Game Changer OTT: ಬಾಕ್ಸಾಫೀಸ್‌ನಲ್ಲಿ ವಿವಾದ ಸೃಷ್ಟಿಸಿದ ರಾಮ್ ಚರಣ್ ಸಿನಿಮಾ ಓಟಿಟಿಗೆ ಎಂಟ್ರಿ: ಯಾವಾಗ? ಎಲ್ಲಿ?

ಟಾಲಿವುಡ್‌ನ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಸಿನಿಮಾ 'ಗೇಮ್ ಚೇಂಜರ್' ಇತ್ತೀಚೆಗೆ ಥಿಯೇಟರ್‌ಗೆ ಲಗ್ಗೆ ಇಟ್ಟಿತ್ತು. ಪ್ಯಾನ್ ಇಂಡಿಯಾ ಡೈರೆಕ್ಟರ್ ಶಂಕರ್ ನಿರ್ದೇಶಿಸಿದ ಈ ಸಿನಿಮಾಗೆ ಫಸ್ಟ್ ಡೇ ಫಸ್ಟ್ ಶೋನೇ ಹಿನ್ನೆಡೆಯಾಗಿತ್ತು. ತೆಲುಗು ಪ್ರೇಕ್ಷಕರು ಸಾರಾ ಸಗಟಾಗಿ ಈ ಸಿನಿಮಾವನ್ನು ನಿರಾಕರಿಸಿದ್ದರು. ಸಾಲದ್ದಕ್ಕೆ ಫೇಕ್ ಬಾಕ್ಸಾಫೀಸ್‌ ಕಲೆಕ್ಷನ್ ಬೇರೆ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಇದೇ ಸಿನಿಮಾವೀಗ ಓಟಿಟಿಗೆ ಲಗ್ಗೆ ಇಡುವುದಕ್ಕೆ ವೇದಿಕೆ ಸಜ್ಜಾಗಿದೆ.

'ಗೇಮ್ ಚೇಂಜರ್' ರಾಮ್ ಚರಣ್ ಹಾಗೂ ಶಂಕರ್ ಕಾಂಬಿನೇಷನ್‌ನ ಚೊಚ್ಚಲ ಸಿನಿಮಾ ಆಗಿತ್ತು. ದಿಲ್ ರಾಜು ಹಾಗೂ ಶಿರಿಶ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ ಮೆಗಾ ಪವರ್‌ಸ್ಟಾರ್‌ಗೆ ನಾಯಕಿಯಾಗಿ ನಟಿಸಿದ್ದರು. ಜನವರಿ 10ರಂದು ಸಂಕ್ರಾಂತಿ ಹಬ್ಬಕ್ಕೆ ಅದ್ಧೂರಿಯಾಗಿ ಬಿಡುಗಡೆಯಾಗಿದ್ದ ಈ ಸಿನಿಮಾ ನೆಗೆಟಿವ್ ರೆಸ್ಪಾನ್ಸ್ ಸಿಕ್ಕಿತ್ತು.

Ram Charan Shankar Combination film Game Changer Ott Release date is out

ಇನ್ನು ಥಿಯೇಟರ್‌ನಲ್ಲಿ ಈ ಸಿನಿಮಾ ನೋಡಬೇಕಿತ್ತು. ರಾಮ್ ಚರಣ್ ಸಿನಿಮಾ ಮಿಸ್ ಮಾಡಿಕೊಂಡ್ವಿ ಅಂದುಕೊಂಡವರಿಗೆ 'ಗೇಮ್ ಚೇಂಜರ್' ಅನ್ನು ಓಟಿಟಿಯಲ್ಲಿ ನೋಡುವ ಅವಕಾಶ ಸಿಕ್ಕಿದೆ. ಸಿನಿಮಾ ಬಿಡುಗಡೆಯಾದ ಕೇವಲ 29 ದಿನಗಳಿಗೆ ಓಟಿಟಿಗೆ ಲಗ್ಗೆ ಇಡುತ್ತಿದೆ. ಹಾಗಿದ್ದರೆ, ರಾಮ್ ಚರಣ್ 'ಗೇಮ್ ಚೇಂಜರ್' ಸಿನಿಮಾ ಎಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ? ಯಾವಾಗ ನೋಡಬಹುದು? ಅನ್ನುವುದನ್ನು ನೋಡುವುದಾರೇ..

ಹೌದು 'ಗೇಮ್ ಚೇಂಜರ್' ಸಿನಿಮಾವನ್ನು ಮಿಸ್ ಮಾಡಿಕೊಂಡವರಿಗೆ ಸಿಹಿ ಸುದ್ದಿಯಿದೆ. ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಈ ಸಿನಿಮಾ ಪ್ರಸಾರ ಆಗಲಿದೆ. ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡಿವರು ಇದೇ ಶುಕ್ರವಾರದಿಂದ ಓಟಿಟಿ ವೇದಿಕೆಯಲ್ಲಿ ಸಿನಿಮಾವನ್ನು ನೋಡಬಹುದು. ಅಮೆಜಾನ್ ಪ್ರೈಂ ವಿಡಿಯೋ ತನ್ನ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಈ ವಿಷಯವನ್ನು ಹಂಚಿಕೊಂಡಿದೆ.

