Dhurandhar OTT Release:'ಕೆಜಿಎಫ್ 2','ಕಾಂತಾರ' ದಾಖಲೆ ಮುರಿದ 'ಧುರಂಧರ್' ಓಟಿಟಿ ಎಂಟ್ರಿಗೆ ಮುಹೂರ್ತ ಫಿಕ್ಸ್
ಕಳೆದ ವರ್ಷ ಬಾಲಿವುಡ್ ಮಂದಿಯ ಮರ್ಯಾದೆ ಉಳಿಸಿದ ಸಿನಿಮಾ 'ಧುರಂಧರ್'. ವರ್ಷದ ಕೊನೆಯ ತಿಂಗಳಲ್ಲಿ ತೆರೆಕಂಡಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಒಂದೊಂದೇ ದಾಖಲೆಗಳನ್ನು ಮುರಿಯುತ್ತಾ ಹೋಯ್ತು. ಅಲ್ಲಿವರೆಗೂ ಕೆಲವೇ ಕೆಲವು ಗೆಲುವುಗಳನ್ನು ದಾಖಲಿಸಿದ್ದ ಬಾಲಿವುಡ್ ಮಂದಿಗೆ ಮರು ಜೀವ ಬಂದಂತಾಗಿತ್ತು.
ಇತ್ತ ಸತತ ಸೋಲುಗಳಿಂದ ಕಂಗೆಟ್ಟು ಹೋಗಿದ್ದ ರಣ್‌ವೀರ್ ಸಿಂಗ್‌ಗೂ ಒಳ್ಳೆಯ ಸಕ್ಸಸ್ ಸಿಕ್ಕಿದೆ. ರಣ್‌ವೀರ್ ಸಿಂಗ್‌ಗಿಂತಲೂ ಮಿಗಿಲಾಗಿ ಅಕ್ಷಯ್ ಖನ್ನಾ ಪರ್ಫಾಮೆನ್ಸ್ ಅನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಹೀಗಾಗಿ ಈ ಸಿನಿಮಾ ವಿಮರ್ಶಕರಿಂದಲೂ ಮೆಚ್ಚುಗೆ ಗಳಿಸಿತ್ತು. ಹಾಗೇ ಬಾಕ್ಸಾಫೀಸ್‌ನಲ್ಲಿಯೂ ಸೂಪರ್ ಸಕ್ಸಸ್ ಕಂಡಿತ್ತು.

ರಣ್‌ವೀರ್ ಸಿಂಗ್, ಅಕ್ಷಯ್ ಖನ್ನಾ ಜೊತೆಗೆ ಸಂಜಯ್ ದತ್, ಅರ್ಜುನ್ ರಾಮ್‌ಪಾಲ್, ಆರ್.ಮಾಧವನ್ ಸೇರಿದಂತೆ ದಿಗ್ಗಜರೇ ನಟಿಸಿದ್ದಾರೆ. 2025ರಲ್ಲಿ ಬಾಕ್ಸಾಫೀಸ್‌ನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪೈಕಿ 'ಧುರಂಧರ್' ಟಾಪ್‌ನಲ್ಲಿದೆ. 'ಕೆಜಿಎಫ್ 2' ಹಾಗೂ 'ಕಾಂತಾರ ಚಾಪ್ಟರ್ 1' ಸಿನಿಮಾಗಳ ಕಲೆಕ್ಷನ್ ರೆಕಾರ್ಡ್ ಅನ್ನು ಬ್ರೇಕ್ ಮಾಡಿದ್ದು, ಈಗ ಓಟಿಟಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ. ಹಾಗಿದ್ದರೆ, ಎಲ್ಲಿ? ಯಾವಾಗ? ನೋಡಬಹುದು ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
'ಧುರಂಧರ್' ಇಷ್ಟೊಂದು ಕ್ರೇಜ್ ಹುಟ್ಟಾಕಿದ್ದಕ್ಕೆ ಕಾರಣ ಸಿಂಪಲ್. ಕನ್ನಡದ ಎರಡು ಸಿನಿಮಾಗಳ ಬಾಕ್ಸಾಫೀಸ್ ದಾಖಲೆಯನ್ನು ಮುರಿದಿದೆ. ಯಶ್ ಸಿನಿಮಾ 'ಕೆಜಿಎಫ್ 2' ಹಾಗೂ ರಿಷಬ್ ಶೆಟ್ಟಿಯ 'ಕಾಂತಾರ ಚಾಪ್ಟರ್ 1' ಈ ಸಿನಿಮಾಗಳ ಬಾಕ್ಸಾಫೀಸ್ ದಾಖಲೆಯನ್ನು ಹಿಂದಿಕ್ಕಿದೆ. ಬಾಲಿವುಡ್ ಸಿನಿಮಾಗಳು ದಕ್ಷಿಣ ಭಾರತದ ಸಿನಿಮಾಗಳ ಕಲೆಕ್ಷನ್ ಅನ್ನು ಬ್ರೇಕ್ ಮಾಡುವುದಕ್ಕೆ ಪರದಾಡುತ್ತಿರುವಾಗ 'ಧುರಂಧರ್' ಈ ಸಿನಿಮಾ ಮಾಡಿತ್ತು.
