ರಿಲೀಸ್ 9 ತಿಂಗಳು ಇರುವಾಗಲೇ 'ಪೆದ್ದಿ' ಓಟಿಟಿ ಹಕ್ಕುಗಳು ಸೇಲ್; ರಾಮ್ ಚರಣ್-ಶಿವಣ್ಣ ಸಿನಿಮಾ ಮಾರಾಟ ಆಗಿದ್ದೆಷ್ಟಕ್ಕೆ?

ಟಾಲಿವುಡ್‌ನ ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ಗ್ಲೋಬಲ್ ಆಗಿ ಹೊರ ಹೊಮ್ಮಿದ್ದಾರೆ. ರಾಜಮೌಳಿ ನಿರ್ದೇಶಿಸಿದ RRR ಸಿನಿಮಾದ ಬಳಿಕ ವಿಶ್ವ ಮಟ್ಟದಲ್ಲಿ ಇವರಿಗೆ ಫ್ಯಾನ್ ಫಾಲೋವಿಂಗ್ ಹುಟ್ಟಿಕೊಂಡಿದ್ದಾರೆ. ಇಂತಹ ದೊಡ್ಡ ಯಶಸ್ಸಿನ ಬಳಿಕ ರಾಮ್ ಚರಣ್ ಗ್ಲೋಬಲ್ ಸ್ಟಾರ್ ಆಗಿ ಮುಂದುವರೆಯುತ್ತಾರೆಂದು ನಂಬಲಾಗಿತ್ತು. ಆದರೆ, ಆನಂತರ ನಟಿಸಿದ ಎರಡು ಸಿನಿಮಾಗಳು ಮಕಾಡೆ ಮಲಗಿದ್ದವು. ಇದು ರಾಮ್ ಚರಣ್ ಹಾಗೂ ಅವರ ಫ್ಯಾನ್ಸ್‌ಗೆ ಚೇತರಿಸಿಕೊಳ್ಳಲು ಆಗಿರಲಿಲ್ಲ.

ಅದರಲ್ಲೂ ಶಂಕರ್ ಅಂತ ಮೆಗಾ ಬ್ಲಾಕ್‌ ಬಸ್ಟರ್ ಸಿನಿಮಾಗಳನ್ನು ನಿರ್ದೇಶಿಸಿದ್ದ 'ಗೇಮ್ ಚೇಂಬರ್' ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿದ್ದು ತಡೆದುಕೊಳ್ಳುವುದಕ್ಕೆ ಆಗಿರಲಿಲ್ಲ. ಇದು ದೊಡ್ಡ ಅಭಿಮಾನಿಗಳಿಗೆ ದೊಡ್ಡ ಆಘಾತವಾಗಿತ್ತು. ಆದರೆ, ಆ ಆಘಾತದಿಂದ ಅಭಿಮಾನಿಗಳನ್ನು ಹೊರತಂದಿರೋದು 'ಪೆದ್ದಿ'. ಬುಚ್ಚಿ ಬಾಬು ಸನಾ ನಿರ್ದೇಶಿಸುತ್ತಿರುವ ಈ ಸಿನಿಮಾ ಬಿಡುಗಡೆಗೂ ಮುನ್ನವೇ ಸದ್ದು ಮಾಡುವುದಕ್ಕೆ ಶುರು ಮಾಡಿದೆ.

Ram Charan Shivarajkumar starrer Peddi movie OTT streaming rights sold to massive amount