ಇದೇ ಫೆಬ್ರವರಿ 7 ರಿಂದ ರಾಮ್ ಚರಣ್ ಹಾಗೂ ಶಂಕರ್ ಜೋಡಿಯ 'ಗೇಮ್ ಚೇಂಜರ್' ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ತೆಲುಗು, ತಮಿಳು ಹಾಗೂ ಕನ್ನಡ ವರ್ಷನ್‌ನಲ್ಲಿ ಸಿನಿಮಾ ಪ್ರಸಾರ ಆಗಲಿದೆ. ಅಮೆಜಾನ್ ಪ್ರೈಂ ಈ ಸಂಗತಿಯನ್ನು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ. ಆದರೆ, ಹಿಂದಿ ಅವತರಣೆ ಯಾವಾಗ ಪ್ರಸಾರ ಆಗುತ್ತೆ? ಇದೇ ವೇದಿಕೆಯಲ್ಲಿ ಪ್ರಸಾರ ಆಗುತ್ತಾ? ಅನ್ನುವ ಬಗ್ಗೆ ಇನ್ನೂ ಕ್ಲಾರಿಟಿ ಸಿಕ್ಕಿಲ್ಲ.

ಇನ್ನು 'ಗೇಮ್ ಚೇಂಜರ್' ಸಿನಿಮಾ ಕಡೆಗೆ ಬರೋದಾರೆ, ಇದೊಂದು ಪೊಲಿಟಿಕಲ್ ಥ್ರಿಲ್ಲರ್. ರಾಮ್ ಚರಣ್ ಜೊತೆಗೆ ದಕ್ಷಿಣ ಭಾರತದ ದಿಗ್ಗಜರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಎಸ್‌ ಜೆ ಸೂರ್ಯ, ನಾಸರ್, ಜಯರಾಂ ಅಂತಹ ದಿಗ್ಗಜರು ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಒಂದ್ಕಡೆ ಶಂಕರ್, ಇನ್ನೊಂದು ರಾಮ್‌ ಚರಣ್ ಅಂತಹ ಫೇಮಸ್ ಪರ್ಸನಾಲಿಟಿ ಇದ್ದರೂ ಥಿಯೇಟರ್‌ನಲ್ಲಿ ಗೆಲ್ಲುವುದಕ್ಕೆ ಈ ಸಿನಿಮಾ ಸೋತಿತ್ತು. ಸಿನಿಮಾ ನೋಡಿದ ತೆಲುಗು ಮಂದಿನೇ 'ಗೇಮ್ ಚೇಂಜರ್' ಇಷ್ಟ ಪಟ್ಟಿರಲಿಲ್ಲ.

ಆದರೆ, ಥಿಯೇಟರ್‌ನಲ್ಲಿ ಸದ್ದು ಮಾಡದ ಸಿನಿಮಾಗಳು ಓಟಿಟಿಯಲ್ಲಿ ಗೆದ್ದಿರುವ ಉದಾಹರಣೆಗಳು ಸಾಕಷ್ಟು ಇವೆ. ಓಟಿಟಿ ಪ್ರಿಯರಿಗೆ ಆ ಸಿನಿಮಾಗಳು ಇಷ್ಟ ಆಗಿದ್ದೂ ಇದೆ. ವೀಕ್ಷಕರಿಂದ ಪಾಸಿಟಿವ್ ರೆಸ್ಪಾನ್ಸ್ ಬಂದಿದ್ದು ಕೂಡ ಇದೆ. 'ಗೇಮ್ ಚೇಂಜರ್' ವಿಚಾರದಲ್ಲೂ ಇಂತಹದ್ದೇ ಚಮತ್ಕಾರ ನಡೆಯುತ್ತಾ? ಅನ್ನೋದನ್ನು ರಾಮ್ ಚರಣ್ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ರಾಜಮೌಳಿ ನಿರ್ದೇಶಿಸಿದ RRR ಸಿನಿಮಾ ಗ್ಲೋಬಲ್ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೇ ಸಿನಿಮಾ ರಾಮ್‌ ಚರಣ್ ಗ್ಲೋಬಲ್ ಸ್ಟಾರ್ ಅನ್ನೋ ಬಿರುದನ್ನು ಕೊಟ್ಟಿತ್ತು. ಆದೇ ಯಶಸ್ಸಿನಲ್ಲಿ ಮುಂದುವರೆಯಬೇಕಿದ್ದ ರಾಮ್ ಚರಣ್‌ಗೆ 'ಗೇಮ್ ಚೇಂಜರ್' ಸೋಲಿನ ರುಚಿ ತೋರಿಸಿದೆ.

More from Filmibeat

English summary
Ram Charan, Shankar combination movie Game Changer Ott Release date is out
Read more about: ram charan ott shankar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X