ಬಿಗ್‌ಬಾಸ್ ಮನೆಗೆ ಹೋಗಿ ಕೆಟ್ಟ ಯೂಟ್ಯೂಬರ್; ರೊಮ್ಯಾನ್ಸ್ ವಿಡಿಯೋ ಲೀಕ್, ಡಿವೋರ್ಸ್ ಕೊಟ್ಟ ಮೊದಲ ಪತ್ನಿ

ರಿಯಾಲಿಟಿ ಶೋ ಬಿಗ್‌ಬಾಸ್ ಯಾಕೋ ಹದ್ದು ಮೀರಿದೆ ಅಂತ ಅನಿಸುವುಕ್ಕೆ ಶುರುವಾಗಿದೆ. ಅದಕ್ಕೆ ಮತ್ತೊಂದು ಕಾರಣ ಬಿಗ್‌ಬಾಸ್ ಓಟಿಟಿ ಸೀಸನ್ 3. ಅದ್ಧೂರಿಯಾಗಿ ಬಿಗ್‌ಬಾಸ್ ಓಟಿಟಿ ಸೀಸನ್ 3 ಆರಂಭಗೊಂಡಿದೆ. ಆದ್ರೀಗ ಒಂದಲ್ಲ ಒಂದು ವಿವಾದಗಳನ್ನು ಎದುರಿಸುವಂತಾಗಿದೆ. ಸದ್ಯ ಒಂದು ಪ್ರಕರಣ ಸಿಕ್ಕಾಪಟ್ಟೆ ಮುಜುಗರಕ್ಕೆ ಒಳಗಾಗುವಂತೆ ಮಾಡಿದೆ.

ಇತ್ತೀಚೆಗೆ ಬಿಗ್‌ಬಾಸ್ ಓಟಿಟಿ ಸೀಸನ್ 3ರಲ್ಲಿ ಭಾಗವಹಿಸಿದ್ದ ಸ್ಪರ್ಧಿ ಅರ್ಮಾನ್ ಮಲಿಕ್ ಸರಸ ಸಲ್ಲಾಪದಲ್ಲಿ ತೊಡಗಿರುವ ವಿಡಿಯೋ ಲೀಕ್ ಆಗಿತ್ತು. ಅದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರ ಕಣ್ಣುಗಳು ಕೆಂಪಾಗಿದೆ. ಬಿಗ್‌ಬಾಸ್ ಈಗ ಫ್ಯಾಮಿಲಿ ಶೋ ಆಗಿ ಉಳಿದಿಲ್ಲ ಅಂತ ಆಕ್ರೋಶ ಹೊರ ಹಾಕುತ್ತಿದ್ದಾರೆ. ಅಸಲಿಗೆ ಎರಡನೇ ಪತ್ನಿ ಜೊತೆ ಬಿಗ್ ಬಾಸ್ ಮನೆಯೊಳಗೆ ಸರಸ ಸಲ್ಲಾಪದಲ್ಲಿ ತೊಡಗಿರುವ ಈ ಯೂಟ್ಯೂಬರ್ ಹಿನ್ನೆಲೆ ಏನು ಗೊತ್ತಾ?

Richest youtuber Armaan Malik first wife payal gave divorce after intimate video leake in bigg boss

ಅರ್ಮಾನ್ ಮಲಿಕ್ ಇಬ್ಬರು ಹೆಂಡಿಯ ಮುದ್ದಿನ ಯೂಟ್ಯೂಬರ್. ಈತನಿಗೆ ಪಾಯಲ್ ಹಾಗೂ ಕೃತಿಕಾ ಎಂಬ ಇಬ್ಬರು ಪತ್ನಿಯರು. ಇದನ್ನು ಭಾರತದ ಶ್ರೀಮಂತ ಯೂಟ್ಯೂಬರ್‌ಗಳ ಪಟ್ಟಿಯಲ್ಲಿ ಸೇರಿಸಿದ್ದಾರೆ. ಹರಿಯಾಣ ಮೂಲದ ಅರ್ಮಾನ್ ಮಲಿಕ್ ಆರಂಭದ ದಿನಗಳಲ್ಲಿ ಕೇವಲ ಮೆಕ್ಯಾನಿಕ್ ಆಗಿದ್ದ. ಕೇವಲ ಯೂಟ್ಯೂಬ್‌ನಿಂದ ನೂರಾರು ಕೋಟಿ ಸಂಪಾಧನೆ ಮಾಡಿದ್ದಾನೆ. ಇದೇ ಜನಪ್ರಿಯತೆ ಇಟ್ಟುಕೊಂಡು ಇಬ್ಬರನ್ನು ಮದುವೆಯಾಗಿ, ಅವರನ್ನೂ ಸೇರಿಸಿಕೊಂಡು ವಿಡಿಯೋ ಮಾಡಿ ಹಣ ಮಾಡುತ್ತಿದ್ದ.

