕಪಟ್- ದಿ ಡಿಸೆಪ್ಷನ್'. ಇದೊಂದು ಇನ್‌ವೆಸ್ಟಿಗೆಟಿವ್ ಥ್ರಿಲ್ಲರ್ ಸೀರಿಸ್ ಆಗಿದ್ದು, ಓಟಿಟಿ ಪ್ರಿಯರಿಗೆ ಇದನ್ನು ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಈ ವೆಬ್ ಸೀರಿಸ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಹಿಂದಿ ಚಿತ್ರರಂಗದಲ್ಲಿ ರಾಗಿಣಿಗೆ ಎಷ್ಟು ಸ್ಕೋಪ್ ಸಿಗುತ್ತೆ ಅನ್ನೋದನ್ನು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಈಗಾಗಲೇ ಓಟಿಟಿಯಲ್ಲಿ ಸಾಕಷ್ಟು ತನಿಖೆಯನ್ನು ಆಧರಿಸಿದ ವೆಬ್ ಸೀರಿಸ್ ಬಂದಿವೆ. ಅವುಗಳ ಮಧ್ಯೆ ರಾಗಿಣಿ ನಟಿಸಿದ ಈ ವೆಬ್ ಸೀರಿಸ್ ವಿಭಿನ್ನವಾಗಿ ನಿಲ್ಲುತ್ತಾ? ಪ್ರೇಕ್ಷಕರನ್ನು ರಂಜಿಸುತ್ತಾ? ಎನ್ನುವುದು ಕುತೂಹಲವನ್ನು ಕೆರಳಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಸ್ಟ್ರೀಮಿಂಗ್ ಆಗಲಿರುವ ಈ ಥ್ರಿಲ್ಲರ್ ವೆಬ್ ಸೀರಿಸ್ ಕತೆಯೇನು? ಯಾವಾಗ? ಎಲ್ಲಿ ರಿಲೀಸ್ ಎನ್ನುವುದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಥ್ರಿಲ್ಲರ್ ವೆಬ್ ಸೀರಿಸ್ ಕಥೆಯೇನು?
ಕನ್ನಡದ ನಟಿ ರಾಗಿಣಿ ದ್ವಿವೇದಿ ನಟಿಸಿರುವ ವೆಬ್ ಸೀರಿಸ್ 'ಛಲ್ ಕಪಟ್-ದಿ ಡಿಸೆಪ್ಷನ್' ಕೊಲೆಯ ಪ್ರಕರಣವನ್ನು ಭೇದಿಸುವ ಕತೆ. ಅದ್ಧೂರಿಯಾಗಿ ನಡೆಯುತ್ತಿರುವ ಮದುವೆಯ ಮನೆಯಲ್ಲಿ ಇದ್ದಕ್ಕಿದ್ದ ಹಾಗೇ ನಿಗೂಢವಾಗಿ ಕೊಲೆ ನಡೆಯುತ್ತೆ. ಅಲ್ಲಿಂದ ಆ ಕೊಲೆಗೆ ಕಾರಣರಾದವರನ್ನು ಕಂಡು ಹಿಡಿಯುವುದೇ ಈ ವೆಬ್ ಸೀರಿಸ್‌ನ ಕತೆ. ಮಹಿಳಾ ಪೊಲೀಸ್ ಅಧಿಕಾರಿ ನಿಗೂಢ ಹತ್ಯೆಯನ್ನು ಹೇಗೆ ಭೇದಿಸುತ್ತಾರೆ ಎನ್ನುವುದೇ ಇಲ್ಲಿ ಥ್ರಿಲ್.
