'ರೋಬೊ' ಶಂಕರ್, ರಾಮ್‌ಚರಣ್ ಸಿನಿಮಾ ಜೀ ಕೊಟ್ಟಿದ್ದು 350 ಕೋಟಿ: RC15ಗೆ ಯಾಕಿಷ್ಟು ಬೇಡಿಕೆ?
RRR ಬಳಿಕ ರಾಮ್ ಚರಣ್ ಹಾಗೂ ಜೂ.ಎನ್‌ಟಿಆರ್ ಇಬ್ಬರೂ ಮತ್ತೊಂದು ಬಿಗ್ ಸಿನಿಮಾಗೆ ಕೈ ಹಾಕಿದ್ದಾರೆ. ಜೂ ಎನ್‌ಟಿಆರ್ ಕೊರಟಾಲ ಶಿವ ಜೊತೆ ಕೈ ಜೋಡಿಸಿದರೆ, ರಾಮ್ ಚರಣ್ ದಕ್ಷಿಣ ಭಾರತದ ದುಬಾರಿ ನಿರ್ದೇಶಕ ಶಂಕರ್ ಜೊತೆ ಸಿನಿಮಾ ಮಾಡುತ್ತಿದ್ದಾರೆ.ಅಂದ ಹಾಗೆ ಇದು ರಾಮ್ ಚರಣ್ ಅಭಿನಯದ 15ನೇ ಸಿನಿಮಾ. ಹೀಗಾಗಿ ಶಂಕರ್ ಈ ಸಿನಿಮಾವನ್ನು ಸದ್ಯಕ್ಕೆ RC15 ಎಂದು ನಾಮಕರಣ ಮಾಡಿದ್ದಾರೆ. ಈ ಚಿತ್ರ ಬಿಡುಗಡೆಗೂ ಮುನ್ನವೇ ದೊಡ್ಡ ಮೊತ್ತಕ್ಕೆ ಡೀಲ್ ಆಗಿದೆಯಂತೆ.
Recommended Video
ರಾಮ್ ಚರಣ್ ಹಾಗೂ ಶಂಕರ್ ಕಾಂಬಿನೇಷನ್‌ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣ ಆಗುತ್ತಿದೆ. ಮೂಲಗಳ ಪ್ರಕಾರ, ಇದೊಂದು ರಾಜಕೀಯ ಹಿನ್ನೆಲೆಯನ್ನು ಆಧರಿಸಿದ ಸಿನಿಮಾ. ದಿಲ್ ರಾಜು ನಿರ್ಮಿಸುತ್ತಿರುವ ಈ ಸಿನಿಮಾ 2023 ಸಂಕ್ರಾಂತಿಗೆ ಬಿಡುಗಡೆಯಾಗಲಿದೆ. ಈ ಸಿನಿಮಾ ರಿಲೀಸ್‌ಗೆ ಹೆಚ್ಚು ಕಡಿಮೆ ಇನ್ನೂ 11 ತಿಂಗಳು ಬಾಕಿ ಇರುವಾಗಲೇ ಅತೀ ದೊಡ್ಡ ಮೊತ್ತಕ್ಕೆ ಸಿನಿಮಾ ಡೀಲ್ ಆಗಿದೆಯಂತೆ. ಅಷ್ಟಕ್ಕೂ 350 ಕೋಟಿ ಕೊಡಲು ಮುಂದೆ ಬಂದಿದ್ದು ಯಾರು? ಎಂದು ತಿಳಿಯಲು ಮುಂದೆ ಓದಿ...

350 ಕೋಟಿಗೆ RC15 ಡೀಲ್
ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ಹಾಗೂ ಶಂಕರ್ ಕಾಂಬಿನೇಷನ್ ಮೇಲೆ ಇಡೀ ಭಾರತೀಯ ಚಿತ್ರರಂಗವೇ ಕಣ್ಣಿಟ್ಟಿದೆ. RRR ಸಿನಿಮಾ ಬಳಿಕ ರಾಮ್ ಚರಣ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಲಿದ್ದಾರೆ. ಹೀಗಾಗಿ ರಾಮ್ ಚರಣ್ ಮಾರ್ಕೆಟ್ ಕೂಡ ದಿಢೀರನೇ ಏರಿಕೆಯಾಗಲಿದೆ. ಈ ಕಾರಣಕ್ಕೆ ಸಿನಿಮಾ ಬಿಡುಗಡೆಗೂ ಮುನ್ನವೇ ಜೀ ಸ್ಟುಡಿಯೋ 350 ಕೋಟಿ ಕೊಟ್ಟು ಖರೀದಿ ಮಾಡಿದೆ ಎಂದು ಹೇಳಲಾಗುತ್ತಿದೆ. ಬಾಲಿವುಡ್ ಹಂಗಾಮ ವರದಿ ಮಾಡಿರುವ ಪ್ರಕಾರ, ಈಗಾಗಲೇ ಡೀಲ್ ಪ್ರಕ್ರಿಯೆ ಕೂಡ ಮುಗಿದು ಹೋಗಿದಿದೆ.

