ಥಿಯೇಟರ್‌ನಲ್ಲಿ 'ಸು ಫ್ರಮ್ ಸೋ' ನೋಡಿದವ್ರು ಸೂಪರ್ ಅಂದ್ರು, ಆದ್ರೆ ಓಟಿಟಿಯಲ್ಲಿ ಯಾಕಿಂಗಾಯ್ತು?
'ಸು ಫ್ರಮ್ ಸೋ' ಚಿತ್ರಮಂದಿರದಲ್ಲಿ ಸದ್ದು ಮಾಡಿದ್ದು ಗೊತ್ತೇ ಇದೆ. ಸಿನಿಮಾ ರಿಲೀಸ್ ಆದ ದಿನದಿಂದ ಹಿಡಿದು ಇಲ್ಲಿವರೆಗೂ ಈ ಸಿನಿಮಾ ಬಗ್ಗೆ ಮಾತಾಡದವರೇ ಇಲ್ಲ. ಜನರನ್ನು ಬಹಳ ದಿನಗಳ ಬಳಿಕ ನಗೆಗಡಲಲ್ಲಿ ತೇಲಿಸಿದ ಸಿನಿಮಾವಿದು. ಥಿಯೇಟರ್‌ಗೆ ಯಾರು ಹೋಗ್ತಾರೆ? ಓಟಿಟಿಯಲ್ಲೇ ಸಿನಿಮಾ ನೋಡೋಣ ಅಂದುಕೊಂಡುವರನ್ನೂ ಚಿತ್ರಮಂದಿರಕ್ಕೆ ಎಳೆದುಕೊಂಡು ಬಂದ ಸಿನಿಮಾವಿದು.
ಸಿನಿಮಾ ನೋಡಿದವರೆಲ್ಲರೂ ಇಂತಹದ್ದೊಂದು ಸಿನಿಮಾ ಬೇಕಿತ್ತು ಅಂದವರೇ ಹೆಚ್ಚು. ಎಷ್ಟು ದಿನ ಆಗಿತ್ತು.. ಹೀಗೆ ಹೊಟ್ಟೆ ಹಿಡಿದುಕೊಂಡು ನಕ್ಕಿರಲಿಲ್ಲ ಎಂದು ಖುಷಿ ಪಟ್ಟಿದ್ದರು. ಇನ್ನು ಸಿನಿಮಾ ಮಂದಿ ಮುಖದಲ್ಲೂ ನಗು ಅರಳಿತ್ತು. ಥಿಯೇಟರ್ ಮಾಲೀಕರು ಥ್ರಿಲ್ ಆಗಿದ್ದರು. ಕನ್ನಡ ಚಿತ್ರರಂಗ ಮತ್ತೊಂದು ಸದ್ದು ಮಾಡುವುದಕ್ಕೆ ಶುರು ಮಾಡಿತ್ತು. 45 ದಿನ ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ಮನರಂಜನೆ ನೀಡಿದ ಸಿನಿಮಾ ಈಗ ಓಟಿಟಿಗೆ ಲಗ್ಗೆ ಇಟ್ಟಿದೆ.

ಥಿಯೇಟರ್‌ನಲ್ಲೇನೋ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ, ಓಟಿಟಿಯಲ್ಲೂ ಅದೇ ಕ್ರೇಜ್ ಇದೆಯಾ? ಯಾಕಂದ್ರೆ, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಡಬ್ ಆಗಿ ಈ ಸಿನಿಮಾ ರಿಲೀಸ್ ಆಗಿದೆ. ಥಿಯೇಟರ್‌ಗೆ ಬಂದು ಸಿನಿಮಾ ನೋಡದವರು ಓಟಿಟಿಯಲ್ಲಿ ವೀಕ್ಷಿಸುತ್ತಿದ್ದಾರೆ. ಆದರೆ, ಓಟಿಟಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಾಗಿದ್ದರೆ, ಸಿನಿಮಾ ನೋಡಿ ಯಾರೆಲ್ಲ ಏನೇನು ಟ್ವೀಟ್ (ಎಕ್ಸ್) ಮಾಡುತ್ತಿದ್ದಾರೆ? ಅಂತ ನೋಡುವುದಾರೇ,
ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡೆ
ಕೇರಳದ ಸಿನಿಮಾ ಪ್ರೇಮಿಯೊಬ್ಬರು 'ಸು ಫ್ರಮ್ ಸೋ' ಅನ್ನು ಥಿಯೇಟರ್ ಈ ಸಿನಿಮಾ ನೋಡದೇ ಇರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. "ಕೇರಳದಲ್ಲೂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆ ವೇಳೆ ನಮ್ಮ ಕಾಲೇಜ್ ಗ್ರೂಪ್‌ನಲ್ಲಿ ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಓಟಿಟಿಯಲ್ಲಿ ಸಿನಿಮಾ ನೋಡುವಂತೆ ಹೇಳಿದ್ದರು. ಆದರೆ, ಥಿಯೇಟರ್‌ನಲ್ಲಿ ಈ ಸಿನಿಮಾ ನೋಡದೇ ಇರುವುದಕ್ಕೆ ನಾನೀಗ ವಿಷಾದ ವ್ಯಕ್ತಪಡಿಸುತ್ತಿದ್ದೇನೆ. ನಾನು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರೂ, ಹಲವು ದೃಶ್ಯಗಳಲ್ಲಿ ನನಗೆ ನಗುವನ್ನೇ ತಡೆದುಕೊಳ್ಳುವುದಕ್ಕೆ ಆಗಲಿಲ್ಲ." ಎಂದಿದ್ದಾರೆ.