ರಾಮ್ ಚರಣ್ ಮತ್ತೆ ರಗಡ್ ಲುಕ್‌ನಲ್ಲಿ ಮಾಸ್ ಅವತಾರದಲ್ಲಿ ಕಿಕ್ ಕೊಟ್ಟಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಫಸ್ಟ್ ಲುಕ್ ಹಾಗೂ ಚಿಕ್ಕೊಂದು ತುಣುಕು ಸದ್ದು ಮಾಡುವುದಕ್ಕೆ ಶುರು ಮಾಡುತ್ತಿದೆ. ಇದೇ ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಕೂಡ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಕುತೂಹಲದ ಮಧ್ಯೆ 'ಪೆದ್ದಿ' ಸಿನಿಮಾದ ಓಟಿಟಿ ಸ್ಟ್ರೀಮಿಂಗ್ ಹಕ್ಕುಗಳನ್ನು ಬೃಹತ್ ಮೊತ್ತಕ್ಕೆ ಸೇಲ್ ಆಗಿದೆ ಎಂಬ ಸುದ್ದಿ ಓಡಾಡುತ್ತಿದೆ.

ಮುಂದೆ ಓದಿ

ರಾಮ್ ಚರಣ್ ನಟನೆಯ 'ಪೆದ್ದಿ' ಸಿನಿಮಾದ ಓಟಿಟಿ ಹಕ್ಕುಗಳು ಸೇಲ್
'ಪೆದ್ದಿ' ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಶಿವರಾಜ್‌ಕುಮಾರ್
ಬಿಡುಗಡೆಗೆ 9 ತಿಂಗಳಿರುವಾಗಲೇ ಬೃಹತ್ ಮೊತ್ತಕ್ಕೆ ಸೇಲ್

'ಗೇಮ್ ಚೇಂಜರ್' ಸಿನಿಮಾ ನಿರಾಸೆಯನ್ನು ಮೂಡಿಸಿತ್ತು. ಇದೇ ಮೂಡ್‌ನಲ್ಲಿ ಇದ್ದ ಫ್ಯಾನ್ಸ್ ಈಗ ಮತ್ತೆ ಚಿಗುರಿಕೊಂಡಿದ್ದಾರೆ. 'ಪೆದ್ದಿ' ಮೆಗಾ ಹಿಟ್ ಆಗುತ್ತೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಈ ಮಧ್ಯೆ ಈ ಸಿನಿಮಾವನ್ನು ವಿಶ್ವದ ಪ್ರಮುಖ ಓಟಿಟಿ ವೇದಿಕೆಯಾದ ನೆಟ್‌ಫ್ಲಿಕ್ಸ್ ಬೃಹತ್ ಮೊತ್ತಕ್ಕೆ ಮಾರಾಟ ಮಾಡಿದೆ. ಸಿನಿಮಾ ಬಿಡುಗಡೆಗೆ ಇನ್ನೂ 9 ತಿಂಗಳು ಬಾಕಿ ಇರುವಾಗಲೇ 'ಪೆದ್ದಿ' ಸಿನಿಮಾದ ಓಟಿಟಿ ಹಕ್ಕುಗಳು ಸೇಲ್ ಆಗಿವೆ ಎಂದು ವರದಿಯಾಗಿವೆ.

ಪೆದ್ದಿ ಸಿನಿಮಾ ಮಾರ್ಚ್ 27, 2026ಕ್ಕೆ ಬಿಡುಗಡೆಯಾಗಲಿದೆ. ಸದ್ಯ ಈ ಸಿನಿಮಾ ಇನ್ನೂ ನಿರ್ಮಾಣ ಹಂತದಲ್ಲಿದೆ. ಅಷ್ಟರಲ್ಲಾಗಲೇ ಈ ಸಿನಿಮಾದ ಓಟಿಟಿ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಖರೀದಿ ಮಾಡಿದೆ. ರಾಮ್ ಚರಣ್ ಸಿನಿಮಾವನ್ನು ಸುಮಾರು 105 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ ಎಂದು ವರದಿಯಾಗಿದೆ. ಇಷ್ಟು ಬೇಗ ಯಾಕೆ ಮಾರಾಟ ಮಾಡಿದೆ ಎಂಬುವುದನ್ನು ಇನ್ನೊಂದು ಕಡೆ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

More from Filmibeat

English summary
Ram Charan Shivarajkumar starrer Peddi movie OTT streaming rights sold to massive amount.
Read more about: ram charan telugu movie tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X