ಒಟಿಟಿಯಲ್ಲೂ ದಾಖಲೆ ಬರೆದ RRR: ಒಂದು ನಿಮಿಷದಲ್ಲಿ ಬರೆದ ದಾಖಲೆ ಏನು?
ಈ ವರ್ಷ ಭಾರತದ ಅತೀ ದೊಡ್ಡ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲೊಂದು. ರಾಜಮೌಳಿ ನಿರ್ದೇಶನದ ಈ ಸಿನಿಮಾದಲ್ಲಿ ಜೂ ಎನ್‌ಟಿಆರ್ ಹಾಗೂ ರಾಮ್‌ಚರಣ್ ಲೀಡ್ ರೋಲ್‌ನಲ್ಲಿ ನಟಿಸಿದ್ದರು. ಭಾರತದ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ್ದ ಈ ಸಿನಿಮಾ ಈಗ ಒಟಿಟಿಯಲ್ಲೂ ಸದ್ದು ಮಾಡುತ್ತಿದೆ.
RRR ಸಿನಿಮಾ ಥಿಯೇಟರ್‌ನಲ್ಲಿ ಸದ್ದು ಮಾಡಿದ ಬಳಿಕ ಈಗ ಒಟಿಟಿಯಲ್ಲೂ ದಾಖಲೆ ಬರೆಯುತ್ತಿದೆ. ಒಟಿಟಿ ವೇದಿಕೆಯಲ್ಲೂ ಈ ಸಿನಿಮಾವನ್ನು ಜನರು ಮುಗಿಬಿದ್ದು ನೋಡುತ್ತಿದ್ದಾರೆ. ಅಂದ್ಹಾಗೆ ಜೀ 5ನಲ್ಲಿ ಮೇ 20ರಂದು ಈ ಸಿನಿಮಾ ಪ್ರೀಮಿಯರ್ ಆಗಿತ್ತು. ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲೂ ಈ ಸಿನಿಮಾ ನಂ 1 ಸ್ಥಾನದಲ್ಲಿದೆ.
ಮೇ 20 ರಂದು ಒಟಿಟಿಯಲ್ಲಿ RRR ಸಿನಿಮಾ ಬಿಡುಗೆಯಾಗುವುದಕ್ಕೂ ಒಂದು ಕಾರಣವಿತ್ತು. ಅಂದು ಟಾಲಿವುಡ್‌ನ ಯಂಗ್ ಟೈಗರ್ ಜೂ.ಎನ್‌ಟಿಆರ್ ಹುಟ್ಟುಹಬ್ಬವಿತ್ತು. ಈ ವಿಶೇಷ ಸಂದರ್ಭದಲ್ಲಿ RRR ಸಿನಿಮಾವನ್ನು ಬಿಡುಗಡೆ ಮಾಡಲಾಗಿತ್ತು. ಸಿನಿಮಾ ರಿಲೀಸ್ ಆದ ಒಂದೇ ನಿಮಿಷಕ್ಕೆ ದಾಖಲೆ ಬರೆದಿದೆ. ಆ ದಾಖಲೆ ಏನು? ಎಂದು ನೋಡಲು ಮುಂದೆ ಓದಿ.

RRR 1000 ಮಿಲಿಯನ್ಸ್ ಸ್ಟ್ರೀಮಿಂಗ್
RRR ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿದ್ದೇ ಇಟ್ಟಿದ್ದು. ಜನರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಜೀ5 ಒಟಿಟಿಯಲ್ಲಿ ಈ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ RRR ನಂ1 ಸ್ಥಾನದಲ್ಲಿದೆ. RRR ದೃಶ್ಯ ವೈಭವಕ್ಕೆ ಮರುಳಾದ ಜನರು ಮತ್ತೆ ಮತ್ತೆ ಸಿನಿಮಾ ವೀಕ್ಷಿಸುತ್ತಿದ್ದಾರೆ. ಜಸ್ಟ್ ಒಂದೇ ಒಂದು ನಿಮಿಷದಲ್ಲಿ 1000 ಮಿಲಿಯನ್ಸ್ ಸ್ಟ್ರೀಮಿಂಗ್ ಪಡೆದುಕೊಂಡು ಹೊಸ ದಾಖಲೆ ಸೃಷ್ಟಿಸಿದೆ.

