Su From So OTT: 'ಸು ಫ್ರಮ್ ಸೋ'ಗೆ ಓಟಿಟಿಯಲ್ಲಿ 7 ನಿಮಿಷ ಕಟ್; ಅದಕ್ಕೆ ಅಸಲಿಗೆ ಕಾರಣ ಇದೇ!

ಥಿಯೇಟರ್‌ನಲ್ಲಿ ಸಿನಿಮಾ ನೋಡುವುದಕ್ಕೆ ಮೀನಾ ಮೇಷ ಎಣಿಸುತ್ತಿದ್ದವರು. 'ಕೆಜಿಎಫ್', 'ಕಾಂತಾರ' ಬಳಿಕ ಪ್ರೇಕ್ಷಕರು ಕೂಡ ಪ್ಯಾನ್ ಇಂಡಿಯಾ ಮೂಡ್‌ನಲ್ಲಿದ್ದರು. ಇಂತಹವರ ಮೂಡ್ ಅನ್ನು ಬದಲಾಯಿಸಿ ಮತ್ತೆ ಥಿಯೇಟರ್‌ಗೆ ಕರೆದುಕೊಂಡು ಬಂದಿದ್ದು 'ಸು ಫ್ರಮ್ ಸೋ'. ಥಿಯೇಟರ್‌ನಲ್ಲಿ 'ಸು ಫ್ರಮ್ ಸೋ' ಹೊಸ ದಾಖಲೆಗಳನ್ನು ಬರೆದು ಪರಭಾಷೆಯ ಸಿನಿಮಾ ಮಂದಿಯನ್ನೇ ಬೆಚ್ಚಿ ಬೀಳಿಸಿತ್ತು.

ಈ ಸಿನಿಮಾ ಈಗ ಥಿಯೇಟರ್‌ನಲ್ಲಿ ಇರುವಾಗಲೇ ಓಟಿಟಿಗೆ ಲಗ್ಗೆ ಇಟ್ಟಿದೆ. ಜಿಯೋ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಥಿಯೇಟರ್‌ನಲ್ಲಿ ಸಿನಿಮಾ ನೋಡಿದವರೂ ಮತ್ತೆ 'ಸು ಫ್ರಮ್ ಸೋ' ನೋಡುವುದಕ್ಕೆ ಇಷ್ಟ ಪಡುತ್ತಿರುವವರಿಗೆ ಕಿಕ್ ಕೊಟ್ಟಂತೆ ಆಗಿದೆ. ಸಾಮಾನ್ಯವಾಗಿ ವೀಕೆಂಡ್‌ನಲ್ಲಿ ರಿಲೀಸ್ ಸಿನಿಮಾ, ವೀಕ್‌ ಡೇಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿರೋದು ವಿಶೇಷ.

Raj B Shetty Produced Su From So Streams on Jio Hotstar with 7-Minute Cut Here s Why

ಕನ್ನಡ ಚಿತ್ರರಂಗದ ಮತ್ತೊಂದು ₹100 ಕೋಟಿ ಸಿನಿಮಾ ಓಟಿಟಿಯಲ್ಲಿ ಏನೆಲ್ಲ ದಾಖಲೆ ಬರುತ್ತೆ ಅನ್ನೋ ಕುತೂಹಲ ಕೆಲವರಲ್ಲಿ ಇದೆ. ಆದರೆ, ಓಟಿಟಿಗೆ ಎಂಟ್ರಿ ಕೊಟ್ಟಲ್ಲಿಂದ ಈ ಸಿನಿಮಾ ಉದ್ದ 7 ನಿಮಿಷ ಕಡಿಮೆ ಆಗಿದೆ ಅನ್ನೋ ಗೊಂದಲ ಬಿದ್ದಿದ್ದಾರೆ. ಅಸಲಿಗೆ ಫಿಲ್ಟರ್ ಇಲ್ಲದೆ ಸಿನಿಮಾ ತೋರಿಸೋ ಓಟಿಟಿಯಲ್ಲಿ 7 ನಿಮಿಷಕ್ಕೆ ಕತ್ತರಿ ಬಿದ್ದಿದ್ದೇಕೆ? ನಿಜಕ್ಕೂ ಏನಿದು ಸಮಸ್ಯೆ ಅಂತ ನೋಡುವುದಾರೇ..

'ಸು ಫ್ರಮ್ ಸೋ' ಓಟಿಟಿ ಕ್ರೇಜ್

ರಾಜ್ ಬಿ ಶೆಟ್ಟಿ ಹಾಗೂ ಸ್ನೇಹಿತರು ಸೇರಿ ನಿರ್ಮಿಸಿದ 'ಸು ಫ್ರಮ್ ಸೋ' ಸಿನಿಮಾ ಇನ್ನೂ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಇನ್ನೇನು 50 ದಿನಗಳನ್ನು ಪೂರೈಸಬೇಕು ಎನ್ನುವಷ್ಟರಲ್ಲಿಯೇ ಓಟಿಟಿಗೆ ಲಗ್ಗೆ ಇಟ್ಟಿದೆ. ಆದರೆ, ಇದರಿಂದ ಚಿತ್ರತಂಡಕ್ಕೆ ಏನೂ ತೊಂದರೆ ಇಲ್ಲ. ಯಾಕಂದ್ರೆ, 'ಸು ಫ್ರಮ್ ಸೋ' ಬಾಕ್ಸಾಫೀಸ್‌ನಲ್ಲಿ ₹120 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಈಗ ಓಟಿಟಿಯಲ್ಲಿ ಚರಿತ್ರೆ ಸೃಷ್ಟಿಸುತ್ತಾ? ಅನ್ನೋದು ನೋಡಬೇಕಿದೆ.

