Animal OTT: 'ಅನಿಮಲ್' ಓಟಿಟಿಗೆ ಲಗ್ಗೆ ಇಡೋದ್ಯಾವಾಗ? ಸಿನಿಮಾ ಮಂದಿ ಲೆಕ್ಕಾಚಾರವೇನು?

ರಣ್‌ಬೀರ್ ಕಪೂರ್, ರಶ್ಮಿಕಾ ಮಂದಣ್ಣ ಜೋಡಿಯ ಸಿನಿಮಾ 'ಅನಿಮಲ್' ರಿಲೀಸ್ ಆಗಿದೆ. ಡಿಸೆಂಬರ್ 1 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಂಡಿದ್ದು, ಬಾಕ್ಸಾಫೀಸ್‌ನಲ್ಲಿ ಭರ್ಜರಿಯಾಗಿಯೇ ಕಲೆಕ್ಷನ್ ಮಾಡುತ್ತಿದೆ. ಸಿನಿಮಾ ಬಿಡುಗಡೆಯಾಗಿ ಆರು ದಿನಗಳಾಗಿದ್ದರೂ ಬಾಕ್ಸಾಫೀಸ್‌ನಲ್ಲಿ ಕುಗ್ಗುವ ಮಾತೇ ಇಲ್ಲ.

'ಅನಿಮಲ್' ಸಿನಿಮಾ ಕೇವಲ ನಾಲ್ಕು ದಿನಗಳಲ್ಲೇ ಬಾಕ್ಸಾಫೀಸ್‌ನಲ್ಲಿ ಸುಮಾರು 200 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ರಣ್‌ಬೀರ್ ಕಪೂರ್, ರಶ್ಮಿಕಾ ಮಂದಣ್ಣ ಈ ಜೋಡಿಗೆ ಪ್ರೇಕ್ಷಕರು ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೂವರೆಗೂ ಸುಮಾರು 250 ಕೋಟಿ ರೂಪಾಯಿ ಆಸುಪಾಸಿನಲ್ಲಿ ಕಲೆಕ್ಷನ್ ಆಗಿದೆ.

Ranbir Kapoor, Rashmika Mandanna, Bobby Deol starrer Animal OTT Release Confirmed

ಬಾಕ್ಸಾಫೀಸ್‌ನಲ್ಲಿ 'ಅನಿಮಲ್' ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದರೂ, ಓಟಿಟಿ ರಿಲೀಸ್ ಬಗ್ಗೆ ಸದ್ದು ಮಾಡುತ್ತಿದೆ. ಈಗಾಗಲೇ ಬಾಲಿವುಡ್‌ನಲ್ಲಿ ರಣ್‌ಬೀರ್, ರಶ್ಮಿಕಾ ಸಿನಿಮಾ ಯಾವಾಗ ರಿಲೀಸ್ ಆಗಬಹುದು ಅನ್ನೋದನ್ನು ಚರ್ಚೆ ಮಾಡುತ್ತಿದ್ದಾರೆ. ಸದ್ಯ ಮಾಧ್ಯಮಗಳು ಈ ವರ್ಷ 'ಅನಿಮಲ್' ಬರೋದಿಲ್ಲ ಅನ್ನೋದನ್ನು ಕನ್ಫರ್ಮ್ ಮಾಡಿವೆ.

ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ ಈ ಸಿನಿಮಾ ಬಗ್ಗೆ ಕೆಲ ಪ್ರೇಕ್ಷಕರು ಕಟುವಾಗಿ ಟೀಕಿಸುತ್ತಿದ್ದಾರೆ. 'ಅನಿಮಲ್' ಸಿನಿಮಾ ಪುರುಷ ಪ್ರಧಾನ ಸಿನಿಮಾ ಎಂದು ಆರೋಪ ಕೆಲವರು ಆರೋಪ ಮಾಡುತ್ತಿದ್ದಾರೆ. ಇಷ್ಟೆಲ್ಲ ಇದ್ದರೂ ರಗಡ್, ಮಾಸ್ ಸಿನಿಮಾ ನೋಡುವುದಕ್ಕೆ ಪ್ರೇಕ್ಷಕರು ಮುಗಿಬೀಳುತ್ತಿದ್ದಾರೆ. ಈ ಮಧ್ಯೆ 'ಅನಿಮಲ್' ಓಟಿಟಿ ರಿಲೀಸ್ ಬಗ್ಗೆ ವರದಿಯಾಗಿದೆ.

