Rana Naidu Season 2: ಮತ್ತೆ ಬರ್ತಿದೆ 'ರಾಣಾ ನಾಯ್ಡು' ಸೀಸನ್ 2; ರಾಣಾ-ವೆಂಕಟೇಶ್ ವೆಬ್ ಸೀರಿಸ್ ಯಾವಾಗ? ಎಲ್ಲಿ?
ಈಗಂತೂ ವೆಬ್ ಸೀರಿಸ್ ಜಮಾನ. ಜನರು ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುವುದಕ್ಕಿಂತ ಹೆಚ್ಚಾಗಿ ಓಟಿಟಿಯಲ್ಲಿ ವೆಬ್ ಸೀರಿಸ್ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಒಟಿಟಿ ಪ್ಲಾಟ್‌ಫಾರ್ಮ್‌ಗಳು ಕೂಡ ಪ್ರತಿ ವೀಕೆಂಡ್‌ಗೆ ವೀಕ್ಷಕರನ್ನು ಸೆಳೆಯುವುದಕ್ಕೆ ಹೊಸ ಹೊಸ ವೆಬ್ ಸೀರಿಸ್‌ಗಳನ್ನು ರೆಡಿ ಮಾಡಿಟ್ಟುಕೊಂಡಿರುತ್ತಾರೆ. ಅವುಗಳಲ್ಲಿ ವೀಕ್ಷಕರ ಮನಗೆದ್ದ ಕೆಲವು ವೆಬ್ ಸೀರಿಸ್‌ಗಳು ಮುಂದುವರೆಯುತ್ತವೆ. ಸೀಸನ್ ಲೆಕ್ಕದಲ್ಲಿ ರಿಲೀಸ್ ಆಗುತ್ತವೆ.
ಇಂತಹ ಜನಪ್ರಿಯ ವೆಬ್ ಸೀರಿಸ್‌ಗಳಲ್ಲಿ ಎರಡು ವರ್ಷಗಳ ಹಿಂದೆ ಗಮನ ಸೆಳೆದಿದ್ದು 'ರಾಣಾ ನಾಯ್ದು'. ತೆಲುಗು ಚಿತ್ರರಂಗದ ಇಬ್ಬರು ದಿಗ್ಗಜರು ರಾಣಾ ದಗ್ಗುಬಾಟಿ ಹಾಗೂ ವೆಂಕಟೇಶ್ ದಗ್ಗುಬಾಟಿ ವೆಬ್ ಸೀರಿಸ್‌ನಲ್ಲಿ ಮೊದಲ ಬಾರಿಗೆ ಫೇಸ್ ಟು ಫೇಸ್ ಬಂದಿದ್ದರು. ರಿಯಲ್ ಲೈಫ್‌ನಲ್ಲಿ ರಾಣಾ ಹಾಗೂ ವೆಂಕಟೇಶ್ ಎರಡೂ ಸಂಬಂಧಿಗಳು. ಆದರೆ ತೆರೆಮೇಲೆ ಎದುರಾಳಿಗಳು. ಈ ಮುಖಾ ಮುಖಿಯನ್ನು ವೀಕ್ಷಕರು ಎಂಜಾಯ್ ಮಾಡಿದ್ದರು. ಇದೇ ಜೋಷ್‌ನಲ್ಲಿಯೇ 'ರಾಣಾ ನಾಯ್ಡು' ಸೀಸನ್ 2 ಸ್ಟ್ರೀಮಿಂಗ್‌ಗೆ ವೇದಿಕೆ ಸಜ್ಜಾಗಿದೆ.