ನಾಲ್ಕು ಭಾಷೆಯಲ್ಲೂ ಟ್ರೆಂಡಿಂಗ್
ರಾಜಮೌಳಿ ನಿರ್ದೇಶನದ RRR ಸಿನಿಮಾ ಕೇವಲ ಒಂದು ಭಾಷೆಯಲ್ಲಷ್ಟೇ ಮೋಡಿ ಮಾಡಿಲ್ಲ. ಜೀ5 ಒಟಿಟಿಯಲ್ಲಿ ರಿಲೀಸ್ ಆಗಿರುವ ಈ ಸಿನಿಮಾಗೆ ಎಲ್ಲಾ ಭಾಷೆಯ ವೀಕ್ಷಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳು ಈ ನಾಲ್ಕೂ ಭಾಷೆಯಲ್ಲಿಯೂ RRR ಟ್ರೆಂಡಿಂಗ್‌ನಲ್ಲಿದೆ.

ರಾಮ್ ಚರಣ್-ಜೂ.ಎನ್‌ಟಿಆರ್ ಧನ್ಯವಾದ
ಥಿಯೇಟರ್‌ನಲ್ಲಷ್ಟೇ ಅಲ್ಲ. ಒಟಿಟಿಯಲ್ಲೂ RRR ಸಿನಿಮಾ ಗೆದ್ದು ಬೀಗುತ್ತಿದೆ. ಈ ಕಾರಣಕ್ಕೆ ಜೂ. ಎನ್‌ಟಿಆರ್ ಹಾಗೂ ರಾಮ್‌ಚರಣ್ ತೇಜಾ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಅಭಿಮಾನಿಗಳು ತೋರಿದ ಪ್ರೀತಿಗೆ ದಿಲ್ ಖುಷ್ ಆಗಿದ್ದಾರೆ. "ಜೀ5 ಒಟಿಟಿಯಲ್ಲಿ ಬಿಡುಗಡೆಯಾಗಿರುವ RRR ಸಿನಿಮಾಕ್ಕೆ ನೀವು ತೋರಿಸುತ್ತಿರುವ ಪ್ರೀತಿಗೆ ನಾನು ಕೃತಜ್ಞ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಈ ನಾಲ್ಕು ಭಾಷೆಯಲ್ಲಿಯೂ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದ್ದು,ನಿಮ್ಮ ಅದ್ಭುತ ಪ್ರತಿಕ್ರಿಯೆಗೆ ಧನ್ಯವಾದ" ಎಂದು ಜೂನಿಯರ್ ಎನ್ ಟಿಆರ್ ಟ್ವೀಟ್ ಮಾಡಿದ್ದಾರೆ.

ಗಲ್ಲಾಪೆಟ್ಟಿಗೆಯಲ್ಲೂ ಸಾವಿರ ಕೋಟಿ
ಬಾಕ್ಸಾಫೀಸ್‌ನಲ್ಲಿ 1000 ಕೋಟಿ ದಾಟಿರುವ 4 ಸಿನಿಮಾಗಳಲ್ಲಿ ರಾಜಮೌಳಿಯದ್ದೇ ಎರಡು ಸಿನಿಮಾವಿದೆ. ಮೂವಿ ಮಾಂತ್ರಿಕನ ಕಲ್ಪನಾ ಲೋಕಕ್ಕೆ ಜನರು ಫಿದಾ ಆಗಿದ್ದಾರೆ. ಇಲ್ಲಿವರೆಗೂ RRR ಸಿನಿಮಾ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 308 ಕೋಟಿ ರೂಪಾಯಿ ಹಾಗೇ ವಿಶ್ವದಾದ್ಯಂತ ಸುಮಾರು 1100 ಕೋಟಿ ರೂಪಾಯಿ ಗಳಿಕೆ ಕಂಡಿದೆ.


Click it and Unblock the Notifications