ಈ ವೆಬ್ ಸೀರಿಸ್‌ನಲ್ಲಿ ಶ್ರೀಯಾ ಪಿಲ್ಗಾಂಕರ್ ಪೊಲೀಸ್ ಅಧಿಕಾರಿ ದೇವಿಕಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೆಬ್ ಸೀರಿಸ್‌ನಲ್ಲಿ ಇವರದ್ದು ಪ್ರಮುಖ ಪಾತ್ರ. ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಶ್ರಿಯಾ ಪುಲ್ಗಾಂಕರ್ ಈ ವೆಬ್ ಸೀರಿಸ್‌ನಲ್ಲಿ ನಟಿಸಿದ್ದಾರೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿದ್ದು, ಓಟಿಟಿ ಪ್ರಿಯರ ಗಮನ ಸೆಳೆದಿದೆ.
ರಾಗಿಣಿ ದ್ವಿವೇದಿ ಪಾತ್ರವೇನು?
'ಛಲ್ ಕಪಟ್-ದಿ ಡಿಸೆಪ್ಷನ್' ಥ್ರಿಲ್ಲರ್ ವೆಬ್ ಸೀರಿಸ್‌ನಲ್ಲಿ ರಾಗಿಣಿ ದ್ವಿವೇದಿ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕಥೆ ನಾಲ್ಕು ಸ್ನೇಹಿತರ ಮೇಲೆ ಸಾಗುತ್ತಿದ್ದರೂ, 9 ಮಂದಿಯ ವಿರುದ್ಧ ತನಿಖೆ ನಡೆಯುತ್ತಿರುತ್ತೆ. ಇದರಲ್ಲಿ ರಾಗಿಣಿ ದ್ವಿವೇದಿ ಒಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರ ಪಾತ್ರ ಅನಿರೀಕ್ಷಿತ ಟ್ವಿಸ್ಟ್ ಅಂಡ್ ಟರ್ನ್ ತೆಗೆದುಕೊಳ್ಳುತ್ತೆ. ಜೊತೆ ಈ ಪಾತ್ರದಲ್ಲಿ ಭಾವನಾತ್ಮಕ ಸನ್ನಿವೇಶಗಳು ಇವೆ. ಕೊನೆಯವರೆಗೂ ಇವರ ಪಾತ್ರ ಕುತೂಹಲವನ್ನು ಹಿಡಿದಿಟ್ಟುಕೊಳ್ಳುತ್ತೆ ಎನ್ನಲಾಗಿದೆ.
ಈ ವೆವ್ ಸೀರಿಸ್ ಅನ್ನು ಅಜಯ್ ಭುಯನ್ ನಿರ್ದೇಶಿಸಿದ್ದಾರೆ. ಜೀ5 ಓಟಿಟಿ ವೇದಿಕೆಯಲ್ಲಿ ಜೂನ್ 6 ರಿಂದ ಪ್ರಸಾರ ಆಗಲಿದೆ. ಶ್ರೀಯಾ ಪಿಲ್ಗಾಂಕರ್ ಜೊತೆಗೆ ರಾಗಿಣಿ ದ್ವಿವೇದಿ, ತುಹಿನಾ ದಾಸ್, ಕಮ್ಯಾ ಅಹ್ಲವಾತ್, ಯಹ್ಹವೆ ಶರ್ಮಾ, ಪ್ರಣಯ್ ಪಚೌರಿ, ಸಮ್ರನ್ ಸಾಹು ಹಾಗೂ ಅನುಜ್ ಸಜ್‌ದೇವ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಾಗಿಣಿ ದ್ವಿವೇದಿಯ ಚೊಚ್ಚಲ ಹಿಂದಿ ವೆಬ್ ಸೀರಿಸ್ ಆಗಿದ್ದು, ಪ್ರಮುಖ ಪಾತ್ರಗಳಲ್ಲಿ ಒಂದು ಎಂದು ಹೇಳಲಾಗಿದೆ. ವೆಬ್ ಸಿರೀಸ್ ರಿಲೀಸ್ ಬಳಿಕ ವೀಕ್ಷಕರ ಪ್ರತಿಕ್ರಿಯೆ ಹೇಗಿರುತ್ತೆ ಎಂದು ಜೂನ್ 6ರ ಬಳಿಕ ಗೊತ್ತಾಗಲಿದೆ.


Click it and Unblock the Notifications











