ರಕ್ಷಿತ್ ಶೆಟ್ಟಿ ನಿರ್ಮಾಣದ ಸಿನಿಮಾ 'ಸಕುಟುಂಬ ಸಮೇತ' ವೂಟ್ ಸೆಲೆಕ್ಟ್‌ನಲ್ಲಿ ಭರ್ಜರಿ ಪ್ರದರ್ಶನ!

ರಕ್ಷಿತ್ ಶೆಟ್ಟಿ ಹೀರೊ ಆಗಿ ಕಾಣಿಸಿಕೊಳ್ಳುವುದಕ್ಕಿಂತ ಹೆಚ್ಚು ನಿರ್ಮಾಪಕರಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಕನ್ನಡ ಚಿತ್ರರಂಗಕ್ಕೆ ವಿಭಿನ್ನ ಸಿನಿಮಾಗಳನ್ನು ನೀಡುತ್ತಾ ಬಂದಿರೋದು ರಕ್ಷಿತ್ ಕೆಲವು ದಿನಗಳ ಹಿಂದಷ್ಟೇ ತಮ್ಮ ನಿರ್ಮಾಣ ಸಂಸ್ಥೆಯಲ್ಲಿ ನಿರ್ಮಾಣವಾಗಿದ್ದ 'ಸಕುಟುಂಬ ಸಮೇತ' ರಿಲೀಸ್ ಮಾಡಿದ್ದರು.

ಪಕ್ಕಾ ಕೌಟುಂಬಿಕ ಸಿನಿಮಾ 'ಸಕುಟುಂಬ ಸಮೇತ' ಥಿಯೇಟರ್‌ನಲ್ಲಿ ಬಿಡುಗಡೆಯಾದ ಬಳಿಕ ಈಗ ಓಟಿಟಿಗೆ ಲಗ್ಗೆ ಇಟ್ಟಿದೆ. ವೂಟ್ ಸೆಲೆಕ್ಟ್‌ನಲ್ಲಿ ಈ ಸಿನಿಮಾ ಡಿಜಿಟಲ್ ವರ್ಲ್ಡ್‌ ಪ್ರೀಮಿಯರ್ ಕಂಡಿದೆ.

'ಸಕುಟುಂಬ ಸಮೇತ' ಹಾಸ್ಯ ಸಿನಿಮಾ

'ಸಕುಟುಂಬ ಸಮೇತ' ಇದೊಂದು ಪಕ್ಕಾ ಹಾಸ್ಯಮಯ ಸಿನಿಮಾ. ಸಂಬಂಧದ ಸಂಕೀರ್ಣತೆಗಳನ್ನೂ ಅಷ್ಟೇ ಆತ್ಮೀಯವಾಗಿ ಕಟ್ಟಿಕೊಡಲಾಗಿದೆ. ಪ್ರತಿ ಮನೆಯಲ್ಲೂ ಸಿಗಬಹುದಾದ ಪಾತ್ರಗಳು, ಸಂಭವಿಸಬಹುದಾದ ಸನ್ನಿವೇಶಗಳನ್ನೇ ಕಥೆಯಾಗಿಟ್ಟುಕೊಂಡು, ಪಕ್ಕಾ ಕೌಟುಂಬಿಕ ಸಂಬಂಧಗಳ ಸೊಗಸನ್ನು ತೆರೆಮೇಲೆ ತರುವುದಕ್ಕೆ ಮುಂದಾಗಿದ್ದಾರೆ.

Rakshit Shetty Produced Movie Sakutumba Sametha Premiere On Voot Select

ರಾಹುಲ್ ಪಿ.ಕೆ. ಬರೆದು ನಿರ್ದೇಶಿಸಿರೋ ಈ ಸಿನಿಮಾ ಭ್ರಾತೃತ್ವದ ಸಂದೇಶವನ್ನು ಸಾರುತ್ತಿದೆ. 'ಸಕುಟುಂಬ ಸಮೇತ' ಸಿನಿಮಾದಲ್ಲಿ ಭರತ್ ಜಿ.ಬಿ., ಅಚ್ಯುತ್ ಕುಮಾರ್, ಪುಷ್ಪಾ ಬೆಳವಾಡಿ, ಕೃಷ್ಣ ಹೆಬ್ಬಾಳೆ ಮತ್ತು ಸಿರಿ ರವಿಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

'ಸಕುಟುಂಬ ಸಮೇತ' ಕಥೆಯೇನು?