'ರಾಣಾ ನಾಯ್ಡು' ಸೀಸನ್ 2 ಗ್ರ್ಯಾಂಡ್ ರಿಲೀಸ್‌ಗೆ ವೇದಿಕೆ ಸಜ್ಜಾಗಿದೆ. ಒಟಿಟಿ ದೈತ್ಯ ನೆಟ್‌ಫ್ಲಿಕ್ಸ್ ಎರಡನೇ ಸೀಸನ್ ಬಿಡುಗಡೆಗೆ ಮುಹೂರ್ತವನ್ನು ಫಿಕ್ಸ್ ಮಾಡಿದೆ. ಈಗ ಮತ್ತೊಮ್ಮೆ ಇಬ್ಬರು ದಿಗ್ಗಜರು ತೆರೆಮೇಲೆ ಎದುರಾಗುವುದಕ್ಕೆ ನೋಡಬಹುದು. ಹಾಗಿದ್ದರೆ 'ರಾಣಾ ನಾಯ್ಡು' ಸೀಸನ್ 2 ಯಾವಾಗ ಸ್ಟ್ರೀಮಿಂಗ್ ಆಗುತ್ತೆ? ಈ ಬಾರಿಯ ಹೈಲೈಟ್ ಏನು? ತಿಳಿಯುವುದಕ್ಕೆ ಮುಂದೆ ಓದಿ.
'ರಾಣಾ ನಾಯ್ಡು' ಸೀಸನ್ 2 ಯಾವಾಗ?
ತೆಲುಗು ಮಂದಿ ಚಿತ್ರರಂಗದಲ್ಲಿ ನಿರ್ಮಾಪಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೂನ್ 1 ರಿಂದ ಚಿತ್ರಮಂದಿರಗಳನ್ನು ಬಂದ್ ಮಾಡುವುದಕ್ಕೆ ಮಾಲೀಕರು ನಿರ್ಧರಿಸಿದ್ದಾರೆ. ನಿರ್ಮಾಪಕರು ಹಾಗೂ ಪ್ರದರ್ಶಕರ ನಡುವೆ ಭಿನ್ನಾಭಿಪ್ರಾಯವೇ ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಹೀಗಾಗಿ ಇವರಿಬ್ಬರ ನಡುವಿನ ಸಮಸ್ಯೆ ಇತ್ಯರ್ಥ ಆಗದೇ ಹೋದರೇ, ಸಿನಿಮಾಗಳು ರಿಲೀಸ್ ಆಗುವುದು ಅನುಮಾನ. ಇದೇ ಸಮಯದಲ್ಲೇ 'ರಾಣಾ ನಾಯ್ಡು' ಸೀಸನ್ 2 ಸ್ಟ್ರೀಮಿಂಗ್ ಆಗುತ್ತಿದೆ.
'ರಾಣಾ ನಾಯ್ಡು' ಸೀಸನ್ 2 ಬಿಡುಗಡೆ ದಿನಾಂಕವನ್ನು ನೆಟ್‌ಫಿಕ್ಸ್ ಘೋಷಿಸಿದೆ. ರಾಣಾ ದಗ್ಗುಬಾಟಿ ಹಾಗೂ ವೆಂಕಟೇಶ್ ತೆರೆಮೇಲಿನ ಕಾದಾಟವನ್ನು ಸ್ಟ್ರೀಮಿಂಗ್ ಮಾಡುವುದಕ್ಕೆ ಸಜ್ಜಾಗಿ ನಿಂತಿದೆ. ಇದೇ ಜೂನ್ 13, 2025ರಂದು ವೀಕ್ಷಕರಿಗೆ ಈ ವೆಬ್ ಸೀರಿಸ್ ನೋಡುವುದಕ್ಕೆ ಸಿಗುತ್ತಿದೆ. ಈ ವಿಷಯವನ್ನು ಸ್ವತ: ನೆಟ್‌ಫ್ಲಿಕ್ಸ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅನೌನ್ಸ್ ಮಾಡಿದೆ. " ಕುಟುಂಬದ ವಿಷಯಕ್ಕೆ ಬಂದರೆ, ರಾಣಾ ಎಲ್ಲಾ ಗಡಿಗಳನ್ನು ದಾಟಿ ಮುನ್ನುಗುತ್ತಾನೆ" ಎಂದು ನೆಟ್‌ಫ್ಲಿಕ್ಸ್ ಕ್ಯಾಪ್ಷನ್ ಬೇರೆ ಕೊಟ್ಟಿದೆ. ಹೀಗಾಗಿ ಸೀಸನ್ 2 ಮತ್ತಷ್ಟು ರೋಷಕವಾಗಿರುತ್ತೆ ಎಂದು ನಿರೀಕ್ಷೆ ಮಾಡಬಹುದು.
'ರಾಣಾ ನಾಯ್ಡು' ಕಥೆಯೇನು?