'ಅನಿಮಲ್' ಹೊಸ ವರ್ಷಕ್ಕೆ ಓಟಿಟಿಗೆ ಲಗ್ಗೆ ಇಡುತ್ತಿದೆ. ನೆಟ್‌ಫ್ಲಿಕ್ಸ್‌ನಲ್ಲಿ 2024, ಜನವರಿ ತಿಂಗಳ ಕೊನೆಯಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಬಹುದು ಎಂದು ಮಾಧ್ಯಮಗಳು ವರದಿ ಮಾಡಿದೆ. ಸದ್ಯ ಸಿನಿಮಾದ ನಿರ್ಮಾಣ ಸಂಸ್ಥೆ ಹಾಗೂ ಓಟಿಟಿ ವೇದಿಕೆಗಳ ಮಧ್ಯೆ 45 ರಿಂದ 60 ದಿನಗಳ ಕಾಲ ಒಡಂಬಡಿಕೆ ಆಗುತ್ತಿದೆ. ಸಿನಿಮಾ ತೆರೆಕಂಡ ಇಷ್ಟು ದಿನಗಳ ಒಳಗೆ ಓಟಿಟಿಯಲ್ಲಿ ರಿಲೀಸ್ ಮಾಡಲು ನಿರ್ಮಾಪಕರೇ ಅನುಮತಿ ನೀಡಿರುತ್ತಾರೆ.

Ranbir Kapoor, Rashmika Mandanna, Bobby Deol starrer Animal OTT Release Confirmed

ಅಂತೆಯೇ ಡಿಸೆಂಬರ್ ಒಂದಕ್ಕೆ ಸಿನಿಮಾ ರಿಲೀಸ್ ಆಗಿದ್ದು, ಈ ಲೆಕ್ಕಾಚಾರದ ಪ್ರಕಾರ 'ಅನಿಮಲ್' ಸಿನಿಮಾ ಜನವರಿ ಕೊನೆಯ ವಾರ ನೆಟ್‌ಫಿಕ್ಸ್‌ನಲ್ಲಿ ಬಿಡುಗಡೆಯಾಗಬಹುದು. ಮೂಲಗಳ ಪ್ರಕಾರ ಗಣರಾಜ್ಯೋತ್ಸದ ದಿನದಂದು (ಜನವರಿ 26) 'ಅನಿಮಲ್' ಓಟಿಟಿಗೆ ಲಗ್ಗೆ ಇಡುವ ಎಲ್ಲಾ ಸಾಧ್ಯಗಳೂ ಇವೆ. ನೆಟ್‌ಫ್ಲಿಕ್‌ ಈ ಸಿನಿಮಾದ ಹಕ್ಕನ್ನು ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದೆ ಎಂದು ಈಗಾಗಲೇ ಸುದ್ದಿಯಾಗಿದೆ.

ಸದ್ಯ 'ಅನಿಮಲ್' ಭಾರತದಲ್ಲಿ ಕೇವಲ 6 ದಿನಗಳಿಗೆ 313 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅದೇ ವಿಶ್ವದಾದ್ಯಂತ ಸುಮಾರು 527 ಕೋಟಿ ರೂಪಾಯಿ ಗಳಿಕೆ ಕಂಡಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ಸ್ ಲೆಕ್ಕ ಕೊಟ್ಟಿದ್ದಾರೆ. ಹೀಗಾಗಿ ಇನ್ನೂ ಎರಡು ವಾರ ಈ ಸಿನಿಮಾ ಹವಾ ಇದ್ದೇ ಇರುತ್ತೆ. ಅಷ್ಟರಲ್ಲಿ ಬಾಲಿವುಡ್‌ನಲ್ಲಿ ಹೊಸ ದಾಖಲೆ ಮಾಡಬಹುದು ಎಂದು ಲೆಕ್ಕ ಹಾಕಲಾಗಿದೆ.

More from Filmibeat

English summary
Ranbir Kapoor, Rashmika Mandanna movie Animal OTT Releasing on January end
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X