RC15 ಚಿತ್ರದ 350 ಕೋಟಿ ಡೀಲ್ ಹೈಲೈಟ್ ಏನು?
ಜೀ ಸ್ಟುಡಿಯೋಸ್ ಹಾಗೂ ನಿರ್ಮಾಪಕ ದಿಲ್ ರಾಜು 350 ಕೋಟಿ ಡೀಲ್‌ಗೆ ಸಹಿ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಮೆಗಾ ಬಜೆಟ್ ಸಿನಿಮಾ ಒಂದು ಪೊಲಿಟಿಕ್ ಡ್ರಾಮ್ ಆಗಿರುವುದರಿಂದ ಎಲ್ಲಾ ಭಾಷೆಗಳಿಗೂ ಸಲ್ಲುತ್ತದೆ ಎನ್ನಲಾಗಿದೆ. ಹೀಗಾಗಿ ಜೀ ಸ್ಟುಡಿಯೋಸ್ ಹಿಂದಿ ಭಾಷೆಯಲ್ಲಿ ಎಲ್ಲಾ ಹಕ್ಕುಗಳನ್ನು ಖರೀದಿ ಮಾಡಿದೆ. ಸ್ಯಾಟಲೈಟ್ ರೈಟ್ಸ್, ಡಿಜಿಟಲ್ ರೈಟ್ಸ್ ಹಾಗೂ ಥಿಯೇಟರ್ ರೈಟ್ಸ್ ಅನ್ನೂ ಖರೀದಿ ಮಾಡಿದೆ. ಇದರೊಂದಿಗೆ ಎಲ್ಲಾ ಭಾಷೆಯ ಸಿನಿಮಾವನ್ನೂ ವಿಶ್ವದಾದ್ಯಂತ ಬಿಡುಗಡೆ ಮಾಡುವ ಹಕ್ಕನ್ನೂ ಪಡೆದುಕೊಂಡಿದೆ ಎನ್ನುವ ಮಾತು ಕೇಳಿ ಬರುತ್ತಿದೆ.

ದಿಲ್ ರಾಜು ಬಳಿ ಪ್ರಾದೇಶಿಕ ಭಾಷೆಗಳ ಹಕ್ಕು
ನಿರ್ಮಾಪಕ ದಿಲ್ ರಾಜು ಬಹುತೇಕ ಹಕ್ಕುಗಳನ್ನು ಜೀ ಸ್ಟುಡಿಯೋ ಹಾಗೂ ಜೀ 5ಗೆ ಮಾರಾಟ ಮಾಡಿದಂತಾಗಿದೆ. ಆದರೆ, ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಸಿನಿಮಾಗಳ ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕುಗಳನ್ನು ತನ್ನ ಬಳಿಯೇ ಉಳಿಸಿಕೊಂಡಿದ್ದಾರೆ. ಈ ಮೂಲಕ 200 ರಿಂದ 300 ಕೋಟಿಗೆ ನಿರ್ಮಾಪಕ ದಿಲ್ ರಾಜು ಈ ಹಕ್ಕುಗಳನ್ನು ಮಾರಾಟ ಮಾಡುವ ಸಾಧ್ಯತೆಯಿದೆ.

RC 15 2023ರ ನಿರೀಕ್ಷೆಯ ಸಿನಿಮಾ
ಶಂಕರ್ ಸಿನಿಮಾಗಳಿಗೆ ದೇಶಾದ್ಯಂತ ದೊಡ್ಡ ಫ್ಯಾನ್ ಫಾಲೋವಿಂಗ್ ಇದೆ. 'ರೋಬೊ', 'ರೋಬೊ 2.0', 'ಅನ್ನಿಯನ್' ಅಂತಹ ಸಿನಿಮಾಗಳನ್ನು ಕೊಟ್ಟಿದ್ದಾರೆ. ಇತ್ತ ರಾಜಮೌಳಿಯ RRR ಮೂಲಕ ರಾಮ್ ಚರಣ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಹೀಗಾಗಿ ಎರಡು ಮೆಗಾ ಪವರ್‌ಹೌಸ್ ಒಂದೇ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವುದರಿಂದ ಸಿನಿಮಾ ಬಗ್ಗೆ ಕುತೂಹಲ ದುಪ್ಪಟ್ಟಾಗಿದೆ. ಹೀಗಾಗಿ 2023ರ ಸಂಕ್ರಾಂತಿಗೆ ಬಿಡುಗಡೆಯಾಗೆ ಸಜ್ಜಾಗಿರುವ ಸಿನಿಮಾ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿದೆ.


Click it and Unblock the Notifications