'ಸಕುಟುಂಬ ಸಮೇತ' ಸಿನಿಮಾದ ಕಥೆ ಇಂಟ್ರೆಸ್ಟಿಂಗ್ ಆಗಿದೆ. ಮದುವೆಯಾಗಲು ಮುಂದಾಗಿದ್ದ ಸೂರಿಯ ಬದುಕಿನಲ್ಲಿ ಶ್ರದ್ಧಾ ಎಂಬ ಹುಡುಗಿಯ ಪ್ರವೇಶವಾಗುತ್ತದೆ. ಇನ್ನೇನು ಮದುವೆಗೆ ಇನ್ನೂ ಒಂದು ವಾರ ಬಾಕಿ ಇದೆ ಅನ್ನುವಾಗಲೇ ಆಕೆ ನಿರಾಕರಿಸುತ್ತಾಳೆ. ಆಗ ಎರಡೂ ಕುಟುಂಬಗಳ ನಡುವೆ ಸಂದಾನ ಸಭೆ ಕೂಡ ನಡೆಯುತ್ತೆ. ಅಲ್ಲಿ ಇಬ್ಬರ ನಡುವೆ ಅಹಂ ಅನ್ನೋದು ಹುಟ್ಟಿಕೊಳ್ಳುತ್ತದೆ. ಎರಡೂ ಹೃದಯಗಳು ಮುರಿದು ಹೋಗುತ್ತವೆ. ಮುಂದೇನಾಗುತ್ತೆ ಅನ್ನೋದೇ ಕಥೆ.

'ಸಕುಟುಂಬ ಸಮೇತ' ಒಂದು ಸಿಂಪಲ್ ಸಿನಿಮಾ. ಕೊನೆಯವರೆಗೂ ಈ ಸಿನಿಮಾ ಪ್ರೇಕ್ಷಕರನ್ನು ನಗಿಸುತ್ತಲೇ ಇರುತ್ತೆ. ಲಾಕ್‌ಡೌನ್ ಸಮಯದಲ್ಲಿ ಹುಟ್ಟಿಕೊಂಡ ಈ ಪರಿಕಲ್ಪನೆ ಸಿನಿಮಾವಾಗಿ ರೂಪುಗೊಂಡಿತ್ತು. ಪ್ರತಿ ಪಾತ್ರವೂ ನೈಜವಾಗಿದೆ. ಇದು ಪ್ರೇಕ್ಷಕರನ್ನು ಕಾಡುತ್ತಲೇ ಇರುತ್ತೆ. ಏಕೆಂದರೆ, ಅಂತಹ ಪಾತ್ರಗಳು ನಮ್ಮ ಸುತ್ತಮುತ್ತ ಸಾಕಷ್ಟಿವೆ." ಎಂದಿದ್ದಾರೆ ರಕ್ಷಿತ್ ಶೆಟ್ಟಿ.

Rakshit Shetty Produced Movie Sakutumba Sametha Premiere On Voot Select

"ಸಕುಟುಂಬ ಸಮೇತ ಮದುವೆ ಮತ್ತು ಕುಟುಂಬದ ಕುರಿತು ನನ್ನದೇ ಆದ ವೈಯಕ್ತಿಕ ದೃಷ್ಟಿಕೋನವಿದೆ. ಸಂಬಂಧಗಳು ಹೇಗೆ ನಿರಂತರ ಬೆಳೆಯುತ್ತವೆ. ಹಾಗೇ ಹೇಗೆ ಬದಲಾಗುತ್ತವೆ ಎಂಬುದರ ಕುರಿತು ಈ ಸಿನಿಮಾದಲ್ಲಿ ಚರ್ಚೆ ಮಾಡಲಾಗುತ್ತದೆ" ಎಂದು ನಿರ್ದೇಶಕ ರಾಹುಲ್ ಪಿ.ಕೆ. ಹೇಳಿದ್ದಾರೆ.

More from Filmibeat

English summary
Rakshit Shetty Produced Movie Sakutumba Sametha Premiere On Voot Select, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X