Dhurandhar The Revenge:ಓಟಿಟಿಯಲ್ಲಿ ಧೂಳೆಬ್ಬಿಸಿದ 'ಧುರಂಧರ್ ದಿ ರಿವೇಂಜ್': 5 ದಿನಗಳಲ್ಲಿ 5 ಕೋಟಿ ವೀಕ್ಷಣೆ

ರಣ್‌ವೀರ್ ಸಿಂಗ್ ಹಾಗೂ ಆದಿತ್ಯ ಧರ್ ಕಾಂಬಿನೇಷನ್ ಸಿನಿಮಾ 'ಧುರಂಧರ್ 2' ಥಿಯೇಟರ್‌ನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಿತ್ತು. ಬಾಕ್ಸಾಫೀಸ್‌ನಲ್ಲಿ ಒಂದೊಂದೆ ದಾಖಲೆಗಳನ್ನು ಉಡೀಸ್ ಮಾಡಿದ್ದ ಈ ಸಿನಿಮಾ ಇತ್ತೀಚೆಗೆ ಓಟಿಟಿಗೂ ಗ್ರ್ಯಾಂಡ್ ಎಂಟ್ರಿ ಕೊಟ್ಟಿತ್ತು. ಜಿಯೋಹಾಟ್‌ಸ್ಟಾರ್‌ನಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆಗುವುದಕ್ಕೂ ಮುನ್ನ ಗ್ರ್ಯಾಂಡ್ ಪ್ರೀಮಿಯರ್ ಕೂಡ ಮಾಡಲಾಗಿತ್ತು.

'ಜಿಯೋಹಾಟ್‌ಸ್ಟಾರ್‌' ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ 'ಧುರಂಧರ್ ದಿ ರಿವೇಂಜ್' ರಿಲೀಸ್ ಆಗಿದ್ದು, ಡಿಜಿಟಲ್ ಸ್ಟ್ರೀಮಿಂಗ್ ಲೋಕದಲ್ಲಿ ಹೊಸ ಚರಿತ್ರೆಯನ್ನು ಬರೆದಿದೆ. ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲೇ ಬರೋಬ್ಬರಿ 50 ಮಿಲಿಯನ್ ಅಂದರೆ 5 ಕೋಟಿ ವೀಕ್ಷಕರನ್ನು ಪಡೆದುಕೊಂಡಿದೆ. ಈ ಮೂಲಕ 'ಧುರಂಧರ್ 2' ದೇಶಾದ್ಯಂತ ಭಾರಿ ಸಂಚಲನವನ್ನೇ ಸೃಷ್ಟಿಸಿದೆ.

Ranveer Singh Dhurandhar The Revenge record breaking 5 crore views in 5 days in JioHotstar

ಮೊದಲ ಐದು ದಿನಗಳು ಓಟಿಟಿಯಲ್ಲಿ ವೀಕ್ಷಿಸಿದವರ ಸಂಖ್ಯೆ ಥಿಯೇಟರ್‌ನಲ್ಲಿ ಪಡೆದ ಆರಂಭಿಕ ವೀಕೆಂಡ್ ವೀಕ್ಷಕರ ಸಂಖ್ಯೆಗಿಂತ ಸುಮಾರು 5 ಪಟ್ಟು ಹೆಚ್ಚು ಎಂದು ಜಿಯೋಹಾಟ್‌ಸ್ಟಾರ್ ಟೀಮ್ ಹೇಳಿಕೊಂಡಿದೆ. ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ದೇಶದ ಮೂಲೆ ಮೂಲೆಯಲ್ಲಿ, ಬೃಹತ್ ನಗರಗಳಿಂದ ಹಿಡಿದು ಸಣ್ಣ ಪುಟ್ಟ ಪಟ್ಟಣದವರೆಗೂ 'ಧುರಂಧರ್ ದಿ ರಿವೇಂಜ್' ಸಿನಿಮಾವನ್ನು ವೀಕ್ಷಣೆ ಮಾಡಿದ್ದು, ಜಿಯೋಹಾಟ್‌ಸ್ಟಾರ್ ವಿಶ್‌ಲಿಸ್ಟ್‌ನಲ್ಲಿ ಟಾಪ್‌ನಲ್ಲಿದೆ.

