ಥಿಯೇಟರ್‌ನಲ್ಲಿ ಗೆದ್ದ 'ಸಲಾರ್' ಓಟಿಟಿಯಲ್ಲಿ 'ಅನಿಮಲ್'ಗಿಂತ ಹಿಂದೆ ಬಿದ್ದಿದ್ದೇಕೆ? 2 ಸಿನಿಮಾಗಳ ವೀವ್ಸ್ ಎಷ್ಟು?
ಬಿಗ್ ಬಜೆಟ್ ಸಿನಿಮಾಗಳು ಥಿಯೇಟರ್‌ನಲ್ಲಿ ಸದ್ದು ಮಾಡುತ್ತಿರುವುದೇನೋ ನಿಜ. ಹಾಗಾಗಿ ಈ ಸಿನಿಮಾಗಳಿಗೆ ಓಟಿಟಿಯಲ್ಲಿ ಹೆಚ್ಚು ಬೇಡಿಕೆಯಿದೆ. ಅದರಲ್ಲೂ ಸ್ಟಾರ್ ನಟರ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಓಟಿಟಿ ವೇದಿಕೆಗಳು ಮುಗಿಬಿದ್ದು ಖರೀದಿ ಮಾಡುತ್ತಿವೆ. ಇದರಲ್ಲಿ ರಣ್‌ಬೀರ್ ಕಪೂರ್ ನಟಿಸಿದ 'ಅನಿಮಲ್' ಹಾಗೂ ಪ್ರಭಾಸ್ ಸಿನಿಮಾ 'ಸಲಾರ್' ಕೂಡ ಇದೆ.
ರಣ್‌ಬೀರ್ ಕಪೂರ್ ಸಿನಿಮಾ 'ಅನಿಮಲ್' ಹಾಗೂ ಪ್ರಭಾಸ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ 'ಸಲಾರ್' ಎರಡೂ ಓಟಿಟಿಗೆ ಲಗ್ಗೆ ಇಟ್ಟಿವೆ. ಮೊದಲು ಪ್ರಭಾಸ್ ಸಿನಿಮಾ 'ಸಲಾರ್' ಸ್ಟ್ರೀಮಿಂಗ್ ಶುರುವಾಗಿತ್ತು. ಈ ಸಿನಿಮಾ ರಿಲೀಸ್ ಆದ ಒಂದು ವಾರದ ಬಳಿಕ ರಣ್‌ಬೀರ್ ಕಪೂರ್ ನಟನೆಯ 'ಅನಿಮಲ್' ಸಿನಿಮಾ ಕೂಡ ನೆಟ್‌ಫಿಕ್ಸ್‌ಗೆ ಲಗ್ಗೆ ಇಟ್ಟಿತ್ತು.

ನೆಟ್‌ಫ್ಲಿಕ್ಸ್‌ನಲ್ಲಿ 'ಅನಿಮಲ್' ಹಾಗೂ 'ಸಲಾರ್' ಈ ಎರಡೂ ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, ಪ್ರಭಾಸ್, ಪ್ರಶಾಂತ್ ನೀಲ್ ಜೋಡಿಯ 'ಸಲಾರ್'ಗೆ ಸಿಕ್ಕ ರೆಸ್ಪಾನ್ಸ್‌ಗಿಂತ 'ಅನಿಮಲ್'ಗೆ ಹೆಚ್ಚು ಮಂದಿ ಮನಸೋತಿದ್ದಾರೆ. ಅಷ್ಟಕ್ಕೂ ಓಟಿಟಿಯಲ್ಲೂ ಅನಿಮಲ್‌ಗಿಂತ 'ಸಲಾರ್' ಹಿಂದೆ ಬಿದ್ದಿದ್ದೇಗೆ? ತಿಳಿಯುವುದಕ್ಕೆ ಮುಂದೆ ಓದಿ.
ಜನವರಿ 28ರವರೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಅತೀ ಹೆಚ್ಚು ವೀವ್ಸ್ ಪಡೆದ ಸಿನಿಮಾ ಪಟ್ಟಿ ಹೊರಬಿದ್ದಿದೆ. ಇಂಗ್ಲಿಷ್ ಭಾಷೆಯ ಸಿನಿಮಾಗಳನ್ನು ಹೊರತು ಪಡಿಸಿ ಬೇರೆ ಭಾಷೆಯ ವಿಭಾಗದಲ್ಲಿ 'ಅನಿಮಲ್' ನಾಲ್ಕನೇ ಸ್ಥಾನದಲ್ಲಿದೆ. ಅದೇ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಜೋಡಿಯ 'ಸಲಾರ್' ಸಿನಿಮಾ 6ನೇ ಸಿನಿಮಾ ಸ್ಥಾನದಲ್ಲಿದೆ.
'ಸಲಾರ್' ರಿಲೀಸ್ ಆದ ಮೊದಲ ವಾರ ಟ್ರೆಂಡಿಂಗ್‌ನಲ್ಲಿ ನಂ 1 ಸ್ಥಾನದಲ್ಲಿತ್ತು. ಆದರೆ, ಒಂದು ವಾರದ ಅಂತರದಲ್ಲಿ ರಿಲೀಸ್ ಆದ 'ಅನಿಮಲ್' ಓವರ್‌ಟೇಕ್ ಮಾಡಿ ನಂಬರ್ ಒನ್ ಸ್ಥಾನಕ್ಕೆ ಬಂದಿತ್ತು. ಎರಡನೇ ವಾರದಲ್ಲಿ ಕೊಂಚ ಮಟ್ಟಿಗೆ ಇಳಿಕೆ ಕಂಡಿದ್ದರೂ, 'ಅನಿಮಲ್' ಇದೂವರೆಗೂ 6.2 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಅದೇ 'ಸಲಾರ್' ಸಿನಿಮಾ 3.5 ಮಿಲಿಯನ್ ವೀವ್ಸ್ ಕಂಡಿದೆ.

