Dhurandhar OTT: ರಣ್‌ವೀರ್ ಸಿಂಗ್‌ಗೆ ಜಾಕ್‌ಪಾಟ್.. ₹130 ಕೋಟಿಗೆ 'ಧುರಂಧರ್' ಓಟಿಟಿಗೆ ಸೇಲ್

ಸತತ ಸೋಲುಗಳಿಂದ ಕಂಗೆಟ್ಟು ಹೋಗಿದ್ದ ಬಾಲಿವುಡ್ ನಟ ರಣ್‌ವೀರ್ ಸಿಂಗ್ ಮತ್ತೆ ಟ್ರ್ಯಾಕ್‌ ಬಂದಿದ್ದಾರೆ. 'ಧುರುಂಧರ್' ಬಿಡುಗಡೆಗೂ ಮುನ್ನ ದೈವವನ್ನು ಅಣಕಿಸಿ ವಿವಾದಕ್ಕೆ ಗುರಿಯಾಗಿದ್ದ ರಣ್‌ವೀರ್ ಸಿಂಗ್‌ಗೆ ಮತ್ತೆ ಸೋಲು ಕಟ್ಟಿಟ್ಟ ಬುತ್ತಿ ಅಂತಲೇ ಭಾವಿಸಿದ್ದರು. ಅದಕ್ಕೆ ಕಾರಣ ಸಿನಿಮಾ ಟ್ರೈಲರ್‌ನಿಂದ ಅಡ್ವಾನ್ಸ್ ಬುಕಿಂಗ್‌ನಿಂದ ಹಿಡಿದು ಯಾವುದೂ ಸದ್ದು ಮಾಡಿರಲಿಲ್ಲ.

ಆದರೆ, ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ 'ಧುರಂಧರ್' ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ಕಳೆದ ನಾಲ್ಕೈದು ದಿನಗಳಿಂದ ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾದ ಹವಾ ಜೋರಾಗಿದೆ. ಅದರಲ್ಲೂ ನಾಲ್ಕನೇ ದಿನ ಅಂದರೆ, ಮೊದಲ ಸೋಮವಾರ ಬಾಕ್ಸಾಫೀಸ್‌ನಲ್ಲಿ ₹20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಜನರು ಸಿನಿಮಾವನ್ನು ಇಷ್ಟಪಟ್ಟಿದ್ದು, ಓಟಿಟಿಗೆ ಒಳ್ಳೆಯ ಮೊತ್ತಕ್ಕೆ ಸೇಲ್ ಆಗಿದೆ.

Ranveer Singh Dhurandhar Part 1 and Part 2 Ott Rights bought Rs 130 crore by Netflix

'ಧುರುಂಧರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದ್ದಂತೆ ಓಟಿಟಿ ಸಂಸ್ಥೆಗಳಿಂದ ಬೇಡಿಕೆ ಹೆಚ್ಚಾಗಿತ್ತು. ಬಾಲಿವುಡ್ ಸ್ಪೈ-ಥ್ರಿಲ್ಲರ್‌ಗಾಗಿ ಪ್ರಮುಖ ಓಟಿಟಿ ಸಂಸ್ಥೆಗಳು ಮುಗಿಬಿದ್ದಿದ್ದವು. ಕೊನೆಗಗೂ ಈ ಸಿನಿಮಾವನ್ನು ನೆಟ್‌ಫ್ಲಿಕ್ಸ್ ಖರೀದಿ ಮಾಡಿದೆ. ಅದೂ ಬರೋಬ್ಬರಿ ₹130 ಕೋಟಿ ರೂಪಾಯಿಗೆ. ಅಷ್ಟಕ್ಕೂ ಈ ಬಿಗ್‌ ಡೀಲ್‌ನ ಹೈಲೈಟ್ ಏನು? ತಿಳಿಯುವುದಕ್ಕೆ ಮುಂದೆ ಓದಿ.

ಹೌದು ರಣ್‌ವೀರ್ ಸಿಂಗ್ ಸಿನಿಮಾ 'ಧುರಂಧರ್' ಖರೀದಿ ಮಾಡುವುದಕ್ಕೆ ಓಟಿಟಿ ವೇದಿಕೆಗಳು ಭಾರೀ ಪೈಪೋಟಿ ಮಾಡಿವೆ. ಅದರಲ್ಲಿ ಈ ಸಿನಿಮಾದ ಓಟಿಟಿ ಹಕ್ಕುಗಳು ನೆಟ್‌ಪ್ಲಿಕ್ಸ್ ಪಾಲಾಗಿವೆ. ಈ ಸಿನಿಮಾಗಾಗಿ ನೆಟ್‌ಫ್ಲಿಕ್ಸ್ ಕೊಟ್ಟ ಹಣದ ಬಗ್ಗೆನೂ ಚರ್ಚೆಯಾಗುತ್ತಿದೆ. ಬರೋಬ್ಬರಿ ₹130 ಕೋಟಿಗೆ ಈ ಸಿನಿಮಾ ಸೇಲ್ ಆಗಿರೋದು ವಿಶೇಷ. ಇದು ಇತ್ತೀಚೆಗೆ ಓಟಿಟಿ ಸಂಸ್ಥೆ ಖರೀದಿ ಮಾಡಿದ ಬಿಗ್ ಸಿನಿಮಾ ಎನಿಸಿಕೊಂಡಿದೆ.