Raj B Shetty Produced Su From So Streams on Jio Hotstar with 7-Minute Cut Here s Why

7 ನಿಮಿಷದ ಅಂತರ ಯಾಕೆ?

ಎಲ್ಲಾ ಸರಿ 'ಸು ಫ್ರಮ್ ಸೋ' ಸಿನಿಮಾ ಥಿಯೇಟರ್‌ ವರ್ಷನ್‌ನಲ್ಲಿ 2.17 ಗಂಟೆ ಇತ್ತು. ಅದೇ ಓಟಿಟಿಯಲ್ಲಿ 2.10 ಗಂಟೆ ಇದೆ. ಹಾಗಿದ್ದರೆ, ಏಳು ನಿಮಿಷ ಎಲ್ಲಿ ಹೋಯ್ತು ಅಂತ ವೀಕ್ಷಕರು ಕನ್ಫ್ಯೂಸ್ ಆಗಿದ್ದಾರೆ. ಸಾಮಾನ್ಯವಾಗಿ ಕಟ್ ಮಾಡಿದ ದೃಶ್ಯಗಳನ್ನು ಸೇರಿಸಿ ಓಟಿಟಿಯಲ್ಲಿ ರಿಲೀಸ್ ಮಾಡುತ್ತಾರೆ. ಆದರೆ, ಇಲ್ಲಿ 7 ನಿಮಿಷ ಕಡಿಮೆ ಆಗಿದ್ದು ಯಾಕೆ? ಯಾವ ಸೀನ್ ಅನ್ನು ಕಟ್ ಮಾಡಿದ್ದಾರೆ? ಅನ್ನೋ ಗೊಂದಲಕ್ಕೀಗ ಉತ್ತರ ಸಿಕ್ಕಿದೆ.

ಎಲ್ಲಿ ಹೋಯ್ತು 7 ನಿಮಿಷ?

'ಸು ಫ್ರಮ್ ಸೋ'ದ ಥಿಯೇಟರ್ ವರ್ಷನ್ ಅನ್ನೇ ಓಟಿಟಿಯಲ್ಲೂ ರಿಲೀಸ್ ಮಾಡಲಾಗಿದೆ. ಹೀಗಾಗಿ ಒಂದು ದೃಶ್ಯಕ್ಕೂ ಕತ್ತರಿ ಹಾಕಿಲ್ಲ. ಹಾಗಿದ್ದರೆ, 7 ನಿಮಿಷ ಎಲ್ಲಿಗೆ ಹೋಯ್ತು? ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. ಥಿಯೇಟರ್‌ನ ಆರಂಭದ ದೃಶ್ಯಗಳಲ್ಲಿ ಸಿಗರೇಟ್ ಜಾಹೀರಾತು ಇರುತ್ತೆ. ಅದು ಓಟಿಟಿಗೆ ಅಪ್ಲೇ ಆಗದೇ ಇರುವುದರಿಂದ ಇಲ್ಲಿ ಕಟ್ ಮಾಡಲಾಗಿದೆ. ಇನ್ನೊಂದು ಚಿತ್ರಮಂದಿರಲ್ಲಿ 24 ಫ್ರೇಮ್‌ನಲ್ಲಿ ಸಿನಿಮಾ ತೋರಿಸುತ್ತಾರೆ. ಆದರೆ, ಓಟಿಟಿಯಲ್ಲಿ ಇದು 25 ಫ್ರೇಮ್‌ನಲ್ಲಿ ಸ್ಟ್ರೀಮಿಂಗ್ ಮಾಡುತ್ತಾರೆ. ಈ ಕಾರಣಕ್ಕೆ ಸಿನಿಮಾದ ವೇಗ ಸ್ವಲ್ಪ ಹೆಚ್ಚಾಗುತ್ತೆ. ಹೀಗಾಗಿ ಥಿಯೇಟರ್‌ ವರ್ಷನ್‌ಗೂ ಓಟಿಟಿ ವರ್ಷನೂ ಅಂತರ ಕಾಣಿಸುತ್ತಿದೆ.

ಓಟಿಟಿಲ್ಲೂ ಗೆದ್ದರೆ ಏನಾಗುತ್ತೆ?

'ಸು ಫ್ರಮ್ ಸೋ' ಸಿನಿಮಾ ಓಟಿಟಿಗೆ ಲಗ್ಗೆ ಇಟ್ಟಿದೆ. ಇಲ್ಲೂ ಕೂಡ ಈ ಸಿನಿಮಾ ಗೆಲ್ಲಬೇಕಿದೆ. ಕನ್ನಡ ಸಿನಿಮಾಗಳ ಕಡೆಗೆ ತಿರುಗಿ ಕೂಡ ನೋಡದ ಓಟಿಟಿ ವೇದಿಕೆಗಳು ಮತ್ತೆ ಕನ್ನಡ ಚಿತ್ರರಂಗದತ್ತ ಮುಖ ಮಾಡುತ್ತವೆ. ಇದರಿಂದ ಮತ್ತೆ ಕನ್ನಡ ಸಿನಿಮಾಗಳ ನಿರ್ಮಾಪಕರಿಗೆ ನಿಟ್ಟುಸಿರು ಬಿಡಬಹುದು. ಅದಕ್ಕೆ 'ಸು ಫ್ರಮ್ ಸೋ' ಓಟಿಟಿಯಲ್ಲಿ ಹೊಸ ದಾಖಲೆಯನ್ನು ಬರೆಯಬೇಕಿದೆ.

More from Filmibeat

English summary
Raj B Shetty’s produced film Su From So is now streaming on Jio Hotstar, but with a surprising 7-minute cut. Here’s the reason behind the edited version, and what audiences need to know about this much-talked-about release.
Read more about: raj b shetty kannada movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X