ಜನವರಿ 28ರವರೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಅತಿ ಹೆಚ್ಚು ವೀವ್ಸ್ ಕಂಡ ಸಿನಿಮಾಗಳ ಬಗ್ಗೆ ಮಾಹಿತಿ ಹೊರಬಿದ್ದಿದೆ. 'ಅನಿಮಲ್' ಸಿನಿಮಾವನ್ನು ಸುಮಾರು ಮೂರು ದಿನಗಳಲ್ಲಿ ಎಲ್ಲಾ ಭಾಷೆಗಳಿಂದ 20.8 ಮಿಲಿಯನ್ ಗಂಟೆಗಳ ಕಾಲ ವೀಕ್ಷಣೆ ಕಂಡಿದೆ. ಒಟ್ಟು 6.2 ಮಿಲಿಯನ್ ವೀವ್ಸ್ ಬಂದಿದೆ. ಇದು ದಾಖಲೆ ಅಂತಲೇ ಹೇಳಲಾಗುತ್ತಿದೆ.
ಪ್ರಭಾಸ್, ಪ್ರಶಾಂತ್ ನೀಲ್ ಸಿನಿಮಾ 'ಸಲಾರ್' 10.3 ಮಿಲಿಯನ್ ಗಂಟೆಗಳ ಕಾಲ ವೀವ್ಸ್ ಕಂಡಿದೆ. ಇದು ಕೇವಲ ತೆಲುಗು ವರ್ಷನ್‌ನಲ್ಲಿ ಮಾತ್ರ. ಇದೊಂದೇ ಭಾಷೆಯಿಂದ 3.5 ಮಿಲಿಯನ್ ವೀವ್ಸ್ ಸಿಕ್ಕಿದೆ. ಹಾಗೇ 'ಹಾಯ್ ನಾನ್ನ' ಸಿನಿಮಾವನ್ನು 10.8 ಮಿಲಿಯನ್ ಗಂಟೆಗಳಷ್ಟು ವೀಕ್ಷಿಸಲಾಗಿದೆ. 11 ದಿನಗಳಲ್ಲಿ ತೆಲುಗು ಹಾಗೂ ಹಿಂದಿಯಿಂದ ಎರಡೂ ಭಾಷೆ ಸೇರಿ ಈ ವೀವ್ಸ್ ಬಂದಿದೆ.
ಅನಿಮಲ್‌ಗಿಂತ 'ಸಲಾರ್' ಹಿಂದೆ ಬೀಳುವುದಕ್ಕೆ ಕಾರಣವಿದೆ. ಈ ಸಿನಿಮಾದ ಹಿಂದಿ ವರ್ಷನ್ ಇನ್ನೂ ರಿಲೀಸ್ ಆಗಿಲ್ಲ. ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ 'ಸಲಾರ್' ತೆಲುಗು ವರ್ಷನ್ 3ನೇ ಸ್ಥಾನದಲ್ಲಿದೆ. ತಮಿಳು ವರ್ಷನ್ 10ನೇ ಸ್ಥಾನದಲ್ಲಿದೆ. ಹಾಗೇ ಮಲಯಾಳಂ ಹಾಗೂ ಕನ್ನಡ ವರ್ಷನ್ ಎರಡೂ ಟಾಪ್ 10 ಸ್ಥಾನದಲ್ಲೂ ಬಂದಿಲ್ಲ. ಓಟಿಟಿಯಲ್ಲಿ 'ಸಲಾರ್' ಒಳ್ಳೆಯ ಪರ್ಫಾಮೆನ್ಸ್ ನೀಡಿದ್ದರೂ, 'ಅನಿಮಲ್' ಸೋಲುಂಡಿದೆ.


Click it and Unblock the Notifications