ಈತನ ಜನಪ್ರಿಯತೆಯನ್ನು ಮನಗಂಡು ಅರ್ಮಾನ್ ಮಲಿಕ್ ಹಾಗೂ ಈತನ ಇಬ್ಬರು ಪತ್ನಿಯರಿಗೂ ಬಿಗ್‌ಬಾಸ್ ಓಟಿಟಿ ಸೀಸನ್ 3ಗೆ ಎಂಟ್ರಿ ಕೊಡಿಸಲಾಗಿತ್ತು. ಆದರೆ, ಈಗಾಗಲೇ ಅರ್ಮಾನ್ ಮಲಿಕ್ ಮೊದಲ ಪತ್ನಿ ಪಾಯಲ್ ಬಿಗ್‌ಬಾಸ್ ಮನೆಯಿಂದ ಹೊರಬಿದ್ದಿದ್ದಾಳೆ. ತನ್ನ ಪತಿ ಎರಡನೇ ಪತ್ನಿಯೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿರುವ ವಿಡಿಯೋ ಹೊರಬೀಳುತ್ತಿದ್ದಂತೆ ಡಿವೋರ್ಸ್ ನೀಡಲು ಮುಂದಾಗಿದ್ದಾಳೆ. ಮಕ್ಕಳಿಗೆ ಮುಜುಗರವಾಗಬಾರದು ಎನ್ನುವ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬಂದಿದ್ದಾಗಿ ಹೇಳಿಕೊಂಡಿದ್ದಾರೆ.

Richest youtuber Armaan Malik first wife payal gave divorce after intimate video leake in bigg boss

ಎಂಟನೇ ತರಗತಿ ಎರಡು ಬಾರಿ ಫೇಲ್ ಆಗಿದ್ದ ಅರ್ಮಾನ್ ಮಲಿಕ್ ಆರಂಭದಲ್ಲಿ ಫಿಟ್ನೆಸ್ ಬಗ್ಗೆ ವಿಡಿಯೋಗಳನ್ನು ಮಾಡಿ ಯೂಟ್ಯೂಬ್‌ಗೆ ಹಾಕುತ್ತಿದ್ದ. ಆ ವಿಡಿಯೋಗಳು ಮಿಲಿಯನ್ಸ್ ಲೆಕ್ಕದಲ್ಲಿ ವೀವ್ಸ್ ಪಡೆದುಕೊಳ್ಳುತ್ತಿದ್ದವು. ಬಳಿಕ ಅದನ್ನೇ ಯೂಟ್ಯೂಬರ್ ಆಗಿ ಜನಪ್ರಿಯನಾಗಿದ್ದ. ಈತ ಸಂದರ್ಶನವೊಂದರಲ್ಲಿ ತನ್ನ ಬಳಿ ನೂರಾರು ಕೋಟಿ ಆಸ್ತಿಯಿದೆ ಎಂದು ಹೇಳಿಕೊಂಡಿದ್ದ ಎಂದು ವರದಿಗಳಾಗಿವೆ.

ಹರಿಯಾಣ ಮೂಲದ ಈ ಯೂಟ್ಯೂಬರ್ ಅರ್ಮಾನ್ ಮಲಿಕ್ ಈ ನೂರಾರು ಕೋಟಿ ಒಡೆಯ. ಮೆಕ್ಯಾನಿಕ್ ಆಗಿದ್ದವನ ಬಳಿಯೀಗ ಎಲ್ಲವೂ ಇದೆ. ಪಾಯಲ್ ಹಾಗೂ ಕೃತಿಕಾ ಎಂಬ ಇಬ್ಬರು ಪತ್ನಿಯರು ಇದ್ದಾರೆ. ಈತ 10 ಫ್ಲ್ಯಾಟ್‌ಗಳ ಒಡೆಯನಂತೆ. ಸಿದ್ದಾರ್ಥ್ ಕನನ್ ನಡೆಸಿಕೊಡುವ ಶೋನಲ್ಲಿ ಅರ್ಮಾನ್ ಮಲಿಕ್‌ಗೆ ಆಸ್ತಿಯ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಆಗ ಈತ 100 ರಿಂದ 200 ಕೋಟಿ ರೂಪಾಯಿ ಎಂದು ಹೇಳಿಕೊಂಡಿದ್ದ.

ತನ್ನ ಬಳಿ ಇದ್ದ 10 ಪ್ಲ್ಯಾಟ್‌ಗಳಲ್ಲಿ ಎರಡೆರಡನ್ನು ಇಬ್ಬರು ಪತ್ನಿಯರಿಗೆ ನೀಡಿದ್ದಾಗಿ ಹೇಳಿಕೊಂಡಿದ್ದ. ಅಲ್ಲದೇ, ಉಳಿದ ಆರು ಪ್ಲ್ಯಾಟ್‌ಗಳಲ್ಲಿ ತನ್ನ ಸಿಬ್ಬಂದಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದಾಗಿ ಹೇಳಿದ್ದ. ಈತನ ಬಳಿಕ ಇಬ್ಬರು ಡ್ರೈವರ್, ಆರು ಮಂದಿ ಎಡಿಟರ್‌ಗಳು ಹಾಗೂ 9 ಬಂದಿ ಸಿಬ್ಬಂದಿ ವಾಸ ಮಾಡುತ್ತಿದ್ದಾರೆ.

More from Filmibeat

English summary
Youtuber Armaan Malik first wife Payal gave divorce
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X