'ರಾಣಾ ನಾಯ್ಡು' ಮೊದಲ ಸೀಸನ್‌ನಲ್ಲಿ ಅಪ್ಪ ಮಗನ ಸಂಘರ್ಷ ಎನ್ನುವುದನ್ನು ರಿವೀಲ್ ಮಾಡಲಾಗಿತ್ತು. ರಾಣಾ ತನ್ನ ಹೈಪ್ರೋಫೈಲ್ ಕ್ಲೈಂಟ್‌ಗಳ ಸಮಸ್ಯೆಗಳಿಗೆ ಪರಿಹಾರ ಕೊಡುತ್ತಾನೆ. ಆದರೆ, ತನ್ನ ವೈಯಕ್ತಿಕ ಬದುಕಿನ ಸಮಸ್ಯೆಗಳನ್ನು ಎದುರಿಸಲು ಪರದಾಡುತ್ತಾನೆ. ಈ ಮಧ್ಯೆ ರಾಣಾ ತಂದೆ ನಾಗಾ ನಾಯ್ಡು ತಾನು ಮಾಡದ ತಪ್ಪಿಗೆ 15 ವರ್ಷ ಜೈಲು ಶಿಕ್ಷೆ ಅನುಭವಿಸಿ ವಾಪಾಸ್ ಬಂದಿದ್ದಾರೆ. ಆದರೆ, ನಾಗ ನಾಯ್ಡು ಒಂದ್ಕಡೆ ಸೇಡು ತೀರಿಸಿಕೊಳ್ಳಬೇಕಿದೆ. ಇನ್ನೊಂದು ಕಡೆ ಮಕ್ಕಳೊಂದು ಸಂಬಂಧವನ್ನು ಸರಿ ಪಡಿಸಿಕೊಳ್ಳಬೇಕು. ಈಗ ಸೀಸನ್ 2ನಲ್ಲಿ ಏನಾಗುತ್ತೆ? ಅನ್ನೋದು ಕುತೂಹಲ.
ಯಾರೆಲ್ಲ ಇದ್ದಾರೆ?
'ರಾಣಾ ನಾಯ್ಡು' ಸೀಸನ್ 2 ವೆಬ್ ಸೀರಿಸ್‌ನಲ್ಲಿ ವೆಂಕಟೇಶ್ ದಗ್ಗುಬಾಟಿ ಹಾಗೂ ರಾಣಾ ದಗ್ಗುಬಾಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರೊಂದಿಗೆ ಅರ್ಜುನ್ ರಾಮ್‌ಪಾಲ್ ಹಾಗೂ 'ಗೂಗ್ಲಿ' ನಟಿ ಕೃತಿ ಕರಬಂಧ ಅವರನ್ನು ಪ್ರಮುಖ ಪಾತ್ರದಲ್ಲಿ ನೋಡಬಹುದು. ಇವರೊಂದಿಗೆ ಸುಶಾಂತ್ ಸಿಂಗ್, ಅಭಿಷೇಕ್ ಬ್ಯಾನರ್ಜಿ, ಸುಚಿತ್ರಾ ಪಿಳ್ಳೈ, ಸುರ್ವಿನ್ ಚಾವ್ಲಾ, ರಾಜೇಶ್ ಜೈಸ್, ಗೌರವ್ ಚೋಪ್ರಾ ಸೇರಿದಂತೆ ಇನ್ನೂ ಹಲವು ಕಲಾವಿದರು ನಟಿಸಿದ್ದಾರೆ. ಈ ವೆವ್ ಸೀರಿಸ್ ಅನ್ನು ಕರಣ್ ಅನ್ಶುಮನ್ ಜೊತೆ ಸುಪರ್ಣ ವರ್ಮಾ ನಿರ್ದೇಶನ ಮಾಡಿದ್ದಾರೆ. 'ರಾಣಾ ನಾಯ್ಡು' ಸೀಸನ್ 2 ನೋಡುವುದಕ್ಕೆ ತೆಲುಗು ಮಂದಿ ತುದಿಗಾಲಲ್ಲಿ ನಿಂತಿದ್ದಾರೆ.


Click it and Unblock the Notifications