ಬಾಲಿವುಡ್ ಹಂಗಾಮ ವರದಿ ಮಾಡಿರುವ ಪ್ರಕಾರ, ನೆಟ್‌ಫ್ಲಿಕ್ಸ್ 'ಧುರಂಧರ್' ಎರಡು ಪಾರ್ಟ್‌ಗಳಿಗೂ ಸೇರಿ ಇಷ್ಟು ದೊಡ್ಡ ಮೊತ್ತವನ್ನು ನೀಡಿದೆ. ಪಾರ್ಟ್ 1 ಹಾಗೂ ಪಾರ್ಟ್ 2 ಎರಡೂ ಬರೋಬ್ಬರಿ ₹65 ಕೋಟಿಯಂತೆ ನೆಟ್‌ಫ್ಲಿಕ್ಸ್ ಪಾವತಿಸಿದೆ ಎಂದು ಹೇಳಿದೆ. ಓಟಿಟಿ ವೇದಿಕೆಗಳನ್ನು ಸಿನಿಮಾಗಳನ್ನು ಖರೀದಿ ಮಾಡಿರುವ ಸಮಯದಲ್ಲಿ ಅತೀ ದೊಡ್ಡ ಮೊತ್ತಕ್ಕೆ ಸೇಲ್ ಆಗಿ ಅಚ್ಚರಿ ಮೂಡಿಸಿದೆ.

Ranveer Singh Dhurandhar Part 1 and Part 2 Ott Rights bought Rs 130 crore by Netflix

ಟ್ರೇಡ್‌ ಎಕ್ಸ್‌ಪರ್ಟ್‌ಗಳು ಕೂಡ 'ಧುರಂಧರ್' ಇತ್ತೀಚೆಗೆ ನಡೆದಿರುವ ಅತೀ ದೊಡ್ಡ ಓಟಿಟಿ ಡೀಲ್ ಎಂದು ಹೇಳಿದ್ದಾರೆ. ರಣ್‌ವೀರ್ ಸಿಂಗ್ ವೃತ್ತಿ ಬದುಕಿನಲ್ಲಿ ಈ ಸಿನಿಮಾ ಓಳ್ಳೆಯ ಓಪನಿಂಗ್ ಅಷ್ಟೇ ಅಲ್ಲ. ಓಟಿಟಿಗೂ ಸೇಲ್ ಆದ ದೊಡ್ಡ ಸಿನಿಮಾ ಎನಿಸಿಕೊಂಡಿದೆ. ಬಾಲಿವುಡ್ ಹಂಗಾಮ ವರದಿಯಂತೆ ರಣ್‌ವೀರ್ ಸಿಂಗ್ ನಟಿಸಿದ '83' ಸಿನಿಮಾವನ್ನು ನೆಟ್‌ಫ್ಲಿಕ್ಸ್ ₹30 ಕೋಟಿ ಖರೀದಿಸಿದೆ. ಹಾಗೇ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾ ₹80 ಕೋಟಿಗೆ ಅಮೆಜಾನ್ ಪ್ರೈಂ ಖರೀದಿ ಮಾಡಿತ್ತು. ಈಗ 'ಧುರಂಧರ್' ಎರಡೂ ಸೀಕ್ವೆಲ್‌ಗಳಿಂದ ಆ ದಾಖಲೆಯನ್ನೂ ಮುರಿದಿದೆ.

ಇನ್ನು 'ಧುರಂಧರ್' ಬಾಕ್ಸಾಫೀಸ್‌ನಲ್ಲೂ ದಾಖಲೆ ಕಲೆಕ್ಷನ್ ಮಾಡುತ್ತಿದೆ. ನಾಲ್ಕು ದಿನಗಳಲ್ಲಿ ಈ ಸಿನಿಮಾ ಬರೋಬ್ಬರಿ ₹120 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ರಣ್‌ವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

More from Filmibeat

English summary
Ranveer Singh Dhurandhar Part 1 and Part 2 Ott Rights bought Rs 130 crore by Netflix.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X