ತಮಿಳು ಪ್ರೇಕ್ಷಕರಿಗೆ ಇಷ್ಟ ಆಯ್ತು
'ಸು ಫ್ರಮ್ ಸೋ' ತಮಿಳಿಗೆ ಡಬ್ ಆಗಿಲ್ಲ. ಆದರೂ, ಓಟಿಟಿಯಲ್ಲಿ ಸಿನಿಮಾವನ್ನು ನೋಡಿ ಎಂಜಾಯ್ ಮಾಡುತ್ತಿದ್ದಾರೆ. " ಸೊ ಫ್ರಮ್ ಸೋ ಕಳೆದ ಒಂದೂವರೆ ಎರಡು ವರ್ಷಗಳಿಂದ ನಾನು ನೋಡಿದ ಅತ್ಯುತ್ತಮ ಚಿತ್ರ ಇದು. ಈ ಸಿನಿಮಾ ಕರ್ನಾಟಕದಿಂದ ಬಂದಿರೋದು ತುಂಬಾನೇ ವಿಶೇಷ. ಭಾರತಕ್ಕೆ ಈಗ ಬೇಕಾಗಿರೋದು ಇಂತಹ ಸಿನಿಮಾಗಳು" ಎಂದು ತಮಿಳು ಪ್ರೇಕ್ಷಕರೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಂತಹದ್ದೇನು ನೋಡಿದ್ರಿ?
"ನನಗೆ ಒಂದೂ ಅರ್ಥವಾಗುತ್ತಿಲ್ಲ ಬ್ರದರ್.. ನೀವು ಸು ಫ್ರಮ್ ಸೋ ಹಾಗೂ ಲೋಕಾ ಸಿನಿಮಾ ಅಂತಹದ್ದೇನನ್ನು ನೋಡಿದ್ರಿ. ನನಗೆ ಅಚ್ಚರಿಯಾಗುತ್ತಿದೆ. ಅಷ್ಟೇ ಅಲ್ಲದೆ ನೀವು ಟಾಪ್ ಅಂತ ಏಕೆ ಹೇಳಿದ್ದೀರಿ? ಒಂದೇ ಬಾರಿಗೆ ನೋಡಬಹುದು ಅಷ್ಟೇ." ಎಂದು ತೆಲುಗು ಪ್ರೇಕ್ಷಕನನೊಬ್ಬ ಹೇಳಿದ್ದಾರೆ. ಇವರ ಟ್ವೀಟ್‌ಗೆ ಮತ್ತೊಬ್ಬ ತೆಲುಗು ಪ್ರೇಕ್ಷಕ ಇದು ನೀಟ್ ಸಿನಿಮಾ ಓಟಿಟಿಯಲ್ಲಿ ತೆಲುಗಿನಲ್ಲೇ ಒಮ್ಮೆ ಹೋಗಿ ನೋಡು ಎಂದು ಹೇಳಿದ್ದಾರೆ.
ಒಂದೂ ಅರ್ಥ ಆಗುತ್ತಿಲ್ಲ
"ಏನೋ ಸು ಫ್ರಮೋ ಸೋ ಸಿನಿಮಾ ಅಂತೆ. ಸಿನಿಮಾ ಆರಂಭ ಆಗಿ 20 ನಿಮಿಷ ಆಯ್ತು. ಪಾತ್ರಗಳು ಕಿರಿಕಿರಿಯನ್ನುಂಟು ಮಾಡುತ್ತಿದ್ದಾರೆ. ನಿಜವಾಗಿಯೋ ಏನಾಗಿದೆ? ಕಥೆಯೇನು? ಅಲ್ಲಿ ಏನು ನಡೆಯುತ್ತಿದೆ ಅನ್ನೋದು ಅರ್ಥವೇ ಆಗುತ್ತಿಲ್ಲ" ಎಂದು ಮತ್ತೊಬ್ಬ ತೆಲುಗು ಪ್ರೇಕ್ಷಕರ ನೆಗೆಟಿವ್ ಆಗಿ ಕಮೆಂಟ್ ಮಾಡಿದ್ದಾನೆ.
ಅದ್ಭುತ ಸಿನಿಮಾ
"ಸು ಫ್ರಮ್ ಸೋ ಅದ್ಭುತ ಸಿನಿಮಾ. ಏಳುಮಲೆ ಕೂಡ ಅದ್ಭುತ ಸಿನಿಮಾ. ಈ ಎರಡೂ ಸಿನಿಮಾಗಳು ಕೂಡ ಕನ್ನಡ ಚಿತ್ರರಂಗದ ಹೆಮ್ಮೆ. ಕನ್ನಡ ಚಿತ್ರರಂಗ ಹೊಸ ತಲೆಮಾರುಗಳಿಗಾಗಿ ಬೇರೆ ಬೇರೆ ಜಾನರ್‌ಗೆ ತೆರೆದುಕೊಳ್ಳುತ್ತಿರುವುದಕ್ಕೆ ಹೆಮ್ಮೆಯಿದೆ. ತಲೆ ಸರಿಯಿಲ್ಲದವರು ಈ ಸಂಭ್ರಮವನ್ನು ಹಾಳು ಮಾಡುತ್ತಿದ್ದಾರೆ." ಎಂದು ಇನ್ನೊಬ್ಬರು ಆಕ್ರೋಶ ಹೊರ ಹಾಕುತ್ತಿದ್ದಾರೆ.


Click it and Unblock the Notifications