ಅಲ್ಲದೆ, 'ಕೆಜಿಎಫ್ 2' ದಾಖಲೆಯನ್ನು ಮುರಿಯುತ್ತಿದ್ದಂತೆ ಯಶ್ 'ಟಾಕ್ಸಿಕ್' ಜೊತೆ ಪಾರ್ಟ್ 2 ರಿಲೀಸ್ ಮಾಡುವುದಾಗಿ ಅನೌನ್ಸ್ ಮಾಡಿದೆ. ಈಗ 'ಟಾಕ್ಸಿಕ್' Vs 'ಧುರಂಧರ್ 2' ಅನ್ನೋ ಮೈಂಡ್ ಸೆಟ್‌ನಲ್ಲಿ ಪ್ರೇಕ್ಷಕರು ಇದ್ದಾರೆ. ಉತ್ತರ ಭಾರತದ ಹಿಂದಿ ಭಾಷಿಗರು ಹೆಚ್ಚಿರುವ ಕಡೆಗಳಲ್ಲಿ 'ಧುರಂಧರ್ 2'ಗೆ ಬೆಂಬಲ ಸಿಗುತ್ತಿದ್ದರೆ, ಯಶ್ ಸಿನಿಮಾ 'ಟಾಕ್ಸಿಕ್'ಗೆ ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ಹಲವೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಕ್ರೇಜ್ ಇರುವಾಗಲೇ 'ಧುರಂಧರ್' ಸಿನಿಮಾ ಓಟಿಟಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ. ಥಿಯೇಟರ್‌ನಲ್ಲಿ ತನ್ನ ಜರ್ನಿಯನ್ನು ಮುಗಿಸಿ, ಇದೇ ತಿಂಗಳ ಕೊನೆಯಲ್ಲಿ ಅಂದರೆ ಜನವರಿ 30ರಂದು ಬಿಡುಗಡೆಯಾಗಲಿದೆ. ಓಟಿಟಿ ದೈತ್ಯ ನೆಟ್‌ಫ್ಲಿಕ್ಸ್‌ನಲ್ಲಿ 'ಧುರಂಧರ್' ಸಿನಿಮಾ ಬಿಡುಗಡೆಯಾಗಲಿದೆ. ಓಟಿಟಿ ಪ್ಲೇ ವರದಿ ಪ್ರಕಾರ, 'ಧುರಂಧರ್' ಜನವರಿಗೆ ನೆಟ್‌ಫ್ಲಿಕ್ಸ್‌ಗೆ ಲಗ್ಗೆ ಇಡುವುದು ಫಿಕ್ಸ್ ಆಗಿದೆ. ಸದ್ಯ 'ಧರಂಧರ್' ಹಿಂದಿ ಭಾಷೆ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗುತ್ತಿದೆ.
'ಧುರಂಧರ್' ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ ದಾಖಲೆ ಗಳಿಕೆ ಮಾಡಿದೆ. ಅರಬ್ ದೇಶಗಳಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ಅನುಮತಿ ಸಿಕ್ಕಿರಲಿಲ್ಲ. ಹೀಗಿದ್ದರೂ, 48 ದಿನಗಳಲ್ಲಿ 'ಧರುಂಧರ್' ವಿಶ್ವದಾದ್ಯಂತ ₹1285.25 ಕೋಟಿ ಕಲೆಕ್ಷನ್ ಆಗಿದ್ದು, ಭಾರತದ ಬಾಕ್ಸಾಫೀಸ್‌ನಲ್ಲಿ ₹991.65 ಕೋಟಿ (Gross) ಕಲೆಕ್ಷನ್ ಆಗಿದೆ ಎಂದು ಟ್ರೇಡ್ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಮಾಡಿದೆ. ಏನೇ ಇದ್ದರೂ ಥಿಯೇಟರ್‌ನಲ್ಲಿ ಸಿನಿಮಾ ನೋಡುವುದನ್ನು ಮಿಸ್ ಮಾಡಿಕೊಂಡವರು ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದು.


Click it and Unblock the Notifications