'ಕನೆಕ್ಟೆಡ್ ಟಿವಿ' ಮೂಲಕ ವೀಕ್ಷಣೆ

ರಣ್‌ವೀರ್ ಸಿಂಗ್ ಸಿನಿಮಾ 'ಧುರಂಧರ್ 2' ಸಿನಿಮಾ ವೀಕ್ಷಣಾ ಅವಧಿಯಲ್ಲಿ ಶೇ.60ರಷ್ಟು 'ಕನೆಕ್ಟೆಡ್ ಟಿವಿ' (Connected TV) ಮೂಲಕವೇ ಬಂದಿದೆ. ಅಂದರೆ, ಈ ಸಿನಿಮಾವನ್ನು ಕುಟುಂಬ ಸಮೇತ ಟಿವಿಯಲ್ಲಿ ಕನೆಕ್ಟ್ ಮಾಡಿಕೊಂಡು ಒಟ್ಟಿಗೆ ಈ ಸಿನಿಮಾವನ್ನು ನೋಡಿದ್ದಾರೆ. ಜನರಲ್ಲಿ ಈ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಜಿಯೋಹಾಟ್‌ಸ್ಟಾರ್ ಹೇಳಿಕೊಂಡಿದೆ.

ಪ್ರೀ-ಶೋ ಅನುಭವ

'ಧುರಂಧರ್ 2' ಸಿನಿಮಾ ನೋಡಲು ವೀಕ್ಷಕರನ್ನು ಸೆಳೆಯುವುದಕ್ಕೆ ಹೊಸ ಪ್ರಯೋಗಗಳನ್ನು ಮಾಡಲಾಗಿತ್ತು. ಸಿನಿಮಾ 'RAW & Undekha' ಆವೃತ್ತಿಯನ್ನು ಸ್ಟ್ರೀಮಿಂಗ್ ಮಾಡಲಾಗಿತ್ತು. ಇದರೊಂದಿಗೆ ಸುಮಾರು 30 ನಿಮಿಷಗಳ ವಿಶೇಷ ಪ್ರೀ-ಶೋ (Pre-show) ಅನ್ನು ಸಿದ್ಧಪಡಿಸಲಾಗಿತ್ತು. ಇದರಲ್ಲಿ ಕಲಾವಿದರ ಆಫ್-ಸ್ಕ್ರೀನ್ ಹರಟೆ, ತೆರೆಮರೆಯ ಕಥೆಗಳು, ಶೂಟಿಂಗ್ ವೇಳೆಯ ರೋಚಕ ಸಂಗತಿಗಳನ್ನು ಹಂಚಿಕೊಳ್ಳಲಾಗಿತ್ತು. ಇದು ವೀಕ್ಷಕರನ್ನು ಸಿನಿಮಾ ನೋಡುವತ್ತ ಸೆಳೆದಿದೆ.

ದಾಖಲೆ ಮೀರಿದ ಯಶಸ್ಸು

'ಧುರಂಧರ್' ಸಿನಿಮಾದ ಮೊದಲ ಭಾಗ ಜಿಯೋಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆದಾಗಲೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಮೊದಲ ಮೂರು ದಿನಗಳಲ್ಲಿ ಸುಮಾರು 32 ಮಿಲಿಯನ್ ಅಂದರೆ, 3.2 ಕೋಟಿ ವೀವ್ಸ್ ಪಡೆದು ದಾಖಲೆ ಬರೆದಿತ್ತು. ಈಗ ಅದರ ಸೀಕ್ವೆಲ್ 'ಧುರಂಧರ್ ದಿ ರಿವೇಂಜ್' ಆ ಎಲ್ಲಾ ಹಳೆಯ ದಾಖಲೆಗಳನ್ನು ಧೂಳೀಪಟ ಮಾಡಿದೆ. ಮೊದಲ ಐದು ದಿನಗಳಲ್ಲಿಯೇ 5 ಕೋಟಿಗೂ ಅಧಿಕ ವೀವ್ಸ್ ಪಡೆದುಕೊಂಡಿದೆ.

Ranveer Singh Dhurandhar The Revenge record breaking 5 crore views in 5 days in JioHotstar

ಸಖತ್ ರೆಸ್ಪಾನ್ಸ್

'ಧುರಂಧರ್ 2'ಗೆ ಜಿಯೋ ಹಾಟ್‌ಸ್ಟಾರ್‌ನಲ್ಲಿ ಸಿಕ್ಕಿದ ರೆಸ್ಪಾನ್ಸ್ ಬಗ್ಗೆ ಜಿಯೋಸ್ಟಾರ್ ಸಂಸ್ಥೆಯ ಹಿಂದಿ ಮತ್ತು ಇಂಗ್ಲಿಷ್ ಎಂಟರ್‌ಟೈನ್‌ಮೆಂಟ್ ಬಿಸಿನೆಸ್ ಹೆಡ್ ಆಲೋಕ್ ಜೈನ್ ಪ್ರತಿಕ್ರಿಯಿಸಿದ್ದಾರೆ. "ಧುರಂಧರ್ ದಿ ರಿವೇಂಜ್' ಸಿನಿಮಾಗೆ ಸಿಕ್ಕಿದ ಪ್ರತಿಕ್ರಿಯೆ ನಿಜಕ್ಕೂ ಅಸಾಧಾರಣ. ಮೊದಲ ವಾರಾಂತ್ಯದಲ್ಲೇ 5 ಕೋಟಿ ವೀಕ್ಷಕರನ್ನು ತಲುಪಿರುವುದು ಜಿಯೋಹಾಟ್‌ಸ್ಟಾರ್‌ನ ವ್ಯಾಪ್ತಿಯನ್ನು ತಿಳಿಸುತ್ತೆ. ಶೇ.60 ರಷ್ಟು ವೀಕ್ಷಣೆ ಕನೆಕ್ಟೆಡ್ ಟಿವಿಗಳಿಂದ ಬಂದಿರುವುದು ಜನರು ಒಟ್ಟಾಗಿ ಸಿನಿಮಾ ವೀಕ್ಷಿಸುವ ಕ್ರೇಜ್ ಅನ್ನು ಹೆಚ್ಚಿರುವುದಕ್ಕೆ ಸಾಕ್ಷಿ" ಎಂದು ಮಾಹಿತಿ ನೀಡಿದ್ದಾರೆ.

ಇಷ್ಟೇ ಅಲ್ಲದೆ ಈ ಬೃಹತ್ ಡಿಜಿಟಲ್ ಪ್ರೀಮಿಯರ್‌ಗೆ 50 ಕ್ಕೂ ಹೆಚ್ಚು ಪ್ರಮುಖ ಬ್ರ್ಯಾಂಡ್‌ಗಳು ಮತ್ತು 13 ದೊಡ್ಡ ಪ್ರಾಯೋಜಕರು ಜೊತೆಯಾಗಿದ್ದು ವಿಶೇಷ. 'ಧುರಂಧರ್ ದಿ ರಿವೇಂಜ್' ಸಿನಿಮಾವೀಗ ಜಿಯೋಹಾಟ್‌ಸ್ಟಾರ್‌ನಲ್ಲಿ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಯಶಸ್ವಿಯಾಗಿ ಸ್ಟ್ರೀಮಿಂಗ್ ಆಗುತ್ತಿದ್ದು, ವೀಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿದೆ.

English summary
Ranveer Singh Dhurandhar The Revenge record breaking 5 crore views in 5 days in JioHotstar. 60% of watch-time coming from Connected TVs, the film reaffirmed the growing appeal of large-screen, shared viewing experiences.
Read more about: ranveer singh Dhurandhar 2
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X